ಕಮಿಟ್‌ಮೆಂಟ್ ಇಲ್ಲವೆಂದರೆ ಸಂಬಂಧ ಹೀಗೆ ಹಾಳಾಗೋದು ಗ್ಯಾರಂಟಿ!

ಸಂಬಂಧವೆಂದರೆ, ಎರಡು ಹೃದಯಗಳ ಸಂಗಮ. ಸಂಬಂಧವನ್ನು ಮುಂದುವರಿಸಲು ಬದ್ಧತೆ ಅಗತ್ಯ. ಅಂತಹ ಬದ್ಧತೆಯೇ ಕೆಲವು ಸಂಗಾತಿಗಳಲ್ಲಿ ಕಂಡುಬರುವುದಿಲ್ಲ. ಇದಕ್ಕೆ ಅವರದ್ದೇ ಆದ ಹಲವಾರು ಕಾರಣಗಳಿರಬಹುದು. ಅಂತಹ ಸಮಯದಲ್ಲಿ ಅವರು ಕೆಲವು ಸ್ವಭಾವಗಳನ್ನು ತೋರ್ಪಡಿಸುತ್ತಾರೆ.
 

If your partner not have commitment in relation he shows some signs like this

ಒಬ್ಬೊಬ್ಬರ ಜೀವನದಲ್ಲಿ ಪ್ರೀತಿ-ಪ್ರೇಮಗಳು ಮುಂದುವರಿಯದೆ ಒಮ್ಮೊಮ್ಮೆ ಅಲ್ಲೇ ನಿಂತುಬಿಡುತ್ತವೆ! ಅಂದರೆ ಪ್ರೇಮಿಸಿದ ಹುಡುಗ ಅಥವಾ ಹುಡುಗಿಯನ್ನು ಬಾಳಸಂಗಾತಿಯನ್ನಾಗಿ ಮಾಡಿಕೊಳ್ಳುವ ಆಸೆ ಕೈಗೂಡುವುದಿಲ್ಲ. ಪ್ರೀತಿಸಿದ ಸಂಗಾತಿ ಮದುವೆಗೆ ಮನಸ್ಸು ಮಾಡದಿರಲು ಹಲವಾರು ಕಾರಣಗಳಿರಬಹುದು. ಸಂಬಂಧವೊಂದರ ಆರಂಭದಲ್ಲಿ ಎಲ್ಲರೂ ತಮ್ಮ ಸಾಂಗತ್ಯದ ಬಗ್ಗೆ ಅಪಾರ ನಂಬಿಕೆ, ವಿಶ್ವಾಸ ಹೊಂದಿರುತ್ತಾರೆ. ಎಲ್ಲವೂ ಚೆನ್ನಾಗಿ ನಡೆಯುತ್ತಿದೆ, ಇನ್ನೇನು ಬಾಳಸಂಗಾತಿಗಳಾಗಬೇಕು ಎನ್ನುವ ಸಮಯದಲ್ಲಿ ಹುಡುಗನೋ, ಹುಡುಗಿಯೋ ಯಾರಾದರೊಬ್ಬರು ಹಿಂದೇಟು ಹಾಕುವ ಮೂಲಕ ಅವರ ಸಂಬಂಧ ಅಲ್ಲಿಗೇ ಅಂತ್ಯವಾಗಬಹುದು. ಕೆಲವೊಮ್ಮೆ ನಿಮ್ಮ ಅನುಭವಕ್ಕೆ ಬಂದಿರಬಹುದು, ನೀವು ಪ್ರೀತಿಸಿದ ಸಂಗಾತಿ ನಿಮ್ಮೊಂದಿಗೆ ಮದುವೆ, ಮಕ್ಕಳು, ಭವಿಷ್ಯದ ಕುರಿತು ಏನೊಂದೂ ಮಾತನಾಡದೆ ಇರಬಹುದು. ಇದು ಆತ ಅಥವಾ ಆಕೆ ಸಂಬಂಧಕ್ಕೆ ಬದ್ಧತೆ ಹೊಂದಿಲ್ಲ ಎನ್ನುವುದನ್ನು ಸೂಚಿಸುವ ವರ್ತನೆ. ಇಂತಹ ವರ್ತನೆಗಳನ್ನು ಆರಂಭದಲ್ಲೇ ಗುರುತಿಸಬೇಕು. ಆ ಬಳಿಕ ದುಃಖಿಸುವುದರಲ್ಲಿ ಅರ್ಥವಿಲ್ಲ. ಅವರಲ್ಲಿ ಸಂಬಂಧ, ಉದ್ಯೋಗ, ಗುರಿ, ಪ್ರದೇಶಗಳ ಕುರಿತು ಸ್ಪಷ್ಟತೆ ಇಲ್ಲದಿರಬಹುದು. ಹೀಗಾಗಿ, ಸಂಬಂಧದಲ್ಲಿ ಬದ್ಧತೆ ತೋರಹು ಹಿಂದೇಟು ಹಾಕಬಹುದು. ಅಂಥವರು ಸಾಮಾನ್ಯವಾಗಿ ಕೆಲವು ಲಕ್ಷಣಗಳನ್ನು ತೋರ್ಪಡಿಸಿಕೊಳ್ಳುತ್ತಿರುತ್ತಾರೆ. ಅವುಗಳನ್ನು ತಿಳಿದುಕೊಳ್ಳಿ.

