Asianet Suvarna News Asianet Suvarna News

Suhani Shah: ಜನರ ಮನಸ್ಸಲ್ಲೇನಿದೆ ಅಂತ ಥಟ್ ಅಂತ ಹೇಳುವ ಈಕೆ ಯಾರು ಗೊತ್ತಾ?

ನಮ್ಮ ಮನಸ್ಸಿನಲ್ಲಿ ಏನಿದೆ ಅನ್ನೋದನ್ನು ಯಾರಾದ್ರೂ ಹೇಳಿದ್ರೆ ಅಚ್ಚರಿಯಾಗೋದು ಸಹಜ. ಹಾಗೆಯೇ ಇದು ದೈವಿ ಕೃಪೆ ಅಂತಾ ಅನೇಕರು ಕೈ ಮುಗಿತಾರೆ. ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡು ಜನರನ್ನು ಮೂಡನಂಬಿಕೆಗೆ ನೂಕ್ತಾರೆ. ಆದ್ರೆ ಇರೋ ವಿಷ್ಯವನ್ನು ಒಪ್ಪಿಕೊಂಡು ಎಲ್ಲರ ಮೆಚ್ಚಿಗೆಗೆ ಪಾತ್ರಳಾದವಳು ಈ ಮಹಿಳೆ.
 

Who Is Suhani Shah Mind Reader
Author
First Published Jan 25, 2023, 1:21 PM IST

ಭಾರತದ ಮೊದಲ ಮಹಿಳಾ ಜಾದೂಗಾರ್ತಿ ಎಂಬ ದಾಖಲೆ ಬರೆದವರು ಸುಹಾನಿ ಶಾ.  ಇಂದು ಇಂಟರ್ನೆಟ್ ಜಗತ್ತಿನಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ.  ಸಂದೀಪ್ ಮಹೇಶ್ವರಿ ಅವರ ಶೋನಲ್ಲಿ ಕಾಣಿಸಿಕೊಂಡಾಗಿನಿಂದ ಸುಹಾನಿ ಶಾ ವೀಡಿಯೊಗಳು ಇಂಟರ್ನೆಟ್‌ನಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ಅವರು ಜನರ ಮನಸ್ಸನ್ನು ಹೇಗೆ ಓದುತ್ತಾರೆ ಎಂಬುದೇ ಒಂದು ದೊಡ್ಡ ಪ್ರಶ್ನೆಯಾಗಿದೆ. ಬಾಗೇಶ್ವರನಾಥ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ವಿಷ್ಯದಲ್ಲಿ ಈಗ ಸುಹಾನಿ ಮತ್ತಷ್ಟು ಸುದ್ದಿಗೆ ಬಂದಿದ್ದಾರೆ.

ಬಾಗೇಶ್ವರನಾಥ ಧಾಮ (Bageshwar Dham)ದ ಪೀಠಾಧಿಪತಿ ಧೀರೇಂದ್ರ ಕೃಷ್ಣ ಶಾಸ್ತ್ರಿ ಜನರ ಮನಸ್ಸಿನಲ್ಲಿ ಏನಾಗ್ತಿದೆ ಎಂಬುದನ್ನು ಸ್ಪಷ್ಟವಾಗಿ ಹೇಳ್ತಾರೆ. ಜನರ ಸಮಸ್ಯೆಗಳನ್ನು ಅರಿತು ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿಸುವ ಧೀರೇಂದ್ರ ಕೃಷ್ಣ ಶಾಸ್ತ್ರಿ ಇದು ದೇವರ ಕೃಪೆಯಿಂದ ಸಾಧ್ಯ ಎಂದಿದ್ದರು. ಇದನ್ನು ಅವರು ದೈವಿಕ ಪವಾಡ ಎಂದು ಕರೆದಿದ್ದಾರೆ. ಆದ್ರೆ ಸುಹಾನಿ ಶಾ (Suhani Shah) ದೇವರ ಕೃಪೆಯಲ್ಲ ಇದೊಂದು ಕಲೆ ಎನ್ನುವ ಮೂಲಕ ಮತ್ತೆ ಚರ್ಚೆಗೆ ಕಾರಣವಾಗಿದ್ದಾರೆ. ಸುಹಾನಿ ಶಾ ಕೂಡ ಜನರ ಮನಸ್ಸನ್ನು ಅರಿಯಬಲ್ಲವಳಾಗಿದ್ದಾಳೆ. ಇದನ್ನು ಆಕೆ ಮೈಂಡ್ ರೀಡಿಂಗ್ ಕಲೆ ಎನ್ನುತ್ತಾಳೆ. ನಾವಿಂದು ಸುಹಾನಿ ಶಾ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನಿಮಗೆ ನೀಡ್ತೆವೆ.

ಮೈಂಡ್ ರೀಡರ್ (Mind Reader) ಸುಹಾನಿ ಶಾ ಯಾರು ? : ಸುಹಾನಿ ಶಾ 29 ಜನವರಿ 1990 ರಂದು ಉದಯಪುರದಲ್ಲಿ ಜನಿಸಿದರು. ಸುಹಾನಿ ಶಾ ಹುಟ್ಟಿದ ಸ್ವಲ್ಪ ಸಮಯದ ನಂತರ, ಅವರ ಕುಟುಂಬ ಗುಜರಾತ್‌ಗೆ ಸ್ಥಳಾಂತರಗೊಂಡು ಅಲ್ಲಿ ವಾಸಿಸಲು ಪ್ರಾರಂಭಿಸಿತು. ಸುಹಾನಿ ಶಾ  ತಂದೆಯ ಹೆಸರು ಚಂದ್ರಕಾಂತ, ಅವರು ಫಿಟ್‌ನೆಸ್  ತರಬೇತುದಾರರಾಗಿದ್ದಾರೆ. ತಾಯಿ ಸ್ನೇಹಲತಾ ಶಾ ಗೃಹಿಣಿ. ಸುಹಾನಿ ಶಾ ಮದುವೆಯ ಬಗ್ಗೆ ಅಂತರ್ಜಾಲದಲ್ಲಿ ಯಾವುದೇ ಮಾಹಿತಿ ಲಭ್ಯವಿಲ್ಲ.  

ಗುಜರಾತಿನಲ್ಲಿ ಸುಹಾನಿ ಶಾ ತನ್ನ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸಿದರು. 5 ನೇ ವಯಸ್ಸಿನಲ್ಲಿ  ಸುಹಾನಿ ಶಾ ಮೊದಲ ಬಾರಿಗೆ ಮ್ಯಾಜಿಕ್ ಶೋ ನೋಡಿದ್ದರು. 7 ನೇ ವಯಸ್ಸಿನಲ್ಲಿ ಅವರು ಮ್ಯಾಜಿಕ್ ತೋರಿಸಲು ಶುರು ಮಾಡಿದ್ದರು. ಮ್ಯಾಜಿಕ್ ಕಲೆಯನ್ನು ಕಲಿತ ಕಾರಣ,  ವಿದ್ಯಾಭ್ಯಾಸ ಬಿಟ್ಟು ಸಂಪೂರ್ಣವಾಗಿ ಮ್ಯಾಜಿಕ್ ಕಲಿಯಲು ಪ್ರಾರಂಭಿಸಿದರು. ಮ್ಯಾಜಿಕ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಸುಹಾನಿ ಶಾ ಈ ಕಲೆ ಮೂಲಕವೇ ಜನರನ್ನು ಆಕರ್ಷಿಸುತ್ತಿದ್ದಾರೆ. 31ನೇ ವಯಸ್ಸಿನಲ್ಲಿ 500ಕ್ಕೂ ಹೆಚ್ಚು ಶೋಗಳನ್ನು ನೀಡಿದ ಸುಹಾನಿ, ಈಗ ಮೈಂಡ್ ರೀಡಿಂಗ್ ಮೂಲಕ ಲಕ್ಷಾಂತರ ಮಂದಿಯನ್ನು ಸೆಳೆದಿದ್ದಾರೆ.

ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಪಡೆದ ಮಹಿಳೆಯರಿಗೆ ಸರ್ಕಾರದಿಂದ ಸಿಗುತ್ತೆ ಭರ್ಜರಿ ಗಿಫ್ಟ್..!

ಮೈಂಡ್ ರೀಡಿಂಗ್ ಬಗ್ಗೆ ಮಾಹಿತಿ ನೀಡಿದ ಸುಹಾನಿ : ಸುಹಾನಿ ಈಗ ಎಲ್ಲ ಟಿವಿ ಚಾಲೆನ್ ಗಳಲ್ಲಿ ಕಾಣಿಸಿಕೊಳ್ತಿರುತ್ತಾರೆ. ಅವರು ಜನರನ್ನು ನೋಡಿದ ತಕ್ಷಣ ಅವರ ಹಿನ್ನಲೆ, ನೋವು, ಮನಸ್ಸಿನಲ್ಲಿ ಏನಿದೆ ಎಂಬುದನ್ನು ಥಟ್ ಅಂತ ಹೇಳ್ತಾರೆ. ಇದನ್ನು ಸುಹಾನಿ ದೇವರ ಕೃಪೆ ಎಂದು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಮೈಂಡ್ ರೀಡಿಂಗ್‌ಗೆ ವೈಜ್ಞಾನಿಕ ವಿಧಾನಗಳಿವೆ. ಅದನ್ನು ಬಳಸಿದ ನಂತರ ಪವಾಡ ನಡೆಯುತ್ತಿದೆ ಎಂದು ತೋರುತ್ತದೆ ಎಂದು ಸುಹಾನಿ ಶಾ ಹೇಳುತ್ತಾರೆ. 

ದಾಂಪತ್ಯದಲ್ಲಿ ಎಲ್ಲವೂ ಸರಿ ಇದೆ ಅಂದ್ರೆ ಹೀಗಿರುತ್ತೆ ಬದುಕು!

ಮನಸ್ಸಿನಲ್ಲಿ ಏನಿದೆ ಎಂಬುದನ್ನು ಅರಿಯಲು, ಮೊದಲು ವ್ಯಕ್ತಿಯು ಆ ಸಮಯದಲ್ಲಿ ಯಾವ ಪರಿಸ್ಥಿತಿಯಲ್ಲಿದ್ದಾನೆ ಮತ್ತು ಆ ಸಮಯದಲ್ಲಿ ಅವನು ಏನು ಯೋಚಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳುತ್ತಾರೆ. ವ್ಯಕ್ತಿಯ ಹಿನ್ನೆಲೆಯನ್ನು ನೋಡಿದರೂ ಬಹಳಷ್ಟು ಅರ್ಥವಾಗುತ್ತದೆ ಎನ್ನುತ್ತಾರೆ ಸುಹಾನಿ. ಸುಹಾನಿ ಕಾರ್ಪೊರೇಟ್ ಟ್ರೈನರ್, ಲೈಫ್ ಕೋಚ್, ಪ್ರೊಫೆಷನಲ್ ಹಿಪ್ನೋಥೆರಪಿಸ್ಟ್ ಮತ್ತು 5 ಪುಸ್ತಕ ಬರೆದ ಲೇಖಕಿಯೂ ಹೌದು. 

Follow Us:
Download App:
  • android
  • ios