Asianet Suvarna News Asianet Suvarna News

ಸೇನೆಯ ಮುಖ್ಯ ಹುದ್ದೆ ಬಿಟ್ಟು porn ಚಿತ್ರೋದ್ಯಮಕ್ಕೆ ಧುಮುಕಿದ ಬೆಡಗಿ

ವಿಶ್ವದ ದೊಡ್ಡಣ್ಣ ಎಂದು ಕರೆಯುವ ಅಮೆರಿಕಾ ಸೇನೆಯಲ್ಲಿ ಕೆಲಸ ಸಿಕ್ಕರೆ ಬಿಡುವ ಪ್ರಶ್ನೆಯೇ ಇಲ್ಲ ಎನ್ನುವವರಿದ್ದಾರೆ. ಆದ್ರೆ ಭಡ್ತಿ ಪಡೆದು, ಕೈ ತುಂಬ ಸಂಬಳ ಸಿಕ್ಕರೂ ಅದನ್ನು ಬಿಟ್ಟು ರಂಗುರಂಗಿನ ದುನಿಯಾಕ್ಕೆ ಬಂದ ಹುಡುಗಿಯೊಬ್ಬಳ ಸ್ಟೋರಿಯನ್ನು ನೀವು ಓದ್ಲೇಬೇಕು. 
 

Female army officer took off her uniform to become a porn star
Author
Bangalore, First Published Jan 30, 2022, 12:56 PM IST

ಅದು ಯಾವುದೇ ಕೆಲಸ(Work)ವಾಗಿರಲಿ, ನಾವು ಮಾಡುವ ಕೆಲಸದಲ್ಲಿ ತೃಪ್ತಿಯಿರಬೇಕು. ಸೇನೆ(Army)ಯಿಂದ ಹಿಡಿದು ಚಪ್ಪಲಿ ಹೊಲಿಯುವವರೆಗೆ ಮೇಲು,ಕೀಳೆನ್ನದೆ ನಾವು ಮಾಡುವ ಕೆಲಸದಲ್ಲಿ ಖುಷಿ (Enjoy) ಇದ್ದರೆ ಮಾತ್ರ ಕೆಲಸಕ್ಕೆ ನೂರಕ್ಕೆ ನೂರರಷ್ಟು ಗಮನ ನೀಡಲು ಸಾಧ್ಯ. ಆಗ್ಲೇ ಯಶಸ್ಸು ಸಿಗಲು ಸಾಧ್ಯ. ಯಾರದೋ ಒತ್ತಾಯಕ್ಕೆ ನಾವು ಮಾಡುವ ಕೆಲಸ ನೆಮ್ಮದಿ ನೀಡುವುದಿಲ್ಲ. ಕೋಟಿಗಟ್ಟಲೆ ಸಂಬಳ ಬಂದ್ರೂ ಮನಸ್ಸಿನಲ್ಲಿ ಸಂತೋಷಿಲ್ಲವೆಂದ್ರೆ ಹಣ (Money)ಪ್ರಯೋಜನಕ್ಕೆ ಬರುವುದಿಲ್ಲ. ಇಂಜಿನಿಯರಿಂಗ್ (Engineering) ಮುಗಿಸಿದ ಅನೇಕರು ಕಲಾವಿದರಾಗಿದ್ದಾರೆ. ಮೆಕ್ಯಾನಿಕ್ (Mechanic) ಮುಗಿಸಿದ ಎಷ್ಟೋ ಜನ ಮಾರ್ಕೆಂಟಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ಹೀಗೆ ಆಸಕ್ತಿ ಬಹಳ ಮುಖ್ಯವಾಗುತ್ತದೆ. ಕೆಲವರು ಉದ್ಯೋಗದ ಹುದ್ದೆ ಹಾಗೂ ಸಂಬಳ ನೋಡಿ, ಮನಸ್ಸಿಲ್ಲದ ಮನಸ್ಸಿನಲ್ಲಿ ಕೆಲಸ ಮಾಡ್ತಾರೆ. ಅಮೆರಿಕಾದ ಸೇನೆಯಲ್ಲಿ ಕೆಲಸ ಸಿಕ್ಕರೆ ಅದು ಬಂಗಾರದ ಗಣಿ ಸಿಕ್ಕಂತೆ ಎಂದು ನಂಬುವವರಿದ್ದಾರೆ. 

