ಆರೋಗ್ಯಕರ ಹಾಗೂ ಟೇಸ್ಟಿಯಾಗಿರುವ ನುಗ್ಗೆ ಸೊಪ್ಪಿನ ಸೂಪ್​ ಮಾಡುವುದನ್ನು ಹೇಳಿಕೊಟ್ಟಿದ್ದಾರೆ ನಟಿ ಅದಿತಿ ಪ್ರಭುದೇವ. ಸೂಪ್​ ಮಾಡುವುದು ಹೀಗೆ...  

ನುಗ್ಗೆಕಾಯಿ ಹಾಗೂ ಅದರ ಸೊಪ್ಪಿಗೆ ಅದರದ್ದೇ ಆದ ವಿಶೇಷತೆ ಇದೆ. ನುಗ್ಗೆ ಸೊಪ್ಪಿನ ಔಷಧೀಯ ಗುಣಗಳೂ ಅಪಾರವಾಗಿವೆ. ಹೃದಯಾಘಾತದ ಸಾಧ್ಯತೆಗಳನ್ನು ಕಡಿಮೆ ಮಾಡುವಲ್ಲಿಯೂ ಇದು ಮಹತ್ವದ ಪಾತ್ರ ವಹಿಸುತ್ತದೆ ಎನ್ನಲಾಗುತ್ತದೆ. ಅಷ್ಟೇ ಅಲ್ಲದೇ, ನಿಯಮಿತವಾಗಿ ಈ ಸೊಪ್ಪನ್ನು ಬಳಸುತ್ತಾ ಬಂದರೆ, ಕೊಲೆಸ್ಟ್ರಾಲ್ ನಿಯಂತ್ರಣ ಮಾಡಬಹುದು. ದೇಹದ ತೂಕದ ಇಳಿಕೆಗೂ ಇದು ಸಹಕಾರಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸನೀರಿಗೆ ನುಗ್ಗೆ ಸೊಪ್ಪಿನ ಪುಡಿಯನ್ನು ಬೆರೆಸಿ ಸೇವಿಸುವುದರಿಂದ ದೇಹದ ತೂಕ ಇಳಿಯುತ್ತದೆ ಎನ್ನಲಾಗುತ್ತದೆ. ವೈಜ್ಞಾನಿಕ ಭಾಷೆಯಲ್ಲಿ ನುಗ್ಗೆ ಮರವನ್ನು ಮೋರಿಂಗ ಒಲಿಫೇರ ಗಿಡ ಎನ್ನಲಾಗುತ್ತದೆ. ಅಂದರೆ ಇದು ಮೋರಿಂಗ ಪಂಗಡಕ್ಕೆ ಸೇರಿದ ಮತ್ತು ಮೋರಿಂಗಾಸೀ ಕುಟುಂಬದ ಜಾತಿಯ ಮರ. ಇದರಲ್ಲಿರುವ ಅಪಾರ ಔಷಧೀಯ ಗುಣಗಳಿಂದಾಗಲೇ ನುಗ್ಗೆ ಸೊಪ್ಪನ್ನು ಮಾಂತ್ರಿಕ ಸೊಪ್ಪು ಎಂದೂ ಕರೆಯಲಾಗುತ್ತದೆ. ಇದರ ಪ್ರಯೋಜನ ಎಷ್ಟೆಂದರೆ, ಆಫ್ರಿಕಾ ದೇಶದಲ್ಲಿ ಹಲವಾರು ಪ್ರದೇಶಗಳಲ್ಲಿನ ಜನರು ಬರಗಾಲದ ದಿನಗಳಲ್ಲಿ ಈ ಸೊಪ್ಪನ್ನು ತಿಂದುಕೊಂಡೇ ಜೀವಿಸುತ್ತಾರೆ ಎನ್ನಲಾಗುತ್ತದೆ. ಮಾತ್ರವಲ್ಲದೇ ಇಂಡೋನೇಷಿಯಾದಲ್ಲಿ ಮಾಟ - ಮಂತ್ರ ಮತ್ತು ದುಷ್ಟ ಶಕ್ತಿಯ ಪ್ರಭಾವದಿಂದ ಬಳಲುತ್ತಿರುವ ಜನರಿಗೆ ನುಗ್ಗೆ ಸೊಪ್ಪನ್ನು ಔಷಧ ರೂಪವಾಗಿ ಬಳಸಲಾಗುತ್ತದೆ.

