ಈಕೆ ಬಾಳಿಗೆ ದೇವರಾದ ಮಹಿಳೆ, ಕವರ್ ನೋಡಿ ಕಣ್ಣಿರಿಟ್ಟ ಎರಡು ಮಕ್ಕಳ ತಾಯಿ!
ಕ್ರಿಸ್ ಮಸ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಕನಸು ಎಲ್ಲರಿಗೂ ಇರುತ್ತೆ. ಆದ್ರೆ ಬಡವರಿಗೆ ಇದು ಅಸಾಧ್ಯ. ಹಬ್ಬದ ಸಮಯದಲ್ಲಿ ಹಣ ಸಿಕ್ಕಿದ್ರೆ, ನೆರವು ನೀಡಿದವರೇ ಅವರಿಗೆ ದೇವರಾಗ್ತಾರೆ.
ಹಬ್ಬ, ಪಾರ್ಟಿ, ಅದ್ಧೂರಿ ಮದುವೆ, ಉಡುಗೊರೆ ಎಲ್ಲವೂ ಶ್ರೀಮಂತರಿಗೆ ಮಾತ್ರ. ಪ್ರತಿ ಹಬ್ಬಕ್ಕೆ ಬಟ್ಟೆ ಖರೀದಿ ಬಡವರಿಗೆ ಕನಸಿನ ಮಾತು. ಮೂರು ಹೊತ್ತು ಹೊಟ್ಟೆ ತುಂಬಿದ್ರೆ ಸಾಕು ಎನ್ನುವ ಜನರು, ಹಬ್ಬ ಆಚರಣೆ ಮಾಡೋದಿರಲಿ, ಇಂದು ಹಬ್ಬ ಇದೆ ಎನ್ನುವುದನ್ನೇ ಮರೆತಿರುತ್ತಾರೆ. ಹಬ್ಬದ ಸಮಯದಲ್ಲಿ ಬೋನಸ್, ಉಡುಗೊರೆ ಸಿಕ್ಕಿದ್ರೆ ಹಿಗ್ಗಿ ಹೋಗ್ತಾರೆ. ಅಂಥವರಿಗೆ ಐದು, ಹತ್ತು ರೂಪಾಯಿ ಕೂಡ ದೊಡ್ಡ ಮೊತ್ತವಾಗಿರುತ್ತದೆ. ಈಗ ಕ್ರಿಸ್ಮಸ್ ಹತ್ತಿರ ಬರ್ತಿದೆ. ಹಬ್ಬಕ್ಕೆ ಎಲ್ಲೆಡೆ ತಯಾರಿ ನಡೆದಿದೆ. ಕ್ರಿಸ್ಮಸ್ ಸಂದರ್ಭದಲ್ಲಿ ಸಾಂತಾ ಮನೆ ಮನೆಗೆ ಬಂದು ಉಡುಗೊರೆ ನೀಡ್ತಾನೆ ಎನ್ನುವ ನಂಬಿಕೆ ಜನರಲ್ಲಿದೆ.
ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಸಾಂತಾ (Santa) ನಿಗಾಗಿ ಕಾಯ್ತಾರೆ. ವಿದೇಶದಲ್ಲಿ ಕ್ರಿಸ್ಮಸ್ (Christmas) ಆಚರಣೆ ವಿಜ್ರಂಭಣೆಯಿಂದ ನಡೆಯುವ ಜೊತೆಗೆ ಉಡುಗೊರೆ (Gift) ವಿನಿಮಯ ಕೂಡ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಕೆಲವು ಕಚೇರಿಗಳಲ್ಲಿ ಸಿಕ್ರೆಟ್ ಸಾಂತಾ ರೀತಿಯ ಉಡುಗೊರೆ ವಿನಿಮಯ ಪ್ರೋಗ್ರಾಂ ನಡೆಸಲಾಗುತ್ತದೆ. ಯಾವುದೇ ರೂಪದಲ್ಲಿಯಾದ್ರೂ ಹಣ ಅಥವಾ ಉಡುಗೊರೆ ಬಂದ್ರೆ ಬಡವರಿಗೆ ಇದರಿಂದ ನೆರವಾಗುತ್ತದೆ. ಊಟಕ್ಕೆ, ಬಟ್ಟೆಗೆ ಅವರು ಆ ಹಣವನ್ನು ಬಳಸಿಕೊಳ್ತಾರೆ. ಇರುವ ವ್ಯಕ್ತಿಗೆ ಇನ್ನೊಂದಿಷ್ಟು ದುಬಾರಿ ಉಡುಗೊರೆ ನೀಡುವ ಬದಲು ಇಲ್ಲದ ವ್ಯಕ್ತಿಗೆ ಸಣ್ಣ ಪ್ರಮಾಣದಲ್ಲಿ ಸಹಾಯ ಮಾಡಿದ್ರೆ ಅವರ ಆಶೀರ್ವಾದ ನಮ್ಮ ಮೇಲಿರುತ್ತದೆ ಎಂದು ದೊಡ್ಡವರು ಹೇಳ್ತಾರೆ. ಅಂಥ ಕೆಲಸವನ್ನು ಅನೇಕರು ಈಗಿನ ಕಾಲದಲ್ಲೂ ಮಾಡ್ತಿದ್ದಾರೆ. ಈಗ ಈ ಮಹಿಳೆ ಜೀವನದಲ್ಲೂ ಖುಷಿ ಕಾಣಿಸಿದೆ. ಅದಕ್ಕೆ ಕಾರಣ ದೇವರಂತೆ ಬಂದ ಆ ಮಹಿಳೆ.
ನುಗ್ಗೆ ಸೊಪ್ಪಿನ ಟೇಸ್ಟಿ, ಆರೋಗ್ಯಕರ ಸೂಪ್ ಮಾಡೋದನ್ನ ನಟಿ ಅದಿತಿ ಹೇಳಿಕೊಟ್ಟಿದ್ದಾರೆ ನೋಡಿ...
ಮಹಿಳೆಯೊಬ್ಬಳು ತನ್ನ ಕಥೆಯನ್ನು ಹೇಳಿಕೊಂಡಿದ್ದಾಳೆ. ಆಕೆ ತನ್ನಿಬ್ಬರು ಮಕ್ಕಳ ಜೊತೆ ಇಂಗ್ಲೆಂಡ್ ನ ವಿಂಟರ್ ವಂಡರ್ಲ್ಯಾಂಡ್ ಗೆ ಭೇಟಿ ನೀಡಲು ಬಂದಿದ್ದಳಂತೆ. ಆ ಸಮಯದಲ್ಲಿ ಆಕೆ ಬಳಿ ಬಂದ ಇನ್ನೊಂದು ಮಹಿಳೆ ಅಡಗಿಸಿ ಒಂದು ಲಕೋಟೆ ಕೊಟ್ಟು ಹೋಗಿದ್ದಾಳೆ. ಅದನ್ನು ತೆಗೆದು ನೋಡಿದ ಈ ಎರಡು ಮಕ್ಕಳ ತಾಯಿ ಕಣ್ಣಲ್ಲಿ ನೀರು ಬಂದಿದೆ. ಅದರಲ್ಲಿ ಹಣ ಹಾಗೂ ಒಂದು ಪತ್ರವಿತ್ತು ಎಂದು ಮಹಿಳೆ ಹೇಳಿದ್ದಾಳೆ.