ಯುಎಸ್(US) ಸೈನ್ಯ(Army)ವನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ. ಅಲ್ಲಿ ಕೆಲಸ ಮಾಡುವುದು ಹೆಮ್ಮೆಯ ಸಂಗತಿ. ಆದ್ರೆ ಈ ಸೇನೆಯಲ್ಲಿ ಕೆಲಸ ಮಾಡ್ತಿದ್ದ ಮಹಿಳೆಯೊಬ್ಬಳು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾಳೆ. ಆಕೆ ಯಾರು? ತೆಗೆದುಕೊಂಡ ತೀರ್ಮಾನ ಯಾವುದು? ಈಗ ಆಕೆಯ ಗಳಿಕೆ ಮೂಲ ಯಾವುದು ಎಂಬುದನ್ನು ನಾವಿಂದು ಹೇಳ್ತೆವೆ.

ಸೇನೆಯಿಂದ ಪೋರ್ನ್ ಸ್ಟಾರ್ (Porn Star) ಆದ ಮಹಿಳೆ : ಹೆಸರು ಕೇಯ್ಲಿ ಗನ್ನರ್ (Kayley Gunner).  ಅಮೆರಿಕಾ ಸೇನೆಯಲ್ಲಿ ಕೇಯ್ಲಿ ಕೆಲಸ ಮಾಡ್ತಿದ್ದಳು. ಕಳೆದ ಐದು ವರ್ಷಗಳಿಂದ ಸೇನೆಯಲ್ಲಿ ಕೆಲಸ ಮಾಡ್ತಿದ್ದ ಕೇಯ್ಲಿ ಜೀವನವನ್ನು ಆಸಕ್ತಿದಾಯಕವಾಗಿಸಲು,ಸೈನ್ಯದ ಕೆಲಸವನ್ನು ತೊರೆದು ಪೋರ್ನ್ ಚಿತ್ರೋದ್ಯಮಕ್ಕೆ ಕಾಲಿಟ್ಟಿದ್ದಾಳೆ. ವೃತ್ತಿ ಜೀವನದಲ್ಲಿ ದೊಡ್ಡ ಬದಲಾವಣೆ ಮಾಡಿದ ಕೇಯ್ಲಿ ಪ್ರಪಂಚದಾದ್ಯಂತ ಚರ್ಚೆಯಲ್ಲಿದ್ದಾಳೆ. ಕೇಯ್ಲಿ ಇಲ್ಲಿಯವರೆಗೆ ಎರಡು ವಯಸ್ಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಇದಲ್ಲದೆ, ಜನಪ್ರಿಯ ಪೋರ್ನ್ ಸೈಟ್‌ನಲ್ಲಿ ಕೇಯ್ಲಿ ತುಂಬಾ ಸಕ್ರಿಯವಾಗಿದ್ದಾಳೆ. ಯಾಕೆ ತನ್ನ ವೃತ್ತಿ (Career) ಬದಲಿಸಿದ್ದೇನೆ ಎಂಬುದನ್ನು ಕೇಯ್ಲಿ ಹೇಳಿದ್ದಾಳೆ.

ಐದು ವರ್ಷಗಳ ಸೇನೆಯಲ್ಲಿ ಕೆಲಸ ಮಾಡಿದ್ದ ಕೇಯ್ಲಿ, ಉನ್ನತ ಹುದ್ದೆಗೆ ಬಡ್ತಿ ಪಡೆದಿದ್ದಳು. ಆಕೆ ಬ್ರಾಡ್‌ಕಾಸ್ಟ್ ಕಮ್ಯುನಿಕೇಶನ್ (Broadcast Communication )ಅಧ್ಯಯನ ಕೂಡ ಮಾಡಿದ್ದಾಳೆ. ಸೇನೆಯಲ್ಲಿದ್ದಾಗ ಕೇಯ್ಲಿ ಅನೇಕ ಅತ್ಯುತ್ತಮ ಜನರನ್ನು ಭೇಟಿಯಾಗಿದ್ದಳಂತೆ. ಅಲ್ಲಿನ ಅನುಭವ ಅದ್ಭುತವಾಗಿತ್ತು ಎಂದಿದ್ದಾಳೆ.ಕೇಯ್ಲಿ ನೆಚ್ಚಿನ ಆಯುಧ M240 ಮೆಷಿನ್ ಗನ್ ಅಂತೆ.

