MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ವೇಗಿಯ ಬದುಕಿಗೆ ಮುಳ್ಳಾಯ್ತು ರೂಪದರ್ಶಿಯ ಪ್ರೀತಿ, ಪತ್ನಿ ಆರೋಪಕ್ಕೆ ದೇಶಕ್ಕಾಗಿ ಪ್ರಾಣ ಬಿಡುವೆ ಎಂದಿದ್ದ ಶಮಿ!

ವೇಗಿಯ ಬದುಕಿಗೆ ಮುಳ್ಳಾಯ್ತು ರೂಪದರ್ಶಿಯ ಪ್ರೀತಿ, ಪತ್ನಿ ಆರೋಪಕ್ಕೆ ದೇಶಕ್ಕಾಗಿ ಪ್ರಾಣ ಬಿಡುವೆ ಎಂದಿದ್ದ ಶಮಿ!

ಮೊಹಮ್ಮದ್ ಶಮಿ (Mohammed Shami) ಅವರನ್ನು ವಿಶ್ವಕಪ್ 2023 ರ ಅತ್ಯಂತ ಯಶಸ್ವಿ ಬೌಲರ್.  2023 ರ ವಿಶ್ವಕಪ್‌ನಲ್ಲಿ ಈಗಾಗಲೇ 6 ಪಂದ್ಯಗಳಲ್ಲಿ 23 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ ಶಮಿ ಬದುಕಿನ ಪಂದ್ಯದಲ್ಲಿ ಬಿರುಗಾಳಿ ಎಬ್ಬಿಸಿದ ಆ ರೂಪದರ್ಶಿ ಯಾರು? ಇಲ್ಲಿದೆ ಮಾಹಿತಿ.

2 Min read
Author : Gowthami K
| Updated : Nov 18 2023, 12:54 PM IST
Share this Photo Gallery
  • FB
  • TW
  • Linkdin
  • Whatsapp
110

ನ್ಯೂಜಿಲೆಂಡ್‌ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ 7 ವಿಕೆಟ್‌ ಕಬಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟ ವೇಗಿ ಮೊಹಮದ್‌ ಶಮಿಗೆ 33 ವರ್ಷ.  ಭಾರತದ ಪ್ರಮುಖ ವೇಗದ ಬೌಲರ್ ಆಗಿ ಶಮಿ ಪ್ರಮುಖ ಪಾತ್ರವನ್ನು ಹೊಂದಿದ್ದಾರೆ. ಭಾರತದ ಪರ ವಿವಿಧ 177 ಪಂದ್ಯಗಳಲ್ಲಿ 415 ವಿಕೆಟ್‌ಗಳನ್ನು ಕಬಳಿಸುವ ಮೂಲಕ ನಿರ್ಣಾಯಕ ಆಸ್ತಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210

ಗಮನಾರ್ಹವಾಗಿ ಅವರು ವೇಗವಾಗಿ 100 ವಿಕೆಟ್‌ ಕಬಳಿಸಿದ ಭಾರತೀಯ ಎಂಬ ದಾಖಲೆಯನ್ನು ಹೊಂದಿದ್ದಾರೆ ಮತ್ತು ODI ವಿಶ್ವಕಪ್ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧಿಸಿದ ಎರಡನೇ ಭಾರತೀಯ ಕ್ರಿಕೆಟಿಗರಾಗಿದ್ದಾರೆ. ಒಂದೇ ಪಂದ್ಯದಲ್ಲಿ 7 ವಿಕೆಟ್‌ ಕಿತ್ತು ಹೀರೋ ಆಗಿದ್ದಾರೆ.

310

ಇಂತಹ ಶಮಿ ಬದುಕು ವೈಯಕ್ತಿಕವಾಗಿ ಹಾಯಿ ತಪ್ಪಿದ ದೋಣಿಯಾಗಿದೆ. ತನಗಿಂತ 10 ವರ್ಷಕ್ಕೆ ದೊಡ್ಡವಳಾದ ಪ್ರಸಿದ್ಧ ಮಾಡೆಲ್‌, ಚಿಯರ್‌ ಗರ್ಲ್ ಹಸೀನಾ ಜಾನ್‌ ಳೊಂದಿಗಿನ ಪ್ರೀತಿಯಲ್ಲಿ ಬಿದ್ದು, ಮದುವೆಯಾಗಿ ಈಗ ವಿಚ್ಚೇಧನದವರೆಗೆ ಬಂದು ನಿಂತಿದೆ. ಆಕೆಗಿದು ಮೊದಲ ಮದುವೆಯಲ್ಲ. 2002ರಲ್ಲಿ ಶೇಖ್ ಸೈಫುದ್ದೀನ್ ಎಂಬಾತನೊಂದಿಗೆ ಮದುವೆಯಾಗಿ 2010ರಲ್ಲಿ ವಿಚ್ಚೇಧನ ಪಡೆದಿದ್ದಳು.

