MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • Cuddling after sex : ಇದ್ರಿಂದ ಮುಂದೆ ಏನೇನು ಆಗುತ್ತೆ ಗೊತ್ತಾ?

Cuddling after sex : ಇದ್ರಿಂದ ಮುಂದೆ ಏನೇನು ಆಗುತ್ತೆ ಗೊತ್ತಾ?

ಲೈಂಗಿಕ ಕ್ರಿಯೆಯ ನಂತರ ಆರಾಮದಾಯಕ ಅಪ್ಪುಗೆಗಾಗಿ ನಿಮ್ಮ ಸಂಗಾತಿಯೊಂದಿಗೆ ಗಟ್ಟಿಯಾಗಿ ತಬ್ಬಿಕೊಂಡು ಮಲಗೋದು ಆರೋಗ್ಯಕ್ಕೆ ಉತ್ತಮ. ನಿಮ್ಮ ಬಂಧ ಮತ್ತು ಆರೋಗ್ಯವನ್ನು ಹೆಚ್ಚಿಸಲು ಸೆಕ್ಸ್ ನಂತರ ಮುದ್ದಾಡುವುದು ಅಥವಾ ಕಡ್ಲಿಂಗ್ ಹೇಗೆ ಉತ್ತಮ ಎಂದು ತಿಳಿಯಲು ಮುಂದೆ ಓದಿ.

2 Min read
Author : Suvarna News
Published : Jan 11 2023, 05:35 PM IST
Share this Photo Gallery
  • FB
  • TW
  • Linkdin
  • Whatsapp
19

ಲೈಂಗಿಕತೆಯ ನಂತರ ಕಡಲಿಂಗ್ ಮಾಡೋದು (cuddling after sex) ಅಥವಾ ಮುದ್ದಾಡುವುದು ನಿಮ್ಮ ಬಂಧವನ್ನು ಬಲಪಡಿಸಲು ಸಹಾಯ ಮಾಡುವ ಅತ್ಯುತ್ತಮ ವಿಷಯ ಎಂದು ನಿಮಗೆ ತಿಳಿದಿದೆಯೇ? ನೀವು ನಿಮ್ಮ ಸಂಗಾತಿಯೊಂದಿಗೆ ನಿಯಮಿತವಾಗಿ ಸೆಕ್ಸ್ ಮಾಡುತ್ತಿದ್ದರೆ, ಸೆಕ್ಸ್ ಬಳಿಕ ನಿಮ್ಮ ಕೆಲಸದಲ್ಲಿ ನೀವು ತೊಡಗುವುದು, ನಿದ್ರೆ ಮಾಡೋದು ಅಥವಾ ಎದ್ದು ಬೇರೆಲ್ಲೋ ಹೋಗೋದನ್ನು ಮಾಡಬೇಡಿ. ಬದಲಾಗಿ ಸೆಕ್ಸ್ ಬಳಿಕ ಸಂಗತೈಯನ್ನು ಗಟ್ಟಿಯಾಗಿ ಹಿಡಿಯೋದು, ಅವರ ಜೊತೆಗೆ ಮಲಗೋದು, ಮುದ್ದಾಡುವುದು ಮುಖ್ಯವಾಗಿದೆ. 

29

ಲೈಂಗಿಕ ಕ್ರಿಯೆಯ ನಂತರ (after sex) ಮುದ್ದಾಡುವುದು ಹಲವಾರು ಮಾನಸಿಕ ಮತ್ತು ದೈಹಿಕ ಪ್ರಯೋಜನಗಳನ್ನು ಹೊಂದಿದೆ ಮತ್ತು ನಿಮ್ಮ ಸಂಬಂಧದ ಆರೋಗ್ಯ ಸಹ ಸುಧಾರಿಸಬಹುದು. ಲೈಂಗಿಕ ಕ್ರಿಯೆಯ ನಂತರ ಕಡಲಿಂಗ್ ಮಾಡೋದರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ತಿಳಿಯೋಣ,

39
ಲೈಂಗಿಕ ಕ್ರಿಯೆಯ ನಂತರ ಮುದ್ದಾಡುವುದು ಹೇಗೆ ಸಹಾಯ ಮಾಡುತ್ತದೆ?

