Asianet Suvarna News Asianet Suvarna News

ಈಗಿನ ಹುಡುಗೀರೇಕೆ ಬೇಗ ಋತುಮತಿಯಾಗ್ತಾರೆ? ಇದು ಆರೋಗ್ಯವೋ, ಅನಾರೋಗ್ಯವೋ?

ಮಗಳಿಗೆ 12 ವರ್ಷ ದಾಟುತ್ತಿದ್ದಂತೆ ತಾಯಿ ಮನಸ್ಸು ಚಡಪಡಿಸುತ್ತಿತ್ತು. ಮಗಳು ಯಾವಾಗ ಮುಟ್ಟಾಗ್ತಾಳೆ ಎಂಬ ಆತಂಕ ಅವಳನ್ನು ಕಾಡುತ್ತಿತ್ತು. ಆದ್ರೆ ಈಗ ಮಗಳಿಗೆ ವರ್ಷ 8 ಆಗ್ತಿದ್ದಂತೆ ತಾಯಿಗೆ ಭಯ ಶುರುವಾಗ್ತಿದೆ. ಈಗಿನ ಮಕ್ಕಳಿಗೆ ಬೇಗ ಪಿರಿಯಡ್ಸ್ ಆಗ್ತಿರೋದೆ ಇದಕ್ಕೆ ಕಾರಣ. 
 

Why Todays Children Have Early Period
Author
First Published Mar 10, 2023, 1:20 PM IST

ಮುಟ್ಟು ಮಹಿಳೆಯಲ್ಲಾಗುವ ನೈಸರ್ಗಿಕ ಕ್ರಿಯೆ. ಪ್ರತಿ ತಿಂಗಳು ನೀವು ಮುಟ್ಟಾಗ್ತಿದ್ದೀರಿ ಅಂದ್ರೆ ನೀವು ಆರೋಗ್ಯವಾಗಿದ್ದೀರಿ ಎಂದೇ ಅರ್ಥ. ಮೊದಲ ಬಾರಿ ಮುಟ್ಟಾಗೋದನ್ನು ಮೆನಾರ್ಕಿ ಅಂತಾ ಕರೆಯಲಾಗುತ್ತೆ. ಮಗಳು ಮುಟ್ಟಾಗಿದ್ದಾಳೆ ಅಂದ್ರೆ ನೀವು ಖುಷಿಪಡಬೇಕು. ಯಾಕೆಂದ್ರೆ ಮಗಳು ಆರೋಗ್ಯವಾಗಿದ್ದಾಳೆ ಎಂಬುದನ್ನು ಇದು ಸೂಚಿಸುತ್ತದೆ. 

ಮೆದುಳು (Brain) , ಓವರಿ, ಥೈರಾಯ್ಡ್, ಗರ್ಭಕೋಶ ಸೇರಿ ದೇಹದ ಅಂಗಗಳು ಚೆನ್ನಾಗಿ ಕೆಲಸ ಮಾಡ್ತಿವೆ ಎಂದಾಗ ಮಗಳಿಗೆ ಪಿರಿಯಡ್ಸ್ (Periods)  ಆಗುತ್ತದೆ. ಹಿಂದೆ ಮಕ್ಕಳು ಮುಟ್ಟಾಗ್ತಿದ್ದಂತೆ ಅದನ್ನು ಸಂಭ್ರಮಿಸ್ತಿದ್ರು. ಈಗ್ಲೂ ಕೆಲವು ಕಡೆ ಈ ಪದ್ಧತಿಯಿದೆಯಾದ್ರೂ ತಾಯಂದಿರಲ್ಲಿ ಮಕ್ಕಳ ಬಗ್ಗೆ ಭಯ (fear) ವೊಂದು ಶುರುವಾಗಿದೆ. ಇದಕ್ಕೆ ಕಾರಣ ಮಕ್ಕಳು ಮೊದಲ ಬಾರಿ ಮುಟ್ಟಾಗ್ತಿರುವ ವಯಸ್ಸು. ಹಿಂದೆ 14 – 15 ವರ್ಷದ ಹುಡುಗಿಯರು ಮೊದಲ ಬಾರಿ ಮುಟ್ಟಾಗ್ತಿದ್ದರು. ಕೆಲವರು 16 ವರ್ಷವಾದ್ಮೇಲೆ ಮುಟ್ಟಾಗ್ತಿದ್ದುದ್ದಿದೆ. ಆದ್ರೀಗ ಭಾರತದಲ್ಲಿ ಇದು ಸರಾಸರಿ ವಯಸ್ಸು 13.62ಕ್ಕೆ ಬಂದಿದೆ. ನೀವು ವಿಶ್ವದ ಮಟ್ಟದಲ್ಲಿ ಇದನ್ನು ಹೋಲಿಕೆ ಮಾಡಿದ್ರೆ ಭಾರತದ ಎವರೇಜ್ ಕಡಿಮೆಯಿದೆ. ವಿಶ್ವದಲ್ಲಿ ಇದು 12.4ರಷ್ಟಿದೆ. ಭಾರತದಲ್ಲಿ ಬಹುತೇಕ ಹುಡುಗಿಯರು ತಮ್ಮ 13ನೇ ವಯಸ್ಸಿನಲ್ಲಿ ಮುಟ್ಟಾಗ್ತಿದ್ದರೂ ಈಗ 8  - 9 ವರ್ಷಕ್ಕೆ ಪಿರಿಯಡ್ಸ್ ಆಗ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಕಾರಣ ಏನು?

