Asianet Suvarna News Asianet Suvarna News

Homemade Hair Mask: ಹೊಟ್ಟೆಗೆ ಮಾತ್ರವಲ್ಲ ಕೂದಲ ಆರೋಗ್ಯಕ್ಕೂ ಬೆಸ್ಟ್ ಬಾಳೆಹಣ್ಣು

ಉತ್ತಮ ತಲೆಕೂದಲು ಹೊಂದಲು ಕೂದಲಿನ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಕೂದಲು (Hair) ಉದುರುವುದು, ತುಂಡಾಗುವುದು, ಒರಟಾಗುವುದು ಮೊದಲಾದ ಸಮಸ್ಯೆ (Problem)ಗಳು ಕಾಣಿಸಿಕೊಳ್ಳುತ್ತವೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಶಾಂಪೂ, ಕಂಡೀಷನರ್ ಬಳಸುವುದಕ್ಕಿಂತ ಮನೆಮದ್ದು (Home Remedies)ಗಳನ್ನು ಬಳಸುವುದು ಉತ್ತಮ. ಈ ಕೆಲವು ಹೇರ್ ಮಾಸ್ಕ್‌ಗಳನ್ನು ನೀವು ಮನೆಯಲ್ಲೇ ಸುಲಭವಾಗಿ ತಯಾರಿಸಿ ನಿಮ್ಮ ಕೂದಲಿನ ಆರೈಕೆ ಮಾಡಿಕೊಳ್ಳಬಹುದು. 

Coconut Based Home Remedies for Hair Care
Author
Bengaluru, First Published Dec 17, 2021, 5:53 PM IST

ಹೆಣ್ಣಿನ ಸೌಂದರ್ಯದ ವಿಷಯಕ್ಕೆ ಬಂದಾಗ ತಲೆಕೂದಲಿಗೆ ಹೆಚ್ಚಿನ ಮಹತ್ವವಿದೆ. ಹೆಣ್ಣಿಗೆ ಮತ್ತು ತಲೆಕೂದಲಿಗೆ ಅದೆಷ್ಟರ ಮಟ್ಟಿಗೆ ಆಪ್ತ ನಂಟೆದರೆ ಹೆಣ್ಣಿನ ಜಡೆಯನ್ನು ಸಂಬೋಧಿಸಿ ಹೆಸರನ್ನು ಕರೆಯುವ ಅಭ್ಯಾಸ ರೂಢಿಯಲ್ಲಿತ್ತು. ಉದ್ದ ಜಡೆಯ ಹುಡುಗಿ, ಮೋಟು ಜಡೆಯ ಹುಡುಗಿ, ಪೋನಿಟೈಲ್ ಬೆಡಗಿ, ನಾಗರಜಡೆಯ ಹುಡುಗಿ ಹೀಗೆ ನಾನಾ ರೀತಿಯಲ್ಲಿ ಕರೆಯುತ್ತಿದ್ದರು. ಆದರೆ ಕಾಲ ಬದಲಾದಂತೆ ಹೆಣ್ಣಿಗೆ ಕೂದಲಿನ ಮೇಲಿನ ಅಕ್ಕರೆಯೂ ಬದಲಾಯಿತು. ಕೂದಲು ಕತ್ತರಿಸಿ ಬಾಬ್ ಹೇರ್, ಶಾರ್ಟ್ ಹೇರ್ ಮಾಡಿಕೊಳ್ಳಲಾಯಿತು. ಹೀಗಿದ್ದೂ ಈ ಆಧುನಿಕ ಕಾಲದಲ್ಲಿಯೂ ಕೂದಲು ಬೇಕೆಂದು ಆಸೆಪಡದ ಹುಡುಗಿಯರು ಕಡಿಮೆ..ಆದರೆ ಹೆಣ್ಣಿನ ಸೌಂದರ್ಯದ ಒಂದು ಭಾಗವೆಂದೇ ಪರಿಗಣಿಸಲಾಗಿರುವ ಕೂದಲಿನ ಆರೈಕೆ ಅಷ್ಟು ಸುಲಭವಲ್ಲ.

