Kitchen Hacks: ದುಂಡಗಿನ ಉಬ್ಬಿದ ಚಪಾತಿ ಬೇಕೆಂದ್ರೆ ಹೀಗೆ ಮಾಡಿ

ಹಿಟ್ಟು ಕಲಿಸಿ, ತಟ್ಟಿ ಬೇಸಿದ್ರೆ ಚಪಾತಿ ಆಗೋದಿಲ್ಲ. ಚಪಾತಿ ಮೃದುವಾಗಿರ್ಬೇಕು ಹಾಗೆ ಉಬ್ಬಿರಬೇಕೆಂದ್ರೆ ಅದಕ್ಕೊಂದಿಷ್ಟು ಟ್ರಿಕ್ಸ್ ಬಳಸಬೇಕು. ಚಪಾತಿ ತಯಾರಿಸುವ ಮೊದಲು ಮಹಿಳೆಯರು ಹಿಟ್ಟು ನಾದುವ ಕಲೆ ತಿಳಿದಿರಬೇಕು. 
 

Use This Tricks For Making Round And Fluffy Chapatti

ಒಂದು ಭಾರತ (India) ದ ನಕಾಶೆಯಾದ್ರೆ ಮತ್ತೊಂದು ಶ್ರೀಲಂಕಾ (SriLanka) ಆಗಿರುತ್ತೆ. ಏನ್ ಬೇಕಾದ್ರೂ ಮಾಡ್ಬಹುದು ದುಂಡಗಿರುವ ಚಪಾತಿ (Chapatti) ಮಾಡೋದು ಕಷ್ಟ ಎನ್ನುವ ಮಹಿಳೆ (Woman) ಯರಿದ್ದಾರೆ. ಕೆಲ ಮಹಿಳೆಯರು ಅಡುಗೆಯಲ್ಲಿ ಎಕ್ಸ್ಪರ್ಟ್ ಇರ್ತಾರೆ. ಫಟಾ ಫಟ್ ಅಂತಾ ದುಂಡಗಿರುವ ಚಪಾತಿ ಮಾಡಿರ್ತಾರೆ. ಮತ್ತೆ ಕೆಲ ಮಹಿಳೆಯರಿಗೆ ಏನು ಮಾಡಿದ್ರೂ ದುಂಡನೇಯ ಚಪಾತಿ ಬರೋದಿಲ್ಲ. ಅಷ್ಟೇ ಅಲ್ಲ, ರೊಟ್ಟಿ ವಿಪರೀತ ಗಟ್ಟಿಯಾಗಿರುತ್ತದೆ ಇಲ್ಲವೆ ಮೆದುವಾಗಿರುತ್ತದೆ. ಎರಡನ್ನೂ ಸೇವನೆ ಮಾಡೋದು ಕಷ್ಟ. ಹಾಗೆಯೇ ಕೆಲ ಮಹಿಳೆಯರು ಮಾಡುವ ಚಪಾತಿ ಉಬ್ಬಿ ಬರೋದಿಲ್ಲ. ಅದರಲ್ಲಿ ಬರೀ ನಿಮ್ಮ ತಪ್ಪು ಮಾತ್ರ ಇರೋದಿಲ್ಲ, ನೀವು ಚಪಾತಿ ಹಿಟ್ಟನ್ನು ಹೇಗೆ ಕಲಸಿದ್ದೀರಿ ಎಂಬುದು ಕೂಡ ಮಹತ್ವ ಪಡೆಯುತ್ತದೆ. ಚಪಾತಿ ಹಿಟ್ಟನ್ನು ಸಿದ್ಧ ಮಾಡುವಾಗ ನೀವು ಕೆಲವು ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆಗ ಮಾತ್ರ ದುಂಡಗಿರುವ, ಉಬ್ಬಿದ ಚಪಾತಿಯನ್ನು ತಯಾರಿಸಲು ಸಾಧ್ಯ. ಇಂದು ನಾವು ಚಪಾತಿ ಹಿಟ್ಟನ್ನು ಹೇಗೆ ತಯಾರಿಸ್ಬೇಕು ಎಂಬ ಮಾಹಿತಿ ನೀಡ್ತೇವೆ. 