ಲೈಂಗಿಕ ಕ್ರಿಯೆಯ ನಂತರ ಮುದ್ದಾಡುವುದು ಹೇಗೆ ಸಹಾಯ ಮಾಡುತ್ತದೆ?

ತಬ್ಬಿಕೊಳ್ಳುವು (hug partner) ಅಥವಾ ನಿಮ್ಮ ಸಂಗಾತಿಯನ್ನು ಆವರಿಸಿಕೊಂಡು ಮಲಗೋದರಿಂದ ದೇಹದಲ್ಲಿ ಆಕ್ಸಿಟೋಸಿನ್ ಅಥವಾ ಪ್ರೀತಿಯ ಹಾರ್ಮೋನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಪರಾಕಾಷ್ಠೆಯ ಸಮಯದಲ್ಲಿ ಇದರ ಸ್ರವಿಸುವಿಕೆಯು ಹೆಚ್ಚಾಗುತ್ತದೆ, ಮತ್ತು ಇದು ನಿಮ್ಮ ಮೂಡ್ ಹೆಚ್ಚಿಸುವಲ್ಲಿ ಮತ್ತು ಸಂಗಾತಿಯ ನಡುವಿನ ಸಂಬಂಧವನ್ನು ಬಲಪಡಿಸುವಲ್ಲಿ ಸಹಾಯ ಮಾಡುತ್ತೆ.

49
ಸಂಬಂಧ ಗಟ್ಟಿಯಾಗುತ್ತೆ (strong relationship)

ಸಂಬಂಧ ಗಟ್ಟಿಯಾಗುತ್ತೆ (strong relationship)

ಆಕ್ಸಿಟೋಸಿನ್, ಇದನ್ನು ಲವ್ ಹಾರ್ಮೋನ್ ಅಥವಾ ಬಾಂಡಿಂಗ್ ಹಾರ್ಮೋನ್ ಎಂದೂ ಕರೆಯಲಾಗುತ್ತದೆ, ಇದು ಸಂಗಾತಿ ನಡುವಿನ ಸಂಬಂಧವನ್ನು ಸುಧಾರಿಸುತ್ತದೆ. ಲೈಂಗಿಕ ಕ್ರಿಯೆಯ ನಂತರ ಮುದ್ದಾಡುವುದು ನಿಮಗೆ ಆತ್ಮವಿಶ್ವಾಸ ಮತ್ತು ಆರಾಮದಾಯಕ ಅನುಭವ ನೀಡುತ್ತದೆ. ಸಂಗಾತಿಯೊಂದಿಗಿನ ಸಂಬಂಧವನ್ನು ಬಲಪಡಿಸಲು ನೀವು ಬಯಸಿದರೆ, ಲೈಂಗಿಕತೆಯು ಉತ್ತಮ ಆಯ್ಕೆಯಾಗಿದೆ.

59
ಮೂಡ್ ಬೂಸ್ಟ್

ಮೂಡ್ ಬೂಸ್ಟ್

ಸಂಗಾತಿಯೊಂದಿಗೆ ಬೆರೆಯುವುದರಿಂದ ಆಕ್ಸಿಟೋಸಿನ್ ಅಂದರೆ ನಿಮ್ಮ ದೇಹದಲ್ಲಿ ಪ್ರೀತಿಯ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಆಕ್ಸಿಟೋಸಿನ್ ಸ್ರವಿಸುವಿಕೆಯು ನಿಮ್ಮ ಮೂಡ್ ಬೂಸ್ಟ್ ಮಾಡಲು ಸಹಾಯ ಮಾಡುತ್ತೆ. ಇದರಿಂದ ಸೆಕ್ಸ್ ಲೈಫ್ (Sex life)  ಮತ್ತಷ್ಟು ಹಿತವಾಗಿರುತ್ತೆ.

