Personal Finance : ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಮಹಿಳೆಯರು ಮಾಡಬೇಕಾದ ಕೆಲಸವಿದು!
ಕೆಲ ಕುಟುಂಬಗಳಲ್ಲಿ ಮಹಿಳೆಯರ ಆದಾಯವೇ ಜೀವನಕ್ಕೆ ಆಧಾರವಾಗಿರುತ್ತದೆ. ಸಿಕ್ಕ ಸಂಬಳದಲ್ಲಿ ಮನೆ ನಡೆಸೋದೆ ಕಷ್ಟ ಇನ್ನೆಲ್ಲಿ ಉಳಿತಾಯ ಎನ್ನುವ ಮಹಿಳೆಯರು ತಮ್ಮ ನಂತ್ರ ಕುಟುಂಬದ ಕಥೆ ಏನು ಎಂಬುದನ್ನು ಆಲೋಚಿಸಬೇಕು. ಕೇವಲ ದುಡಿಯುವ ಮಹಿಳೆಯರು ಮಾತ್ರವಲ್ಲ ಗೃಹಿಣಿಯರು ಕೂಡ ಆರ್ಥಿಕ ಭದ್ರತೆಗಾಗಿ ಮುಖ್ಯವಾದ ಕೆಲಸ ಮಾಡ್ಬೇಕು.
ಪ್ರತಿ ಮಹಿಳೆ ಜೀವ ವಿಮಾ ಪಾಲಿಸಿ ಪಡೆಯೋದು ಬಹಳ ಮುಖ್ಯ. ಜೀವ ವಿಮೆಯಿಂದ ಮಹಿಳೆ ಹಲವು ಪ್ರಯೋಜನಗಳನ್ನು ಪಡೆಯುತ್ತಾಳೆ. ಆದ್ರೆ ಭಾರತದಲ್ಲಿ ಜೀವ ವಿಮಾ ಪಾಲಿಸಿ ಪಡೆಯುವ ಮಹಿಳೆಯರ ಸಂಖ್ಯೆ ಬಹಳ ಕಡಿಮೆಯಿದೆ. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ನೀಡಿರುವ ಮಾಹಿತಿ ಅಚ್ಚರಿಯುಂಟು ಮಾಡುತ್ತದೆ. ಐಆರ್‌ಡಿಎಐ ಅಂಕಿಅಂಶ 2017-18ರಲ್ಲಿ 90 ಲಕ್ಷ ಮಹಿಳೆಯರು ಜೀವ ವಿಮಾ ಪಾಲಿಸಿಗಳನ್ನು ಖರೀದಿಸಿದ್ದರೆ, ಅದೇ ಅವಧಿಯಲ್ಲಿ ಜೀವ ವಿಮಾ ಪಾಲಿಸಿಗಳನ್ನು ತೆಗೆದುಕೊಂಡ ಪುರುಷರ ಸಂಖ್ಯೆ ಶೇಕಡಾ 1.91 ಕೋಟಿಯಷ್ಟಿದೆ. ವಿಮೆ ಪಡೆಯುವಲ್ಲಿ ಮಹಿಳೆಯರು ಪುರುಷರಿಗಿಂತ ತೀರಾ ಹಿಂದುಳಿದಿದ್ದಾರೆ ಎಂಬುದನ್ನು ನಾವಿಲ್ಲಿ ಸ್ಪಷ್ಟವಾಗಿ ತಿಳಿಯಬಹುದು.
