ಸೆಲೆಬ್ರಿಟಿಗಳಿಗೆ ವೈಯಕ್ತಿಕ ಬದುಕೆನ್ನುವುದೇ ಸತ್ತು ಹೋಗಿರುತ್ತೆ: ಬೆಕಮ್ ಜೊತೆ ಸಾರಾ ಆಲಿ ಖಾನ್ ಮಾತುಕತೆ!
ವೃತ್ತಿ ಬದುಕು ಮತ್ತು ಖಾಸಗಿ ಜೀವನದ ನಡುವೆ ಸಮತೋಲನ ಕಾಪಾಡಿಕೊಳ್ಳುವುದು ಅತಿ ಅಗತ್ಯ. ಸೆಲೆಬ್ರಿಟಿಗಳಿಗಂತೂ ಇದು ಇನ್ನಷ್ಟು ಅಗತ್ಯ ಹಾಗೂ ಅಷ್ಟೇ ಕಷ್ಟಕರ. ಖಾಸಗಿ ಜೀವನದ ಶಾಂತಿಯನ್ನು ಉಳಿಸಿಕೊಳ್ಳಬೇಕಾದರೆ ಕೆಲ ಅಂತರ ಇಟ್ಟುಕೊಳ್ಳಬೇಕಾಗುತ್ತದೆ ಎನ್ನುವವರಿದ್ದಾರೆ. ಇದರ ಬಗ್ಗೆ ನಟಿ ಸಾರಾ ಅಲಿ ಖಾನ್ ಅವರು ಡೇವಿಡ್ ಬೆಕ್ಹಮ್ ಜತೆ ನಡೆಸಿರುವ ಮಾತುಕತೆ ಇದೀಗ ವೈರಲ್ ಆಗಿದೆ.
ವೃತ್ತಿ ಮತ್ತು ಖಾಸಗಿ ಜೀವನದ ನಡುವೆ ಯಾವುದನ್ನೋ ಒಂದನ್ನು ಆಯ್ಕೆ ಮಾಡಿಕೊಳ್ಳಲು ಖಂಡಿತ ಸಾಧ್ಯವಿಲ್ಲ. ಜೀವನಕ್ಕೆ ಉದ್ಯೋಗವೂ ಅಗತ್ಯವಾಗಿರುವುದನ್ನು ಎರಡನ್ನೂ ಬ್ಯಾಲೆನ್ಸ್ ಮಾಡುವುದೊಂದೇ ಪರಿಹಾರ. ಇದಕ್ಕಾಗಿ ಎಲ್ಲರೂ ಸಾಕಷ್ಟು ಹೆಣಗಾಡುತ್ತಾರೆ. ನಿಯಮಿತ ಸಮಯ ಮಿತಿ ಹೊಂದಿರುವ ಕಚೇರಿ ಕೆಲಸವನ್ನೂ ಖಾಸಗಿ ಬದುಕಿನ ಜೊತೆ ಹೊಂದಾಣಿಕೆ ಮಾಡಲಾಗದೇ ಒದ್ದಾಡುವ ಜನರಿದ್ದಾರೆ. ಹಾಗೆಯೇ, ವೃತ್ತಿ ಮತ್ತು ಜೀವನವನ್ನು ಅತ್ಯುತ್ತಮವಾಗಿ ಹೊಂದಾಣಿಕೆ ಮಾಡಿಕೊಂಡು ಮಾದರಿಯಾಗುವವರೂ ಇದ್ದಾರೆ. ಇದು ಸಾಮಾನ್ಯರ ಮಾತಾಯಿತು. ಸೆಲೆಬ್ರಿಟಿಗಳು ಹೇಗಿರಬಹುದು? ಹೋದಲ್ಲಿ ಬಂದಲ್ಲಿ ಅವರ ಹಿಂದೆ ಬೀಳುವ ಅಭಿಮಾನಿಗಳಿಂದಾಗಿ ಅವರ ಸಾರ್ವಜನಿಕ ಜೀವನ ನಮ್ಮನಿಮ್ಮಂತೆ ಸಾಮಾನ್ಯವಾಗಿರುವುದಿಲ್ಲ. ಈ ಕುರಿತು ಇತ್ತೀಚೆಗೆ ನಟಿ ಸಾರಾ ಅಲಿ ಖಾನ್ ಮಾತನಾಡಿದ್ದಾರೆ. ಅವರು ಮಾತನಾಡಿರುವುದು ಅಂತಿಂಥವರ ಜತೆಗಲ್ಲ, ಫುಟ್ ಬಾಲ್ ಐಕಾನ್ ಡೇವಿಡ್ ಬೆಕ್ಹಮ್ ಅವರೊಂದಿಗೆ ಮಾತನಾಡಿದ್ದಾರೆ. ಸಾರಾ, ಇತ್ತೀಚೆಗೆ ಮುಂಬೈನ ಮೆಟಾ ಕಚೇರಿಯಲ್ಲಿ ಡೇವಿಡ್ ಬೆಕ್ಹಮ್ ಅವರೊಂದಿಗೆ ಚಾಟ್ ಮಾಡಿದ್ದಾರೆ. ಅದರ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಚರ್ಚೆಯಾಗುತ್ತಿದೆ.
