Asianet Suvarna News Asianet Suvarna News

ಗಂಡ ಬೇಡ, ಅವ್ನೇ ಸಾಕು..ಹನಿಮೂನ್ ವೇಳೆ ಪ್ರಿಯಕರನ ಜೊತೆ ಓಡಿ ಹೋದ ಹೆಂಡ್ತಿ!

ಅಲ್ಲಾ..ಹೀಗೂ ಮಾಡ್ತಾರಾ ಅಂತ..ಹೋಗಿದ್ದು ಗಂಡನ ಜೊತೆಗೆ ಹನಿಮೂನ್‌ಗೆ. ಆದ್ರೆ ಅಲ್ಯಾಕೋ ಗಂಡ ಬೇಡ, ಅವ್ನೇ ಸಾಕು ಅನಿಸಿದೆ. ತಕ್ಷಣ ಗಂಡನಿಗೆ ಮತ್ತು ಬರುವ ಔಷಧಿ ಕೊಟ್ಟು ಯಾವಾರಿಸಿ ಪ್ರಿಯಕರನ ಜೊತೆ ಓಡಿ ಹೋಗಿದ್ದಾಳೆ ಹೆಂಡ್ತಿ. 

Wife eloped with her friend during Honeymoon time in Uttarpradesh Vin
Author
First Published Jan 11, 2023, 2:52 PM IST

ಮದ್ವೆ ಅನ್ನೋದು ಒಂದು ಸುಂದರವಾದ ಬಾಂಧವ್ಯ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಈ ಪವಿತ್ರ ಸಂಬಂಧಕ್ಕೆ ಅರ್ಥವೇ ಇಲ್ಲದಂತಾಗಿದೆ. ವಿಚ್ಛೇದನ, ಅನೈತಿಕ ಸಂಬಂಧದಿಂದ ದಾಂಪತ್ಯ ಅನ್ನೋದು ಅರ್ಥಹೀನವಾಗುತ್ತಿದೆ. ಲವ್ ಮಾಡಿ ಅರ್ಧದಲ್ಲೇ ಕೈ ಬಿಡುವುದು, ಎಂಗೇಜ್‌ಮೆಂಟ್ ಮಾಡಿ ಕ್ಯಾನ್ಸಲ್ ಮಾಡಿಕೊಳ್ಳುವುದು, ಮದುವೆ ಮನೆಯಲ್ಲೇ ಈ ಹುಡುಗ ನನಗೆ ಬೇಡ ಅನ್ನೋದು ಇತ್ತೀಚಿಗೆ ಸಾಮಾನ್ಯವಾಗಿದೆ. ಹೀಗಾಗಿ ಇವತ್ತಿನ ದಿನಗಳಲ್ಲಿ ಮದುವೆಯ ಮೊದಲು ಅದೆಷ್ಟು ತಯಾರಿ ನಡೆದರೂ, ಕಾರ್ಯಗಳು ನಡೆದರೂ ತಾಳಿ ಕಟ್ಟುವ ವರೆಗೆ ಮದುವೆಯಾಯ್ತು ಎಂದು ಹೇಳುವಂತೆಯೇ ಇಲ್ಲ.

ಕೆಲವೊಮ್ಮೆ ಮದ್ವೆ (Marriage)ಯಾದ ಬಳಿಕವೂ ದಾಂಪತ್ಯ ಉಳಿಯುತ್ತೆ ಅನ್ನೋ ನಂಬಿಕೆಯಿರಲ್ಲ. ಮದುವೆ ಮರುದಿನಾನೇ ಹುಡುಗಿ ಓಡಿಹೋಗುವುದು, ಅಥವಾ ತಿಂಗಳ ಬಳಿಕ ಗಂಡನನ್ನು ತೊರೆದು ಹೋಗುವುದು ಸಾಮಾನ್ಯವಾಗಿದೆ. ಆದ್ರೆ ಇಲ್ಲೊಬ್ಬಾಕೆ ಇದೆಲ್ಲಕ್ಕಿಂತ ವಿಚಿತ್ರವಾಗಿ ಮದ್ವೆಯಾಗಿ ಹನಿಮೂನ್‌ಗೆ ಹೋದ ಸಂದರ್ಭದಲ್ಲಿ ಗಂಡನಿಗೆ (Groom) ಮತ್ತು ಬರುವ ಔಷಧಿ (Medicine) ನೀಡಿ ಪ್ರಿಯಕರನ ಜೊತೆ ಓಡಿ ಹೋಗಿದ್ದಾಳೆ. ಉತ್ತರ ಪ್ರದೇಶದ ಅಲಿಗಢದಲ್ಲಿ ಈ ಘಟನೆ ನಡೆದಿದೆ.