•    ಭವಿಷ್ಯದ (Future) ಬಗ್ಗೆ ಚರ್ಚಿಸುವುದನ್ನು ಇಷ್ಟಪಡೋಲ್ಲ
ಸಂಬಂಧಕ್ಕೆ ಬದ್ಧತೆ (Commitment) ಹೊಂದಲು ಭಯಪಡುವವರು ಸಾಮಾನ್ಯವಾಗಿ ತಮ್ಮ ಸಂಗಾತಿ (Partner) ಜತೆಗೆ ಭವಿಷ್ಯದ ಕುರಿತು ಮಾತನಾಡಲು, ಹೆಚ್ಚು ವಿಚಾರಗಳನ್ನು ಚರ್ಚಿಸಲು ಇಷ್ಟಪಡುವುದಿಲ್ಲ. ಮೊದಮೊದಲು ಮಾತನಾಡಿದರೂ ಸ್ವಲ್ಪ ಸಮಯ ಕಳೆದಂತೆ ಅವರು ಇಂತಹ ಮಾತುಕತೆಗಳನ್ನು ಬಂದ್ ಮಾಡುತ್ತಾರೆ. ಹಾಗೂ ಕೆಲವೊಮ್ಮೆ ಅವರ ಭವಿಷ್ಯದ ಯೋಜನೆಗಳು ನಿಮ್ಮನ್ನು ಒಳಗೊಳ್ಳದೆ ಇರುವುದನ್ನು ಗಮನಿಸಬಹುದು. ಉದ್ಯೋಗ (Job) ಬದಲಾವಣೆ, ಸ್ಥಳ ಬದಲಾವಣೆಗಳ ಕುರಿತೂ ಚರ್ಚಿಸದೇ ಇರಬಹುದು. ನಿಮಗೆ ನೋವಾದರೂ ಇವು ಗಮನಕ್ಕೆ ಬಂದ ತಕ್ಷಣ ಅವರೊಂದಿಗೆ ಚರ್ಚಿಸುವುದು ಉತ್ತಮ. 

ನಿಶ್ಚಿತಾರ್ಥ ಆಗಿದ್ಯಾ? ಮದ್ವೆಗೂ ಮುನ್ನ ಈ ತಪ್ಪನ್ನೆಲ್ಲ ಅಪ್ಪಿತಪ್ಪಿಯೂ ಮಾಡ್ಬೇಡಿ…

•    ನಿಮಗೆ ಹಾಗೂ ಸಂಬಂಧಕ್ಕೆ (Relationship) ಆದ್ಯತೆ ಇಲ್ಲ
ನಿಮ್ಮ ಸಂಗಾತಿ ನಿಮಗೆ ಹಾಗೂ ಸಂಬಂಧಕ್ಕೆ ಹೆಚ್ಚಿನ ಬೆಲೆ ನೀಡದೆ ಇರಬಹುದು, ಆದ್ಯತೆ ಕೊಡದಿರಬಹುದು. ಏನೋ, ಕೆಲಸದ ಒತ್ತಡದಲ್ಲಿ (Work Tension) ಹೀಗಾಗಿರಬಹುದು ಎಂದು ನೀವು ನಿರ್ಲಕ್ಷಿಸಬಹುದು. ಆದರೆ, ಪದೇ ಪದೆ ಹೀಗಾದರೆ ಎಚ್ಚೆತ್ತುಕೊಳ್ಳಬೇಕು. ಅವರು ನಿಮ್ಮನ್ನು ಅವರ ಸ್ನೇಹಿತರಿಗೆ, ಕುಟುಂಬಕ್ಕೆ ಪರಿಚಯಿಸದೆ ಇರಬಹುದು. 

