Health Tips: ಮಹಿಳೆಯರಿಗೂ ಇರುತ್ತಾ ವಯಾಗ್ರಾ? ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು?

ವಯಾಗ್ರ, ಲೈಂಗಿಕ ಜೀವನದ ಸುಖ ಹೆಚ್ಚಿಸುತ್ತದೆ. ಜನರು ಈ ವಯಾಗ್ರದ ಬಗ್ಗೆ ಸಾರ್ವಜನಿಕವಾಗಿ ಮಾತನಾಡೋದಿಲ್ಲ. ಇದು ಮುಜುಗರದ ವಿಷ್ಯವೆಂದು ಭಾವಿಸ್ತಾರೆ. ಆದ್ರೆ ಇದ್ರ ಬಗ್ಗೆ ಸರಿಯಾಗಿ ತಿಳಿಯದೆ ಹೋದ್ರೆ ಸಮಸ್ಯೆ ಕಾಡುವುದು ತಪ್ಪೋಲ್ಲ.
 

What Is Viagra And How It Is Consumed

ವಯಾಗ್ರ ಎಂಬುದನ್ನು ಕೇವಲ ಪುರುಷರಿಗೆ ನಾವು ಮೀಸಲಿಟ್ಟಿದ್ದೇವೆ. ವಯಾಗ್ರದ ಸುದ್ದಿ ಬಂದಾಗ ಪುರುಷರನ್ನು ಗಮನದಲ್ಲಿಟ್ಟುಕೊಂಡೇ ಮಾತನಾಡ್ತೇವೆ. ಆದ್ರೆ ವಯಾಗ್ರ ಕೇವಲ ಪುರುಷರಿಗೆ ಮಾತ್ರ ಲಭ್ಯವಿಲ್ಲ. ಮಹಿಳೆಯರಿಗೂ ವಯಾಗ್ರವಿದೆ. ಆದ್ರೆ ಅದನ್ನು ತೆಗೆದುಕೊಳ್ಳುವ ವಿಧಾನ ಭಿನ್ನವಾಗಿದೆ. ನಾವಿಂದು ವಯಾಗ್ರಕ್ಕೆ ಸಂಬಂಧಿಸಿದ ಕೆಲ ವಿಷ್ಯಗಳನ್ನು ಹೇಳ್ತೇವೆ.  

ಮೊದಲನೇಯದಾಗಿ ವಯಾಗ್ರ (Viagra) ಎಂದರೇನು ಗೊತ್ತಾ?:  ವಯಾಗ್ರ ಎನ್ನುವುದು ಒಂದು ಔಷಧ (Medicine). ವೈದ್ಯಕೀಯ ವಿಜ್ಞಾನದ ಭಾಷೆಯಲ್ಲಿ ವಯಾಗ್ರ ಬಗ್ಗೆ ಹೇಳೋದಾದ್ರೆ, ದೇಹದ ಯಾವುದೇ ಭಾಗದಲ್ಲಿ ರಕ್ತ (Blood ) ಪರಿಚಲನೆಯನ್ನು ವೇಗಗೊಳಿಸಲು ಕೆಲಸವನ್ನು ವಯಾಗ್ರ ಮಾಡುತ್ತದೆ. ವಯಾಗ್ರವನ್ನು ಸಾಮಾನ್ಯವಾಗಿ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯಲ್ಲಿ ಬಳಸಲಾಗುತ್ತದೆ. ಇದು ಶಿಶ್ನ ಸ್ನಾಯುಗಳಿಗೆ ರಕ್ತ ಪೂರೈಕೆಯನ್ನು ಹೆಚ್ಚಿಸುತ್ತದೆ. ಸಂಭೋಗದ ಸುಖವನ್ನು ಹೆಚ್ಚಿಸಲು ನೆರವಾಗುತ್ತದೆ. 

ಗರ್ಭಧಾರಣೆಯ ಮೊದಲ ತಿಂಗಳಲ್ಲಿ ಇವುಗಳಿಂದ ದೂರ ಇದ್ರೆ ಮಗು ಆರೋಗ್ಯವಾಗಿರುತ್ತೆ!

