ದಾಂಪತ್ಯದಲ್ಲಿ ಎಲ್ಲವೂ ಸರಿ ಇದೆ ಅಂದ್ರೆ ಹೀಗಿರುತ್ತೆ ಬದುಕು!
ಪ್ರೀತಿಯಲ್ಲಿ ಟಕ್ ಎಂದು ಬಿದ್ದು, ಬಳಿಕ ಪಶ್ಚಾತ್ತಾಪ ಪಡುವವರೇ ಇಂದು ಹೆಚ್ಚಿದ್ದಾರೆ. ಎಲ್ಲರಿಗೂ ತಮ್ಮ ಸೋಲ್ ಮೇಟ್ ಹುಡುಕುವ ಕಾತರ. ಆ ಸೋಲ್ ಮೇಟ್ ಅಥವಾ ಜೀವದ ಗೆಳೆಯ/ಗೆಳತಿಯನ್ನು ಪತ್ತೆ ಮಾಡುವುದು ಹೇಗೆ? ನಿಮ್ಮ ಹಾಗೂ ನಿಮ್ಮ ಪ್ರೀತಿಪಾತ್ರರಲ್ಲಿರುವ ಕೆಲವು ಸ್ವಭಾವ, ಗುಣಗಳ ಆಧಾರದ ಮೇಲೆ ನಿಮ್ಮ ಸಂಬಂಧ ಎಂದೆಂದಿಗೂ ಉಳಿಯುವಂಥದ್ದು ಎನ್ನಬಹುದು.

ಯಾರನ್ನೋ ಒಮ್ಮೆ ಕಂಡಾಕ್ಷಣ “ಇವರೇ ಜನುಮದ ಸಂಗಾತಿʼ ಎನಿಸಬಹುದು. ಆ ಭಾವನೆಯ ಹಿಂದೆ ಬಿದ್ದು ಅವರನ್ನು ಸಮೀಪಿಸಿದ ಕೆಲವೇ ಸಮಯದಲ್ಲಿ ಹಿಂದಿನ ಭಾವನೆಗಳು ಕಾಣೆಯಾಗಬಹುದು. ಸಂಬಂಧಗಳೇ ಹಾಗೆ. ಹತ್ತಿರ ಹೋದರೆ ದೂರ ಹೊರಟುಹೋಗುವ ಆಸೆಯಾಗುತ್ತದೆ, ದೂರವಿದ್ದರೆ ಹತ್ತಿರವಾಗುವ ಬಯಕೆ ಮೂಡುತ್ತದೆ. ಹಾಗಾದರೆ, ಈ ಸಂಬಂಧಗಳಿಗೆ ಬೆಲೆ ಇಲ್ಲವೇ? ಅವು ಶಾಶ್ವತವಲ್ಲವೇ? ಯಾರು ನಮ್ಮ ನಿಯರೆಸ್ಟ್, ಡಿಯರೆಸ್ಟ್ ಸಂಗಾತಿ ಎನ್ನುವ ಗೊಂದಲ ಕಾಡತೊಡಗುತ್ತದೆ. ಎಲ್ಲ ಸಂಬಂಧಗಳೂ ಹೀಗೆ “ಹಾಯ್, ಬಾಯ್ʼ ಎನ್ನುವಂತಾದರೆ ನಿಜವಾದ ಸಾಂಗತ್ಯವೆಲ್ಲಿ ಎನ್ನುವ ಪ್ರಶ್ನೆ ಮೂಡಬಹುದು. ಆದರೆ, ಅಷ್ಟೆಲ್ಲ ತಲೆಕೆಡಿಸಿಕೊಳ್ಳುವುದು ಬೇಕಾಗಿಲ್ಲ. ಸಂಗಾತಿಯಲ್ಲಿ ಕಂಡುಬರುವ ಕೆಲವು ಗುಣಗಳ ಮೂಲಕ ಅವರು ಎಂದೆಂದಿಗೂ ನಿಮ್ಮವರೇ ಎನ್ನುವುದನ್ನು ಗುರುತಿಸಿಕೊಳ್ಳಬಹುದು. ಹಲವಾರು ಗುಣಗಳನ್ನು ಇಲ್ಲಿ ಪರಿಗಣಿಸಬಹುದು. ಸಂಬಂಧದಲ್ಲಿ ಮೊದಲು ಇರಬೇಕಾದುದು ಪ್ರೀತಿ ಎನ್ನುವ ನಂಬಿಕೆ ಹಲವರಿಗೆ ಇರಬಹುದು. ಅದೂ ಹೌದು, ಆದರೆ, ಅದೊಂದೇ ಅಲ್ಲ! ಪ್ರೀತಿಗೆ ಸರಿಸಮನಾಗಿ ಪ್ರಾಮಾಣಿಕತೆ, ಬದ್ಧತೆ ಹಾಗೂ ಭಾವನಾತ್ಮಕ ಅನುಬಂಧಗಳೂ ಸಂಬಂಧದಲ್ಲಿ ಬೇಕಾಗುತ್ತದೆ. ಇಬ್ಬರಲ್ಲೂ ಒಂದೇ ಸಮಯದಲ್ಲಿ ಪ್ರೀತಿಯ ಭಾವನೆ ಮೂಡಿದರೆ ಅದು ಹೆಚ್ಚು ಅನುಕೂಲ ಎಂದೂ ಹೇಳಲಾಗುತ್ತದೆ.