ಉತ್ತಮ ಕೂದಲು ಹೊಂದಲು ಕೂದಲಿನ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಕೂದಲು ಉದುರುವುದು, ಒರಟಾಗುವುದು ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.  ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಶಾಂಪೂ, ಕಂಡೀಷನರ್ ಬಳಸುವುದಕ್ಕಿಂತ ಆರ್ಯುವೇದ ವಿಧಾನಗಳನ್ನು ಅನುಸರಿಸುವುದು ಸೂಕ್ತ. ಆರ್ಯುವೇದ ಹಲವು ಆರೋಗ್ಯ, ಸೌಂದರ್ಯ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ.

Hair Care Tips: ಉದ್ದದ ಕೂದಲಿಗೆ ಪೇರಲೆ ಎಲೆ ರಾಮಬಾಣ, ಬಳಸೋದು ಹೇಗೆ?

ಕೂದಲಿನ ಆರೈಕಯ ವಿಷಯಕ್ಕೆ ಬಂದಾಗ ತೆಂಗಿನೆಣ್ಣೆಗೆ ಅಗ್ರಸ್ಥಾನವಿದೆ. ತೆಂಗಿನೆಣ್ಣೆ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೂದಲುದುರುವ ತೊಂದರೆ ನೀವು ಸಹ ಅನುಭವಿಸುತ್ತಿದ್ದರೆ, ಈ ಕೆಳಗಿನ ಹ್ಯಾರ್ ಪ್ಯಾಕ್ ಬಳಸಿದರೆ ಸಾಕು ಆರೋಗ್ಯಕರವಾದ ಕೂದಲು ನಿಮ್ಮದಾಗುತ್ತದೆ.

ತೆಂಗಿನೆಣ್ಣೆ ಮತ್ತು ಜೇನುತುಪ್ಪ ಹೇರ್ ಮಾಸ್ಕ್ (Coconut & Honey Hair Mask)

ತೆಂಗಿನ ಎಣ್ಣೆ (Coconut Oil) ಮತ್ತು ಜೇನುತುಪ್ಪದಿಂದ ಸಿದ್ಧಪಡಿಸಿದ ಹೇರ್ ಮಾಸ್ಕ್ (Hair Mask) ಕೂದಲಿನ ಆರೋಗ್ಯವನ್ನು ವೃದ್ಧಿಸುತ್ತದೆ. ಈ ಹೇರ್ ಮಾಸ್ಕ್‌ನಲ್ಲಿರುವ ಜೇನುತುಪ್ಪದ ಅಂಶ ಕೂದಲು ರೇಷ್ಮೆಯಂತೆ ಹೊಳೆಯುವಂತೆ ಮಾಡುತ್ತದೆ. ಈ ಹೇರ್ ಮಾಸ್ಕ್ ಸಿದ್ಧಪಡಿಸುವ ವಿಧಾನ ಹೀಗಿದೆ. ಒಂದು ಬಟ್ಟಲಿನಲ್ಲಿ 1 ಚಮಚ ಬಿಸಿ ತೆಂಗಿನ ಎಣ್ಣೆ ಮತ್ತು 1 ಚಮಚ ನೈಸರ್ಗಿಕ ಜೇನುತುಪ್ಪವನ್ನು ಸೇರಿಸಿಕೊಳ್ಳಬೇಕು. ಇವೆರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಈ ಹೇರ್ ಮಾಸ್ಕ್ ಅನ್ನು ನಿಮ್ಮ ನೆತ್ತಿಯ ಮೇಲೆ ಮತ್ತು ನಿಮ್ಮ ಕೂದಲಿನ ಉದ್ದಕ್ಕೆ ಹಚ್ಚಿಕೊಳ್ಳಬೇಕು. ಸುಮಾರು 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಕೂದಲು ತೊಳೆದುಕೊಳ್ಳಬೇಕು.

ಕೊಕೊ-ಲೆಮನ್ ಹೇರ್ ಮಾಸ್ಕ್ (Coco-Lemon Hair Mask)

ನಿಂಬೆ (Lemon)ಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವ ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ನಿಂಬೆಯ ಆಂಟಿಫಂಗಲ್ ಸ್ವಭಾವವು ನೆತ್ತಿಯನ್ನು ಸ್ವಚ್ಚವಾಗಿಡುತ್ತದೆ. ಇದರಿಂದ ಕೂದಲು ಸೊಂಪಾಗಿ ಬೆಳೆಯಲು ಸಹಾಯವಾಗುತ್ತದೆ. ಈ ಹೇರ್ ಮಾಸ್ಕ್ ತಯಾರಿಸಲು ಮೊದಲಿಗೆ ಒಂದು ಬೌಲ್‌ಗೆ ಒಂದು ಚಮಚ ತೆಂಗಿನ ಎಣ್ಣೆ ಮತ್ತು ಒಂದು ಚಮಚ ನಿಂಬೆ ರಸವನ್ನು ಸೇರಿಸಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ. ಒಣ ಕೂದಲಿಗೆ ಪ್ಯಾಕ್ ಅನ್ನು ಅಪ್ಲೈ ಮಾಡಿ. 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ನಿಮ್ಮ ದಿನನಿತ್ಯದ ಶಾಂಪೂ ಬಳಸಿ ನಿಮ್ಮ ಕೂದಲನ್ನು ತೊಳೆಯಿರಿ.

Sai Pallavi: ಕೂದಲು ಉದುರದಿರಲಿ ಎಂದು ದಿನವೂ ದೇವ್ರಿಗೆ ಪ್ರಾರ್ಥಿಸ್ತಾರೆ ಪ್ರೇಮಂ ನಟಿ

ತೆಂಗಿನೆಣ್ಣೆ ಮತ್ತು ಬಾಳೆಹಣ್ಣಿನ ಹೇರ್ ಮಾಸ್ಕ್ (Coconut & Banana Hair Mask)

ಕೂದಲಿಗೆ ಆರೋಗ್ಯಕ್ಕೆ ಉಪಯುಕ್ತವಾದ ಇನ್ನೊಂದು ಹೇರ್ ಮಾಸ್ಕ್ ತೆಂಗಿನೆಣ್ಣೆ ಮತ್ತು ಬಾಳೆಹಣ್ಣಿನಿಂದ ಸಿದ್ಧಪಡಿಸುವಂತದ್ದು. ಬಾಳೆಹಣ್ಣಿನ ಬಳಕೆ ಕೂದಲನ್ನು ನಯವಾಗಿಸುತ್ತದೆ. ಕೂದಲಿನ ತುದಿ ಸೀಳುವಿಕೆ, ಕೂದಲು ತುಂಡಾಗುವುದು ಮೊದಲಾದ ಸಮಸ್ಯೆ ಇಲ್ಲವಾಗುತ್ತದೆ. ಈ ಹೇರ್ ಪ್ಯಾಕ್ ಸಿದ್ಧಪಡಿಸಲು ಒಂದು ಬ್ಲೆಂಡರ್‌ನಲ್ಲಿ ಅರ್ಧ ಬಾಳೆಹಣ್ಣು (Banana) ಮತ್ತು 1 ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ನಯವಾದ ಪೇಸ್ಟ್ ರೆಡಿಯಾದ ನಂತರ, ಅದನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ನೆತ್ತಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಇದನ್ನು 20 ನಿಮಿಷಗಳ ಕಾಲ ಕೂದಲಿನಲ್ಲಿ ಹಾಗೆಯೇ ಬಿಟ್ಟು ನಂತರ ತೊಳೆಯರಿ.

ತೆಂಗಿನೆಣ್ಣೆ ಮತ್ತು ಮೊಟ್ಟೆಯ ಹಳದಿಯ ಹೇರ್ ಮಾಸ್ಕ್ (Coconut & Egg Yolk Hair Mask)

ಮೊಟ್ಟೆ (Egg)ಯ ಹಳದಿ ಲೋಳೆಯು ವಿಟಮಿನ್‌ಗಳಲ್ಲಿ ಸಮೃದ್ಧವಾಗಿದೆ, ಇದು ಹಾನಿಗೊಳಗಾದ ಕೂದಲಿನ ಎಳೆಗಳನ್ನು ಸರಿಪಡಿಸುತ್ತದೆ ಮತ್ತು ಮತ್ತಷ್ಟು ಕೂದಲು ಹಾನಿಯಾಗದಂತೆ ತಡೆಯುತ್ತದೆ. ಈ ಹೇರ್ ಮಾಸ್ಕ್ ತಯಾರಿಸಲು, ಒಂದು ಬಟ್ಟಲಿನಲ್ಲಿ ಒಂದು ಮೊಟ್ಟೆಯ ಹಳದಿ ಲೋಳೆಯನ್ನು ಸೇರಿಸಿ ಮತ್ತು ಅದಕ್ಕೆ 2 ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿ. ಒದ್ದೆಯಾದ ಕೂದಲಿಗೆ ಈ ಹೇರ್ ಪ್ಯಾಕ್ ಅನ್ನು ಅಪ್ಲೈ ಮಾಡಿ. ಈ ಹೇರ್ ಪ್ಯಾಕ್ ದ್ರವರೂಪದಲ್ಲಿರುವ ಕಾರಣ ಶವರ್ ಕ್ಯಾಪ್ ಬಳಸುವುದು ಒಳ್ಳೆಯದು. ಕೂದಲನ್ನು 20 ನಿಮಿಷಗಳ ಹಾಗೆಯೇ ಬಿಟ್ಟು ತಂಪಾದ ನೀರಿನಿಂದ ತೊಳೆಯಿರಿ.

ನೆಲ್ಲಿಕಾಯಿ, ಸೀಗೇಕಾಯಿ, ತೆಂಗಿನೆಣ್ಣೆಯ ಹೇರ್ ಮಾಸ್ಕ್ (Amla, Shikakai & Coconut Hair Mask)

ನೆಲ್ಲಿಕಾಯಿಯಲ್ಲಿ ಕೂದಲ ಆರೋಗ್ಯಕ್ಕೆ ಅಗತ್ಯವಾದ ಉತ್ಕರ್ಷಣಾ ನಿರೋಧಕಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ, ಇದು ಆರೋಗ್ಯಕರ ನೆತ್ತಿಯನ್ನು ಕಾಪಾಡಿಕೊಳ್ಳಲು ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಸೀಗೆಕಾಯಿ ಪುಡಿ ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ. ಈ ಹೇರ್ ಪ್ಯಾಕ್ ಅನ್ನು ತಯಾರಿಸಲು ಒಂದು ಚಮಚ ನೆಲ್ಲಿಕಾಯಿ ರಸ ಮತ್ತು ಸೀಗೆಕಾಯಿ ಪುಡಿಯನ್ನು 2 ಟೇಬಲ್ ಸ್ಪೂನ್ ತೆಂಗಿನ ಎಣ್ಣೆಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಚೆನ್ನಾಗಿ ಕುದಿಸಿ, ತಣ್ಣಗಾಗಲು ಬಿಡಿ. ಈ ಹೇರ್ ಮಾಸ್ಕ್‌ನ್ನು ಸಂಜೆ ಕೂದಲಿಗೆ ಹಚ್ಚಿಕೊಂಡು ಮರುದಿನ ಬೆಳಗ್ಗೆ ಕೂದಲು ತೊಳೆಯಿರಿ..

Follow Us:
Download App:
  • android
  • ios