Asianet Suvarna News Asianet Suvarna News

ಹೆರಿಗೆ ನಂತರ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುವುದು ಯಾಕೆ ?

ಹೆರಿಗೆಯ ನಂತರ ಲೈಂಗಿಕತೆಯು ಯಾವಾಗ ಸುರಕ್ಷಿತವಾಗಿದೆ, ಹೆರಿಗೆಯ ನಂತರ ಲೈಂಗಿಕತೆಯು ಸೋಂಕನ್ನು ಉಂಟುಮಾಡಬಹುದೇ, ಗರ್ಭಧಾರಣೆಯ ನಂತರ ಲೈಂಗಿಕಾಸಕ್ತಿ ಯಾಕೆ ಕಡಿಮೆಯಾಗುತ್ತದೆ ಮೊದಲಾದ ವಿಚಾರ ತಿಳಿದುಕೊಳ್ಳೋಣ.

Why womens sexual interest decreases after childbirth Vin
Author
First Published Jan 14, 2023, 3:49 PM IST

ಗರ್ಭಾವಸ್ಥೆಯು ಗಂಡ-ಹೆಂಡತಿಯ ಮಧ್ಯೆಯಿರುವ ಬಾಂಧವ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತಾರೆ. ಮಗುವಿನ ಆಗಮನ ಹೊಸತೊಂದು ಸುಂದರ ಬದುಕಿಗೆ ಕಾಲಿಡಲು ನೆರವಾಗುತ್ತದೆ. ಆದರೆ ಗರ್ಭಾವಸ್ಥೆಯ ನಂತರ ಲೈಂಗಿಕ ಜೀವನ ಹಲವರ ಪಾಲಿಗೆ ಉತ್ತಮವಾಗಿರುವುದಿಲ್ಲ. ಇದರಿಂದಲೇ ಮನಸ್ತಾಪಗಳು ಕಾಣಿಸಿಕೊಳ್ಳುತ್ತವೆ. ಹಾಗಿದ್ದಾರೆ, ಹೆರಿಗೆಯ ನಂತರ ಲೈಂಗಿಕತೆಯು ಯಾವಾಗ ಸುರಕ್ಷಿತವಾಗಿದೆ, ಹೆರಿಗೆಯ ನಂತರ ಲೈಂಗಿಕತೆಯು ಸೋಂಕನ್ನು ಉಂಟುಮಾಡಬಹುದೇ, ಗರ್ಭಧಾರಣೆಯ ನಂತರ ಲೈಂಗಿಕಾಸಕ್ತಿ ಯಾಕೆ ಕಡಿಮೆಯಾಗುತ್ತದೆ ಮೊದಲಾದ ವಿಚಾರ ತಿಳಿದುಕೊಳ್ಳೋಣ.

ಹೆರಿಗೆಯ ನಂತರ ಸೆಕ್ಸ್ ಡ್ರೈವ್ ಏಕೆ ಕಡಿಮೆಯಾಗುತ್ತದೆ?
ಹೆರಿಗೆಯ ನಂತರ ಮಹಿಳೆಯಲ್ಲಿ ಕಡಿಮೆ ಕಾಮಾಸಕ್ತಿಗೆ (Sexual interest) ಹಲವಾರು ಕಾರಣಗಳಿವೆ. ಇದು ಬಿಡುವಿಲ್ಲದ ಜೀವನಶೈಲಿ (Lifestyle), ಹಾರ್ಮೋನುಗಳ ಬದಲಾವಣೆಗಳು, ಕೆಲವೊಂದು ಆಚರಣೆಗಳನ್ನು ಒಳಗೊಂಡಿರುತ್ತದೆ.

Cuddling after sex : ಇದ್ರಿಂದ ಮುಂದೆ ಏನೇನು ಆಗುತ್ತೆ ಗೊತ್ತಾ?