•    ಅಟ್ಯಾಚ್ ಮೆಂಟ್ (Attachment) ಕುರಿತು ಆತಂಕವೂ (Anxiety) ಇರ್ಬೋದು
ಕೆಲವರು ಹಿಂದಿನ ಅನುಭವಗಳನ್ನು ಆಧರಿಸಿ ಇಂದಿನ ಸಂಬಂಧದಲ್ಲಿ ಬದ್ಧತೆ ಹೊಂದಲು ಹಿಂದೇಟು ಹಾಕುತ್ತಾರೆ. ಅವರು ಹಿಂದೆ ನೋವಿಗೆ ಒಳಗಾಗಿರಬಹುದು, ತಿರಸ್ಕಾರಕ್ಕೆ ಪಾತ್ರರಾಗಿರಬಹುದು ಹಾಗೂ ಮೋಸಕ್ಕೆ ತುತ್ತಾಗಿರಬಹುದು. ಇಂತಹ ಅನುಭವವಿದ್ದಾಗ ಅವರಲ್ಲಿ ಆತಂಕವಿರುತ್ತದೆ. ಹೀಗಾಗಿ, ಬದ್ಧತೆ ಹೊಂದಲು ಭಯ (Fear) ಪಡಬಹುದು. ಆಗ ಅವರು ಆತ್ಮೀಯವಾಗಲು ಅವಾಯ್ಡ್ (Avoid) ಮಾಡಬಹುದು, ನರ್ವಸ್ ಆಗಬಹುದು, ತಮ್ಮ ಸ್ವಾತಂತ್ರ್ಯ ಕಳೆದುಕೊಳ್ಳಲು ಇಷ್ಟಪಡದಿರಬಹುದು.

•    ನಿಮಗೆ ಬೆಂಬಲ (Support) ನೀಡೋಲ್ವಾ?
ನಿಮ್ಮ ಸಂಗಾತಿ ಕಷ್ಟಕರ ಸಮಯಗಳಲ್ಲಿ ನಿಮಗೆ ಬೆಂಬಲ ನೀಡದೆ ಇದ್ದರೆ, ನಿಮ್ಮ ಮೆಸೇಜ್, ಫೋನ್ ಕಾಲ್ ಗಳಿಗೆ ಉತ್ತರಿಸುವುದನ್ನು ಅವಾಯ್ಡ್ ಮಾಡುತ್ತಿದ್ದರೆ ಅವರೊಂದಿಗೆ ಮಾತನಾಡುವುದು ಬೆಟರ್. ಪದೇ ಪದೆ ಇಗ್ನೋರ್ (Ignore) ಮಾಡುವುದು ಸಂಬಂಧಕ್ಕೆ ಒಳ್ಳೆಯದಲ್ಲ.

ಗಂಡನಿಗಾಗಿ ನೀವು ಯಾವುದೇ ಕಾರಣಕ್ಕೂ ಈ ವಿಷ್ಯದಲ್ಲಿ ರಾಜಿಮಾಡಿಕೊಳ್ಳಬೇಡಿ !

•    ಸೂಕ್ತ ಸಂವಹನ (Communication) ಕಡಿಮೆ
ಭವಿಷ್ಯಕ್ಕೆ ಸನ್ನದ್ಧರಾಗಿರುವ ಸಂಗಾತಿಗಳು ಪರಸ್ಪರ ಎಲ್ಲ ವಿಚಾರಗಳನ್ನೂ ಹಂಚಿಕೊಳ್ಳುತ್ತಾರೆ. ಕೆಲವರು ಹೆಚ್ಚು ಮಾತನಾಡದೇ ಇರಬಹುದು. ಆದರೆ, ಅಗತ್ಯ ವಿಚಾರಗಳನ್ನೂ ಹಂಚಿಕೊಳ್ಳದಿದ್ದರೆ, ನಿಮ್ಮ ನಡುವೆ ಸೂಕ್ತ ಮಾತುಕತೆಗಳ ಕೊರತೆಯಿದ್ದರೆ, ಅವರ ಬಗ್ಗೆ ಏನೂ ಗೊತ್ತಿಲ್ಲದೆ ಇದ್ದರೆ, ಅವರ ವಿಚಾರಗಳನ್ನು ನೀವು ಬೇರೆಯವರಿಂದ ತಿಳಿದುಕೊಳ್ಳಬೇಕಾಗಿದ್ದರೆ, ಅವರ ಬಗ್ಗೆ ಗೊಂದಲ (Confusion) ಆರಂಭವಾಗಿದ್ದರೆ ಮುಂದುವರಿಯಬೇಡಿ. 
 

Latest Videos
Follow Us:
Download App:
  • android
  • ios