ಈಕೆ ಯಶಸ್ಸಿಗೆ ಕಾರಣವಾಯ್ತು ತಾಳ್ಮೆ, 8 ವರ್ಷದಲ್ಲಾಗದ್ದು ನಾಲ್ಕು ವರ್ಷದಲ್ಲಾಯ್ತು!

ಯಾವುದೇ ಯಶಸ್ಸು ರಾತ್ರಿ ಬೆಳಗಾಗೋದ್ರಲ್ಲಿ ಬರಲ್ಲ. ಹೀಗೆ ಬಂದ ಹಣ, ಹೆಸರು ಶಾಶ್ವತವೂ ಅಲ್ಲ. ಸತತ ಪರಿಶ್ರಮ, ತಾಳ್ಮೆ ನಿಮ್ಮ ಭವಿಷ್ಯವನ್ನು ಬಲಪಡಿಸುತ್ತದೆ. ಇದಕ್ಕೆ ಈ ಮಹಿಳೆ ಉತ್ತಮ ನಿದರ್ಶನ. 
 

Vu Tv Founder Devita Saraf Net Worth And Success roo

ಆಕ್ಟಿಂಗ್ ಹಿನ್ನಲೆಯುಳ್ಳವರೆಲ್ಲ ಕಲಾವಿದರಾಗ್ತಾರೆ ಎನ್ನಲು ಹೇಗೆ ಸಾಧ್ಯವಿಲ್ಲವೋ ಬ್ಯುಸಿನೆಸ್ ಹಿನ್ನಲೆಯುಳ್ಳ ಕುಟುಂಬದ ಎಲ್ಲರಿಗೂ ಬ್ಯುಸಿನೆಸ್ ಮಾಡೋದು ತುಂಬಾ ಸುಲಭ ಎನ್ನಲು ಸಾಧ್ಯವಿಲ್ಲ. ಕುಟುಂಬದ ಈಗಾಗಲೇ ಬ್ಯುಸಿನೆಸ್ ಮಾಡ್ತಿದ್ದರೂ ಆ ಕ್ಷೇತ್ರದ ಬಗ್ಗೆ ಸಾಕಷ್ಟು ತಿಳುವಳಿಕೆ ಇದ್ರೂ ಆ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಲು ಬುದ್ಧಿವಂತಿಕೆ ಮತ್ತೆ ಪರಿಶ್ರಮ ಅತ್ಯಗತ್ಯ. ಯಾವುದೇ ಬ್ಯುಸಿನೆಸ್ ಶುರು ಮಾಡಿದ ವರ್ಷದಲ್ಲೇ ನಿಮಗೆ ಹೆಚ್ಚಿನ ಲಾಭ ಸಿಗೋದಿಲ್ಲ. ತಾಳ್ಮೆ, ಸತತ ಪ್ರಯತ್ನ ಬಹಳ ಮುಖ್ಯವಾಗುತ್ತದೆ. ಇದಕ್ಕೆ ಸಾವಿರ ಕೋಟಿ ಮೌಲ್ಯದ ಕಂಪನಿಯ ಮಾಲೀಕೆ ದೇವಿತಾ ಸರಾಫ್ ಉತ್ತಮ ನಿದರ್ಶನ. ದೇವಿತಾ ಸರಾಫ್ ರಕ್ತದಲ್ಲೇ ವ್ಯಾಪಾರದ ಕಲೆ ಬಂದಿದ್ದರೂ ಅವರು ಈ ಹಂತಕ್ಕೆ ಬರಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಕಂಪನಿ ವ್ಯವಹಾರವನ್ನು 1000 ಕೋಟಿ ರೂಪಾಯಿಗೆ ತಂದು ನಿಲ್ಲಿಸಲು ಸವಾಲುಗಳನ್ನು ಎದುರಿಸಿದ್ದಾರೆ.

