ಸುಂದರ ಕೂದಲು ನಿಮ್ಮದಾಗಬೇಕೆ ? ರಿವರ್ಸ್ ಶಾಂಪೂ ವಿಧಾನ ಟ್ರೈ ಮಾಡಿ

ಹಿಂದಿನ ಕಾಲದಲ್ಲೆಲ್ಲಾ ಕೂದಲ ಆರೈಕೆಗೆ (Hair care) ದಾಸವಾಳ, ಸೀಗೇಕಾಯಿ, ಕಡಲೇಹಿಟ್ಟು ಮೊದಲಾದವುಗಳನ್ನು ಬಳಸುತ್ತಿದ್ದರು. ಆದರೆ ಇವತ್ತಿನ ದಿನಗಳಲ್ಲಿ ಎಲ್ಲರೂ  ಶಾಂಪೂ (Shampoo), ಕಂಡೀಶನರ್ ಬಳಸುತ್ತಾರೆ. ಆದರೆ, ಅದರಲ್ಲೂ ರಿವರ್ಸ್ ಶಾಂಪೂ (Reverse shampoo) ವಿಧಾನ ತಲೆಕೂದಲಿನ ಬಗ್ಗೆ ಕಾಳಜಿ ವಹಿಸುವವರಿಗೆ ಅತ್ಯುತ್ತಮ ಅನ್ನೋದು ನಿಮಗೆ ಗೊತ್ತಿದೆಯಾ ?

What Is Reverse Shampoo Method, All You Need To Know About This Haircare Trend Vin

ಚಂದದ ಕೂದಲಿನ (Hair) ನಾರಿ ಎಲ್ಲರನ್ನೂ ಆಕರ್ಷಿಸುತ್ತಾಳೆ. ಇದರಲ್ಲಿ ಎರಡು ಮಾತಿಲ್ಲ. ಇತ್ತೀಚಿನ ದಿನಗಳಲ್ಲಿ ಮಹಿಳೆಯರ (Women) ಕೂದಲು ಚಿಕ್ಕದಾಗುತ್ತಿದೆ. ಫ್ಯಾಷನ್ ಹೆಸರಿನಲ್ಲಿ ಕೆಲ ಮಹಿಳೆಯರು ಕೂದಲಿಗೆ ಕತ್ತರಿ ಹಾಕಿದರೆ, ಮತ್ತೆ ಕೆಲ ಮಹಿಳೆಯರು ಕೂದಲು ಉದುರುತ್ತಿದೆ ಎಂಬ ಕಾರಣ ಹೇಳಿ ಹೇರ್ ಕಟ್ ಮಾಡಿಸಿಕೊಳ್ತಾರೆ. ಕೂದಲ ಸೌಂದರ್ಯಕ್ಕೆ ಪದೇ ಪದೇ ಪಾರ್ಲರ್ ಮೆಟ್ಟಿಲೇರಿ,ದುಡ್ಡು ಸುರಿಯುವವರೂ ಸಾಕಷ್ಟು ಮಂದಿ. ಈಗಿನ ಒತ್ತಡ ಜೀವನದಲ್ಲಿ ಕೂದಲು ಉದುರುವುದು,ಕವಲೊಡೆಯುವುದು,ಬಣ್ಣ ಮಾಸುವುದು,ಶುಷ್ಕವಾಗುವುದು ಸಾಮಾನ್ಯ ಸಂಗತಿಯಾಗಿದೆ. ಅನೇಕ ಕಾರಣಕ್ಕೆ ಕೂದಲು ಉದುರುತ್ತದೆ. 

