ದ್ರೌಪದಿ ಮುರ್ಮು, ನಿರ್ಮಲಾ ಸೀತರಾಮನ್, ಕಿರಣ್....ಭಾರತೀಯ ಪ್ರಭಾವಿ ಮಹಿಳೆಯರಿವರು!
ಒಬ್ಬ ಮಹಿಳೆಯ ಸಾಧನೆ ಇನ್ನೊಬ್ಬ ಮಹಿಳೆಗೆ ಸ್ಫೂರ್ತಿ. ನಮ್ಮ ದೇಶದಲ್ಲಿ ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ಮೇಲುಗೈ ಸಾಧಿಸ್ತಿದ್ದಾರೆ. ಅವರ ಯಶಸ್ಸು ನಮ್ಮಿಂದ ಏನೂ ಸಾಧ್ಯವಿಲ್ಲ ಎನ್ನುವ ಅನೇಕ ಮಹಿಳೆಯರಿಗೆ ದಾರಿದೀಪವಾಗ್ತಿದೆ.
ಹಿಂದೆ ಮಹಿಳೆಯರಿಗೆ ಶಕ್ತಿ, ಸಾಮರ್ಥ್ಯ, ಬುದ್ಧಿವಂತಿಕೆ ಇದ್ರೂ ಅವಕಾಶವಿರಲಿಲ್ಲ. ಆದ್ರೆ ಈಗ ಹಾಗಲ್ಲ. ಮಹಿಳೆಗೆ ಎಲ್ಲ ಕ್ಷೇತ್ರದಲ್ಲೂ ಸ್ಥಾನ ಸಿಕ್ಕಿದೆ. ಅದನ್ನು ಮಹಿಳೆ ಸದುಪಯೋಗಪಡಿಸಿಕೊಳ್ತಿದ್ದಾಳೆ. ಕ್ರೀಡೆ, ವ್ಯವಹಾರ, ಕಲೆ, ರಾಜಕೀಯ, ವಿಜ್ಞಾನ, ತಂತ್ರಜ್ಞಾನ ಮುಂತಾದ ಅನೇಕ ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಿದ್ದಾಳೆ. 2023ರಲ್ಲೂ ಅನೇಕ ಮಹಿಳೆಯರು ವಿವಿಧ ರಂಗದಲ್ಲಿ ಸಫಲರಾಗಿದ್ದಾರೆ. ಅಂತಹ ಕೆಲವು ಸಾಧಕಿಯರ ಕುರಿತ ಮಾಹಿತಿ ಇಲ್ಲಿದೆ.
2023ರಲ್ಲಿ ಹೆಸರು ಮಾಡಿದ ಮಹಿಳೆ (women) ಯರು :
ದ್ರೌಪದಿ ಮುರ್ಮು (Draupadi Murmu) : ದ್ರೌಪದಿ ಮುರ್ಮು ಭಾರತದ 15ನೇ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಭಾರತೀಯ ಜನತಾ ಪಕ್ಷದ ಸದಸ್ಯೆಯಾದ ಇವರು ಬುಡಕಟ್ಟು ಸಮುದಾಯಕ್ಕೆ ಸೇರಿದ ಮೊದಲ ರಾಷ್ಟ್ರಪತಿ ಎಂಬ ಖ್ಯಾತಿಗೆ ಸೇರಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಒಪ್ಪಿಗೆ ನೀಡಿದ್ದಲ್ಲದೆ ಅದನ್ನು ಅಧಿಕೃತ ಸಂವಿಧಾನ ಕಾಯಿದೆಯಾಗಿ ಅಂಗೀಕರಿಸಿದ್ದಾರೆ.
ಸೆಲೆಬ್ರಿಟಿಗಳಿಗೆ ವೈಯಕ್ತಿಕ ಬದುಕೆನ್ನುವುದೇ ಸತ್ತು ಹೋಗಿರುತ್ತೆ: ಬೆಕಮ್ ಜೊತೆ ಸಾರಾ ಆಲಿ ಖಾನ್ ಮಾತುಕತೆ!