ಗ್ಲಾಮರ್ (Glamour) ಜತೆ ವೈಯಕ್ತಿಕ ಜೀವನ
ಸಾರಾ ಅಲಿ ಖಾನ್ (Sara Ali Khan) ಮತ್ತು ಡೇವಿಡ್ ಬೆಕ್ಹಮ್ ಅವರು ಸೆಲೆಬ್ರಿಟಿ ಕಲ್ಚರ್ ನಲ್ಲಿರುವ ಗ್ಲಾಮರ್ ಹಾಗೂ ಖಾಸಗಿತನವನ್ನು (Personal Space) ರಕ್ಷಿಸಿಕೊಳ್ಳುವುದು ಎಷ್ಟು ಅಗತ್ಯ ಎನ್ನುವ ಕುರಿತು ಮಾತುಕತೆ (Dialogue) ನಡೆಸಿದ್ದಾರೆ. ಅಷ್ಟೇ ಅಲ್ಲ, ಸಾರಾ ಅಲಿ ಖಾನ್ ಅವರು ಡೇವಿಡ್ ಬೆಕ್ಹಮ್ ಹೇಗೆ ವೃತ್ತಿ (Profession) ಮತ್ತು ಖಾಸಗಿ ಬದುಕನ್ನು ಸಮತೋಲನದಿಂದ ಕಾಪಾಡಿಕೊಂಡಿದ್ದಾರೆ ಎಂದು ಬಹಳ ಸುಂದರವಾಗಿ ಹೇಳಿದರೆ, ಅದಕ್ಕೆ ಡೇವಿಡ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವಿಡಿಯೋವೀಗ ವೈರಲ್ (Viral) ಆಗಿದೆ.
ಭಾರತದ ಬಿಲಿಯನೇರ್ ಪುತ್ರಿ ಈಗ 18,032 ಕೋಟಿ ಬೆಲೆಬಾಳೋ ಕಂಪನಿ ಸಿಇಒ,ಈಕೆ ಸಂಪತ್ತು ಎಷ್ಟು ಕೋಟಿ ಗೊತ್ತಾ?
ನೀವ್ಯಾರು ಎನ್ನುವುದೇ ಮರೆಯಬಹುದು!