ವಯಾಗ್ರ ತೆಗೆದುಕೊಳ್ಳುವ ಮುನ್ನ : ವಯಾಗ್ರವನ್ನು ಸುರಕ್ಷಿತ ಔಷಧವೆಂದು ಪರಿಗಣಿಸಲಾಗಿದೆ. ಇದನ್ನು ಮಹಿಳೆಯರು ಕೂಡ ತೆಗೆದುಕೊಳ್ಳಬಹುದು. ಎಲ್ಲ ಔಷಧಿಯಂತೆ ಇದಕ್ಕೂ ಮಿತಿಯಿದೆ. ಅದನ್ನು ಮಿತಿಮೀರಿ ಸೇವನೆ ಮಾಡಿದ್ರೆ ಅಪಾಯ ನಿಶ್ಚಿತ. ವಯಾಗ್ರದ ಡೋಸೇಜ್ (Dosage) 25 ಎಂಜಿಯಿಂದ 100 ಎಂಜಿ ನಡುವೆ ಇರಬೇಕು. ನೀವು ಈ ಮಿತಿಗಿಂತ ಹೆಚ್ಚು ವಯಾಗ್ರವನ್ನು ಸೇವನೆ ಮಾಡಿದ್ರೆ ಅಪಾಯವನ್ನು ಎದುರಿಸಬೇಕಾಗುತ್ತದೆ.  

ವಯಾಗ್ರ ಸೇವನೆಯಿಂದ ಕಾಡುವ ಸಮಸ್ಯೆಯೇನು? : ವಯಾಗ್ರ ಸೇವನೆ ಮಾಡೋದ್ರಿಂದ ನಿಮ್ಮ ಲೈಂಗಿಕ ಜೀವನದ ಆನಂದವನ್ನು ಹೆಚ್ಚಿಸಬಹುದು ನಿಜ. ಆದ್ರೆ ವಯಾಗ್ರ ತೆಗೆದುಕೊಳ್ಳುವ ಮುನ್ನ ವೈದ್ಯರನ್ನು ಭೇಟಿಯಾಗುವುದು ಬಹಳ ಒಳ್ಳೆಯದು. ಯಾಕೆಂದ್ರೆ ಕೆಲ ರೋಗಿಗಳಿಗೆ ವಯಾಗ್ರ ಸೇವನೆಯಿಂದ ರೋಗದ ಲಕ್ಷಣ ಹೆಚ್ಚಾಗಬಹುದು. ಹೃದ್ರೋಗಿಗಳು,  ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಅಥವಾ ಯಾವುದೇ ರೀತಿಯ ಕಾರ್ಡಿಯೋ ನಾಳೀಯ ಅಸ್ವಸ್ಥತೆಯನ್ನು ಹೊಂದಿರುವವರು ವಯಾಗ್ರ ತೆಗೆದುಕೊಂಡರೆ ಅಪಾಯ ಎದುರಿಸಬೇಕಾಗುತ್ತದೆ.  ಹಾಗೆಯೇ ಯಾವುದೇ ಕಾರಣಕ್ಕೂ ವಯಾಗ್ರವನ್ನು ಆಲ್ಕೋಹಾಲ್ ಜೊತೆ ಸೇವಿಸಬಾರದು. ಸ್ವಲ್ಪ ಪ್ರಮಾಣದಲ್ಲಿ ಆಲ್ಕೋಹಾಲ್ ಇದ್ದಲ್ಲಿ ಹೆಚ್ಚು ಹಾನಿಯಾಗುವುದಿಲ್ಲ. ಒಂದಕ್ಕಿಂತ ಹೆಚ್ಚು ಪೆಗ್ ಸೇವನೆ ಮಾಡಿದಾಗ ಇದು ಸಮಸ್ಯೆಗೆ ಕಾರಣವಾಗುತ್ತದೆ. ಇದು ಕೆಲವು ರೋಗಿಗಳಲ್ಲಿ ಹೈಪೊಟೆನ್ಷನ್‌ಗೆ ಕಾರಣವಾಗಬಹುದು. ಹೀಗೆ ವಯಾಗ್ರ ಸೇವನೆ ಮಾಡಿದ್ರೆ ನಿಮ್ಮ ರಕ್ತದೊತ್ತಡ ಹಠಾತ್ ಕುಸಿಯಬಹುದು. ಕೆಲವರಲ್ಲಿ ಇದು ಅಧಿಕ ರಕ್ತದೊತ್ತಡ ಸಮಸ್ಯೆಗೆ ಕಾರಣವಾಗಬಹುದು. ನಿಮಗೆ ಹೃದಯ ಸಮಸ್ಯೆಯಿದ್ದು, ವಯಾಗ್ರ ಸೇವನೆ ಮಾಡಿದ್ರೆ ರಕ್ತ ಪೂರೈಕೆಯ ಮೇಲೂ ಪರಿಣಾಮ ಉಂಟಾಗಿ, ಹಠಾತ್ ಹೃದಯಾಘಾತ ಅಥವಾ ಮೆದುಳು ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು.   