ಇದು ಹಳೆಯ ಅಂಕಿಅಂಶ. ಕಳೆದ ದಶಕಕ್ಕೆ ಹೋಲಿಸಿದರೆ ಮಹಿಳೆಯರಲ್ಲಿ ಜೀವ ವಿಮೆ (Life Insurance )ಯ ಅರಿವು ಹೆಚ್ಚಾಗ್ತಿದೆ. ಈಗಿನ ದಿನಗಳಲ್ಲಿ ವಿಮೆ ಪಡೆಯುವ ಮಹಿಳೆಯರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇದ್ರ ಜೊತೆ ಕಳೆದ ದಶಕದಲ್ಲಿ ಅನೇಕ ಖಾಸಗಿ (Private) ವಿಮಾ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ಸಕ್ರಿಯವಾಗಿವೆ. ಮಹಿಳೆಯರನ್ನು ಮನವೊಲಿಸಿ ವಿಮೆ ಪಡೆಯಲು ಪ್ರೋತ್ಸಾಹಿಸುತ್ತಿವೆ. ಹಾಗೆಯೇ ವಿಮಾ ಏಜೆಂಟರ್ ಆಗಿ ಕೆಲಸ ಮಾಡುತ್ತಿರುವ ಮಹಿಳೆಯರ ಸಂಖ್ಯೆ ಕೂಡ ಈ ಅವಧಿಯಲ್ಲಿ ಹೆಚ್ಚಾಗಿದೆ.
ಏನೇ ನಿನ್ ಗಂಡ ಹಿಂಗಿದ್ದಾನೆ, ಹೊಟ್ಟೆಗೆ ಹಾಕ್ತೀಯೋ ಇಲ್ವೋ? ಅಂತ ಕೇಳಿದರೆ ಉರಿಯುತ್ತೆ ಹೆಣ್ಣಿಗೆ!
ಜೀವ ವಿಮಾ ಪಾಲಿಸಿ ಮಹಿಳೆಯರಿಗೆ ಹೇಗೆ ಪ್ರಯೋಜನಕಾರಿ?
ಆರ್ಥಿಕ (Financial) ಭದ್ರತೆ : ಜೀವ ವಿಮೆ ಮಹಿಳೆಯರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಕುಟುಂಬ ಸದಸ್ಯರ ಅಕಾಲಿಕ ಮರಣದ ಸಂದರ್ಭದಲ್ಲಿ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುವ ಸಾಧನವಾಗಿದೆ. ಪತಿಯೊಂದಿಗೆ ಕುಟುಂಬದ ವೆಚ್ಚವನ್ನು ನಿರ್ವಹಿಸುವ ಅಥವಾ ಮನೆಯ ಕೆಲಸ ಮಾಡುವ ಮಹಿಳೆಯರು ಜೀವ ವಿಮೆಯನ್ನು ತೆಗೆದುಕೊಳ್ಳಬೇಕು. ಜೀವ ವಿಮೆಯನ್ನು ಖರೀದಿಸುವ ಬಗ್ಗೆ ಮಹಿಳೆಯರು ಗಂಭೀರವಾಗಿ ಯೋಚಿಸಬೇಕು. 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನಲ್ಲಿ ಪಕ್ವಗೊಳ್ಳುವ ಎಂಡೋಮೆಂಟ್ ಪಾಲಿಸಿಯು ಮಹಿಳೆಯರಿಗೆ ಉಳಿತಾಯದ ಜೊತೆಗೆ ಎಲ್ಲಾ ರೀತಿಯ ಆರ್ಥಿಕ ಅಗತ್ಯಗಳನ್ನು ಪೂರೈಸಲು ನೆರವಾಗುತ್ತದೆ.
ಸಾಮಾಜಿಕ ಭದ್ರತೆ : ವ್ಯಾಪಾರ (business) ಅಥವಾ ಆರೋಗ್ಯ ಸಮಸ್ಯೆಗಳಿಂದಾಗಿ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಭಾವಿಸಿದಾಗ ಅನೇಕ ಮಹಿಳೆಯರು ವಿಮೆಯನ್ನು ಖರೀದಿಸುತ್ತಾರೆ. ಯಾವುದೇ ಅಹಿತಕರ ಘಟನೆಯ ಸಂದರ್ಭದಲ್ಲಿ, ಅವರ ಮನೆಯ ಹಿರಿಯರು ಮತ್ತು ಅವಲಂಬಿತರಿಗೆ ಸಾಮಾಜಿಕ ಭದ್ರತೆ ನೀಡಲು ಮಹಿಳೆಯರು ಜೀವ ವಿಮೆ ಖರೀದಿ ಮಾಡುವು ಅಗತ್ಯವಿರುತ್ತದೆ.
