'ಯಾರೇನೇ ಅನ್ನಲಿ ನನ್ನ ಜೀವನ ನನ್ನ ಕೈಯಲ್ಲಿ'; ಕಸ ವಿಲೇವಾರಿ ಆಟೋ ಚಾಲಕಿ ವೀಣಾ ಮಾತು!

  ಯಾರೇನೇ ಅನ್ನಲಿ ನನ್ನ ಜೀವನ ನನ್ನ ಕೈಯಲ್ಲಿ ಎನ್ನುವ ದೃಢಚಿತ್ತದಿಂದ ತ್ಯಾಜ್ಯವಾಹನದ ಮಹಿಳಾ ಚಾಲಕಿಯಾಗಿ ಹರಿಹರಪುರ ಲಯನ್ಸ್‌ ಹಾಗೂ ಇತರೆ ಸಂಘ ಸಂಸ್ಥೆಗಳಿಂದ ಗೌರವ ಪಡೆದ ನಿಲುವಾಗಿಲು ಗ್ರಾಪಂನ ವೀಣಾ ಅವರ ಸಾಧನೆಯನ್ನು ತಾಲೂಕಿನ ಜನತೆ ಪ್ರಶಂಸಿದ್ದಾರೆ.

Veena Prasanna is a role model woman who leads a self-reliant life rav

ಹಮೀದ್‌ ಕೊಪ್ಪ

 ಕೊಪ್ಪ (ಆ.27) :  ಯಾರೇನೇ ಅನ್ನಲಿ ನನ್ನ ಜೀವನ ನನ್ನ ಕೈಯಲ್ಲಿ ಎನ್ನುವ ದೃಢಚಿತ್ತದಿಂದ ತ್ಯಾಜ್ಯವಾಹನದ ಮಹಿಳಾ ಚಾಲಕಿಯಾಗಿ ಹರಿಹರಪುರ ಲಯನ್ಸ್‌ ಹಾಗೂ ಇತರೆ ಸಂಘ ಸಂಸ್ಥೆಗಳಿಂದ ಗೌರವ ಪಡೆದ ನಿಲುವಾಗಿಲು ಗ್ರಾಪಂನ ವೀಣಾ ಅವರ ಸಾಧನೆಯನ್ನು ತಾಲೂಕಿನ ಜನತೆ ಪ್ರಶಂಸಿದ್ದಾರೆ.

ತಾಲೂಕಿನ ಕುಪ್ಪಳ್ಳಿಯ ವೀಣಾ ಪ್ರಸನ್ನ(Veena prasanna kuppalli) ಮೊದಲಿನಿಂದಲೂ ಸ್ವಾವಲಂಬಿಯಾಗಿ ದುಡಿಮೆ ಬದುಕ ಬೆಖು ಎನ್ನುವ ಹಂಬಲದವರು. ಶಿಕ್ಷಣ ಪೂರೈಸಿದ ನಂತರ ಕೆಲವು ಸಮಯ ಪೂರ್ಣ ಪ್ರಜ್ಞಾ ವಿದ್ಯಾಸಂಸ್ಥೆ ಹಾಸ್ಟೆಲ್‌ನಲ್ಲಿ ಕಾರ್ಯನಿರ್ವಹಿಸಿ ನಂತರ ಪತಿಯೊಂದಿಗೆ ಬೆಂಗಳೂರಿನಲ್ಲಿ ವಾಸಿಸುವಾಗ ಟೈಲರಿಂಗ್‌, ಸೀರೆ ಕುಚ್ಚು ಅಳವಡಿಕೆ, ಬ್ಯೂಟಿಶಿಯನ್‌ ಕೋರ್ಸ್‌ ಮಾಡಿದ್ದರು. ಬೆಂಗಳೂರು ಬಿಟ್ಟು ಜಯಪುರಕ್ಕೆ ಬಂದು ಅಂಗಡಿ ತೆರೆದು ಬ್ಯೂಟಿಶಿಯನ್‌, ಟೈಲರಿಂಗ್‌ ವೃತ್ತಿಯಲ್ಲಿ ಬದುಕು ಕಟ್ಟಿಕೊಂಡರು. ಅನಿವಾರ್ಯ ಕಾರಣಗಳಿಂದ ಮತ್ತೆ ಗಂಡನ ಹುಟ್ಟೂರು ಕುಪ್ಪಳ್ಳಿಯಲ್ಲಿ ಬಂದು ನೆಲೆಸಿದಾಗ ಗ್ರಾಮೀಣ ಭಾಗದಲ್ಲಿ ವ್ಯವಹಾರ ನಡೆಯದೆ ಆದಾಯದ ಸಮಸ್ಯೆ ಎದುರಾಗಿತ್ತು. ಧರ್ಮಸ್ಥಳ ಸಂಘದಲ್ಲಿ ಸಾಲಪಡೆದು ನಿಲುವಾಗಿಲಿನಲ್ಲಿ ಬ್ಯೂಟಿ ಪಾರ್ಲರ್‌ ಆರಂಭಿಸಿದರು. ಹಂತಹಂತವಾಗಿ ಪಾರ್ಲರ್‌ನ ಆದಾಯ ಚೆನ್ನಾಗಿಯೇ ಬರತೊಡಗಿದಾಗ ಕೊರೊನಾ ವೇಳೆ ಲಾಕ್‌ಡೌನ್‌ ಆರಂಭವಾದಾಗ ಪಾರ್ಲರ್‌ ಮುಚ್ಚುವುದು ಅನಿವಾರ್ಯವಾಯಿತು. ಮನೆಯಲ್ಲಿಯೇ ಟೈಲರಿಂಗ್‌, ಪಾರ್ಲರ್‌ ಕೆಲಸ ಆರಂಭಿಸಿದರು.

ನೌಕದಳಕ್ಕೆ ಆಯ್ಕೆಯಾದ ರಾಜ್ಯದ ಏಕೈಕ ಮಹಿಳೆ ಹರಿಹರದ ಗಟ್ಟಿಗಿತ್ತಿ ಯುವತಿ!

ಇದರಿಂದ ಸಂಸಾರ ನಿರ್ವಹಣೆಗೆ ಬೇಕಾದ ಆದಾಯ ಬರುತ್ತಿರಲಿಲ್ಲ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಜೀವಿನಿ ಒಕ್ಕೂಟದಲ್ಲಿ ಡ್ರೈವಿಂಗ್‌ ಕಲಿಯುವ ಅವಕಾಶವಿದ್ದು ಚಿಕ್ಕಮಗಳೂರಿನಲ್ಲಿ ನಡೆಯುತ್ತಿದ್ದ ಒಂದು ತಿಂಗಳ ಗೂಡ್‌್ಸ ವಾಹನ ತರಬೇತಿ ಪಡೆದು, ನಿಲುವಾಗಿಲು ಗ್ರಾಮ ಪಂಚಾಯಿತಿಯಲ್ಲಿ ಕಸ ವಿಲೇವಾರಿ ವಾಹನದ ಚಾಲಕಿಯಾಗಿ ಕೆಲಸಕ್ಕೆ ಸೇರಿಕೊಂಡರು. ಆರಂಭದಲ್ಲಿ ಕಸದ ಗಾಡಿ ಚಾಲಕಿ ಎಂದು ಅನೇಕರು ಕುಹಕವಾಡಿದರೂ ಅದನ್ನು ಲೆಕ್ಕಿಸದೆ ಮುಜುಗರ ಪಟ್ಟುಕೊಳ್ಳದೆ ಇದುವರೆಗೂ ಗೂಡ್‌್ಸ ವಾಹನದ ಚಾಲಕಿಯಾಗಿ ಮುಂದುವರೆದಿದ್ದಾರೆ. ಅವಕಾಶ ಕಲ್ಪಿಸಿದ ಸಂಜೀವಿನಿ ಒಕ್ಕೂಟ ಹಾಗೂ ತನ್ನ ವೃತ್ತಿಯನ್ನು ಗುರುತಿಸಿ ಗೌರವಿಸಿದ ಹರಿಹರಪುರ ಲಯನ್ಸ್‌ ಅಧ್ಯಕ್ಷೆ ಪಲ್ಲವಿಯವರಿಗೆ ಧನ್ಯವಾದ ಸಲ್ಲಿಸಿದ ಅವರು ವಾಹನ ಚಾಲನಾ ವೃತ್ತಿ ನನಗೆ ತೃಪ್ತಿ ತಂದುಕೊಟ್ಟಿದೆ. ಬಿಡುವಿನ ಸಮಯದಲ್ಲಿ ಮನೆಯಲ್ಲಿಯೇ ಬ್ಯೂಟಿಶಿಯನ್‌, ಟೈಲರಿಂಗ್‌ ಮಾಡುತ್ತಿದ್ದು ಕಲಿತ ವಿದ್ಯೆಗಳನ್ನು ಕೈಬಿಡದೆ ಬದುಕಿನ ನಿರ್ವಹಣೆ ಆಧಾರವೂ ಆಗಿದೆ ಎನ್ನುತ್ತಾರೆ ವೀಣಾ.

Big3 ಸ್ಮಶಾನದಲ್ಲೇ‌ ವಾಸ ಮಾಡುವ ಗಟ್ಟಿಗಿತ್ತಿ: ಹೆಣ ಹೂಳುವ ಕೆಲಸ ಮಾಡುವ ನೀಲಮ್ಮ

 

Latest Videos
Follow Us:
Download App:
  • android
  • ios