410

ಮಾಡೆಲ್ ಹಸಿನ್ ಜಹಾನ್ ತನ್ನ ಪತಿ ಕ್ರಿಕೆಟಿಗ ಶಮಿ ವಿರುದ್ಧ ವ್ಯಭಿಚಾರ, ಮ್ಯಾಚ್ ಫಿಕ್ಸಿಂಗ್ ಮತ್ತು ಕೌಟುಂಬಿಕ ದೌರ್ಜನ್ಯದ ಆರೋಪಗಳನ್ನು ಒಳಗೊಂಡಂತೆ ಸರಣಿ ಆರೋಪಗಳನ್ನು ಮಾಡಿದ್ದಳು. ಈ ಆರೋಪದ ಹಿನ್ನೆಲೆಯಲ್ಲಿ ಬಿಸಿಸಿಐ ಶಮಿ ಒಪ್ಪಂದವನ್ನು ತಡೆಹಿಡಿದಿತ್ತು. 

510

ಶಮಿ ವಿರುದ್ಧ ಹಸಿನ್ ಜಾದವ್‌ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ, ವಿವಿಧ ಮಹಿಳೆಯರೊಂದಿಗೆ ಸಂಭಾಷಣೆಗಳನ್ನು ಉಲ್ಲೇಖಿಸಿ ಮತ್ತು ಟೆಲಿಫೋನ್ ರೆಕಾರ್ಡಿಂಗ್‌ಗಳನ್ನು ಸಾಕ್ಷಿಯಾಗಿ ಒದಗಿಸಿದ್ದು, ಇದ್ಯಾವುದು ಈವರೆಗೆ ಸಾಬೀತಾಗಿಲ್ಲ.

610

ಶಮಿ ಈ ಎಲ್ಲಾ ಆರೋಪಗಳನ್ನು ದೃಢವಾಗಿ ತಳ್ಳಿಹಾಕಿದರು,  ಮ್ಯಾಚ್ ಫಿಕ್ಸಿಂಗ್ ಆರೋಪಗಳಿಗೆ ಸಂಬಂಧಿಸಿದಂತೆ, "ನಾನು ನನ್ನ ದೇಶಕ್ಕಾಗಿ ಸಾಯುತ್ತೇನೆ ಹೊರತು  ಎಂದಿಗೂ ದ್ರೋಹ ಮಾಡುವುದಿಲ್ಲ" ಎಂದು ದೃಢವಾಗಿ ಹೇಳಿದ್ದರು.

710

ಕಳೆದ ಜುಲೈನಲ್ಲಿ ಹಸಿನ್ ಜಹಾನ್  ಮತ್ತು ಮೊಹಮ್ಮದ್ ಶಮಿ  ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ಒಂದು ತಿಂಗಳೊಳಗೆ ಪರಿಹರಿಸುವಂತೆ ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳದ ಸೆಷನ್ಸ್ ನ್ಯಾಯಾಲಯಕ್ಕೆ ಸೂಚನೆ ನೀಡಿತ್ತು. 

810

ಮೊಹಮ್ಮದ್ ಶಮಿ 2012 ರಲ್ಲಿ ಐಪಿಎಲ್ ಸಮಯದಲ್ಲಿ ಮೊದಲ ಬಾರಿಗೆ ಹಸಿನ್ ಜಹಾನ್ ಅವರನ್ನು ಭೇಟಿಯಾದರು. ಶಮಿ  ಕೋಲ್ಕತ್ತಾ ನೈಟ್ ರೈಡರ್ಸ್‌  ತಂಡಕ್ಕಾಗಿ ಆಡುತ್ತಿದ್ದಾಗ ಅದೇ ತಂಡದಲ್ಲಿ ಹಸಿನ್ ಜಹಾನ್  ಚಿಯರ್‌ಲೀಡರ್ ಆಗಿ ಕೆಲಸ ಮಾಡುತ್ತಿದ್ದರು. ಆಗ ಶಮಿಗೆ ತನಗಿಂತ 10 ವರ್ಷ ದೊಡ್ಡವಳಾಗಿರುವ ಹಸಿನ್ ನಡುವೆ ಪ್ರೇಮಾಂಕುರವಾಗಿತ್ತು.