ದೇವಿತಾ ಸರಾಫ್ (Devita Saraf) ಯುಪಿಯ ಮಾರ್ವಾಡಿ ಕುಟುಂಬದಲ್ಲಿ ಜನಿಸಿದವರು. ಅವರ ತಂದೆ ರಾಜ್‌ಕುಮಾರ್ ಸರಾಫ್. ಅವರು ಜೆನಿತ್ ಕಂಪ್ಯೂಟರ್ಸ್ (Computers) ವ್ಯಾಪಾರ ನಡೆಸುತ್ತಿದ್ದರು ತಮ್ಮ ೧೬ನೇ ವಯಸ್ಸಿನಲ್ಲಿಯೇ ದೇವಿತಾ ಸರಾಫ್ ವ್ಯಾಪಾರದ ಬಗ್ಗೆ ತಿಳಿಯುವ ಮನಸ್ಸು ಮಾಡಿದ್ದರು. ಹಾಗಾಗಿ ಅವರು ತಂದೆ ಜೊತೆ ಅವರ ಕಚೇರಿಗೆ ಹೋಗಿ ಸಾಕಷ್ಟು ಮಾಹಿತಿ ಕಲೆ ಹಾಕಿದ್ದರು. ಟೆಕ್ನಾಲಜಿ (Technology) ಕ್ಷೇತ್ರದಲ್ಲಿ ಹೊಸದನ್ನು ಮಾಡುವ ಬಯಕೆ ಅವರದ್ದಾಗಿತ್ತು. ನಂತರ ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳಲು   ಕ್ಯಾಲಿಫೋರ್ನಿಯಾಕ್ಕೆ ಹೋದ ಅವರು ಅಲ್ಲಿ ಓದು ಮುಗಿಸಿ ಭಾರತಕ್ಕೆ ಬಂದಾಗ ಜನರ ದೂರದರ್ಶನದ ದೃಷ್ಟಿಯನ್ನು ಬದಲಾಯಿಸುವ ತೀರ್ಮಾನಕ್ಕೆ ಬಂದ್ರು. ವಿದೇಶಿ ಕಂಪನಿಗಳು ಪ್ರೀಮಿಯಂ ಉತ್ಪನ್ನಗಳನ್ನು ತಯಾರಿಸುತ್ತವೆ, ಆದರೆ ಭಾರತೀಯ ಕಂಪನಿಗಳು ಅಗ್ಗದ ಉತ್ಪನ್ನಗಳ ಮೇಲೆ ಅವಲಂಬಿತವಾಗಿವೆ ಎಂಬುದನ್ನು ದೇವಿತಾ ಮೊದಲು ಗಮನಿಸಿದ್ದರು. ಅದರ ಮೇಲೆ ಕೆಲಸ ಮಾಡುವ ಗುರಿಯನ್ನು ಅವರು ಹೊಂದಿದ್ದರು.

ONLINE EARNING : ಒಂದು ಫೋಸ್ಟ್ ಗೆ ಲಕ್ಷಾಂತರ ಹಣ ಗಳಿಸುವ ಈ ಮಾಡೆಲ್ ಅಸಲಿಯತ್ ಏನು ಗೊತ್ತಾ?

ಸಣ್ಣ ವಯಸ್ಸಿನಲ್ಲೇ ಉದ್ಯಮಕ್ಕೆ ಧುಮುಕಿದ ದೇವಿತಾ ಸರಾಫ್ : ದೇವಿತಾ ಅವರು ಕೇವಲ 25 ನೇ ವಯಸ್ಸಿನಲ್ಲಿ ತಮ್ಮದೇ ಕಂಪನಿ ಶುರು ಮಾಡಿದ್ರು. ವಿಯು ಗ್ರೂಪ್‌ನ ಸಿಇಒ ಮತ್ತು ಅಧ್ಯಕ್ಷೆಯಾಗಿರುವ ದೇವಿತಾ ಸರಾಫ್, 2006 ರಲ್ಲಿ, ಅವರು Vu ಟೆಲಿವಿಷನ್ಸ್ ಎಂಬ ಕಂಪನಿಯನ್ನು ಸ್ಥಾಪಿಸಿದರು. ಇದು ಸ್ಮಾರ್ಟ್ ಟಿವಿ ತಯಾರಕ ಕಂಪನಿಯಾಗಿದೆ. ಟಿವಿ ಹಾಗೂ ಕಂಪ್ಯೂಟರ್ ಸಂಯೋಜಿಸುವ ಮೂಲಕ ಸಿದ್ಧವಾಗಿದೆ. ಇದರಲ್ಲಿ ಯೂಟ್ಯೂಬ್, ಒಟಿಟಿ ಪ್ಲಾಟ್‌ಫಾರ್ಮ್ ಸೇರಿದಂತೆ ಡಿ೨ಹೆಚ್ ಚಾನೆಲ್‌ಗಳನ್ನು ಗ್ರಾಹಕರು ಆನಂದಿಸಬಹುದು.