ಕೂದಲಿನ ಸೌಂದರ್ಯ (Beauty)ವರ್ಧಕವಾಗಿ ಮಾರುಕಟ್ಟೆಗೆ ಅನೇಕ ಉತ್ಪನ್ನಗಳು ಲಗ್ಗೆಯಿಟ್ಟಿವೆ. ಅನೇಕ ಬಗೆಯ ಶಾಂಪೂಗಳು, ಹೇರ್ ಕಂಡೀಷನರ್‌ಗಳು ಜಾಹೀರಾತುಗಳನ್ನು ಜನರನ್ನು ಸೆಳೆಯುತ್ತವೆ. ಅದರಲ್ಲೂ ಕೆಲವರು ರಾಸಾಯನಿಕಯುಕ್ತ ಶಾಂಪೂ (Shampoo)ಗಳಿಂದ ತೊಂದರೆಯೇ ಬೇಡವೆಂದು ಆರ್ಯುವೇದಿಕ್ ಶಾಂಪೂಗಳ ಮೊರೆ ಹೋಗುತ್ತಾರೆ. ಆದರೆ ಶಾಂಪೂ ಹಚ್ಚಿ ತಲೆ ಸ್ನಾನ ಮಾಡುವಾಗಲೂ ಹಲವಾರು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಅದರಲ್ಲೂ ರಿವರ್ಸ್ ಶಾಂಪೂ (Reverse shampoo) ವಿಧಾನ ತಲೆಕೂದಲಿನ ಬಗ್ಗೆ ಕಾಳಜಿ ವಹಿಸುವವರಿಗೆ ಅತ್ಯುತ್ತಮ ಅನ್ನೋದು ನಿಮಗೆ ಗೊತ್ತಿದೆಯಾ ?

Hair Care Tips: ಉದ್ದದ ಕೂದಲಿಗೆ ಪೇರಲೆ ಎಲೆ ರಾಮಬಾಣ, ಬಳಸೋದು ಹೇಗೆ?

ರಿವರ್ಸ್ ಶಾಂಪೂ ವಿಧಾನ ಎಂದರೇನು ? 
ರಿವರ್ಸ್ ಶಾಂಪೂ ಎಂಬುದು ಇತ್ತೀಚಿಗೆ ಬಳಕೆಯಲ್ಲಿರುವ ಹೇರ್‌ಕೇರ್ ಟ್ರೆಂಡ್. ಇತ್ತೀಚೆಗೆ ಜನಪ್ರಿಯತೆಯನ್ನು ಗಳಿಸುತ್ತಿರುವ ವಿವಿಧ ಕೂದಲಿನ ಆರೈಕೆ ಪ್ರವೃತ್ತಿಗಳಲ್ಲಿ, ರಿವರ್ಸ್ ಶಾಂಪೂ ವಿಧಾನವು ಹೆಚ್ಚು ಜನಪ್ರಿಯವಾಗಿದೆ. ಈ ಕೂದಲಿನ ಆರೈಕೆ ವಿಧಾನದ ಬಗ್ಗೆ ನೀವು ಕೇಳಿಲ್ಲದಿದ್ದರೆ, ಕಾರ್ಯವಿಧಾನ, ಅದರ ಪ್ರಯೋಜನಗಳು ಮತ್ತು ಮಿತಿಗಳ ಬಗ್ಗೆ ತಿಳಿಯಲು ಮುಂದೆ ಓದಿ.

ರಿವರ್ಸ್ ಶಾಂಪೂ ವಿಧಾನದಲ್ಲಿ ಮೊದಲ ಹಂತವಾಗಿ ಕೂದಲಿಗೆ ಕಂಡೀಷನರ್ ಅನ್ನು ಅಪ್ಲೈ ಮಾಡಬೇಕು. ಕನಿಷ್ಠ 10 ನಿಮಿಷಗಳ ಕಾಲ ಕಂಡೀಷನರ್ ಕೂದಲಲ್ಲಿ ಹಾಗೆಯೇ ಬಿಟ್ಟು, ನಂತರ ನೀರಲ್ಲಿ ತೊಳೆದುಕೊಳ್ಳಬೇಕು. ಎರಡನೇ ಹಂತದಲ್ಲಿ ಸಾಮಾನ್ಯ ಶಾಂಪೂ ಹಚ್ಚಿ ಕೂದಲು ತೊಳೆಯಬೇಕು.