• ಸ್ನೇಹಕ್ಕಿಂತ (Friendship) ಮಿಗಿಲಾದ ಬಂಧವುಂಟೇ?
ರೋಮ್ಯಾಂಟಿಕ್ ರಿಲೇಷನ್ ಶಿಪ್ (Romantic Relationship) ನಲ್ಲಿ ಫ್ರೆಂಡ್ ಎನ್ನುವ ಶಬ್ದ ಹಲವರಿಗೆ ಕೆಟ್ಟದಾಗಿ ಅನಿಸಬಹುದು. ಆದರೆ, ನೈಜವಾದ ಸಂಬಂಧದಲ್ಲಿ (Relation) ಅತ್ಯುತ್ತಮ ಸ್ನೇಹವಿರಲೇಬೇಕು. ನಿಮ್ಮ ಸಂಗಾತಿಯೇ (Partner) ನಿಮ್ಮ ಉತ್ತಮ ಸ್ನೇಹಿತ/ಸ್ನೇಹಿತೆಯಾದರೆ ಅದಕ್ಕಿಂತ ಅದೃಷ್ಟ ಬೇರೊಂದಿಲ್ಲ. ಹಾಗೂ ಈ ಸಂಬಂಧ ಶಾಶ್ವತವಾಗಿ (Ever) ಬಾಳುವ ಸಾಧ್ಯತೆ ಹೆಚ್ಚು.
ಸಂಬಂಧದಲ್ಲಿ ಸಂತೋಷವಿದೆ, ಥ್ರಿಲ್ಲವೆಂದು ದಾಂಪತ್ಯ ಮೋಸ ಮಾಡ್ತಾರಾ?
• ಶಬ್ದಗಳ (Words) ಹಂಗಿಲ್ಲದ ವಿನಿಮಯ
ನೀವು ಯಾರೊಂದಿಗಾದರೂ ಆಳವಾದ (Deep) ಬಂಧ ಹೊಂದಿದ್ದರೆ ಅವರ ಮನಸ್ಥಿತಿ ಚೆನ್ನಾಗಿ ಅರಿವಿಗೆ ಬಂದಿರುತ್ತದೆ. ಅವರಲ್ಲಾಗುವ ಭಾವನೆಗಳ (Feelings) ಏರಿಳಿತ, ಅವರ ಇಷ್ಟಾನಿಷ್ಟದ ಬಗ್ಗೆ ತಿಳಿದಿರುತ್ತದೆ. ಕೆಲವೊಮ್ಮೆ ಅವರ ಮುಖ, ಕಣ್ಣುಗಳನ್ನು (Eyes) ನೋಡಿ ಅವರಿಗೆ ಇಷ್ಟವಾಗದ ಸನ್ನಿವೇಶ, ಜನರನ್ನು ಪತ್ತೆ ಮಾಡಬಹುದು. ಮಾತಿನ (Language) ಹೊರತಾದ ಅರ್ಥೈಸುವಿಕೆ ನಿಮ್ಮ ನಡುವೆ ಇದ್ದಾಗ ಅವರು ನಿಮ್ಮ ಸೋಲ್ ಮೇಟ್ (Soul Mate) ಎನ್ನಬಹುದು.
• ವ್ಯಕ್ತಿತ್ವದಲ್ಲಿ ನೈಜತೆ (Genuine)
ನಿಮ್ಮ ಸೋಲ್ ಮೇಟ್ ಜತೆಗಿರುವಾಗ ನಿಮಗೆ ಭಾವನೆಗಳನ್ನು ಮರೆಮಾಚುವ, ಇಲ್ಲದ ಸೋಗು ಹಾಕುವ ಅಗತ್ಯವಿರುವುದಿಲ್ಲ. ನಿಮ್ಮ ನೈಜ ವ್ಯಕ್ತಿತ್ವ, ನೈಜ ಭಾವನೆಗಳನ್ನು ಅವರೊಂದಿಗೆ ಹಂಚಿಕೊಳ್ಳಲು ಸಾಧ್ಯವಾದರೆ ಅದು ಉತ್ತಮ ಸಂಬಂಧದ ಅಡಿಪಾಯ.
• ಆಕರ್ಷಣೆ (Attraction) ಮತ್ತು ಆಧ್ಯಾತ್ಮಿಕ (Spiritual) ಮಟ್ಟ!
ಸಂಬಂಧದಲ್ಲಿ ಆಕರ್ಷಣೆ ಇರಬೇಕಾದುದು ಅತಿ ಅಗತ್ಯ. ಅಂತಹ ಮುಗಿಯದ ಆಕರ್ಷಣೆ ಯಾರಲ್ಲಿ ನಿಮಗೆ ಕಂಡುಬರುತ್ತದೆಯೋ ಅವರು ನಿಮ್ಮೊಂದಿಗೆ ಎಂದೆಂದೂ ಇರಬಲ್ಲ ಸಂಗಾತಿಯಾಗಬಲ್ಲರು. ಹಾಗೂ ಉತ್ತಮ ಪ್ರೀತಿಯುಕ್ತ (Lovable) ಬಾಂಧವ್ಯದಲ್ಲಿರುವಾಗ ವ್ಯಕ್ತಿಯ ಆಧ್ಯಾತ್ಮಿಕ ಕಂಪನಗಳು ಉತ್ತಮ ಮಟ್ಟದಲ್ಲಿರುತ್ತವೆ. ನಕಾರಾತ್ಮಕ (Negative) ಚಿಂತನೆಗಳು ಹತ್ತಿರ ಸುಳಿಯುವುದಿಲ್ಲ. ಅಂತಹ ಸಂಬಂಧ ನಿಮ್ಮದಾಗಿದೆಯಾ ನೋಡಿಕೊಳ್ಳಿ.
• ಅವರ ದೌರ್ಬಲ್ಯ (Weakness) ನಿಮಗೆ ಅರ್ಥವಾಗಿ, ಒಪ್ಪಿಕೊಂಡಿರುವಿರಾ?
ಸಂಗಾತಿಯ ದೌರ್ಬಲ್ಯವನ್ನು ಅರಿತುಕೊಳ್ಳುವುದಷ್ಟೇ ಅಲ್ಲ, ಅದನ್ನು ಒಪ್ಪಿಕೊಳ್ಳುವುದು ಅತ್ಯಂತ ಮುಖ್ಯ. ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ (Perfect) ಎನ್ನುವ ಸತ್ಯವನ್ನು ಅರ್ಥೈಸಿಕೊಳ್ಳುವುದು ಮುಖ್ಯ. ಸಂಗಾತಿಯ ದೌರ್ಬಲ್ಯ ಅರಿತರೂ ಅವರ ಬಗ್ಗೆ ಪ್ರೀತಿ ಕುಂದದೆ ಇದ್ದರೆ, ದೌರ್ಬಲ್ಯದೊಂದಿಗೇ ಸಂಗಾತಿಯನ್ನು ಗೌರವಿಸುವ ಗುಣ ಇಬ್ಬರಲ್ಲೂ ಇದ್ದರೆ ನಿಮ್ಮದು ಖಂಡಿತವಾಗಿ ನೈಜವಾದ ಬಾಂಧವ್ಯ.
ಪತಿಯ ಬಲವಂತದ ಸೆಕ್ಸ್ ಗೆ ನೀವೂ ಕಾರಣವಿರ್ಬಹುದು..
• ನಿಮ್ಮನ್ನು ಕಂಡಂತೆಯೇ ಅವರನ್ನೂ ಕಾಣುತ್ತೀರಾ (Treat as Yourself)?
ಸಂಗಾತಿಯನ್ನು ನಿಮ್ಮಂತೆಯೇ ಪರಿಗಣಿಸುವ ಗುಣ ನಿಮ್ಮಲ್ಲಿದೆಯೇ? ಸರಿಯಾಗಿ ಪರಿಶೀಲನೆ ಮಾಡಿಕೊಂಡರೆ ಸತ್ಯ ಅರ್ಥವಾಗುತ್ತದೆ. ನಿಮ್ಮನ್ನು ಎಷ್ಟು ಪ್ರೀತಿಸಿಕೊಳ್ಳುತ್ತೀರೋ ಅಷ್ಟೇ ಪ್ರಮಾಣದಲ್ಲಿ ಸಂಗಾತಿಯನ್ನೂ ಪ್ರೀತಿಸುತ್ತೀರಿ, ಆದರದ (Respect) ಭಾವನೆ ಹೊಂದಿದ್ದೀರಿ ಎಂದಾರೆ ನೀವು ಎಂದೆಂದೂ ಜತೆಯಾಗಿರಬಲ್ಲಿರಿ.