ಕಮಿಟ್‌ಮೆಂಟ್ ಇಲ್ಲವೆಂದರೆ ಸಂಬಂಧ ಹೀಗೆ ಹಾಳಾಗೋದು ಗ್ಯಾರಂಟಿ!

8 – 9 ವರ್ಷಕ್ಕೆ ಮಕ್ಕಳು ಮುಟ್ಟಾಗಲು ಕಾರಣವೇನು? : 

ಆನುವಂಶಿಕ ಕಾರಣ : ವೈದ್ಯರು ಮಕ್ಕಳು ಬೇಗ ಮುಟ್ಟಾಗಲು ಮುಖ್ಯವಾದ ಒಂದು ಕಾರಣವೆಂದ್ರೆ ಆನುವಂಶಿಕ ಎನ್ನುತ್ತಾರೆ. ಅಮ್ಮಂದಿರು ಯಾವ ವಯಸ್ಸಿನಲ್ಲಿ ಮುಟ್ಟಾಗಿದ್ರು ಎಂಬುದರ ಮೇಲೆ ಮಕ್ಕಳು ಮುಟ್ಟಾಗ್ತಿದ್ದಾರೆ. ಅಮ್ಮಂದಿರು 13 ವರ್ಷಕ್ಕೆ ಮುಟ್ಟಾಗಿದ್ರೆ ಮಕ್ಕಳ ಈ ಮುಟ್ಟಿನ ವಯಸ್ಸು 1.7 ವರ್ಷ ಮೊದಲೇ ಆಗುತ್ತದೆ. ಅಂದ್ರೆ 12 ವರ್ಷದೊಳಗೆ ಮಗಳು ಮುಟ್ಟಾಗ್ತಾಳೆ. ಅದೇ ಅಮ್ಮನ ಮುಟ್ಟಿನ ವಯಸ್ಸು ಹೆಚ್ಚಿದ್ದರೆ ಮಕ್ಕಳ ಮುಟ್ಟಿನ ವಯಸ್ಸು ಕೂಡ ಹೆಚ್ಚಿರುತ್ತದೆ.

ದೇಹದ ತೂಕ (Body Weight) ಇದಕ್ಕೆ ಕಾರಣ : ಈಗಿನ ಮಕ್ಕಳ ತೂಕ ಕೂಡ ಅವರು ಬೇಗ ಮುಟ್ಟಾಗಲು ಕಾರಣವಾಗ್ತಿದೆ. ಮಕ್ಕಳು ಆರೋಗ್ಯವಾಗಿರಲಿ ಅಂತಾ ತಾಯಂದಿರುವ ಒತ್ತಾಯ ಪೂರ್ವಕವಾಗಿ ಅವರಿಗೆ ಆಹಾರ ನೀಡ್ತಿದ್ದಾರೆ. ಜಂಕ್ ಫುಡ್ ಸೇವನೆ ಪ್ರಮಾಣ ಕೂಡ ಹೆಚ್ಚಾಗಿದೆ. ಇದ್ರಿಂದಾಗಿ ಮಕ್ಕಳ ತೂಕ ಹೆಚ್ಚಾಗ್ತಿದೆ. ಬೊಜ್ಜು ಜಾಸ್ತಿಯಾಗ್ತಿದೆ. ವಿಶೇಷವಾಗಿ ಹೊಟ್ಟೆ ಭಾಗ ದೊಡ್ಡದಾಗಿರುವ ಮಕ್ಕಳು ಬೇಗ ಮುಟ್ಟಾಗ್ತಿದ್ದಾರೆ. ಮಕ್ಕಳಿಗೆ ಮಿತಿಮೀರಿದ ಪೌಷ್ಟಿಕಾಂಶ ನೀಡದಾಗ್ಲೂ ಮಕ್ಕಳು ಬೇಗ ಮುಟ್ಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

ದೈಹಿಕ ವ್ಯಾಯಾಮದ (Physical Exercise) ಕೊರತೆ : ಮಕ್ಕಳಿಗೆ ಅತಿ ಹೆಚ್ಚು ಆಹಾರ ನೀಡುವ ಪಾಲಕರು ಅವರ ದೈಹಿಕ ವ್ಯಾಯಾಮವನ್ನು ಮರೆಯುತ್ತಾರೆ. ಸದಾ ಕುಳಿತಲ್ಲಿಯೇ ಕುಳಿತುಕೊಳ್ಳುವ ಮಕ್ಕಳಿಗೆ ಬೊಜ್ಜು ಕಾಡಲು ಶುರುವಾಗುತ್ತದೆ. ಇದು ಮಕ್ಕಳು ಬೇಗ ಮುಟ್ಟಾಗಲು ಮತ್ತೊಂದು ಕಾರಣ. 