ಆರಂಭದಲ್ಲಿ ಸಿಕ್ಕಿದ್ದು ನಿರಾಸೆ : 2006 ರಲ್ಲಿ ಸ್ಮಾರ್ಟ್ ಟಿವಿಯನ್ನು (Smart TV) ಜನರ ಬಳಿ ಕೊಂಡೊಯ್ಯುವುದು ಸುಲಭವಾಗಿರಲಿಲ್ಲ. ಯಶಸ್ಸಿಗೆ ಅವರು ಅನೇಕ ವರ್ಷ ಕಾಯಬೇಕಾಯ್ತು. ಇಲ್ಲಿ ಅವರ ತಾಳ್ಮೆ ಕೆಲಸ ಮಾಡಿತು. ಮೊದಲ 8 ವರ್ಷಗಳಲ್ಲಿ ಕಂಪನಿಯು 0 ರಿಂದ 30 ಕೋಟಿಗಳವರೆಗೆ ಗಳಿಸಲು ಸಫಲವಾಯ್ತು. ಆದ್ರೆ ಮುಂದಿನ 4 ವರ್ಷಗಳಲ್ಲಿ ಕಂಪನಿ 1000 ಕೋಟಿ ರೂಪಾಯಿಗೆ ಬಂದು ನಿಂತಿತು. 2014 ರಲ್ಲಿ ದೇಶ ಹೊಸ ದೃಷ್ಟಿಕೋನಕ್ಕೆ ತೆರೆದುಕೊಂಡಿದ್ದರಿಂದ ಯಶಸ್ಸು ಸಾಧ್ಯವಾಯ್ತು ಎನ್ನುತ್ತಾರೆ ದೇವಿತಾ. ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಕಂಪನಿ ತಯಾರಿಸುವುದಲ್ಲದೆ ದೊಡ್ಡ ಕಂಪನಿಗಳೊಂದಿಗೆ ಸ್ಪರ್ಧಿಸುತ್ತಿದೆ.  

ಬರಡು ಭೂಮಿಯಲ್ಲಿ ಸ್ಟ್ರಾಬೆರಿ ಬೆಳೆದು ದಿನಕ್ಕೆ 30 ಸಾವಿರ ಗಳಿಸುತ್ತಿರೋ ಈಕೆಗೆ ಪ್ರಧಾನಿಯಿಂದಲೂ ಸಿಕ್ಕಿದೆ ಮೆಚ್ಚುಗೆ

ದೇವಿತಾ ಹೇಳೋದೇನು? : ಯುವ ಉದ್ಯಮಿಗಳಿಗೆ ದೇವಿತಾ ಕಿವಿಮಾತು ಹೇಳಿದ್ದಾರೆ. ಯುವಜನತೆ ಅಪಾಯಕ್ಕೆ ಹೆದರಬಾರದು ಎನ್ನುವ ದೇವಿತಾ, ನಿಮ್ಮ ಬುದ್ಧಿವಂತಿಕೆ, ಪ್ರಜ್ಞಾಪೂರ್ವಕ ಕೆಲಸ ನಿಮಗೆ ನೆರವಾಗುತ್ತದೆ ಎನ್ನುತ್ತಾರೆ. ಆರಂಭದಲ್ಲಿ ಸೋಲಾದ್ರೂ ಮುಂದೆ ಗೆಲುವಿದೆ ಎಂಬ ಛಲದಲ್ಲಿ ಕೆಲಸ ಮಾಡಿ ಎನ್ನುತ್ತಾರೆ. 

Latest Videos
Follow Us:
Download App:
  • android
  • ios