ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದವರಿಗೆ ಒದ್ದು ಬುದ್ಧಿ ಕಲಿಸಿದ ಗಟ್ಟಿಗಿತ್ತಿ: ವಿಡಿಯೋ ವೈರಲ್

ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕರಿಬ್ಬರಿಗೆ  ಯುವತಿಯೊಬ್ಬಳು ಸರಿಯಾಗಿ ಪಾಠ ಕಲಿಸಿದ್ದಾಳೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

waitress girl punched two misbehaved boys in restaurant watch vira video akb

ದೆಹಲಿ: ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕರಿಬ್ಬರಿಗೆ  ಯುವತಿಯೊಬ್ಬಳು ಸರಿಯಾಗಿ ಪಾಠ ಕಲಿಸಿದ್ದಾಳೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಇಂತಹ ಅಪಾಯಕಾರಿ ಸಂದರ್ಭಗಳಲ್ಲಿ ಪ್ರತಿರೋಧ ತೋರಲು ಹಿಂಜರಿಯುವ ಕೆಲವು ಹೆಣ್ಣು ಮಕ್ಕಳಿಗೆ ಈ ವಿಡಿಯೋ ಸ್ಪೂರ್ತಿಯಾಗಿದೆ. 

ಪ್ರಪಂಚದಾದ್ಯಂತ ಯುವತಿಯರು ಹಾಗೂ ಮಹಿಳೆಯರ ಸುರಕ್ಷತೆ ಅತ್ಯಂತ ಕಾಳಜಿ ವಿಚಾರವಾಗಿದೆ.  ಮಹಿಳೆಯರ  ವಿರುದ್ಧದ ಅಪರಾಧಗಳನ್ನು ತಡೆಯಲು ದೇಶಗಳು ಹಲವಾರು ಕಾನೂನುಗಳನ್ನು ಜಾರಿಗೆ ತಂದಿದ್ದರೂ, ಅಪರಾಧಗಳು ನಡೆಯುತ್ತಲೇ ಇವೆ. ಹೀಗಿರುವಾಗ ಹುಡುಗಿಯರಿಗೆ ಸ್ವಯಂ ರಕ್ಷಣೆಯ ತಂತ್ರಗಳನ್ನು ಕಲಿಸಬೇಕಿದೆ. ಅಪರಾಧದ ವಿರುದ್ಧ ಧ್ವನಿ ಎತ್ತುವುದು ಮತ್ತು ಅಪರಾಧಿಗಳ ವಿರುದ್ಧ ಹೋರಾಡುವುದಕ್ಕೆ ಅವರನ್ನು ಸಿದ್ಧಪಡಿಸಬೇಕಿದೆ.  ಇಂತಹ ಪರಿಸ್ಥಿತಿಯಲ್ಲಿ ಮಹಿಳಾ ಪರಿಚಾರಕಿಯೊಬ್ಬಳು ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ ಗ್ರಾಹಕರಿಗೆ ತಕ್ಕ ಪಾಠ ಕಲಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮೂಲಭೂತವಾದಿಗಳ ಎದೆ ನಡುಗಿಸಿದ ಇಟಲಿಯ 'ಉಮಾ ಭಾರತಿ' ಜಾರ್ಜಿಯಾ ಮೆಲೋನಿ!

