3 ದಿನದಲ್ಲಿ 7 ಖಂಡ ಸುತ್ತಿ ಗಿನ್ನೆಸ್‌ ದಾಖಲೆ: ಭಾರತೀಯ ಅಲಿ ಇರಾನಿ, ಸುಜೋಯ್‌ ಕುಮಾರ್‌ ಮಿತ್ರಾ ಸಾಹಸ

ಅಲಿ ಇರಾನಿ - ಸುಜೋಯ್‌ ಕುಮಾರ್‌ ಮಿತ್ರಾ ಜೋಡಿ 3 ದಿನ 1 ಗಂಟೆ 5 ನಿಮಿಷ ಮತ್ತು 4 ಸೆಕೆಂಡ್‌ನಲ್ಲಿ ಪ್ರಯಾಣ ಮುಗಿಸಿದೆ. ಹಿಂದಿನ ದಾಖಲೆ ದುಬೈನ ಡಾಕ್ಟರ್‌ ಖಾಲ್ವಾ ಅಲ್‌ ರೊಮ್ಹೈತಿ ಹೆಸರಲ್ಲಿತ್ತು. ಅವರು 3 ದಿನ, 14 ಗಂಟೆ, 46 ನಿಮಿಷ, 48 ಸೆಕೆಂಡ್‌ಗಳಲ್ಲಿ ಯಾತ್ರೆ ಮುಗಿಸಿದ್ದರು.

indian men travel to all 7 continents in just over 3 days set world record ash

ನವದೆಹಲಿ: ಭಾರತದ ಡಾ. ಅಲಿ ಇರಾನಿ ಹಾಗೂ ಸುಜೋಯ್‌ ಕುಮಾರ್‌ ಮಿತ್ರಾ ಜೋಡಿ ಕೇವಲ 73 ಗಂಟೆಗಳಲ್ಲಿ ಜಗತ್ತಿನ 7 ಖಂಡಗಳನ್ನು ಸುತ್ತಿ ಹೊಸ ಗಿನ್ನೆಸ್‌ ದಾಖಲೆ ಸೃಷ್ಟಿಸಿದೆ. ಡಿಸೆಂಬರ್‌ 4ರಂದು ಅಂಟಾರ್ಟಿಕಾದಲ್ಲಿ ತಮ್ಮ ಪ್ರಯಾಣವನ್ನು ವಿಮಾನದ ಮೂಲಕ ಆರಂಭಿಸಿದ್ದ ಈ ಜೋಡಿ ಡಿಸೆಂಬರ್‌ 7ರಂದು ಆಸ್ಪ್ರೇಲಿಯಾ ಮೆಲ್ಬರ್ನ್‌ಗೆ ಬಂದಿಳಿಯುವ ಮೂಲಕ ತಮ್ಮ ಸಾಹಸವನ್ನು ಪೂರ್ಣಗೊಳಿಸಿದೆ. ಈ ಅವಧಿಯಲ್ಲಿ ಇಬ್ಬರೂ ಏಷ್ಯಾ, ಆಫ್ರಿಕಾ, ಯುರೋಪ್‌, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಅಂಟಾರ್ಟಿಕಾ ಮತ್ತು ಒಷ್ಯಾನಿಯಾ ಖಂಡಗಳನ್ನು ಸುತ್ತಿದ್ದಾರೆ.

ಅಂದರೆ ಅಲಿ ಇರಾನಿ (Dr Ali Irani) - ಸುಜೋಯ್‌ ಕುಮಾರ್‌ ಮಿತ್ರಾ (Sujoy Kumar Mitra) ಜೋಡಿ 3 ದಿನ 1 ಗಂಟೆ 5 ನಿಮಿಷ ಮತ್ತು 4 ಸೆಕೆಂಡ್‌ನಲ್ಲಿ ಪ್ರಯಾಣ ಮುಗಿಸಿದೆ. ಹಿಂದಿನ ದಾಖಲೆ ದುಬೈನ ಡಾಕ್ಟರ್‌ ಖಾಲ್ವಾ ಅಲ್‌ ರೊಮ್ಹೈತಿ ಹೆಸರಲ್ಲಿತ್ತು. ಅವರು 3 ದಿನ, 14 ಗಂಟೆ, 46 ನಿಮಿಷ, 48 ಸೆಕೆಂಡ್‌ಗಳಲ್ಲಿ ಯಾತ್ರೆ ಮುಗಿಸಿದ್ದರು.

ಇದನ್ನು ಓದಿ: ಗಿನ್ನಿಸ್ ದಾಖಲೆ ಮುರಿದ ಮಸ್ಕ್;ಟೆಸ್ಲಾ ಸಿಇಒ ಈಗ ವಿಶ್ವದಲ್ಲೇ ಅತೀಹೆಚ್ಚು ಸಂಪತ್ತು ಕಳೆದುಕೊಂಡ ವ್ಯಕ್ತಿ

ಕ್ರಿಕೆಟ್‌ ಫಿಸಿಯೋ ಅಲಿ
ಡಾ. ಅಲಿ ಇರಾನಿ ಈ ಹಿಂದೆ ಭಾರತೀಯ ಕ್ರಿಕೆಟ್‌ ತಂಡದ ಫಿಸಿಯೋ (Physio) ಆಗಿದ್ದರು. ಕ್ರಿಕೆಟ್‌ (Cricket) ವಲಯದಲ್ಲಿ ಇವರದ್ದು ದೊಡ್ಡ ಹೆಸರಿದೆ. ಇದುವರೆಗೂ 90 ದೇಶಗಳನ್ನು (Countries) ಸುತ್ತಿದ ಅನುಭವ ಹೊಂದಿದ್ದಾರೆ.