ನಿರ್ಮಲಾ ಸೀತಾರಾಮನ್ : ನಿರ್ಮಲಾ ಸೀತಾರಾಮನ್ ಅವರು ಪ್ರಸ್ತುತ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವೆಯಾಗಿದ್ದಾರೆ. ಅರ್ಥಶಾಸ್ತ್ರಜ್ಞೆಯಾಗಿರುವ ಸೀತಾರಾಮನ್ ಅವರನ್ನು 2019ರಲ್ಲಿ ಫೋರ್ಬ್ಸ್ ನಿಯತಕಾಲಿಕೆ 100 ಅತ್ಯಂತ ಶಕ್ತಿಶಾಲಿ ಮಹಿಳೆ ಎಂದು ಗೌರವಿಸಿತ್ತು. ಕೊರೊನಾ ಸಾಂಕ್ರಾಮಿಕ ಮತ್ತು ಜಾಗತಿಕ ಆರ್ಥಿಕ ಕುಸಿತದ ಮಧ್ಯೆಯೂ ಭಾರತೀಯ ಆರ್ಥಿಕತೆ 2023 ರಲ್ಲಿ ಶೇಕಡಾ 7.5 ರಷ್ಟು ಬೆಳೆಯುವ ನಿರೀಕ್ಷೆಯಿದ್ದು, ಇದರಲ್ಲಿ ನಿರ್ಮಲಾ ಸೀತಾರಾಮನ್ ಪಾತ್ರ ಬಹಳಷ್ಟಿದೆ.
ಇಶಿತಾ ಕಿಶೋರ್ : 2022 ನೇ ಸಾಲಿನ ಯುಪಿಎಸ್ಇ ಪರೀಕ್ಷೆಯಲ್ಲಿ ಇಶಿತಾ ಕಿಶೋರ್ ಸಾಧನೆ ದೊಡ್ಡದು. ಅವರು ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ. . 613 ಪುರುಷರು ಮತ್ತು 320 ಮಹಿಳೆಯರನ್ನು ಒಳಗೊಂಡಿರುವ 2022 ರ ನಾಗರಿಕ ಸೇವೆಗಳ ಪರೀಕ್ಷೆಗೆ ದೇಶಾದ್ಯಂತ 933 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದರು. ಇಶಿಯಾ, ದೆಹಲಿ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪದವೀಧರೆಯಾಗಿದ್ದಾರೆ.
ಡಾ. ರೀತು ಕರಿಧಾಳ್ ಶ್ರೀವಾಸ್ತವ್ : ಡಾ. ರೀತು ಕರಿದಾಳ್ ಭಾರತೀಯ ಬಾಹ್ಯಾಕಾಶ ವಿಜ್ಞಾನಿಯಾಗಿದ್ದಾರೆ. ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಹಿರಿಯ ವಿಜ್ಞಾನಿ ಮತ್ತು ಚಂದ್ರಯಾನ-3 ರ ಮುಖ್ಯಸ್ಥರಾಗಿದ್ದರು. ಇಸ್ರೋಗೆ ಸೇರುವ ಮುನ್ನ ರಿತು ಕರಿಧಾಲ್ ಕೆಲವು ವರ್ಷಗಳ ಕಾಲ ಅಮೆರಿಕದಲ್ಲಿ ಕೆಲಸ ಮಾಡಿದ್ದರು. ಅವರು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿ ಸಂಶೋಧಕರಾಗಿ ಕೆಲಸ ಮಾಡಿದ್ದರು.
ಅಲಿಯಾ ಭಟ್ : ಬಾಲಿವುಡ್ ನ ಅತ್ಯಂತ ಪ್ರಸಿದ್ಧ ನಟಿ ಆಲಿಯಾ ಭಟ್ ಈ ವರ್ಷ ಸಾಕಷ್ಟು ಸಾಧನೆ ಮಾಡಿದ್ದಾರೆ. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾದ ಆಲಿಯಾ, ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಗಂಗೂಬಾಯಿ ಕಾಠಿಯಾವಾಡಿ ಚಿತ್ರದ ನಟನೆ ಅಲಿಯಾ ಭಟ್ ಗೆ ಇನ್ನೊಂದು ಪ್ರಶಸ್ತಿ ತಂದುಕೊಟ್ಟಿದೆ. 68ನೇ ಫಿಲ್ಮಫೇರ್ ನಲ್ಲಿ ಈ ವರ್ಷ ಆಲಿಯಾ, ಅತ್ಯುತ್ತಮ ನಟಿ ಎಂಬ ಕೀರ್ತಿ ಪಡೆದಿದ್ದಾರೆ.
ಪಲ್ಗುಣಿ ನಾಯರ್ : ಪಲ್ಗುಣಿ ನಾಯರ್ ಒಬ್ಬ ಭಾರತೀಯ ಬಿಲಿಯನೇರ್ ಉದ್ಯಮಿಯಾಗಿದ್ದಾರೆ. ಇವರು ಸೌಂದರ್ಯ ಪ್ರಸಾಧನಗಳ ಕಂಪನಿ ನೈಕಾದ ಸ್ಥಾಪಕಿಯಾಗಿದ್ದಾರೆ. 2021ರಲ್ಲಿ ಟೈಮ್ಸ್ ನಿಯತಕಾಲಿಕೆ ಪಲ್ಗುಣಿ ಅವರನ್ನು ವಿಶ್ವದ 100 ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಗೆ ಸೇರಿಸಿತ್ತು. 2022 ರಲ್ಲಿ ಭಾರತದ ನಾಲ್ಕನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವೇಗಿಯ ಬದುಕಿಗೆ ಮುಳ್ಳಾಯ್ತು ರೂಪದರ್ಶಿಯ ಪ್ರೀತಿ, ಪತ್ನಿ ಆರೋಪಕ್ಕೆ ದೇಶಕ್ಕಾಗಿ ಪ್ರಾಣ ಬಿಡುವೆ ಎಂದಿದ್ದ ಶಮಿ!
ನೀತಾ ಅಂಬಾನಿ : ನೀತಾ ಅಂಬಾನಿಯವರು ಮಹಿಳಾ ಉದ್ಯಮಿ. ಇವರು ಧೀರೂಭಾಯಿ ಅಂಬಾನಿ ಇಂಟರ್ ನ್ಯಾಶನಲ್ ಸ್ಕೂಲ್ ನ ಸಂಸ್ಥಾಪಕರು ಹಾಗೂ ಅಧ್ಯಕ್ಷರಾಗಿದ್ದಾರೆ. ಲೋಕೋಪಕಾರ ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಗಾಗಿ, 2023 ರ ಜಾಗತಿಕ ನಾಯಕತ್ವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2008ರಲ್ಲಿ ಇವರಿಗೆ ಪದ್ಮಶ್ರೀ ಪುರಸ್ಕಾರ ಹಾಗೂ 2016ರಲ್ಲಿ ಫಿಕ್ಕಿ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ದೊರಕಿದೆ.
ನಂದಿನಿ ದಾಸ್ : ಭಾರತದ ಲೇಖಕಿಯಾಗಿರುವ ನಂದಿನಿ ದಾಸ್ ಕೋರ್ಟಿಂಗ್ ಇಂಡಿಯಾ: ಇಂಗ್ಲೆಂಡ್, ಮೊಘಲ್ ಇಂಡಿಯಾ ಅಂಡ್ ದಿ ಒರಿಜಿನ್ಸ್ ಆಫ್ ಎಂಪೈರ್' ಮತ್ತು ಜಾಗತಿಕ ಸಾಂಸ್ಕೃತಿಕಕ್ಕಾಗಿ 2023 ರ ಬ್ರಿಟಿಷ್ ಅಕಾಡೆಮಿ ಪ್ರಶಸ್ತಿಗಾಗಿ 25,000 ಗ್ರೇಟ್ ಬ್ರಿಟಿಷ್ ಪೌಂಡ್ (GBP) ಮೌಲ್ಯದ ಅಂತರರಾಷ್ಟ್ರೀಯ ಕಾಲ್ಪನಿಕವಲ್ಲದ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದು ಮಹತ್ವದ ಸಾಧನೆಯಾಗಿದ್ದು, ಭಾರತೀಯ ಬರಹಗಾರರು ಅಂತರಾಷ್ಟ್ರೀಯ ಮನ್ನಣೆಯನ್ನು ಪಡೆಯುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ.
ಶ್ರದ್ಧಾ ಶರ್ಮಾ : ಶ್ರದ್ಧಾ ಶರ್ಮಾ ಭಾರತೀಯ ಪತ್ರಕರ್ತೆ ಮತ್ತು ಉದ್ಯಮಿಯಾಗಿದ್ದಾರೆ. ಇವರು ಭಾರತದ ಅತಿದೊಡ್ಡ ಮಲ್ಟಿಮೀಡಿಯಾ ವೇದಿಕೆಯಾದ ಯುವರ್ ಸ್ಟೋರಿ ಸಂಸ್ಥಾಪಕರು ಹಾಗೂ ಟೆಡೆಕ್ಸ್ ಸ್ಪೀಕರ್ ಮತ್ತು ಫೋರ್ಬ್ಸ್ 30 ಅಂಡರ್ 30 ಏಷ್ಯಾದ ಮಾಜಿ ಸದಸ್ಯರಾಗಿದ್ದಾರೆ.
ಕಿರಣ್ ಮಜೂಂದಾರ್ : ಕಿರಣ್ ಮಜುಂದರ್ ಅವರು ಬಯೋಕಾನ್ ಲಿಮಿಟೆಡ್, ಸಿಂಗೀನ್ ಇಂಟರ್ನ್ಯಾಷನಲ್ ಲಿಮಿಟೆಡ್ ಮತ್ತು ಕ್ಲಿಂಗೀನ್ ಇಂಟರ್ನ್ಯಾಷನಲ್ ಲಿಮಿಟೆಡ್ ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಇವರಿಗೆ ಪದ್ಮಶ್ರೀ, ಪದ್ಮಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗಳು ಸಂದಿವೆ. ಫೋರ್ಬ್ಸ್ ಏಷ್ಯಾದ ಅತ್ಯಂತ ಶಕ್ತಿಶಾಲಿ ಮಹಿಳೆ ಎಂದು ಗುರುತಿಸಿದೆ.
ಹರ್ಮನ್ ಪ್ರೀತ್ ಕೌರ್ : ಹರ್ಮನ್ ಪ್ರೀತ್ ಅವರು ಪ್ರಸಿದ್ಧ ಭಾರತೀಯ ಕ್ರಿಕೆಟ್ ಆಟಗಾರ್ತಿಯಾಗಿದ್ದಾರೆ. ಆಲ್ ರೌಂಡರ್ ಆಗಿರುವ ಇವರು 2017ರಲ್ಲಿ ಐಸಿಸಿ ವಿಶ್ವಕಪ್ ಗೆದ್ದ ಮಹಿಳಾ ಕ್ರಿಕೆಟ್ ತಂಡದ ನಾಯಕತ್ವ ವಹಿಸಿದ್ದರು. ಟಿ20 ವಿಶ್ವಕಪ್ ಫೈನಲ್‌ನಲ್ಲಿ ಶತಕ ಸಿಡಿಸಿದ ಏಕೈಕ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.