Google And Women : ಇಂಟರ್ನೆಟ್ ನಲ್ಲಿ ರಾತ್ರಿ- ಹಗಲು ಹುಡುಗಿಯರು ಹುಡುಕೋದೇನು?
ಇಡೀ ದಿನ ಮೊಬೈಲ್ ನಲ್ಲಿರ್ತಾಳೆ, ಅದೇನು ನೋಡ್ತಾಳೋ ದೇವರೇ ಬಲ್ಲ ಎನ್ನುತ್ತಾರೆ ಪಾಲಕರು. ದಿನವಿಡಿ ಮೊಬೈಲ್ ನೋಡಿದ್ರೆ ಬೋರಾಗಲ್ವಾ ಅಂತಾ ಹುಡುಗಿಯರನ್ನು ಕೇಳಿ ನೋಡಿ.. ಇಲ್ಲ ಎಂಬ ಉತ್ತರ ನೀಡುವ ಹುಡುಗಿಯರು ಏನು ಹುಡುಕ್ತಾರೆ ಗೊತ್ತಾ?
ಮೊಬೈಲ್ (Mobile) ಇಲ್ಲದೆ ಜೀವನ(Life)ವಿಲ್ಲ. ಸದ್ಯ ಮೊಬೈಲ್ ನಮ್ಮ ಜೀವನದ ಒಂದು ಭಾಗ. ಎದ್ದರು,ಕುಳಿತ್ರೂ, ನಿಂತರೂ ನಾವು ಮೊಬೈಲ್ ನೋಡ್ತೇವೆ. ಸ್ವಲ್ಪ ಸಮಯ ಮೊಬೈಲ್ ದೂರವಿದ್ರೆ ನಮ್ಮವರನ್ನು ಕಳೆದುಕೊಂಡ ಅನುಭವವಾಗುತ್ತದೆ. ಇಂದಿನ ಯುವಕರು ಅರ್ಧದಷ್ಟು ಸಮಯವನ್ನು ಇಂಟರ್‌ನೆಟ್‌ನಲ್ಲಿ ಕಳೆಯುತ್ತಿದ್ದಾರೆ. ಸದಾ ಮೊಬೈಲ್ ನಲ್ಲಿರುವ ಜನರು ಏನನ್ನು ನೋಡ್ತಾರೆ ಎಂಬ ಪ್ರಶ್ನೆ ಹಿರಿಯರನ್ನು ಕಾಡುವುದುಂಟು. ಸಣ್ಣ ಮಾಹಿತಿ ಇರಲಿ, ದೊಡ್ಡ ಸಮಸ್ಯೆಯಿರಲಿ ಮೊದಲು ಕೈ ಹೋಗುವುದು ಗೂಗಲ್ ಸರ್ಚ್ ಗೆ.
ಹಿರಿಯರ ಬಳಿ, ಸ್ನೇಹಿತರ ಬಳಿ ಕೇಳಿ ತಿಳಿಯುವುದಕ್ಕಿಂತ ಹೆಚ್ಚು ಗೂಗಲ್ ನಂಬುತ್ತೇವೆ ನಾವು. ಗೂಗಲ್ ನಲ್ಲಿ ಈಗ ಎಲ್ಲ ಮಾಹಿತಿ ಲಭ್ಯವಿರುತ್ತದೆ. ಅದ್ರಲ್ಲಿ ಸುಳ್ಳಿರಲಿ, ಸತ್ಯವಿರಲಿ, ಗೂಗಲ್ ಸರ್ಚ್ ಬಿಡಲು ಸಾಧ್ಯವಿಲ್ಲ. ಮೊಬೈಲ್ ನೋಡುವುದ್ರಲ್ಲಿ ಹುಡುಗಿಯರೂ ಹಿಂದೆ ಬಿದ್ದಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ದೇಶದ ಒಟ್ಟು 150 ಮಿಲಿಯನ್ ಇಂಟರ್ನೆಟ್(Internet ) ಬಳಕೆದಾರರಲ್ಲಿ, 20 ಮಿಲಿಯನ್ ಮಹಿಳೆಯರು ಆನ್‌ಲೈನ್ (Online) ನೆಚ್ಚಿಕೊಂಡಿದ್ದಾರೆ. ಇದರಲ್ಲಿ ಶೇಕಡಾ 75ರಷ್ಟು ಮಹಿಳೆಯರು 15-34ರ ವಯೋಮಾನದವರು.
ವರದಿಯ ಪ್ರಕಾರ, ಶೇಕಡಾ 31 ರಷ್ಟು ಹದಿಹರೆಯದವರು ಡಯಟ್ ಮತ್ತು ಫಿಟ್ ಆಗಿರುವ ಎಲ್ಲಾ ಮಾರ್ಗಗಳ ಬಗ್ಗೆ ಇಂಟರ್ನೆಟ್ ನಲ್ಲಿ ಹುಡುಕಾಟ ನಡೆಸ್ತಾರೆ. ಇದಲ್ಲದೇ ಶೇಕಡಾ 17 ರಷ್ಟು ಜನರು ಸೆಕ್ಸ್, ಡಿಪ್ರೆಶನ್ ಡ್ರಗ್ಸ್ ಇತ್ಯಾದಿಗಳ ಬಗ್ಗೆ ಹುಡುಕುತ್ತಾರೆ. ಸದಾ ಮೊಬೈಲ್ ಹಿಡಿದು ಕುಳಿತುಕೊಳ್ಳುವ ಹುಡುಗಿಯರು ಏನು ಸರ್ಚ್ ಮಾಡ್ತಾರೆ ಎಂಬ ಪ್ರಶ್ನೆ ಕಾಡುವುದು ಸಹಜ. ಹಾಗಾದರೆ ಹುಡುಗಿಯರು ಗೂಗಲ್‌ನಲ್ಲಿ ಏನೇನು ಹುಡುಕುತ್ತಾರೆ ಎಂಬುದನ್ನು ನಾವು ಹೇಳ್ತೆವೆ.
ಗೂಗಲ್ ನಲ್ಲಿ ಬ್ಯುಸಿ ಹುಡುಗಿಯರು: ಗೂಗಲ್ ನಲ್ಲಿ ಬ್ಯುಸಿಯಿರುವ ಹುಡುಗಿಯರು ಏನು ಸರ್ಚ್ ಮಾಡ್ತಾರೆ ಎಂಬುದು ಅವರ ಸ್ವಭಾವವನ್ನು ಅವಲಂಬಿಸಿರುತ್ತದೆ. ಆಸಕ್ತಿಗೆ ತಕ್ಕಂತೆ ಹುಡುಗಿಯರ ಹುಡುಕಾಟ ಮುಂದುವರೆದಿರುತ್ತದೆ.
ಬಾಲ್ಯದಿಂದಲೂ ತಮ್ಮ ವೃತ್ತಿಜೀವನದ ಬಗ್ಗೆ ಮಹತ್ವಾಕಾಂಕ್ಷೆ ಹೊಂದಿರುವ ಹುಡುಗಿಯರು ಇಂಟರ್ನೆಟ್ ನಲ್ಲಿ ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹುಡುಕುತ್ತಾರೆ. ಯಾವ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು, ಅದಕ್ಕೆ ಯಾವ ಕೋರ್ಸ್ ಮಾಡಬೇಕು, ಯಾವ ವೃತ್ತಿಯಲ್ಲಿ ಭವಿಷ್ಯವಿದೆ ಹೀಗೆ ಅದರ ಶುಲ್ಕ ಸೇರಿದಂತೆ ಎಲ್ಲವನ್ನೂ ಹುಡುಕುತ್ತಾರೆ.
ಸೇನೆಯ ಮುಖ್ಯ ಹುದ್ದೆ ಬಿಟ್ಟು PORN ಚಿತ್ರೋದ್ಯಮಕ್ಕೆ ಧುಮುಕಿದ ಬೆಡಗಿ
ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿಯಿರುವ ಹುಡುಗಿಯರು, ಸೌಂದರ್ಯ ವೃದ್ಧಿಗೆ ಬೇಕಾದ ವಿಷ್ಯಗಳ ಹುಡುಕಾಟ ನಡೆಸುತ್ತಾರೆ. ಸುಂದರವಾಗಿ ಕಾಣಲು, ಬೆಳ್ಳಗೆ ಕಾಣಲು, ಕಪ್ಪು ಕಲೆ ಹೋಗಲಾಡಿಸಲು, ನೇಲ್ ಪಾಲಿಶ್ ಹಚ್ಚುವ ವಿಧಾನ ಹೇಗೆ, ಯಾವುವು ಅತ್ಯುತ್ತಮ ಸೌಂದರ್ಯ ವರ್ಧಕ ಕಂಪನಿ ಹೀಗೆ ಬ್ಯೂಟಿಗೆ ಸಂಬಂಧಿಸಿದ ವಿಷ್ಯವನ್ನು ಸರ್ಚ್ ಮಾಡ್ತಾರೆ.
ಬೊಜ್ಜು ಈಗ ಸಾಮಾನ್ಯ ಸಮಸ್ಯೆ. ಅನೇಕ ಹುಡುಗಿಯರು ನಾನಾ ಕಾರಣಕ್ಕೆ ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದಾರೆ. ಅಂಥವರು ಬೊಜ್ಜು ಕಡಿಮೆ ಮಾಡುವ ಸಲಹೆಗಳನ್ನು ಹುಡುಕುತ್ತಾರೆ. ಕೆಲವರು ಗೂಗಲ್ ನಲ್ಲಿ ನೀಡಿದ ಮಾಹಿತಿಯನ್ನು ಅನುಸರಿಸಿ ಸುಲಭವಾಗಿ ತನ್ನ ತೂಕವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ನಡೆಸುತ್ತಾರೆ. ಮತ್ತೆ ಕೆಲವರು ಮಾಹಿತಿಯನ್ನು ಓದುತ್ತಾರೆಯೇ ವಿನಃ ಅದನ್ನು ಅಳವಡಿಸಿಕೊಳ್ಳುವ ಪ್ರಯತ್ನ ನಡೆಸುವುದಿಲ್ಲ.
ಹೇರ್ ಸ್ಟೈಲ್ ಬಗ್ಗೆ ಹುಡುಗಿಯರಿಗೆ ವಿಶೇಷ ಆಸಕ್ತಿ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಯಾವ ಹೇರ್ ಸ್ಟೈಲ್ ತನಗೆ ಹೊಂದಬಹುದು ಎಂಬುದರಿಂದ ಹಿಡಿದು ಯಾವ ನಟಿ, ಯಾವ ಹೇರ್ ಸ್ಟೈಲ್ ಮಾಡಿಕೊಂಡಿದ್ದಾಳೆ ಎನ್ನುವವರೆಗೆ ಎಲ್ಲ ಅಪ್ಡೇಟ್ ಹೊಂದಿರಲು ಹುಡುಗಿಯರು ಬಯಸ್ತಾರೆ.
ಹುಡುಗಿಯರು ಡ್ರೆಸ್, ಇಯರಿಂಗ್ ಸೇರಿದಂತೆ ಅಲಂಕಾರಿಕ ಸೈಟ್ ಗಳನ್ನು ಹೊಕ್ಕಿ ಬರ್ತಾರೆ. ಅಮೆಜಾನ್, ಫ್ಲಿಪ್ಕಾರ್ಟ್ ನಂತಹ ಸೈಟ್ ಗಳು ಹುಡುಗಿಯರ ಮೊಬೈಲ್ ನಲ್ಲಿ ಇದ್ದೇ ಇರುತ್ತವೆ.
SBI Controversial Circular: ಮೂರು ತಿಂಗಳು ದಾಟಿದ ಗರ್ಭಿಣಿ ಉದ್ಯೋಗಕ್ಕೆ ಅನರ್ಹಳು, ವಿವಾದಾತ್ಮಕ ಮಾರ್ಗಸೂಚಿ
ಇತ್ತೀಚಿನ ದಿನಗಳಲ್ಲಿ ವೆಬ್ ಸಿರೀಸ್ ನೋಡುವ ಚಟವನ್ನು ಹುಡುಗಿಯರು ರೂಢಿ ಮಾಡಿಕೊಳ್ತಿದ್ದಾರೆ. ಟಿವಿ ಧಾರಾವಾಹಿಗಳ ಬದಲು ಹುಡುಗರಂತೆ ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ನಲ್ಲಿ ಸಿರೀಸ್ ನೋಡುವ ಹವ್ಯಾಸ ಹೆಚ್ಚಾಗಿದೆ. ತಡರಾತ್ರಿಯವರೆಗೆ ಕುಳಿತು ಇದನ್ನು ನೋಡುವ ಹುಡುಗಿಯರ ಸಂಖ್ಯೆ ಸಾಕಷ್ಟಿದೆ. ಯಾವ ಹೊಸ ಸಿರೀಸ್ ಬಂದಿದೆ? ಯಾವುದು ಬೆಸ್ಟ್ ಎಂಬುದನ್ನೂ ಹುಡುಗಿಯರು ಗೂಗಲ್ ನಲ್ಲಿ ಸರ್ಚ್ ಮಾಡ್ತಾರೆ.