ಆಹಾರ (Food) : ಬರೀ ಫಾಸ್ಟ್ ಫುಡ್ ಮಾತ್ರವಲ್ಲ ನಾವು ಸೇವನೆ ಮಾಡುವ ಬೇರೆ ಆಹಾರಗಳು ಕೂಡ ಮಕ್ಕಳ ಮುಟ್ಟಿನ ಮೇಲೆ ಪರಿಣಾಮ ಬೀರುತ್ತದೆ. ಇದ್ರಲ್ಲಿ ಅನ್ನ ಕೂಡ ಸೇರಿದೆ. ದಕ್ಷಿಣ ಭಾರತದಲ್ಲಿ ಅನ್ನವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದ್ರಿಂದ ಇಲ್ಲಿನ ಮಕ್ಕಳು ಬೇಗ ಮುಟ್ಟಾಗ್ತಾರೆ. ಅನ್ನದಲ್ಲಿ ಫ್ಯಾಟ್ ಹಾಗೂ ಶುಗರ್ ಹೆಚ್ಚಿರುವುದು ಇದಕ್ಕೆ ಕಾರಣ. ಉತ್ತರ ಭಾರತದಲ್ಲಿ ಗೋಧಿ ಬಳಕೆ ಹೆಚ್ಚಿರುವ ಕಾರಣ, ದಕ್ಷಿಣ ಭಾರತದ ಮಕ್ಕಳಿಗೆ ಹೋಲಿಕೆ ಮಾಡಿದ್ರೆ ಉತ್ತರ ಭಾರತದ ಮಕ್ಕಳು ಒಂದು ವರ್ಷ ತಡವಾಗಿ ಮುಟ್ಟಾಗ್ತಾರೆ.   

ಪಾಲಕರು ಏನು ಮಾಡ್ಬೇಕು? : 

ಮಕ್ಕಳಿಗೆ ಆರೋಗ್ಯಕರ ಆಹಾರ (Healthy Food) ನೀಡಬೇಕು : ಮಕ್ಕಳಿಗೆ ಆರೋಗ್ಯಕರ ಆಹಾರ ನೀಡಬೇಕು . ಹಾಗಂತ ಮಿತಿ ಮೀರಿ ಆಹಾರ ನೀಡುವುದು ಯೋಗ್ಯವಲ್ಲ. ಮಕ್ಕಳು ದಪ್ಪವಾಗ್ಲಿ ಎನ್ನುವ ಕಾರಣಕ್ಕೆ ಅವರಿಗೆ ಫಾಸ್ಟ್ ಫುಡ್ ಸೇರಿದಂತೆ ಕೊಬ್ಬು ಹೆಚ್ಚಾಗುವ ಆಹಾರ ನೀಡಬಾರದು. ತರಕಾರಿ, ಹಣ್ಣು, ಒಣ ಹಣ್ಣುಗಳು, ಹಾಲನ್ನು ಮಕ್ಕಳಿಗೆ ಸರಿಯಾದ ಪ್ರಮಾಣದಲ್ಲಿ ನೀಡಬೇಕು. 9 ವರ್ಷದ ಮಕ್ಕಳು ಏನು ತಿನ್ನುತ್ತಾರೆ ಎಂಬುದು ಬಹಳ ಮುಖ್ಯವಾಗುತ್ತದೆ.  

ಮಹಿಳೆ ದುಡಿದ್ರೆ ಸಾಕಾ, ಉಳಿಸೋದು ಬೇಡ್ವಾ?ಈ ಎಲ್ಲ ಕಾರಣಕ್ಕೆ ಆಕೆ ಫೈನಾನ್ಷಿಯಲ್ ಪ್ಲ್ಯಾನಿಂಗ್ ಮಾಡ್ಲೇಬೇಕು!