ಮದ್ವೆಯಾದ ಒಂದೇ ಗಂಟೆಯಲ್ಲಿ ಡಿವೋರ್ಸ್‌, ವಧುವಿಗೆ ತನ್ನ ತಮ್ಮನ ಜೊತೆಯೇ ಮದ್ವೆ ಮಾಡಿಸಿದ ವರ!

ಹನಿಮೂನ್‌ಗೆ ಹೋಗಿದ್ದ ದಂಪತಿ, ಪ್ರಿಯಕರನ ಜೊತೆ ಓಡಿಹೋದ ಪತ್ನಿ
ಸಿವಿಲ್ ಲೈನ್ ಪೊಲೀಸ್ ಠಾಣೆ ವ್ಯಾಪ್ತಿಯ ಅಲಿಗಢದ ಗುರುದ್ವಾರ ರಸ್ತೆಯ ನಿವಾಸಿ ಸತ್ಯಂ ಎಂಬವರು ಆಗ್ರಾ ಕ್ಯಾಂಟ್ ನಿವಾಸಿ ದೀಪಾಸಿ ಅವರನ್ನು ನವೆಂಬರ್‌ನಲ್ಲಿ ವಿವಾಹವಾಗಿದ್ದರು. ದಂಪತಿಗಳು (Couple) ಕೆಲ ವಾರಗಳ ಜೊತೆಯಾಗಿ ಖುಷಿಯಾಗಿಯೇ ಇದ್ದರು. ಮದುವೆಯಾದ ಹೊಸತರಲ್ಲಿ ನೆಂಟರಿಷ್ಟರ ಮನೆಗೆ ಜೊತೆಯಾಗಿಯೇ ಹೋಗಿ ಬಂದಿದ್ದರು. ಆ ನಂತರ ನವವಿವಾಹಿತ ದಂಪತಿಗಳು ಡಿಸೆಂಬರ್ ನಲ್ಲಿ ಹನಿಮೂನ್‌ಗೆ ಬುಕ್ ಮಾಡಿದ್ದರು.  

ಸತ್ಯಂ ಡಿಸೆಂಬರ್ 8, 2022 ರಂದು ಮಧುಚಂದ್ರಕ್ಕಾಗಿ (Honeymoon) ಉತ್ತರಾಖಂಡಕ್ಕೆ ತಮ್ಮ ಹೆಂಡತಿ (Wife)ಯೊಂದಿಗೆ ತೆರಳಿದ್ದರು. ದಂಪತಿಗಳು ತಮ್ಮ ಹನಿಮೂನ್‌ಗಾಗಿ ಡೆಹ್ರಾಡೂನ್‌ಗೆ ತೆರಳಿದರು. ಇಲ್ಲಿಂದ ಮಸ್ಸೂರಿಗೆ ಹೋಗಿ ಹೃಷಿಕೇಶ ತಲುಪಿದರು. ನವವಿವಾಹಿತ ದಂಪತಿಗಳು ಡಿಸೆಂಬರ್ 9ರಂದು ಹೃಷಿಕೇಶಕ್ಕೆ ಹೋಗಿ ಬಸ್ ನಿಲ್ದಾಣದ ಬಳಿಯ ಖಾಸಗಿ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿದ್ದರು. ಈ ನಡುವೆ ಹೋಟೆಲ್ ನಲ್ಲಿ ಚಹಾ ಕುಡಿದ ಬಳಿಕ ಸತ್ಯಂ ಪ್ರಜ್ಞೆ ಕಳೆದುಕೊಂಡ ಎನ್ನಲಾಗಿದೆ. ಆಗ ದೀಪಾಸಿ ತನ್ನ ಸಾಮಾನು ಸರಂಜಾಮುಗಳನ್ನು ಪ್ಯಾಕ್ ಮಾಡಿ ಬ್ಯಾಗ್ ಮತ್ತು ಹಣದೊಂದಿಗೆ ಹೋಟೆಲ್ ನಿಂದ ಓಡಿ ಹೋಗಿದ್ದಾಳೆ. ಮಧ್ಯರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಸತ್ಯಂಗೆ ಪ್ರಜ್ಞೆ ಮರಳಿದಾಗ ದೀಪಾಸಿ ರೂಮಿನಲ್ಲಿ ಇಲ್ಲದ್ದನ್ನು ತಿಳಿದು ಗಾಬರಿಯಾದರು. ಹೋಟೆಲ್ ಸಿಬ್ಬಂದಿಯ ಬಳಿ ಪತ್ನಿಯ ಬಗ್ಗೆ ವಿಚಾರಿಸಿದಾಗ, ಅವರು ಸಂಜೆ ಏಳು ಗಂಟೆ ಸುಮಾರಿಗೆ ದೀಪಾಸಿ ಹೋಲ್‌ನಿಂದ ಹೊರಗೆ ಹೋಗಿದ್ದಾಳೆ ಎಂಬುದನ್ನು ತಿಳಿಸಿದ್ದಾರೆ.