ಕದ್ದುಮುಚ್ಚಿ ನೀಡಿದ ಲಕೋಟೆಯಲ್ಲಿ 100 ಡಾಲರ್ ಅಂದ್ರೆ ಸುಮಾರು 10,567 ರೂಪಾಯಿ ಇತ್ತು. ಅಲ್ಲದೆ ಒಂದು ಪತ್ರವಿತ್ತು. ನನ್ನ ಕ್ರಿಸ್ಮಸ್. ಇದು ಎಲ್ಲರಿಗೂ ಕಠಿಣ ವರ್ಷವಾಗಿದೆ. ದಯವಿಟ್ಟು ಅದನ್ನು ತೆಗೆದುಕೊಳ್ಳಿ ಮತ್ತು ಅದ್ಭುತವಾದ ಕ್ರಿಸ್ಮಸ್ ಆಚರಿಸಿ. ಹೆಚ್ಚುವರಿ ಉಡುಗೊರೆಯನ್ನು ಖರೀದಿಸಿ, ಹೆಚ್ಚುವರಿ ಸಂತೋಷವನ್ನು ಆನಂದಿಸಿ. ನಿಮ್ಮಿಂದಾಗಿ ಜಗತ್ತು ಉತ್ತಮವಾಗಿದೆ. ನನ್ನ ಒಂದೇ ಒಂದು ಕೋರಿಕೆ ಎಂದರೆ ನಿಮಗೆ ಯಾವುದೇ ಕೊರತೆಯಿಲ್ಲದಿದ್ದರೆ ನೀವು ಈ ಒಳ್ಳೆಯ ಕೆಲಸವನ್ನು ಮುಂದುವರಿಸಬೇಕು ಎಂದು ಪತ್ರದಲ್ಲಿ ಬರೆದಿತ್ತು. ಈ ಪತ್ರವನ್ನು ಓದಿದ ಹಾಗೂ ಹಣವನ್ನು ನೋಡಿದ ನನಗೆ ಅಳು ಬಂದಿತ್ತು. ದೇವರು ಸ್ವತಃ ನನ್ನ ಬಳಿ ಬಂದಿದ್ದ ಎನ್ನುವ ಅನುಭವವಾಯ್ತು ಎಂದು ಮಹಿಳೆ ಹೇಳಿದ್ದಾಳೆ.
ಚಹಾ ಮಾರುತ್ತಿದ್ದವರೂ ಕೋಟ್ಯಾಧಿಪತಿಗಳ್ತಾರೆ, ಇದು ಅದೃಷ್ಟವೋ, ಯೋಗವೋ?
ಅಷ್ಟಕ್ಕೆ ಮಹಿಳೆ ಸುಮ್ಮನೆ ಕುಳಿತುಕೊಳ್ಳಲಿಲ್ಲ. ತನಗೆ ಹಣ ನೀಡಿದ ಮಹಿಳೆಗೆ ಧನ್ಯವಾದ ಹೇಳುವ ನಿರ್ಧಾರಕ್ಕೆ ಬಂದಿದ್ದಳು. ಇದೇ ಕಾರಣಕ್ಕೆ ಮಹಿಳೆ ಹುಡುಕಾಟ ನಡೆಸಿದ್ದಾಳೆ. ಒಂದು ಬಾರಿ ಮಹಿಳೆ ಈಕೆಯ ಕಣ್ಣಿಗೆ ಬಿದ್ರೂ ಅಲ್ಲಿಂದ ತಪ್ಪಿಸಿಕೊಂಡು ಓಡಿದ್ದಳು. ಸುತ್ತಮುತ್ತಲಿನವರನ್ನು ವಿಚಾರಿಸಿದಾಗ, ವಂಡರ್‌ಲ್ಯಾಂಡ್‌ನಲ್ಲಿರುವ ಅನೇಕರಿಗೆ ಯಾರೋ ಒಬ್ಬರು ಇಂತಹ ಉಡುಗೊರೆಗಳನ್ನು ಮತ್ತು ಪತ್ರಗಳನ್ನು ನೀಡಿದ್ದರು ಎಂಬ ಸಂಗತಿ ಗೊತ್ತಾಯ್ತು ಎಂದು ಮಹಿಳೆ ಹೇಳಿದ್ದಾಳೆ.