• ದೈಹಿಕ ವ್ಯಾಯಾಮ(Physical Exercise) : ಮಕ್ಕಳಿಗೆ ದೈಹಿಕ ವ್ಯಾಯಾಮ ಬಹಳ ಮುಖ್ಯವಾಗುತ್ತದೆ. ನಿಮ್ಮ ಮಕ್ಕಳನ್ನು ಸ್ಫೋರ್ಟ್ಸ್, ಡಾನ್ಸ್ ಗೆ ಕಳಿಸ್ಲೇಬೇಕು ಎಂದೇನಿಲ್ಲ. ಮನೆಯಲ್ಲಿಯೇ ಸಣ್ಣಪುಟ್ಟ ಕೆಲಸ ನೀಡುವ ಮೂಲಕ ನೀವು ಅವರಿಗೆ ದೈಹಿಕ ವ್ಯಾಯಾಮ ಮಾಡಿಸಬಹುದು. 

• ಈ ಬಗ್ಗೆ ಎಚ್ಚರಿಕೆಯಿರಲಿ : ನಿಮ್ಮ ಮಗಳು 8 ವರ್ಷದೊಳಗೇ ಮುಟ್ಟಾಗಿದ್ರೆ ಇದು ಆರೋಗ್ಯಕರ ಬೆಳವಣಿಗೆಯಲ್ಲ. ಇದು ಮಕ್ಕಳ ಮಾನಸಿಕ ಆರೋಗ್ಯ ಮಾತ್ರವಲ್ಲದೆ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ದೇಹದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಹಾಗಾಗಿ ತಕ್ಷಣ ವೈದ್ಯರ ಭೇಟಿಯಾಗುವುದು ಒಳ್ಳೆಯದು.

•  ಮಗಳಿಗೆ ಮುಟ್ಟು (Periods0 ಹತ್ತಿರ ಬರ್ತಿದೆ ಎಂಬುದನ್ನು ಹೀಗೆ ಪತ್ತೆ ಮಾಡಿ : ನಿಮ್ಮ ಮಗುವಿನ ಎತ್ತರ ಹೆಚ್ಚಾಗ್ತಿದ್ದು, ಬ್ರೆಸ್ಟ್ ನಲ್ಲಿ ಬೆಳವಣಿಕೆ ಕಾಣಿಸ್ತಿದ್ದು, ಖಾಸಗಿ ಅಂಗದಲ್ಲಿ ಹೇರ್ ಬರಲು ಶುರುವಾಗಿದ್ದರೆ ಕೆಲವೇ ದಿನಗಳಲ್ಲಿ ಮಗಳಿಗೆ ಪಪಿರಿಯಡ್ಸ್ ಆಗಲಿದೆ ಎಂಬ ಸಂಕೇತವಾಗಿದೆ. 

• ಮಕ್ಕಳ ಜೊತೆ ಮಾತನಾಡೋದು ಮುಖ್ಯ : ಬೇಗ ಮುಟ್ಟಾದ ಮಕ್ಕಳ ದೇಹದಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತದೆ. ಅವರಿಗೆ ಸೆಕ್ಸ್ ನಲ್ಲಿ ಆಸಕ್ತಿ, ಆಕರ್ಷಣೆಯಾಗ್ಬಹುದು. ಆದ್ರೆ ಮೈಂಡ್ ಪ್ರಬುದ್ಧವಾಗಿರುವುದಿಲ್ಲ. ಹಾಗಾಗಿ ನೀವು ಮಕ್ಕಳ ಜೊತೆ ಮಾತುಕತೆ ನಡೆಸಿ ಈ ಬಗ್ಗೆ ಅವರಿಗೆ ತಿಳಿಸಿ ಹೇಳುವ ಅಗತ್ಯವಿದೆ.   

•  ಯಾವಾಗ ವೈದ್ಯರನ್ನು ಭೇಟಿಯಾಗ್ಬೇಕು : ಹೆಣ್ಣು ಮಗಳು ಮುಟ್ಟಾಗ್ಲೇಬೇಕು. ಆಕೆ ವಯಸ್ಸು 14 ವರ್ಷ ಮೀರಿದ್ದು, ಆಕೆ ಎತ್ತರವಾಗಿದ್ದಾಳೆ, ಖಾಸಗಿ ಅಂಗದಲ್ಲಿ ಕೂದಲ ಬೆಳವಣಿಗೆಯಾಗ್ತಿದೆ, ಆಕೆ ಸ್ತನದಲ್ಲಿ ಬದಲಾಣೆಯಾಗಿದೆ ಆದ್ರೆ ಮುಟ್ಟಾಗ್ತಿಲ್ಲ ಎಂದಾಗ ವೈದ್ಯರನ್ನು ಭೇಟಿಯಾಗಿದೆ. ಮಗಳಿಗೆ 14 ವರ್ಷವಾದ್ರೂ ಇದ್ಯಾವ ಬೆಳವಣಿಗೆ ಕಾಣಿಸಿಕೊಂಡಿಲ್ಲ ಎಂದಾಗ್ಲೂ ನೀವು ವೈದ್ಯರನ್ನು ಭೇಟಿಯಾಗ್ಬೇಕು.  
 

Follow Us:
Download App:
  • android
  • ios