ರಿವರ್ಸ್ ಶಾಂಪೂ ವಿಧಾನದ ಪ್ರಯೋಜನಗಳು
ರಿವರ್ಸ್ ಶಾಂಪೂ ವಿಧಾನವು ಕೂದಲಿಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬ ಕುರಿತಾದ ಮಾಹಿತಿ ಇಲ್ಲಿದೆ.

ರಿವರ್ಸ್ ಶಾಂಪೂ ವಿಧಾನ, ಕೂದಲು ಮತ್ತು ನೆತ್ತಿಯನ್ನು ಆಳವಾಗಿ ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಇದು ಒಳಗಿನಿಂದ ಕೂದಲಿಗೆ ಪೋಷಣೆಯನ್ನು ನೀಡುತ್ತದೆ. ಸಾಂಪ್ರದಾಯಿಕ ಕೂದಲು ಶುದ್ಧೀಕರಣ ವಿಧಾನಗಳು ನಿಮ್ಮ ನೆತ್ತಿಯನ್ನು ಕಂಡಿಷನರ್ ಶೇಷದೊಂದಿಗೆ ಬಿಡಬಹುದು, ಅದು ನಿಮ್ಮ ಕೂದಲಿಗೆ ಆರೋಗ್ಯಕರವಾಗಿರುವುದಿಲ್ಲ. ಕಂಡಿಷನರ್ ನಂತರ ಶಾಂಪೂ ಅನ್ನು ತೊಳೆಯುವುದು ನಿಮ್ಮ ಕೂದಲು ಸಂಪೂರ್ಣವಾಗಿ ಸ್ವಚ್ಛವಾಗಿದೆಯೇ ಎಂದು ಎರಡು ಬಾರಿ ಪರಿಶೀಲಿಸಲು ಸಹಾಯ ಮಾಡುತ್ತದೆ.

Homemade Hair Mask: ಹೊಟ್ಟೆಗೆ ಮಾತ್ರವಲ್ಲ ಕೂದಲ ಆರೋಗ್ಯಕ್ಕೂ ಬೆಸ್ಟ್ ಬಾಳೆಹಣ್ಣು

ಇದು ಜಿಡ್ಡಿನ ಅಥವಾ ಎಣ್ಣೆಯುಕ್ತ ಕೂದಲಿನೊಂದಿಗೆ ಉಳಿಯುವ ಅಪಾಯವನ್ನು ಕಡಿಮೆ ಮಾಡುತ್ತದೆ. ಕೂದಲ ರಕ್ಷಣೆಗಾಗಿ ಇದನ್ನು ನಿಯಮಿತವಾಗಿ ಬಳಸಿದರೆ ಕೂದಲು ಆರೋಗ್ಯಕರ ಮತ್ತು ಸುಂದರವಾಗುವುದು ಮಾತ್ರವಲ್ಲ, ಕೂದಲು ವೇಗವಾಗಿ ಬೆಳೆಯುಲು ನೆರವಾಗುತ್ತದೆ. 

ರಿವರ್ಸ್ ಶಾಂಪೂ ವಿಧಾನದ ಮಿತಿಗಳು
ರಿವರ್ಸ್ ಶಾಂಪೂ ವಿಧಾನವು ಸಾಮಾನ್ಯವಾಗಿ ಸುರಕ್ಷಿತವಾಗಿದ್ದರೂ, ಒರಟಾದ ಕೂದಲಿನ ಪ್ರಕಾರಗಳಿಗೆ ಇದು ಕಡಿಮೆ ಪರಿಣಾಮಕಾರಿಯಾಗಬಹುದು. ಹೀಗಾಗಿ ನಿಮ್ಮ ಕೂದಲು ಯಾವ ರೀತಿಯದ್ದು ಎಂಬುದನ್ನು ಮೊದಲು ಗಮನಿಸಿಕೊಂಡು, ನಂತರವಷ್ಟೇ ರಿವರ್ಸ್ ಶಾಂಪೂ ವಿಧಾನವನ್ನು ಟ್ರೈ ಮಾಡಿ. 

Latest Videos
Follow Us:
Download App:
  • android
  • ios