Ayurveda Tips: ಗರ್ಭಪಾತ ತಡೆಯಲು ಆಯುರ್ವೇದ ಸರಳ ಸೂತ್ರಗಳು

ಆರಂಭದಲ್ಲಿಯೇ ಪೋರ್ನ್ ಕ್ಷೇತ್ರದ ಮೇಲಿತ್ತು ಆಸಕ್ತಿ : ಕೇಯ್ಲಿಗೆ ಕ್ಯಾಮರಾ ಎದುರಿಸಿ ಅನುಭವವಿತ್ತಂತೆ. ಹಾಗಾಗಿ ಆಕೆಗೆ ಇದು ಕಷ್ಟವಾಗಿಲ್ಲವಂತೆ. ಮೊದಲಿನಿಂದಲೂ ಪೋರ್ನ್ ಕ್ಷೇತ್ರದ ಮೇಲೆ ವಿಶೇಷ ಆಸಕ್ತಿಯಿತ್ತಂತೆ. ಪೋರ್ನ್ ಚಲನಚಿತ್ರೋದ್ಯಮಕ್ಕೆ ಹೋಗುವುದು ನನ್ನ ತಾರ್ಕಿಕ ಹೆಜ್ಜೆ ಎಂದು ಭಾವಿಸಿದೆ. ಈಗ ನಾನು ಇಲ್ಲಿಗೆ ಬಂದಿದ್ದೇನೆ. ನಾನು ಏನು ಮಾಡಬಲ್ಲೆ ಎಂಬುದನ್ನು ಜಗತ್ತಿಗೆ ತೋರಿಸಬಲ್ಲೆ ಎಂದಿದ್ದಾಳೆ. 

ಶೇವಿಂಗ್‌ ಆದ ಮೇಲೆ ಚರ್ಮ ಒಣಗುತ್ತಾ? ನಯವಾದ ತ್ವಚೆಗಾಗಿ ಇಲ್ಲಿವೆ BEAUTY TIPS

ರೆಡ್ಡಿಟ್‌(Reddit)ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್  ಕೂಡ ನಡೆಸಿದ್ದಾಳೆ. ಅಲ್ಲಿ ತನ್ನ ಅಭಿಮಾನಿಗಳೊಂದಿಗೆ ಮಾತನಾಡಿದ್ದಾಳೆ. ಮಿಲಿಟರಿ ಅನುಭವವನ್ನು ಹಂಚಿಕೊಂಡಿದ್ದಾಳೆ. 'ಬಾಲ್ಯದಿಂದಲೂ ನನಗೆ ಶಿಸ್ತು. ನಮ್ಮ ಕುಟುಂಬಕ್ಕೆ ಸೇನೆ ಸೇರಿದ ಇತಿಹಾಸವಿರುವುದರಿಂದ ನಾನೂ ಸೇನೆಯ ಭಾಗವಾಗಿದ್ದೇನೆ. ಕೇಯ್ಲಿ ಕುಟುಂಬ ಸೇನೆಯ ಹಿನ್ನೆಲೆ ಹೊಂದಿದೆ. ಕುಟುಂಬದ ಕೆಲವರು ಸೇನೆಯಲ್ಲಿ ಕೆಲಸ ಮಾಡಿದ್ದಾರೆ. ಮೊದಲಿನಿಂದಲೂ ಶಿಸ್ತು ಕಲಿತಿದ್ದ ಕೇಯ್ಲಿ ವಿಭಿನ್ನವಾಗಿ ಏನನ್ನಾದರೂ ಮಾಡಲು ಬಯಸಿದ್ದಳಂತೆ. ಈಗ ಆ ಆಸೆ ಈಡೇರಿಸಲು ಮುಂದಾಗಿದ್ದೇನೆ. ನನಗೆ ತುಂಬಾ ಸಂತೋಷವಾಗಿದ್ದಾಳೆ ಎನ್ನುತ್ತಾಳೆ ಕೇಯ್ಲಿ. ಎರಡು ಪೋರ್ನ್ ಚಿತ್ರಗಳಲ್ಲಿ ನಟಿಸಿರುವ ಕೇಯ್ಲಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರಂತೆ. ಅನೇಕ ಆಫರ್ ಬರ್ತಿದೆಯಂತೆ.  

Follow Us:
Download App:
  • android
  • ios