910

 ಶಮಿ ಮತ್ತು ಹಸಿನ್ ಜೂನ್ 6, 2014 ರಂದು ವಿವಾಹವಾದರು ಮತ್ತು ಮದುವೆಯ ನಂತರ ಹಸಿನ್ ಜಹಾನ್ ಚಿಯರ್ ಲೀಡರ್ ಕೆಲಸವನ್ನು ತೊರೆದರು. ಮಾತ್ರವಲ್ಲ ಮಾಡೆಲಿಂಗ್ ಕ್ಷೇತ್ರ ಸಹ ತೊರೆದಳು. ದಂಪತಿಗಳು 2015 ರಲ್ಲಿ ಆಯಿರಾ ಶಮಿ ಎಂಬ ಹೆಣ್ಣು ಮಗುವನ್ನು ಸ್ವಾಗತಿಸಿದರು.  

 

1010

ಪತ್ನಿ  ಹಸಿನ್ ಮಾಡಿದ ತನ್ನ ಮೇಲಿನ ಆರೋಪಕ್ಕೆ ಬೇಸತ್ತು ಹೋಗಿದ್ದ  ಶಮಿ, ಮೂರು ಬಾರಿ ಆತ್ಮಹತ್ಯೆಗೂ ಪ್ರಯತ್ನ ಪಟ್ಟಿದ್ದರು. ಫಿಟ್‌ನೆಸ್‌ ಕಳೆದುಕೊಂಡು ತಂಡದಲ್ಲಿ ಆಡುವ ಅವಕಾಶ ಕೂಡ ಕಳೆದುಕೊಂಡಿದ್ದರು. ಇದೆಲ್ಲದರ ನಂತರ ಘಟನೆಯಿಂದ ಹೊರಬಂದು, ಮಾನಸಿಕವಾಗಿ ಸದೃಢವಾಗಿ ಮತ್ತೆ ದೇಶಕ್ಕಾಗಿ ಆಡುತ್ತಿದ್ದಾರೆ. ಜೊತೆಗೆ ಪತ್ನಿ ವಿರುದ್ಧ ಕಠಿಣ ಕಾನೂನು ಹೋರಾಟದಲ್ಲಿ ತೊಡಗಿದ್ದಾರೆ.

 

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಮೊಹಮ್ಮದ್ ಶಮಿ
ಕ್ರಿಕೆಟ್
 
5th T20 • NZ vs IND 2026
NZNZ
Sun, 1 Nov, 2026
INDIND
12:30 pm
Match yet to begin.
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd TEST • SA vs AUS
Result
SASA
329 & 387
AUSAUS
429 & 111
SA won by 176 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
1st T20 • NZ vs IND 2026
Result
NZNZ
225/4
INDIND
230/6
IND beat NZ by 4 wickets
Schedule ›
Latest Videos
Recommended Stories
Recommended image1
21 ವರ್ಷಗಳಿಂದ ಧೋನಿ ದಾಖಲೆ ಹಾಗೆಯೇ ಇದೆ, ಯಾವ ಕ್ರಿಕೆಟ್ ದೈತ್ಯರಿಂದಲೂ ಬ್ರೇಕ್ ಮಾಡಲು ಆಗಿಲ್ಲ
Recommended image2
ಸೂರ್ಯಗೆ ಆದ ಅನುಭವ ಅಯ್ಯರ್‍‌ಗೆ ಪಾಠ ಆಗಬೇಕು, ತಿದ್ದಿಕೊಳ್ಳದಿದ್ದರೆ ಶ್ರೇಯಸ್‌ಗೂ ಅದೇ ಗತಿ
Recommended image3
IPL 2027: ಪಂಜಾಬ್ ಕಿಂಗ್ಸ್ ತಂಡದಲ್ಲಿ ಮೇಜರ್ ಸರ್ಜರಿ, ಮಿನಿ ಹರಾಜಿಗೂ ಮುನ್ನ ಈ ಐವರಿಗೆ ಗೇಟ್‌ಪಾಸ್..! ಲಿಸ್ಟ್‌ನಲ್ಲಿ ಅಚ್ಚರಿ ಹೆಸರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved