ಬರಡು ಭೂಮಿಯಲ್ಲಿ ಸ್ಟ್ರಾಬೆರಿ ಬೆಳೆದು ದಿನಕ್ಕೆ 30 ಸಾವಿರ ಗಳಿಸುತ್ತಿರೋ ಈಕೆಗೆ ಪ್ರಧಾನಿಯಿಂದಲೂ ಸಿಕ್ಕಿದೆ ಮೆಚ್ಚುಗೆ

ಬರಡು ಭೂಮಿಯಲ್ಲಿ ಏನ್ ಬೆಳೆಯೋಕ್ಕಾಗುತ್ತೆ ಎಂದು ಸುಮ್ಮನೆ ಕುರೋರೆ ಜಾಸ್ತಿ. ಆದರೆ, ಬರಡು ಭೂಮಿಯಿಂದಲೂ ಲಕ್ಷ ಲಕ್ಷ ಸಂಪಾದಿಸ್ಬಹುದು ಎಂಬುದನ್ನು ಉತ್ತರ ಪ್ರದೇಶದ ಯುವತಿಯೊಬ್ಬಳು ಸಾಧಿಸಿ ತೋರಿಸಿದ್ದಾಳೆ.
 

Meet Gurleen Chawla law graduate who grows strawberry on barren land now earns rs 30000 every day anu

Business Desk: ಇತ್ತೀಚಿನ ದಿನಗಳಲ್ಲಿ ಜನರು ದೊಡ್ಡ ಸಂಖ್ಯೆಯಲ್ಲಿ ಸ್ವಂತ ಉದ್ಯಮದ ಕಡೆಗೆ ಒಲವು ತೋರುತ್ತಿದ್ದಾರೆ. ಕೈಯಲ್ಲಿ ಉನ್ನತ ಪದವಿ, ಉತ್ತಮ ವೇತನದ ಉದ್ಯೋಗವಿದ್ದರೂ ಅದನ್ನು ತ್ಯಜಿಸಿ ಉದ್ಯಮ ಪ್ರಾರಂಭಿಸೋರ ಸಂಖ್ಯೆ ಹೆಚ್ಚಿದೆ. ಈ ರೀತಿ ಉದ್ಯಮ ಪ್ರಾರಂಭಿಸಿ ಯಶಸ್ಸು ಕಂಡವರ ಸಂಖ್ಯೆ ಕೂಡ ದೊಡ್ಡದಿದೆ. ಅದರಲ್ಲೂ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮದತ್ತ ಒಲವು ತೋರುತ್ತಿರೋದು ಮಾತ್ರವಲ್ಲ, ಯಶಸ್ಸು ಕೂಡ ಗಳಿಸಿದ್ದಾರೆ. ಅಂಥವರಲ್ಲಿ ಗುರ್ಲೀನ್ ಚಾವ್ಲಾ ಕೂಡ ಒಬ್ಬರು. ಉತ್ತರ ಪ್ರದೇಶದ ಝಾನ್ಸಿ ನಿವಾಸಿಯಾಗಿರುವ ಗುರ್ಲೀನ್ ಬರಡು ಭೂಮಿಯಲ್ಲಿ ಸ್ಟ್ರಾಬೆರಿ ಬೆಳೆದು ಲಕ್ಷಾಂತರ ರೂ. ಗಳಿಸುತ್ತಿದ್ದಾರೆ. ಸಾಮಾನ್ಯವಾಗಿ ಬರಡು ಭೂಮಿಯಲ್ಲಿ ಏನೂ ಬೆಳೆಯಲು ಸಾಧ್ಯವಿಲ್ಲ ಎಂದು ಅದನ್ನು ಖಾಲಿ ಬಿಡುತ್ತಾರೆ. ಆದರೆ, ಅಂಥ ಭೂಮಿಯಲ್ಲಿ ಸ್ಟ್ರಾಬೆರಿಯಂತಹ ವಿರಳ ಹಣ್ಣನ್ನು ಬೆಳೆಯಬಹುದು ಎಂಬುದನ್ನು ಗುರ್ಲೀನ್ ಚಾವ್ಲಾ ತೋರಿಸಿದ್ದಾರೆ. ಎರಡು ವರ್ಷಗಳ ಹಿಂದೆ ಇವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ನಲ್ಲಿ ಪ್ರಸ್ತಾಪಿಸಿದ್ದರು ಕೂಡ. ಝಾನ್ಸಿಯಲ್ಲೂ ಸ್ಟ್ರಾಬೆರಿ ಬೆಳೆಯಬಹುದು ಎಂಬುದನ್ನು ಗುರ್ಲೀನ್ ಸಾಬೀತುಪಡಿಸಿದ್ದಾರೆ ಎಂದು ಅವರ ಸಾಧನೆಯನ್ನು ಶ್ಲಾಘಿಸಿದ್ದರು.

ಪುಣೆಯ ಇಂಡಿಯನ್ ಲಾ ಸೊಸೈಟಿಯಿಂದ ಕಾನೂನು ಪದವಿ ಪಡೆದಿರುವ ಚಾವ್ಲಾ, ತನ್ನ ಶಿಕ್ಷಣ ಮುಗಿಯುತ್ತಿದ್ದಂತೆ ದೊಡ್ಡದಾಗಿ ಹೊಸದೇನಾದರೂ ಸಾಧಿಸುವ ತುಡಿತ ಹೊಂದಿದ್ದರು. ಇದೇ ಸಮಯದಲ್ಲಿ ಸ್ಟ್ರಾಬೆರಿ ಬೆಳೆಯುವ ಯೋಚನೆ ಚಾವ್ಲಾ ಅವರಿಗೆ ಬಂತು. ಹೀಗಾಗಿ ಝಾನ್ಸಿಯಲ್ಲಿ ಸ್ಟ್ರಾಬೆರಿ ಕೃಷಿಗೆ ಅವರು ಮುಂದಾದರು. ಪ್ರಾರಂಭದಲ್ಲಿ ಸಾಕಷ್ಟು ಸಂಕಷ್ಟಗಳು ಎದುರಾದರೂ ಇಂದು ಗುರ್ಲೀನ್ ಚಾವ್ಲಾ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.

Roti Didi: ರೊಟ್ಟಿ ತಯಾರಿಸಿ 18 ಜನರಿಗೆ ಕೆಲಸ ನೀಡಿದ ಟೀಚರಮ್ಮ!

ಮನೆಯಲ್ಲೇ ಸ್ಟ್ರಾಬೆರಿ ಬೆಳೆದ ಚಾವ್ಲಾ
ಕೊರೋನಾ ಸಮಯದಲ್ಲಿ ಲಾಕ್ ಡೌನ್ ಕಾರಣದಿಂದ ಗುರ್ಲೀನ್ ಝಾನ್ಸಿಯಲ್ಲಿರುವ ಮನೆಗೆ ಹಿಂತಿರುಗಿದ್ದರು. ಪ್ರಾರಂಭದಲ್ಲಿ ಅವರು ಮನೆಯಲ್ಲೇ ಸ್ಟ್ರಾಬೆರಿ ಬೆಳೆಯಲು ಪ್ರಾರಂಭಿಸಿದರು. ಇದರಿಂದ ಉತ್ತಮ ಫಸಲು ಬರಲು ಪ್ರಾರಂಭವಾಯಿತು. ಹೀಗಾಗಿ ಗುರ್ಲೀನ್ ತಮ್ಮ ತಂದೆಯ ಫಾರ್ಮ್ ಹೌಸ್ ನಲ್ಲಿ ಸ್ಟ್ರಾಬೆರಿ ಬೆಳೆಯುವ ನಿರ್ಧಾರ ಕೈಗೊಂಡರು. ಗುರ್ಲೀನ್ ಅವರ ತಂದೆಯ ಫಾರ್ಮ್ ಹೌಸ್ ನಲ್ಲಿ ಅಂದಾಜು 1.5 ಎಕರೆ ಭೂಮಿಯಿತ್ತು. ಇಲ್ಲಿ ಗುರ್ಲೀನ್ ಸ್ಟ್ರಾಬೆರಿ ಕೃಷಿ ಪ್ರಾರಂಭಿಸಿದರು.

ಆನ್ ಲೈನ್ ಮೂಲಕ ಸ್ಟ್ರಾಬೆರಿ ಕೃಷಿ ಮಾಹಿತಿ
ಗುರ್ಲೀನ್ ಸ್ಟ್ರಾಬೆರಿ ಕೃಷಿ ಬಗ್ಗೆ ಆನ್ ಲೈನ್ ಮೂಲಕ ಮಾಹಿತಿ ಪಡೆದರು. ಅಲ್ಲದೆ, ಈ ಕೃಷಿ ಮಾಡಲು ಸಾಕಷ್ಟು ಶ್ರಮ ಕೂಡ ವಹಿಸಿದರು. ಈ ಕಾರ್ಯದಲ್ಲಿ ಗುರ್ಲೀನ್ ಅವರಿಗೆ ಅವರ ತಂದೆ ಕೂಡ ಸಾಕಷ್ಟು ಬೆಂಬಲ ನೀಡಿದರು. ಇನ್ನು ಗುರ್ಲೀನ್ 'ಝಾನ್ಸಿ ಆರ್ಗನಿಕ್ಸ್' ಎಂಬ ವೆಬ್ ಸೈಟ್ ಕೂಡ ರೂಪಿಸಿದರು. ಜನರು ವೆಬ್ ಸೈಟ್ ನಿಂದ ನೇರವಾಗಿ ಸ್ಟ್ರಾಬೆರಿ ಖರೀದಿಸಬಹುದು. 

ಕೆಲಸಕ್ಕಿಂತ ಭಿಕ್ಷೆ ಬೇಡೋದು ಬೆಸ್ಟಾ? ಭಿಕ್ಷೆ ಬೇಡಿ ಕೋಟ್ಯಧಿಪತಿಯಾಗಿದ್ದಾಳೆ ಈಕೆ!

ವರದಿಗಳ ಪ್ರಕಾರ ಗುರ್ಲೀನ್ ಪ್ರತಿದಿನ ಅಂದಾಜು 70ಕೆಜಿ ಸ್ಟ್ರಾಬೆರಿ ಮಾರಾಟ ಮಾಡುತ್ತಾರೆ. ಇದರಿಂದ ದಿನಕ್ಕೆ ಸುಮಾರು 30,000ರೂ. ಆದಾಯ ಗಳಿಸುತ್ತಿದ್ದಾರೆ ಕೂಡ. ಗುರ್ಲೀನ್ ಅವರ ಈ ಪ್ರಯತ್ನದ ಫಲವಾಗಿ ಈ ಭಾಗದಲ್ಲಿ ಅನೇಕ ರೈತರು ಈಗ ಸ್ಟ್ರಾಬೆರಿ ಬೆಳೆಯುತ್ತಿದ್ದಾರೆ. 

ಈ ಭಾಗದ ಮಣ್ಣು ಕೀಟನಾಶಕಗಳಿಂದ ಮುಕ್ತವಾಗಿರೋದ್ರಿಂದ ಸ್ಟ್ರಾಬೆರಿ ಕೃಷಿಗೆ ಸೂಕ್ತವಾಗಿದೆ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಪ್ರಾರಂಭದಲ್ಲಿ ಝಾನ್ಸಿಯಲ್ಲಿ ಮನೆಯ ಮೇಲ್ಛಾವಣಿಯಲ್ಲಿ ಸ್ಟ್ರಾಬೆರಿ ಬೆಳೆಯಲಾಗುತ್ತಿತ್ತು. ಆ ಬಳಿಕ ಜಮೀನಿನಲ್ಲಿ ಇದನ್ನು ಬೆಳೆಯಲು ಪ್ರಾರಂಭಿಸಿದರು. ಪ್ರಸ್ತುತ ಈ ಭಾಗದ ರೈತರಿಗೆ ಸ್ಟ್ರಾಬೆರಿ ಹೆಚ್ಚುವರಿ ಆದಾಯದ ಮೂಲವಾಗಿದೆ. 

Latest Videos
Follow Us:
Download App:
  • android
  • ios