ಕೂದಲಿದೆ ಅಂತ ಎಲ್ಲೆಲ್ಲೋ ವ್ಯಾಕ್ಸ್ ಮಾಡೋ ಮುನ್ನ ಜೋಪಾನ..ಚರ್ಮನೇ ಕಿತ್ತೋಯ್ತು ನೋಡಿ!
ಜೀವ ವಿಮೆ ಪಾಲಿಸಿ ಪಾವತಿ ಹೆಚ್ಚು ಕಷ್ಟವಲ್ಲ : ಜೀವ ವಿಮೆ ಪಾಲಿಸಿಯ ಉತ್ತಮ ವಿಷಯವೆಂದರೆ ಅದಕ್ಕೆ ಹೆಚ್ಚಿನ ಮೇಲ್ವಿಚಾರಣೆ ಅಗತ್ಯವಿಲ್ಲ. ಪಾಲಿಸಿಯ ಪ್ರೀಮಿಯಂ ಸರಿಯಾದ ಸಮಯಕ್ಕೆ ಪಾವತಿ ಮಾಡಿದ್ರೆ ಸಾಕಾಗುತ್ತದೆ. ಮಧ್ಯದಲ್ಲಿ ನೀವು ನಿಲ್ಲಿಸದೆ ಹೋದ್ರೆ ನಿಮ್ಮ ಆದಾಯಕ್ಕೆ ಉತ್ತಮ ಮೂಲವಾಗುತ್ತದೆ. ಪಾಲಿಸಿಯನ್ನು ತೆಗೆದುಕೊಳ್ಳುವಾಗ, ಕೆಲವು ಕಂಪನಿಗಳು ಮಹಿಳೆಯರಿಗೆ ಪ್ರೀಮಿಯಂ ಮೊತ್ತವನ್ನು ಕಡಿಮೆ ಇರಿಸುತ್ತವೆ. ಪುರುಷರಿಗಿಂತ ಮಹಿಳೆಯರು ಹೆಚ್ಚು ಸಮಯ ವಿಮಾ ಪಾಲಿಸಿ ಹೊಂದಿರುತ್ತಾರೆಂದು ಕಂಪನಿಗಳು ನಂಬುತ್ತವೆ.
ಜೀವ ವಿಮಾ ಪಾಲಿಸಿ ಪಡೆದ್ರೆ ತೆರಿಗೆಯಲ್ಲಿ ವಿನಾಯಿತಿ : ಗೃಹಿಣಿ ವಿಮೆ ಖರೀದಿಸಿದ್ದು, ಆಕೆ ಪ್ರೀಮಿಯಂ ಹಣ, ಪತಿಯ ಸಂಬಳದಿಂದ ಬರ್ತಿದೆ ಎಂದಾದ್ರೆ ಇದು ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯ ವ್ಯಾಪ್ತಿಗೆ ಬರುತ್ತದೆ. ಉದ್ಯೋಗಸ್ಥ ಮಹಿಳೆಯರಿಗೆ ತೆರಿಗೆ ವಿನಾಯಿತಿ ಬೇಕು. ಮೆಚ್ಯೂರಿಟಿ ಅಥವಾ ಡೆತ್ ಕ್ಲೈಮ್ ಸಂದರ್ಭದಲ್ಲಿ ಜೀವ ವಿಮೆ, ತೆರಿಗೆ ಮುಕ್ತವಾಗಿರುತ್ತದೆ. ತೆರಿಗೆ ಹೊಣೆಗಾರಿಕೆ ಅತ್ಯಲ್ಪವಾಗಿರುವ ಹೂಡಿಕೆ ಯೋಜನೆಯಲ್ಲಿ ಜೀವ ವಿಮಾ ಯೋಜನೆ ಸೇರಿದೆ.