ವಿಡಿಯೋದಲ್ಲಿ ಕಾಣಿಸುವಂತೆ ಮಹಿಳಾ ವೈಟ್ರೆಸ್ ಒಬ್ಬರು ಹೊಟೇಲ್‌ನಲ್ಲಿ ಇಬ್ಬರು ಪುರುಷ ಗ್ರಾಹಕರಿಗೆ ಆಹಾರವನ್ನು ಸರ್ವ್‌ ಮಾಡುತ್ತಿರುತ್ತಾರೆ. ಈ ವೇಳೆ ಅವರಲ್ಲಿ ಓರ್ವ ಒಮ್ಮೆಗೆ  ಮೇಲೆದ್ದು, ಆಕೆಯ ಕೈ ಹಿಡಿದು ಎಳದಾಡುತ್ತಾಳೆ. ಕೂಡಲೇ ಜಾಗೃತಳಾದ ಆಕೆ ಆತನ ಮುಖಕ್ಕೆ ಒಟ್ಟೊಟ್ಟಿಗೆ ಎರಡು ಪಂಚ್‌ ಕೊಟ್ಟು ಆತನನ್ನು ಕೆಳಗೆ ಬೀಳಿಸುತ್ತಾಳೆ. ಈ ವೇಳೆ ಇನ್ನೊಬ್ಬ ಮೇಲೆದಿದ್ದು, ಈಕೆಯ ಮೇಲೆ ಹಲ್ಲೆಗೆ ಮುಂದಾಗುತ್ತಾನೆ. ಆತನಿಗೂ ಆಕೆ ಸರಿಯಾಗಿ ಕಿಕ್ ಕೊಟ್ಟಿದ್ದು, ಒಬ್ಬ ಆಚೆ ಮತ್ತೊಬ್ಬ ಈಚೆ ಹೋಗಿ ಬೀಳುವಂತೆ ಮಾಡಿದ್ದಾಳೆ. ಸ್ವಲ್ಪವೂ ಹೆದರೆದ ಧೈರ್ಯವಾಗಿ ನಿಂತು ಆಕೆ ಹೋರಾಡಿದ ರೀತಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಇಬ್ಬರಿದ್ದರೂ ಇಬ್ಬರನ್ನು  ಸರಿಯಾಗಿಯೇ ಆಕೆ ಸದೆಬಡಿದಿದ್ದಾಳೆ. 

15 ಸೆಕೆಂಡ್‌ಗಳ ಈ ವಿಡಿಯೋವನ್ನು ಒಂದು ಮಿಲಿಯನ್‌ಗೂ ಅಧಿಕ ಜನ ವೀಕ್ಷಿಸಿದ್ದು, ಯುವತಿಯ ಸಾಹಸವನ್ನು ಕೊಂಡಾಡಿದ್ದಾರೆ.  ಟ್ವಿಟ್ಟರ್‌ನಲ್ಲಿ ಕ್ಯಾಪ್ಷನ್ ದಿಸ್ (@harikarotalar) ಎಂಬ ಪೇಜ್‌ನಿಂದ ಪೋಸ್ಟ್ ಮಾಡಲಾಗಿದೆ. ಆದರೆ ಕೆಲವರು ಈ ವಿಡಿಯೋವನ್ನು ರೆಕಾರ್ಡ್‌ಗೋಸ್ಕರ ಮಾಡಿದ್ದು ಎಂದು ಹೇಳಿದ್ದಾರೆ. ಆದರೆ ಆ ಬಗ್ಗೆ ಸತ್ಯಾಂಶ ಗೊತ್ತಿಲ್ಲ. ಅನೇಕರು ಯುವತಿಯನ್ನು ಹಾಡಿ ಹೊಗಳಿದ್ದು, ಅನೇಕರು ಆಕೆಯನ್ನು ಲೇಡಿ ಬ್ರೂಸ್ ಲೀ ಎಂದು ಕರೆದಿದ್ದಾರೆ. ಸಂಕಷ್ಟದ ಸಮಯದಲ್ಲಿ ಧೈರ್ಯವಾಗಿ ನಿಲ್ಲುವುದಕ್ಕೆ ಈ ವಿಡಿಯೋ ಅನೇಕ ಯುವತಿಯರಿಗೆ ಸ್ಪೂರ್ತಿಯಾಗಿದೆ. 

Davanagre: ಇವರೇ ನೋಡಿ ಗಟ್ಟಿಗಿತ್ತಿ ಮಹಿಳೆಯರು: ಶಾಸಕನ ಬಿಳಿ ಪಂಚೆ ಕೆಸರಾಗುವಂತೆ ಮಾಡಿದರು

Latest Videos
Follow Us:
Download App:
  • android
  • ios