ಇಷ್ಟೆಲ್ಲಾ ಪ್ರಯೋಜನಕಾರಿಯಾಗಿರುವ ನುಗ್ಗೆಸೊಪ್ಪಿನಿಂದ ಹಲವಾರು ರೀತಿಯ ಖಾದ್ಯಗಳನ್ನು ಸಾಮಾನ್ಯವಾಗಿ ಎಲ್ಲರೂ ಮಾಡುತ್ತಾರೆ. ಅದರಲ್ಲಿಯೂ ಇದರ ಪಲ್ಯ ತುಂಬಾ ಟೇಸ್ಟಿಯಾಗಿರುತ್ತದೆ. ಪಲ್ಯವನ್ನು ಹಲವರು ಆಗಾಗ್ಗೆ ಮಾಡುತ್ತಾರೆ. ಆದರೆ ಇದರ ಸೂಪ್​ ಮಾಡಿ ಕುಡಿದಿದ್ದೀರಾ? ತುಂಬಾ ಸುಲಭದಲ್ಲಿ ನುಗ್ಗೆ ಸೊಪ್ಪಿನ ಸೂಪ್​ ಮಾಡುವುದನ್ನು ತೋರಿಸಿಕೊಟ್ಟಿದ್ದಾರೆ ಸ್ಯಾಂಡಲ್​ವುಡ್ ನಟಿ ಅದಿತಿ ಪ್ರಭುದೇವ. 

ಸುಗಂಧ ದ್ರವ್ಯ ಅಲರ್ಜಿಯೆ? ಮನೆಯಲ್ಲೇ 'ಬಾಡಿ ಮಿಸ್ಟ್' ತಯಾರಿ ಹೇಳಿಕೊಟ್ಟಿದ್ದಾರೆ ನಟಿ ಅದಿತಿ ಪ್ರಭುದೇವ

ಅಂದಹಾಗೆ ಅದಿತಿ ಅವರು, ಈಗ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ, ಸ್ಯಾಂಡಲ್‌ವುಡ್​ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಸಿನಿಮಾ ಜೊತೆಗೆ ವೈವಾಹಿಕ ಬದುಕನ್ನು ಬ್ಯಾಲೆನ್ಸ್ ಮಾಡ್ತಿದ್ದಾರೆ. ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಅದಿತಿ ಪ್ರಭುದೇವ ಅವರು ಸದ್ಯ ಗೃಹಿಣಿಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ, ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದವರು. ಇದರ ಹೊರತಾಗಿಯೂ ಅಡುಗೆಯಲ್ಲಿಯೂ ಇವರದ್ದು ಎತ್ತಿದ ಕೈ. ಅಡುಗೆ, ಆರೋಗ್ಯಕ್ಕೆ ಸಂಬಂಧಿಸಿದ ಕೆಲವೊಂದು ಟಿಪ್ಸ್​ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ.