69
ಹೃದ್ರೋಗದ ಅಪಾಯ ಕಡಿಮೆ ಮಾಡುತ್ತದೆ

ಹೃದ್ರೋಗದ ಅಪಾಯ ಕಡಿಮೆ ಮಾಡುತ್ತದೆ

ಅಧಿಕ ರಕ್ತದೊತ್ತಡವು ಹೃದಯಾಘಾತದ ಸಮಸ್ಯೆಗಳನ್ನು (heart attack) ಉಂಟುಮಾಡಬಹುದು. ಮುದ್ದಾಡುವುದು ಮತ್ತು ತಬ್ಬಿಕೊಳ್ಳುವುದು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಹೃದಯ ಕಾಯಿಲೆಗಳಿಗೆ ಸಂಬಂಧಿಸಿದ ಅಪಾಯಗಳನ್ನು ಕಡಿಮೆ ಮಾಡುತ್ತದೆ. ಒಂದು ಅಧ್ಯಯನದ ಪ್ರಕಾರ, ಸಂಗಾತಿಯೊಂದಿಗೆ ನಿಯಮಿತವಾಗಿ ಲೈಂಗಿಕ ಕ್ರಿಯೆ ನಡೆಸುವುದರಿಂದ ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 

79
ಒತ್ತಡವನ್ನು ಕಡಿಮೆ ಮಾಡುತ್ತದೆ (stress control)

ಒತ್ತಡವನ್ನು ಕಡಿಮೆ ಮಾಡುತ್ತದೆ (stress control)

ಹೆಚ್ಚಿನ ಜನರು ಒತ್ತಡದಿಂದ ತೊಂದರೆಗೀಡಾಗಿದ್ದಾರೆ. ಲೈಂಗಿಕತೆಯ ನಂತರ ತಬ್ಬಿಕೊಳ್ಳುವುದು ಒತ್ತಡವನ್ನು ಕೊನೆಗೊಳಿಸಲು ಸಹಾಯ ಮಾಡುತ್ತದೆ. ಅಪ್ಪುಗೆಯಿಂದ ಬಿಡುಗಡೆಯಾಗುವ ಆಕ್ಸಿಟೋಸಿನ್ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಅನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

89

ಅಧ್ಯಯನದ ಪ್ರಕಾರ, ಆಕ್ಸಿಟೋಸಿನ್ ಆತಂಕದ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ಹಾರ್ಮೋನ್ ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ನಿಮ್ಮನ್ನು ಸುಲಭವಾಗಿ ನಿದ್ರಿಸುವಂತೆ ಮಾಡುತ್ತದೆ. ಮನಸ್ಸು ಸಂತೋಷವಾಗಿರುವಂತೆ ನೋಡಿಕೊಳ್ಳಲು ಈ ಹಾರ್ಮೋನ್ ಸಹಾಯ ಮಾಡುತ್ತೆ.

99
ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ

ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ

ದೇಹದಲ್ಲಿ ಸೆರೊಟೋನಿನ್ ಮತ್ತು ಡೋಪಮೈನ್ (dopamine) ಹೆಚ್ಚಿಸಲು ಕಡಲಿಂಗ್ ಸಹಾಯ ಮಾಡುತ್ತದೆ. ನಿಮ್ಮ ದೇಹವನ್ನು ಹಾನಿಕಾರಕ ಸೋಂಕುಗಳಿಂದ ರಕ್ಷಿಸಲು ಇದು ಲವ್ ಹಾರ್ಮೋನುಗಳೊಂದಿಗೆ (love hormone) ಕೆಲಸ ಮಾಡುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ನಿಮಗೆ ಯಾವುದೇ ರೀತಿಯ ರೋಗಗಳು ಕಾಡೋದಿಲ್ಲ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ವಯಸ್ಸಿನ ಅಂತರ ಎಷ್ಟಿದ್ದರೆ ಚೆಂದ: ಗಂಡ ಹೆಂಡತಿ ಮಧ್ಯೆ ವಯಸ್ಸಿಗಿಂತ ಮನಸ್ಸಿನ ಅಂತರ ಕಡಿಮೆ ಮಾಡಿಕೊಳ್ಳೋದು ಹೇಗೆ
Recommended image2
Vijay Devarakonda ಮದುವೆ ಬಳಿಕ ತಮ್ಮನಿಗೆ ಭರ್ಜರಿ ಡಿಮಾಂಡ್​: ಯಾರೀ ಆನಂದ್​? ಮಾಡ್ತಿರೋದು ಏನು?
Recommended image3
ಈ ದಿನಗಳಲ್ಲಿ ಗಂಡ ಹೆಂಡತಿ ಸೇರಬಾರದು, ಅದರಲ್ಲೂ ನಾಳೆ ಮಾರ್ಚ್‌ 3 ಅಪ್ಪಿತಪ್ಪಿಯೂ ದೈಹಿಕ ಸಂಬಂಧ ಬೇಡ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved