SBI Controversial Circular: ಮೂರು ತಿಂಗಳು ದಾಟಿದ ಗರ್ಭಿಣಿ ಉದ್ಯೋಗಕ್ಕೆ ಅನರ್ಹಳು, ವಿವಾದಾತ್ಮಕ ಮಾರ್ಗಸೂಚಿ ಹಿಂಪಡೆದ ಎಸ್ ಬಿಐ
*ಗರ್ಭಿಣಿ ನೇಮಕಾತಿಗೆ ಸಂಬಂಧಿಸಿ ಎಸ್ ಬಿಐ ವಿವಾದಾತ್ಮಕ ಮಾರ್ಗಸೂಚಿಗೆ ತೀವ್ರ ವಿರೋಧ
*ಎಸ್ ಬಿಐಗೆ ನೋಟಿಸ್ ಜಾರಿ ಮಾಡಿದ್ದ ದೆಹಲಿ ಮಹಿಳಾ ಆಯೋಗ
*ಟೀಕೆ ಹಿನ್ನೆಲೆಯಲ್ಲಿ ಮಾರ್ಗಸೂಚಿ ಹಿಂಪಡೆದ ಬ್ಯಾಂಕ್
ನವದೆಹಲಿ (ಜ.29): ಮೂರು ತಿಂಗಳು ದಾಟಿದ ಗರ್ಭಿಣಿಯರು (Pregnant) ಉದ್ಯೋಗಕ್ಕೆ ಸೇರ್ಪಡೆಗೊಳ್ಳಲು ತಾತ್ಕಾಲಿಕವಾಗಿ (Temporarily) ಅನರ್ಹರು (Unfit) ಎಂಬ ಮಾರ್ಗಸೂಚಿ (Guidelines) ಹೊರಡಿಸಿದ್ದ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ (SBI),ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಹಿಂಪಡೆದಿದೆ.
ಉದ್ಯೋಗ ನೇಮಕಾತಿಗೆ (Recruitement) ಸಂಬಂಧಿಸಿದ ಮಾರ್ಗಸೂಚಿಗಳನ್ನು(Guidelines) ಪರಿಷ್ಕರಿಸಿ 2021ರ ಡಿಸೆಂಬರ್ 31ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ಮೂರು ತಿಂಗಳು ದಾಟಿದ ಗರ್ಭಿಣಿಯರು (Pregnants)ಸೇವೆಗೆ ಸೇರ್ಪಡೆಗೊಳ್ಳಲು ತಾತ್ಕಾಲಿಕವಾಗಿ ಅನರ್ಹರಾಗಿದ್ದು, ಹೆರಿಗೆಯಾದ ( Delivery) ನಾಲ್ಕು ತಿಂಗಳೊಳಗೆ ಕೆಲಸಕ್ಕೆ ಸೇರಿಕೊಳ್ಳಬಹುದು ಎಂದು ತಿಳಿಸಿತ್ತು.ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ರಾಜಕೀಯ ಮುಖಂಡರು, ಉದ್ಯಮಿಗಳು, ಮಾನವ ಹಕ್ಕುಗಳ ಸಂಘಟನೆಗಳು, ಮಹಿಳಾ ಹೋರಾಗಾರ್ತಿಯರು ಸಾಮಾಜಿಕ ಜಾಲತಾಣಗಳಲ್ಲಿ ಎಸ್ ಬಿಐ (SBI) ನೀತಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದರು. ಎಸ್ ಬಿಐ (SBI) ತಕ್ಷಣ ಹೊಸ ಉದ್ಯೋಗ ಮಾರ್ಗಸೂಚಿಯನ್ನು ಹಿಂಪಡೆಯುವಂತೆ ಆಗ್ರಹಿಸಿದ್ದರು.
Air India Takeover : ಏರಿಂಡಿಯಾ ಹಳೇ ಸಾಲ ತೀರಿಸಲು ಎಸ್ ಬಿಐ ಸಹಾಯ ಕೇಳಿದ ಟಾಟಾ!
ಎಸ್ ಬಿಐಯ (SBI) ಹೊಸ ನೀತಿ 'ತಾರತಮ್ಯದಿಂದ ಕೂಡಿದೆ' ಎಂದು ತನ್ನ ಅಧಿಕೃತ ಟ್ವಿಟ್ಟರ್ (Twitter)ಖಾತೆಯಲ್ಲಿ ಟ್ವೀಟ್ ಮಾಡಿರೋ ಶಿವಸೇನೆ (Shiv Sena) ಎಂಪಿ (MP) ಪ್ರಿಯಾಂಕಾ ಚತುರ್ವೇದಿ (Priyanka Chaturvedi) ಈ ಮಾರ್ಗಸೂಚಿಯನ್ನು ಕೂಡಲೇ ಹಿಂಪಡೆಯುವಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹಾಗೂ ಬ್ಯಾಂಕಿನ ಚೇರ್ಮನ್ ಅವರನ್ನು ಆಗ್ರಹಿಸಿದ್ದರು. ಮಧುರೈ ಎಂಪಿ ಸಿಪಿಎಂ (ಐ) ಪಕ್ಷದ ಎಸ್.ವೆಂಕಟೇಶನ್ ಕೂಡ ಎಸ್ ಬಿಐ ಮಾರ್ಗಸೂಚಿಗೆ ವಿರೋಧ ವ್ಯಕ್ತಪಡಿಸಿದ್ದರು. ಗರ್ಭಿಣಿ ಎಂಬ ಕಾರಣಕ್ಕೆ ಮಹಿಳೆಗೆ ಉದ್ಯೋಗ ನಿರಾಕರಿಸೋದು ಭಾರತದ ಸಂವಿಧಾನದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬ ಅಭಿಪ್ರಾಯವನ್ನು ಬಹುತೇಕರು ವ್ಯಕ್ತಪಡಿಸಿದ್ದರು.
ಮೂರು ತಿಂಗಳು ದಾಟಿದ ಗರ್ಭಿಣಿ ಉದ್ಯೋಗಕ್ಕೆ ಸೇರದಂತೆ ತಡೆಯೋ ನಿಯಮವನ್ನು ಹಿಂಪಡೆಯುವಂತೆ ದೆಹಲಿ ಮಹಿಳಾ ಆಯೋಗ ಎಸ್ ಬಿಐಗೆ ನೋಟಿಸ್ ಕೂಡ ಜಾರಿ ಮಾಡಿತ್ತು. ಈ ಮಾರ್ಗಸೂಚಿಗಳು ಮಹಿಳೆಯರಿಗೆ ಸಂಬಂಧಿಸಿ ತಾರತಮ್ಯದಿಂದ ಕೂಡಿಲ್ಲ ಎಂಬುದನ್ನು ಸಾಬೀತುಪಡಿಸಲು ತೆಗೆದುಕೊಂಡ ಕ್ರಮಗಳು ಹಾಗೂ ಈ ನಿಯಮದ ತಿದ್ದುಪಡಿ ಅಥವಾ ಹಿಂಪಡೆಯಲು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಒದಗಿಸುವಂತೆ ಬ್ಯಾಂಕಿಗೆ ಆಯೋಗ ಸೂಚಿಸಿತ್ತು. ಅಲ್ಲದೆ, ಈ ಮಾರ್ಗಸೂಚಿಗಳನ್ನು ರೂಪಿಸಿದ ಸಂಪೂರ್ಣ ಪ್ರಕ್ರಿಯೆ ಜೊತೆಗೆ ಅನುಮೋದನೆ ನೀಡಿದ ಅಧಿಕಾರಿಗಳು ಹಾಗೂ ಅವರ ಹುದ್ದೆಗಳ ಮಾಹಿತಿಯನ್ನೂ ಒದಗಿಸುವಂತೆ ಕೋರಿತ್ತು. ಈ ಎಲ್ಲ ಮಾಹಿತಿಗಳನ್ನು ಫೆಬ್ರವರಿ 2ರೊಳಗ ಒದಗಿಸುವಂತೆ ಆಯೋಗ ಸೂಚಿಸಿತ್ತು.
Google- Bharti Airtel Deal: ಟೆಲಿಕಾಂ ಕಂಪನಿಯಲ್ಲಿ $1 ಬಿಲಿಯನ್ ಹೂಡಿಕೆ ಮಾಡಲಿರುವ ಟೆಕ್ ದೈತ್ಯ!
'ಸಾಮಾಜಿಕ ಭದ್ರತೆ ಸಂಹಿತೆ 2020ರಡಿಯಲ್ಲಿ ಕಲ್ಪಿಸೋ ಪ್ರಸವ ಪ್ರಯೋಜನಗಳಿಗೆ ವಿರುದ್ಧವಾಗಿರೋ ಕಾರಣ ಎಸ್ ಬಿಐ ನೀತಿ ತಾರತಮ್ಯ ಹಾಗೂ ಅಕ್ರಮ ಎರಡೂ ಆಗಿದೆ' ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಹೇಳಿದ್ದಾರೆ.
ಎಸ್ ಬಿಐ ಈ ನೀತಿಗೆ ಅಖಿಲ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಿಗಳ ಸಂಘಟನೆ ಕೂಡ ಟೀಕಿಸಿತ್ತು.ತೀವ್ರ ವಿರೋಧದ ಹಿನ್ನೆಲೆಯಲ್ಲಿ ಗರ್ಭಿಣಿ ಅಭ್ಯರ್ಥಿಗಳಿಗೆ ಸಂಬಂಧಿಸಿ ಹೊರಡಿಸಿದ್ದ ಮಾರ್ಗಸೂಚಿಯನ್ನು ಎಸ್ ಬಿಐ ಕೊನೆಗೂ ಹಿಂಪಡೆದಿದೆ. ಈ ಬಗ್ಗೆ ಟ್ವೀಟ್ ಮಾಡಿರೋ ಎಸ್ ಬಿಐ, 'ಗರ್ಭಿಣಿ ಅಭ್ಯರ್ಥಿಗಳ ನೇಮಕಾತಿಗೆ ಸಂಬಂಧಿಸಿದ ಪರಿಷ್ಕೃತ ಮಾರ್ಗಸೂಚಿಯನ್ನು ಹಿಂಪಡೆಯಲಾಗಿದೆ' ಎಂದು ತಿಳಿಸಿದೆ.
ಈ ಹಿಂದಿನ ಎಸ್ ಬಿಐ ನೇಮಕಾತಿ ನಿಯಮಾವಳಿ ಪ್ರಕಾರ ಆರು ತಿಂಗಳ ಗರ್ಭಿಣಿ ಅಭ್ಯರ್ಥಿ ಎಸ್ ಬಿಐನಲ್ಲಿ ಉದ್ಯೋಗಕ್ಕೆ ಸೇರ್ಪಡೆಗೊಳ್ಳಲು ಅವಕಾಶವಿತ್ತು. ಆದ್ರೆ ಈ ಸಮಯದಲ್ಲಿ ಆಕೆ ಉದ್ಯೋಗಕ್ಕೆ ಸೇರ್ಪಡೆಗೊಳ್ಳೋದ್ರಿಂದ ಆಕೆಯ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮವುಂಟಾಗೋದಿಲ್ಲ ಎಂಬ ಬಗ್ಗೆ ವೈದ್ಯರಿಂದ ಪ್ರಮಾಣಪತ್ರ ಒದಗಿಸಬೇಕಿತ್ತು.