172 ದೇಶ ಸುತ್ತಿದ ಸುಜೋಯ್‌ ಕುಮಾರ್‌ ಮಿತ್ರಾ
ಸುಜೋಯ್‌ ಕುಮಾರ್‌ ಮಿತ್ರಾ ಕಾರ್ಪೊರೆಟ್‌ ಹುದ್ದೆ ಬಿಟ್ಟು ಪ್ರಯಾಣ (Travel) ಹವ್ಯಾಸ (Hobby) ಮಾಡಿಕೊಂಡಿದ್ದಾರೆ. ಇದುವರೆಗೂ 172 ದೇಶ ಸುತ್ತಿದ್ದಾರೆ. ಶೀಘ್ರವೇ ಇನ್ನು 16 ದೇಶಗಳಿಗೆ ಭೇಟಿ ನೀಡುವ ಮೂಲಕ ಎಲ್ಲಾ 198 ದೇಶಗಳಿಗೂ ಭೇಟಿ ನೀಡಿದ ದಾಖಲೆ ಸೃಷ್ಟಿಸುವ ಆಶಯ ಹೊಂದಿದ್ದಾರೆ.

ಇದನ್ನೂ ಓದಿ: ಕೇವಲ ಎರಡು ಅಡಿ : ಈತ ವಿಶ್ವದ ಅತೀ ಕುಳ್ಳ ವ್ಯಕ್ತಿ : ಗಿನ್ನೆಸ್ ಪುಟ ಸೇರಿದ ಅಫ್ಸಿನ್

ಗಿನ್ನೆಸ್‌ ದಾಖಲೆ ಪುಸ್ತಕವು ತನ್ನ ವೆಬ್‌ಸೈಟ್‌ನಲ್ಲಿ ಎಲ್ಲಾ 7 ಖಂಡಗಳಿಗೆ ಪ್ರಯಾಣಿಸಲು ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಸುಜೋಯ್ ಕುಮಾರ್ ಮಿತ್ರ ಮತ್ತು ಡಾ. ಅಲಿ ಇರಾನಿ (ಇಬ್ಬರೂ ಭಾರತ) 3 ದಿನಗಳು, 1 ಗಂಟೆ, 5 ನಿಮಿಷಗಳು ಮತ್ತು 4 ಸೆಕೆಂಡುಗಳ ಸಮಯದಲ್ಲಿ ಡಿಸೆಂಬರ್ 7, 2022 ರಂದು ಸಾಧಿಸಿದ್ದಾರೆ ಎಂದು ಬರೆಯಲಾಗಿದೆ. ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ, ಸುಜೋಯ್ ಮತ್ತು ಡಾ. ಅಲಿ ಪ್ಯಾಷನೇಟ್‌ ಪ್ರಯಾಣಿಕರಾಗಿದ್ದು, ಎಲ್ಲಾ ದಾಖಲೆಗಳನ್ನು ಮುರಿಯುವುದು ಸಾಧ್ಯವಿದೆ ಎಂದು ನಂಬುತ್ತಾರೆ.

ಇನ್ನು, ಗಿನ್ನೆಸ್‌ ದಾಖಲೆ ಬಗ್ಗೆ ಪ್ರತಿಕ್ರಿಯೆ ನೀಡಿದ  ಡಾ. ಅಲಿ ಇರಾನಿ ಹಾಗೂ ಸುಜೋಯ್‌ ಕುಮಾರ್‌ ಮಿತ್ರಾ "ಇಂದು ನಾವು ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿರಬಹುದು, ಆದರೆ ನಾಳೆ ಬೇರೆಯವರು ನಮ್ಮ ದಾಖಲೆಯನ್ನು ಮುರಿಯುತ್ತಾರೆ" ಎಂದು ಇಬ್ಬರೂ ಹೇಳಿದ್ದಾರೆ. ಹಾಗೂ, ಡಾ. ಅಲಿ ಇರಾನಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಗಿನ್ನೆಸ್ ವಿಶ್ವ ದಾಖಲೆಯ ಪ್ರಮಾಣಪತ್ರವನ್ನು ಸಹ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Guinness World Record: ಅಬ್ಬಬ್ಬಾ..ಒಂದೇ ಬಾರಿಗೆ 9 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

3 ದಿನ 1 ಗಂಟೆಯಲ್ಲಿ ಡಾ. ಅಲಿ ಇರಾನಿ ಮತ್ತು ಸುಜೋಯ್‌ ಕುಮಾರ್‌ ಮಿತ್ರಾ ಅವರು ಎಲ್ಲಾ 7 ಖಂಡಗಳಿಗೆ ಭೇಟಿ ನೀಡಿದ್ದಾರೆ. ಇವರಿಬ್ಬರು ಡಿಸೆಂಬರ್ 4 ರಂದು ಅಂಟಾರ್ಕ್ಟಿಕಾದಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು ಮತ್ತು ಅವರು ಡಿಸೆಂಬರ್ 7 ರಂದು ಆಸ್ಟ್ರೇಲಿಯಾದ ಮೆಲ್ಬೋರ್ನ್‌ಗೆ ಆಗಮಿಸಿದರು. ಈ ಮೂಲಕ ಅಪರೂಪದ ಹಾಗೂ ಅಸಾಧ್ಯವೆನ್ನಲಾದ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

ಇದನ್ನೂ ಓದಿ: Guinness World Record: ಬರೋಬ್ಬರಿ 58 ಗಂಟೆ ​ಲಿಪ್​ಕಿಸ್ ಮಾಡಿ​ ಗಿನ್ನಿಸ್​ ದಾಖಲೆ

Latest Videos
Follow Us:
Download App:
  • android
  • ios