1. ಬಿಡುವಿಲ್ಲದ ಜೀವನಶೈಲಿ: ಹೆರಿಗೆಯ ನಂತರ ಮಹಿಳೆ (Woman) ಹಲವು ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಮಾತ್ರವಲ್ಲ ತನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ (Care) ವಹಿಸಬೇಕಾಗುತ್ತದೆ. ಸಹಜ ಹೆರಿಗೆ ಅಥವಾ ಸಿಸೇರಿಯನ್ ಆದರೂ ಆರೋಗ್ಯವನ್ನು ನೋಡಿಕೊಳ್ಳಬೇಕು. ದೇಹಕ್ಕೆ ಸೂಕ್ತವಾಗುವ ಆಹಾರವನ್ನಷ್ಟೇ ಸೇವಿಸಬೇಕು. ಮಾತ್ರವಲ್ಲ, ಈ ಸಂದರ್ಭದಲ್ಲಿ ಮಹಿಳೆ ಮಗುವನ್ನು ನೋಡಿಕೊಳ್ಳುವುದರಲ್ಲಿ ಹೆಸಚ್ಚು ಸಮಯ ಕಳೆಯಬೇಕಾಗುತ್ತದೆ. ಎಪಿಸಿಯೊಟೊಮಿ ಹೊಲಿಗೆಗಳಲ್ಲಿನ ನೋವು ನಿರ್ವಹಣೆ ಅಥವಾ ಸಿಸೇರಿಯನ್ ವಿಭಾಗದ ನಂತರ ಹೊಟ್ಟೆಯ ಗಾಯದ ನೋವು ಮಹಿಳೆಯನ್ನು ಹೈರಾಣಾಗಿಸುತ್ತದೆ. ಹೀಗಾಗಿ ಸಹಜವಾಗಿಯೇ ಲೈಂಗಿಕಾಸಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ.

2. ದೈಹಿಕ ಬದಲಾವಣೆ: ಗರ್ಭಾವಸ್ಥೆಯ ನಂತರ ಕೆಲವು ಮಹಿಳೆಯರು ದೈಹಿಕ ಬದಲಾವಣೆಗಳನ್ನು ಅನುಭವಿಸಬಹುದು. ಕೆಲವರಲ್ಲಿ  ತೂಕ ಹೆಚ್ಚಳವಾಗುತ್ತದೆ. ಇನ್ನು ಕೆಲವರಲ್ಲಿ ಕಡಿಮೆ. ಇದು ಒಟ್ಟಾರೆ ಸೌಂದರ್ಯ (Beauty)ವನ್ನು ಹಾಳು ಮಾಡುತ್ತದೆ. ಇದು ಪುರುಷರನ್ನು ಕಡಿಮೆ ಆಕರ್ಷಿಸಬಹುದು. ಮಾತ್ರವಲ್ಲ ಮಹಿಳೆ ಸಹ ತನ್ನ ಬಗ್ಗೆ ಕೀಳರಿಮೆಯನ್ನು ಬೆಳೆಸಿಕೊಳ್ಳುತ್ತಾಳೆ. ಹಾಗೆ ಮಾಡದಿರಿ, ಹೆರಿಗೆಯ ನಂತರ ದೇಹದಲ್ಲಿ ಬದಲಾವಣೆಗಳಾಗುವುದು ಸಹಜ. ಇದನ್ನು ಸಹಜವಾಗಿ ತೆಗೆದುಕೊಳ್ಳುವುದು ಮುಖ್ಯ. 

3. ಹಾರ್ಮೋನುಗಳ ಬದಲಾವಣೆಗಳು: ಸ್ತನ್ಯಪಾನ ಮಾಡುವಾಗ ಈಸ್ಟ್ರೊಜೆನ್ ಮಟ್ಟಗಳು ಕಡಿಮೆಯಾಗಿದ್ದರೆ, ಪ್ರೊಲ್ಯಾಕ್ಟಿನ್ ಮತ್ತು ಆಕ್ಸಿಟೋಸಿನ್ ಮಟ್ಟಗಳು ಹೆಚ್ಚಿರುತ್ತವೆ. ಇವು ಯೋನಿ (Vagina) ಶುಷ್ಕತೆಗೆ ಕಾರಣವಾಗಬಹುದು. ಇದು ಎರಡನೇ ಗರ್ಭಾವಸ್ಥೆಯು ಶೀಘ್ರದಲ್ಲೇ ಸಂಭವಿಸುವುದನ್ನು ತಡೆಯಲು ಶಾರೀರಿಕವಾಗಿ ಪ್ರಯೋಜನಕಾರಿಯಾಗಬಹುದು ಎಂದು ವೈದ್ಯರು ಹೇಳುತ್ತಾರೆ. ಆದರೆ ಇದು ಲೈಂಗಿಕಾಸಕ್ತಿ ಕಡಿಮೆಯಾಗಲು ಕಾರಣವಾಗುತ್ತದೆ.

ಗಂಡ ಬೇಡ, ಅವ್ನೇ ಸಾಕು..ಹನಿಮೂನ್ ವೇಳೆ ಪ್ರಿಯಕರನ ಜೊತೆ ಓಡಿ ಹೋದ ಹೆಂಡ್ತಿ!

4. ಆಚರಣೆಗಳು: ಭಾರತದ ಕೆಲವು ಭಾಗಗಳಲ್ಲಿ, ಸಾಂಪ್ರದಾಯಿಕವಾಗಿ ಹೊಸ ತಾಯಂದಿರನ್ನು ಅವರ ತಾಯಿಯ ಮನೆಗೆ ಕಳುಹಿಸಲಾಗುತ್ತದೆ ಅಥವಾ ದಂಪತಿಗಳು ಲೈಂಗಿಕತೆಯಿಂದ ದೂರವಿರುವುದನ್ನು ಖಚಿತಪಡಿಸಿಕೊಳ್ಳಲು ಹೆರಿಗೆಯ ನಂತರ 3 ತಿಂಗಳವರೆಗೆ ಅಥವಾ ಸಂಗಾತಿಯಿಂದ ಪ್ರತ್ಯೇಕವಾಗಿ ಮಲಗಲು ಕೇಳಲಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಹೆರಿಗೆಯ ನಂತರ ಕೆಲವು ದಂಪತಿಗಳ ಸೆಕ್ಸ್ ಡ್ರೈವ್ ಎಂದಿಗಿಂತಲೂ ಹೆಚ್ಚಾಗುತ್ತದೆ.

ಗರ್ಭಧಾರಣೆಯ ನಂತರ ಲೈಂಗಿಕತೆಯನ್ನು ಪುನರಾರಂಭಿಸುವುದು ಹೇಗೆ?

1. ವೈದ್ಯಕೀಯ ತಜ್ಞರನ್ನು ಸಂಪರ್ಕಿಸಿ: ವೈದ್ಯರೊಂದಿಗೆ ಆರು ವಾರಗಳ ಪ್ರಸವಾನಂತರದ ತಪಾಸಣೆಗೆ ಹೋದಾಗ, ಗರ್ಭನಿರೋಧಕ ಆಯ್ಕೆಗಳನ್ನು ಚರ್ಚಿಸಬಹುದು. ವೈದ್ಯರು ಗುಣವಾಗುವುದನ್ನು ಖಚಿತಪಡಿಸಿಕೊಂಡ ನಂತರ ಲೈಂಗಿಕ ಸಂಭೋಗವನ್ನು ಪುನರಾರಂಭಿಸಬಹುದು.

2. ಬೆಚ್ಚಗಿನ ಸ್ನಾನ: ಬೆಚ್ಚಗಿನ ಸ್ನಾನವನ್ನು ತೆಗೆದುಕೊಳ್ಳುವುದು ಅಥವಾ ಲೂಬ್ರಿಕಂಟ್‌ಗಳನ್ನು ಬಳಸುವುದು ಸಂಭೋಗದ ಸಮಯದಲ್ಲಿ ಅನುಭವಿಸುವ ನೋವು ಮತ್ತು ಯೋನಿ ಶುಷ್ಕತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

3. ಅನ್ಯೋನ್ಯತೆಯ ಮೇಲೆ ಕೇಂದ್ರೀಕರಿಸಿ: ಹೆರಿಗೆಯ ನಂತರ ಅನ್ಯೋನ್ಯತೆಯನ್ನು ಬೆಳೆಸಿಕೊಳ್ಳುವುದು ದಂಪತಿಗಳ ನಡುವಿನ ಬಾಂಧವ್ಯವನ್ನು ಬಲಪಡಿಸಬಹುದು. ಆತ್ಮೀಯತೆ ಎಂದರೆ ಲೈಂಗಿಕತೆ ಮಾತ್ರವಲ್ಲ. ಕೈ ಹಿಡಿಯುವುದು, ಅಪ್ಪಿಕೊಳ್ಳುವುದು, ಡೇಟ್ ಲಂಚ್ ಅಥವಾ ಡಿನ್ನರ್ ಮತ್ತು ಮಸಾಜ್ ಸೆಷನ್‌ಗಳನ್ನು ಪ್ರಯತ್ನಿಸಿ. ಸಂಬಂಧವನ್ನು ಜೀವಂತವಾಗಿಡಲು ಇವುಗಳು ತುಂಬಾ ಉಪಯುಕ್ತವಾಗಿವೆ.

4. ಸಂವಹನ: ಲೈಂಗಿಕತೆಯನ್ನು ಪುನರಾರಂಭಿಸುವ ಬಯಕೆ ಮತ್ತು ಆಹ್ಲಾದಕರ ಅನುಭವಗಳ ಬಗ್ಗೆ ಪರಸ್ಪರ ಸಂವಹನ ನಡೆಸುವುದು, ಸಂಬಂಧವನ್ನು ಪೋಷಿಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ.

Follow Us:
Download App:
  • android
  • ios