“ನಿಮ್ಮಂತೆ ಅತಿ ದೊಡ್ಡ ಸೆಲೆಬ್ರಿಟಿಯಾಗಿದ್ದರೆ (Celebrity) ಮಾನವರಂತೆ ಕಾಣಿಸಿಕೊಳ್ಳಲು ಕಷ್ಟವಾಗಬಹುದು. ಈ ಜೀವನದಲ್ಲಿ ಎಷ್ಟೊಂದು ಗ್ಲಾಮರ್ ಇದೆ, ಹಾಗೆಯೇ ಒತ್ತಡವೂ ಇದೆ. ಅದರಿಂದಾಗಿ ಕೆಲವೊಮ್ಮೆ, ನೀವು ಯಾರು ಎನ್ನುವುದನ್ನೇ ಗುರುತಿಸಿಕೊಳ್ಳಲು ಕಷ್ಟವಾಗಬಹುದು. ಆದರೆ, ನಿಮ್ಮ ಕುಟುಂಬ (Family) ಮತ್ತು ಮಕ್ಕಳು (Children) ಸುಂದರವಾದ ಖಾಸಗಿತನದ ಶಾಂತಿಯನ್ನು (Peace) ಉಳಿಸಿಕೊಂಡಿದ್ದೀರಿ ಎನ್ನುವುದು ನನ್ನ ಭಾವನೆ’ ಎಂದು ಸಾರಾ ಅಲಿ ಖಾನ್ ಅತ್ಯಂತ ಸ್ಪಷ್ಟವಾಗಿ ಹೇಳಿರುವುದು ಇದೀಗ ಎಲ್ಲರ ಮೆಚ್ಚುಗೆ ಗಳಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಡೇವಿಡ್ ಬೆಕ್ಹಮ್, “ಧನ್ಯವಾದಗಳು, ಈ ವಿಚಾರದ ಬಗ್ಗೆ ಇಷ್ಟು ಚೆನ್ನಾಗಿ ವಿವರಣೆ ನೀಡಲು ಸಾಧ್ಯವಿಲ್ಲ. ಇದು ಪರಿಪೂರ್ಣ ವಿವರಣೆ’ ಎಂದು ಮೆಚ್ಚುಗೆ ಸೂಸಿದ್ದಾರೆ.
5 ಕೋಟಿ ಬೆಲೆ ಬಾಳೋ ಇಂಥ ಹಾಸಿಗೆ ಮೇಲೆಯೇ ಸೆಲೆಬ್ರಿಟಿಗಳು ಮಲಗೋದು!
ಸೆಲೆಬ್ರಿಟಿಗಳ ಜೀವನ ಕಷ್ಟಕಷ್ಟ
ಸೆಲೆಬ್ರಿಟಿಗಳಿಗೆ ಸಾಮಾನ್ಯರಂತೆ ಬದುಕಲು ಸಾಧ್ಯವೇ ಆಗುವುದಿಲ್ಲ. ಹೋದಲ್ಲಿ ಬಂದಲ್ಲಿ ಅವರನ್ನು ಗಮನಿಸುವ ಜನರಿರುತ್ತಾರೆ. ಯಾವುದೇ ಡ್ರೆಸ್ ಹಾಕಿದರೂ ಕಮೆಂಟ್ (Comment) ಮಾಡುತ್ತಾರೆ, ಫೋಟೊ ತೆಗೆಯುತ್ತಾರೆ. ಸೆಲ್ಫಿ ಕೇಳುತ್ತಾರೆ. ಹೀಗಾಗಿ, ನಮ್ಮ ದೇಶದ ಸೆಲೆಬ್ರಿಟಿಗಳು ವಿದೇಶಗಳಲ್ಲಿ ರಜಾ ಎಂಜಾಯ್ ಮಾಡುವುದು ಹೆಚ್ಚು. ಹೀಗಿದ್ದರೂ ಅವರು ಫೋಟೊಗಳು ವೈರಲ್ ಆಗುತ್ತವೆ. ಕೆಲ ದಿನಗಳ ಹಿಂದೆ ನಟಿ ಆಲಿಯಾ ಭಟ್ ಮನೆಯ ಒಳಗಿರುವ ಫೋಟೊಗಳು ಸಹ ಲೀಕ್ (Leak) ಆಗಿದ್ದವು. ಆಕೆ ಮನೆಯ ಬಾಲ್ಕನಿಯಲ್ಲಿರುವಾಗ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿತ್ತು. ಇದಕ್ಕೆ ಅವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು. “ನನ್ನದೇ ಮನೆಯ ಲಿವಿಂಗ್ ಏರಿಯಾದಲ್ಲಿದ್ದರೂ ಪಕ್ಕದ ಕಟ್ಟಡದ ಮೇಲೆ ಕ್ಯಾಮರಾ ಹಿಡಿದು ನಿಂತಿದ್ದುದು ಖಾಸಗಿತನದ ಉಲ್ಲಂಘನೆ. ಹೀಗೆ ಮಾಡುವುದು ಸರಿಯಾ? ನನ್ನ ನಿಮ್ಮ ನಡುವೆ ಒಂದು ಗೆರೆ ಇತ್ತು, ಆ ಗೆರೆಯನ್ನು ನೀವು ದಾಟಿದ್ದೀರಿ’ ಎಂದು ಹೇಳಿದ್ದರು.