Kannada

ಸಣ್ಣ ಮುಖಕ್ಕೆ ಬೆಸ್ಟ್ ಹೇರ್‌ಸ್ಟೈಲ್

ನಿಮ್ಮ ಮುಖ ಸಣ್ಣದಾಗಿದ್ದರೆ, ಯಾವ ರೀತಿಯ ಹೇರ್‌ಸ್ಟೈಲ್ ಮಾಡಿಕೊಳ್ಳಬೇಕು ಎಂಬ ಗೊಂದಲವೇ? ನಟಿ ಇಶಾ ಮಾಳವೀಯ ರೀತಿ ಟ್ರೈ ಮಾಡಿ.

Kannada

ವೇವಿ ಹೇರ್ ಪೋನಿಟೇಲ್

ಸಣ್ಣ ಮತ್ತು ಸ್ಲಿಮ್ ಮುಖದವರಿಗೆ ವೇವೀ ಹೇರ್ ಲುಕ್ ತುಂಬಾ ಕ್ಯೂಟ್ ಆಗಿ ಕಾಣಿಸುತ್ತೆ. ಮುಂಭಾಗದ ಕೂದಲನ್ನು ವೇವೀ ಸ್ಟೈಲ್ ಮಾಡಿ ಪೋನಿಟೇಲ್ ಹಾಕಿಕೊಳ್ಳಿ. ಇದು ಎಲ್ಲಾ ರೀತಿಯ ಔಟ್‌ಫಿಟ್‌ಗಳಿಗೂ ಹೊಂದುತ್ತೆ.

Image credits: instagram
Kannada

ಸಾಫ್ಟ್ ಕರ್ಲ್ ಹೇರ್‌ಸ್ಟೈಲ್

ಮುಂದಿನ ಕೂದಲನ್ನು ಹಿಂದಕ್ಕೆ ಬಾಚಿ, ಉಳಿದ ಕೂದಲನ್ನು ಸಾಫ್ಟ್ ಕರ್ಲ್ ಮಾಡಿ. ಕೂದಲಿನ ಬೈತಲೆಯನ್ನು ಮಧ್ಯದಿಂದ ತೆಗೆಯಿರಿ. ಈ ಹೇರ್‌ಸ್ಟೈಲ್ ನಿಮ್ಮ ಮುಖದ ಮುಗ್ಧತೆಯನ್ನು ಹೆಚ್ಚಿಸುತ್ತದೆ.

Image credits: instagram
Kannada

ಗಜರಾ ಲೋ ಬನ್

ಭಾರತೀಯ ಉಡುಗೆಗಳ ಜೊತೆ ಗಜರಾ ಹೇರ್‌ಸ್ಟೈಲ್ ಇವತ್ತಿಗೂ ಟ್ರೆಂಡಿಂಗ್‌ನಲ್ಲಿದೆ. ಕೆಳಭಾಗದಲ್ಲಿ ಜುಟ್ಟು ಕಟ್ಟಿ (ಲೋ ಬನ್) ಅದಕ್ಕೆ ಗಜರಾ ಮುಡಿಯಿರಿ. ಇದರ ಜೊತೆ ದೊಡ್ಡ ಜುಮುಕಿ ಹಾಕಿದರೆ ಲುಕ್ ಅದ್ಭುತವಾಗಿರುತ್ತೆ.
Image credits: instagram
Kannada

ಸಡಿಲವಾದ ಜಡೆ

ಸಡಿಲವಾಗಿ ಜಡೆ ಹೆಣೆದು ನೀವು ಟ್ರೆಡಿಷನಲ್ ಲುಕ್ ಪಡೆಯಬಹುದು. ಹಳೆಯ ಕಾಲದ ಈ ಹೇರ್‌ಸ್ಟೈಲ್ ಇಂದಿಗೂ ಯುವತಿಯರ ಹೇರ್‌ಸ್ಟೈಲಿಂಗ್ ಲಿಸ್ಟ್‌ನಲ್ಲಿದೆ.
Image credits: instagram
Kannada

ಪರ್ಲ್ ಪೋನಿಟೇಲ್

ಈ ಹೇರ್‌ಸ್ಟೈಲ್ ಸದ್ಯ ಟ್ರೆಂಡಿಂಗ್‌ನಲ್ಲಿದೆ. ನೋಡಲು ಸಿಂಪಲ್ ಆದ್ರೂ ಯೂನಿಕ್ ಆಗಿದೆ. ಇದಕ್ಕೆ ಹೇರ್‌ಸ್ಟೈಲಿಸ್ಟ್ ಬೇಕಿಲ್ಲ, ನೀವೇ ಮಾಡಿಕೊಳ್ಳಬಹುದು. ಪೋನಿಟೇಲ್ ಹಾಕಿ, ಅಲ್ಲಲ್ಲಿ ಮುತ್ತಿನ ರಬ್ಬರ್ ಬ್ಯಾಂಡ್ ಹಾಕಿ.

Image credits: instagram
Kannada

ಸ್ಲೀಕ್ ಹೈ ಪೋನಿಟೇಲ್

ಈ ಸ್ಲೀಕ್ ಹೈ ಪೋನಿಟೇಲ್ ಹೇರ್‌ಸ್ಟೈಲ್ ಮುಖದ ಜಾ ಲೈನ್‌ಗೆ ಶಾರ್ಪ್ ಮತ್ತು ಡಿಫೈನ್ಡ್ ಲುಕ್ ನೀಡುತ್ತದೆ. ಸ್ಮೂತ್ ಮತ್ತು ಸ್ಟ್ರೈಟ್ ಫಿನಿಶ್ ಇರುವ ಈ ಸ್ಟೈಲ್, ಪಾರ್ಟಿ ಅಥವಾ ಗ್ಲಾಮರಸ್ ಲುಕ್‌ಗೆ ಪರ್ಫೆಕ್ಟ್ ಆಯ್ಕೆ.

Image credits: instagram

ಅನುಷ್ಕಾ ಶರ್ಮಾ ಧರಿಸಿದ ತುಳಸಿ ಮಾಲೆ; ಅಸಲಿ vs ನಕಲಿ ಕಂಡುಹಿಡಿಯೋದು ಹೇಗೆ?

Beetroot: ತಕ್ಷಣವೇ ಗ್ಲೋ ಬೇಕಾ? ಮದುಮಗಳಿಗಾಗಿ ಇಲ್ಲಿವೆ 5 ಬ್ಯೂಟಿ ಹ್ಯಾಕ್ಸ್

ಡೈಲಿ ಯೂಸ್‌ಗೆ ಹಗುರವಾದ ಬೆಳ್ಳಿ ಕಾಲ್ಗೆಜ್ಜೆ ಬೇಕಾ?, ಇಲ್ಲಿದೆ 6 ಗ್ರಾಂ ತೂಕದ ಡಿಸೈನ್ಸ್

ಕುಳ್ಳಗಿದ್ದೀರಾ? ಈ ಹೇರ್‌ಸ್ಟೈಲ್ ಟ್ರೈ ಮಾಡಿ.. ಸಖತ್ತಾಗಿ ಕಾಣ್ತೀರಿ!