 ಇದೀಗ ಸಿಂಪಲ್​ ಆಗಿರುವ ನುಗ್ಗೆ ಸೊಪ್ಪಿನ ಸೂಪ್​ ಬಗ್ಗೆ ಅವರು ತಿಳಿಸಿಕೊಟ್ಟಿದ್ದಾರೆ. ಮೊದಲಿಗೆ ಒಂದು ಹಿಡಿಯಷ್ಟು ನುಗ್ಗೆ ಸೊಪ್ಪನ್ನು ಬಿಡಿಸಿ ತೊಳೆದು ಇಟ್ಟುಕೊಳ್ಳಬೇಕು. ನಂತರ ಒಂದೆರಡು ಚಮಚದಷ್ಟು ಮಸೂರ್​ ದಾಲ್​ ಅಥವಾ ತೊಗರಿ ಬೇಳೆಯನ್ನು ತೊಳೆದು ಇಟ್ಟುಕೊಳ್ಳಬೇಕು. ಇದೀಗ ಕುಕ್ಕರ್​ಗೆ ಸ್ವಲ್ಪ ತುಪ್ಪ ಹಾಕಿ ಅದಕ್ಕೆ ಒಂದು ಪವಾಲ್ ಎಲೆ​, ಚಕ್ಕೆ, ಲವಂಗ, ಕರಿಮೆಣಸು, ಸೋಂಪು ಹಾಕಬೇಕು. ಜೊತೆಗೆ 5-6 ಬೆಳ್ಳುಳ್ಳಿ ಸೇರಿಸಬೇಕು. ಇದಕ್ಕೆ ವಾಷ್​ ಮಾಡಿ ಇಟ್ಟುಕೊಂಡಿರುವ ನುಗ್ಗೆ ಸೊಪ್ಪು ಹಾಗೂ ಬೇಳೆ ಸೇರಿಸಬೇಕು. ಕಟ್​ ಮಾಡಿಕೊಂಡಿರುವ ಒಂದೆರಡು ಟೊಮ್ಯಾಟೋ ಸೇರಿಸಬೇಕು. ಇದಕ್ಕೆ ಜೀರಿಗೆ ಪುಡಿ ಹಾಗೂ ಮೆಣಸಿನ ಪುಡಿ ಸೇರಿಸಬೇಕು. ಕೊನೆಯಲ್ಲಿ ಚಿಲ್ಲಿ ಫ್ಲೇಕ್ಸ್​ ಸೇರಿಸುವುದಿದ್ದರೆ ಮೆಣಸಿನ ಪುಡಿ ಈಗಲೇ ಬೇಡ. ಇದಕ್ಕೆ ಉಪ್ಪು, ಚಿಟಿಕೆ ಅರಿಶಿಣದ ಪುಡಿ ಹಾಗು 3-4 ವಿಷಲ್​ ಮಾಡಿಸಬೇಕು.

ಅದಿತಿ-ಯಶಸ್​ ವಿವಾಹ ವಾರ್ಷಿಕೋತ್ಸವ: ಅಡ್ಜೆಸ್ಟ್​ ಬದ್ಲು ಅಕ್ಸೆಪ್ಟ್​ ಇರಲಿ- ಸುಖ ದಾಂಪತ್ಯದ ಗುಟ್ಟು ಹೇಳಿದ ಜೋಡಿ

ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು. ನಂತರ ಸ್ವಲ್ಪ ನಿಂಬೆ ರಸ ಹಾಗೂ ಮೊದಲೇ ಮೆಣಸಿನ ಪುಡಿ ಹಾಕಿರದಿದ್ದರೆ ಚಿಲ್ಲಿ ಫ್ಲೇಕ್ಸ್​ ಹಾಕಿದರೆ ಟೇಸ್ಟಿಯಾಗಿರುವ ನುಗ್ಗೆಸೊಪ್ಪಿನ ಸೂಪ್​ ರೆಡಿ! ಇಬ್ಬರಿಗಾಗುವಷ್ಟು ಪ್ರಮಾಣದಲ್ಲಿ ಸೂಪ್​ ಮಾಡಿದ ನಟಿ ಅದಿತಿ ಅವರು ನಂತರ ಒಂದನ್ನು ಪತಿಗೆ ಕೊಟ್ಟು ಟೇಸ್ಟ್​ ನೋಡಲು ಹೇಳಿದರು. ನುಗ್ಗೆ ಸೊಪ್ಪಿನಿಂದಲೂ ಸೂಪ್​ ಮಾಡಲು ಬರುತ್ತಾ ಎಂದು ಪತಿ ಯಶಸ್ ಕೇಳಿ ಸೂಪ್​ ಸವಿಸು ಟೇಸ್ಟಿಯಾಗಿದೆ ಎಂದರು. ಇದೇ ವಿಡಿಯೋದಲ್ಲಿ ನಟಿ ಅದಿತಿ, ತಮ್ಮ ಮನೆಯ ನಾಯಿ ಚಾಕಲೇಟ್​ಗೆ ತಾವು ಹೇಗೆ ರೆಡಿ ಮಾಡ್ತೀವಿ ಎನ್ನುವುದನ್ನೂ ತಿಳಿಸಿದ್ದಾರೆ. 

YouTube video player