Heart Attack in Women: ಹೃದಯಾಘಾತಕ್ಕಿಂತ ಮೊದಲು ಮಹಿಳೆಯರಲ್ಲಿ ಕಾಣಿಸುತ್ತೆ ಈ ಲಕ್ಷಣ

ಮಹಿಳೆಯರು ವಯಾಗ್ರಾ ಬಳಸಬಹುದೆ? :  ವಯಾಗ್ರವನ್ನು ಕಾಮಾಸಕ್ತಿ ಹೆಚ್ಚಿಸಲು ಬಳಸಲಾಗುತ್ತದೆ. ಇದನ್ನು ಪುರುಷರು ಮತ್ತು ಮಹಿಳೆಯರು ಇಬ್ಬರೂ ಬಳಸಬಹುದು. ಕೆಲವೊಮ್ಮೆ ವೈದ್ಯರೇ ವಯಾಗ್ರ ಸೇವನೆ ಮಾಡುವಂತೆ ಮಹಿಳೆಯರಿಗೆ ಸಲಹೆ ನೀಡ್ತಾರೆ. ಗರ್ಭಾಶಯಕ್ಕೆ ರಕ್ತ ಪೂರೈಕೆಯನ್ನು ತಲುಪಿಸಲು ವಯಾಗ್ರವನ್ನು ಬಳಸುವಂತೆ ಮಹಿಳೆಯರಿಗೆ ಹೇಳಲಾಗುತ್ತದೆ. ಆದ್ರೆ ವಯಾಗ್ರ ಬಳಕೆ ಮೊದಲು ಅದ್ರ ಡೋಸೇಜ್ ತಿಳಿದಿರಬೇಕಾಗುತ್ತದೆ.  

ಪ್ರಿಸ್ಕ್ರಿಪ್ಷನ್ ಇಲ್ಲದೆ ಸಿಗುತ್ತೆ ವಯಾಗ್ರ : ವಯಾಗ್ರ ಕೂಡ ಪ್ರಿಸ್ಕ್ರಿಪ್ಷನ್ ಇಲ್ಲದೆ ಸುಲಭವಾಗಿ ಲಭ್ಯವಿದೆ. ಹಾಗಾಗಿ ಜನರು ಅದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ವಯಾಗ್ರ ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ವಯಾಗ್ರವನ್ನು ನೀವು ಎಂದಿಗೂ ಕೇವಲ ಸಂತೋಷಕ್ಕಾಗಿ ಬಳಕೆ ಮಾಡಬೇಡಿ. ಅದನ್ನು ಎಲ್ಲ ಔಷಧಿಯಂತೆ ಪರಿಗಣಿಸುವುದು ಬಹಳ ಮುಖ್ಯ. ವಯಾಗ್ರವನ್ನು ಸೇವನೆ ಮಾಡುವ ಮೊದಲು ಅದು ನಿಮ್ಮ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ನೀವು ಅರ್ಧ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ.   

Latest Videos
Follow Us:
Download App:
  • android
  • ios