ಮಂಟಪದಲ್ಲೇ ವರ ಮಾಡಿರೋ ಕೆಲಸಕ್ಕೆ ನಾಚಿ ನೀರಾದ್ಲು ವಧು, ಇಷ್ಟಕ್ಕೂ ಆತ ಮಾಡಿದ್ದೇನು ?

ಯುವತಿಗೆ ಈಗಾಗಲೇ ಮದುವೆಯಾಗಿದೆ ಅನ್ನೋ ಮಾಹಿತಿ
ತಕ್ಷಣವೇ, ಸತ್ಯ ಈ ವಿಷಯದ ಬಗ್ಗೆ ಪೊಲೀಸರಿಗೆ ದೂರು ನೀಡಿದರು. ತನಿಖೆಯ ನಂತರ, ದೀಪಾಸಿ ಬಸ್ಸಿನಲ್ಲಿ ತನ್ನ ಗೆಳೆಯನ ಜೊತೆ ದೆಹಲಿಗೆ ತೆರಳಿದ್ದಾಳೆ ಎಂದು ತಿಳಿದುಬಂದಿದೆ. ಸತ್ಯಂ ಈ ಘಟನೆಯ ಬಗ್ಗೆ ಅಲಿಗಢದಲ್ಲಿರುವ ತನ್ನ ಕುಟುಂಬಕ್ಕೆ (Family) ಮತ್ತು ಆಗ್ರಾದಲ್ಲಿರುವ ತನ್ನ ಅತ್ತೆ-ಮಾವಂದಿರಿಗೆ ಮಾಹಿತಿ ನೀಡಿದ್ದಾರೆ. ಈ ನಡುವೆ ಆಕೆಯ ಕುಟುಂಬವು ಗ್ಯಾಂಗ್​ಸ್ಟರ್​ ಅನ್ಶು ಯಾದವ್ ಎಂಬ ಮತ್ತೊಬ್ಬ ಯುವಕನ ಜೊತೆ ದಿಪಾಸಿಗೆ ಸಂಬಂಧ (Relationship) ಇದೆ. ಆಕೆಯನ್ನು ಮರೆತುಬಿಡುವಂತೆ ಸತ್ಯಂಗೆ ಹೇಳಿದ್ದಾರೆ ಎನ್ನಲಾಗಿದೆ. 

ಬಳಿಕ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಈ ದೃಶ್ಯಾವಳಿಯಲ್ಲಿ, ಹುಡುಗಿ ಒಬ್ಬಳೇ ಎಲ್ಲೋ ಹೋಗುತ್ತಿರುವುದನ್ನು ಕಾಣಬಹುದು. ಆ ನಂತರ ಯುವತಿ ತನ್ನ ಸ್ನೃಹಿತನ ಜೊತೆ ದೆಹಲಿಗೆ ಹೋಗಿರುವುದು ತಿಳಿದುಬಂತು. ಬಾಲಕಿಯ ಕುಟುಂಬದ ಸದಸ್ಯರನ್ನು ವಿಚಾರಿಸಿದಾಗ ಅವರು ಯಾವುದೇ ಮಾಹಿತಿ ನೀಡಲು ಸಿದ್ಧವಾಗಲ್ಲಿಲ್ಲ. ಆದರೆ ಹುಡುಗಿಗೆ ಈಗಾಗಲೇ ಮದುವೆಯಾಗಿದೆ ಎಂದು ಆ ನಂತರ ತಿಳಿದುಬಂದಿದೆ. ಅದೇನೆ ಇರ್ಲಿ, ಇರುವಷ್ಟು ದಿನ ಚೆನ್ನಾಗಿದ್ದು ಯುವತಿ ಮದುವೆಯ ಬಳಿಕ ಓಡಿ ಹೋಗಿ ಯುವಕನ ಜೀವನವನ್ನೂ ಹಾಳು ಮಾಡಿದ್ಯಾಕೋ ಅರ್ಥವಾಗುತ್ತಿಲ್ಲ.

Follow Us:
Download App:
  • android
  • ios