ಚಪಾತಿ ತಯಾರಿಸುವ ಮೊದಲು ಇದನ್ನು ತಿಳಿದ್ಕೊಳ್ಳಿ :  

ಸರಿಯಾದ ಪಾತ್ರೆ (Vessel) ಯಲ್ಲಿ ಹಿಟ್ಟನ್ನು ಬೆರೆಸಿ : ನೀವು ಹಿಟ್ಟನ್ನು ಚೆನ್ನಾಗಿ ಬೆರೆಸಲು ಬಯಸಿದರೆ, ಅದಕ್ಕೆ ಸರಿಯಾದ ಪಾತ್ರೆಯನ್ನು ಆರಿಸುವುದು ಬಹಳ ಮುಖ್ಯ. ಹಿಟ್ಟನ್ನು ಬೆರೆಸಲು ನೀವು ಚಿಕ್ಕ ಪಾತ್ರೆಯನ್ನು ಬಳಸಬೇಡಿ. ಸ್ವಲ್ಪ ಅಗಲವಾದ, ಹಿಟ್ಟು ಹೊರಗೆ ಬೀಳದ ಹಾಗೂ ನಾದಲು ಸುಲಭವಾಗುವ ಪಾತ್ರೆಯನ್ನು ಆಯ್ಕೆ ಮಾಡಿಕೊಳ್ಳಿ. ನೀವು ಸಣ್ಣ ಪಾತ್ರೆಯಲ್ಲಿ ಹೆಚ್ಚು ಹಿಟ್ಟು ಕಲಸಲು ಸಾಧ್ಯವಿಲ್ಲ. ಚಪಾತಿ ಸಂಖ್ಯೆ ಹೆಚ್ಚಿದ್ದರೆ ದೊಡ್ಡ  ಪಾತ್ರೆಯಲ್ಲಿಯೇ ನೀವು ಹಿಟ್ಟನ್ನು ನಾದಿ. 

ಮಗುವನ್ನು ಬರ್ತ್ ಡಿಫೆಕ್ಟ್ಸ್ ನಿಂದ ರಕ್ಷಿಸಲು ನೀವೇನು ಮಾಡ್ಬೇಕು?

ಉಗುರು ಬೆಚ್ಚಗಿನ ನೀರಿ (Water) ನ ಬಳಕೆ : ಬಹುತೇಕ ಮಹಿಳೆಯರು ಹಿಟ್ಟನ್ನು ಕಲಸುವುದಕ್ಕೆ ಸಾಮಾನ್ಯ ನೀರನ್ನು ಬಳಸುತ್ತಾರೆ. ಸಾಮಾನ್ಯ ನೀರಿನಲ್ಲಿ ಹಿಟ್ಟನ್ನು ಕಲಸಿದ್ರೆ ಹಿಟ್ಟಿಗೆ ಸರಿಯಾಗಿ ನೀರು ಸಿಗದೆ ಅದು ಗಟ್ಟಿಯಾಗಬಹುದು. ಇದ್ರಿಂದ ಚಪಾತಿ ತಟ್ಟುವುದು ಕಷ್ಟವಾಗುತ್ತದೆ. ಮತ್ತೊಂದೆಡೆ  ಹಿಟ್ಟಿನಲ್ಲಿ ಹೆಚ್ಚು ನೀರು ಇದ್ದರೆ  ಹಿಟ್ಟು ಮೆದುವಾಗುತ್ತದೆ. ಇದ್ರಿಂದ ಚಪಾತಿ ಸರಿಯಾಗಿ ಬರುವುದಿಲ್ಲ. ನಿಮಗೆ ಸರಿಯಾದ ಆಕಾರ ನೀಡಲೂ ಸಾಧ್ಯವಾಗುವುದಿಲ್ಲ.  ಹಿಟ್ಟನ್ನು ಬೆರೆಸಲು ಉಗುರು ಬೆಚ್ಚಗಿನ ನೀರನ್ನು ಮಾತ್ರ ಬಳಸಿ. ಈ ನೀರಿನಿಂದ ಹಿಟ್ಟು ನಾದಿದ್ರೆ ರೊಟ್ಟಿಗಳು ತುಂಬಾ ಮೃದುವಾಗಿ ಬರುತ್ತವೆ. ಹಾಗೆ  ಚಪಾತಿ ಉಬ್ಬಿ ಬರುತ್ತದೆ. 

ಹಿಟ್ಟು ಮೆದುವಾದ್ರೆ ಹೀಗೆ ಮಾಡಿ : ಕೆಲವೊಮ್ಮೆ ಹಿಟ್ಟನ್ನು ಬೆರೆಸುವಾಗ ಹೆಚ್ಚು ನೀರು ಸೇರಿಸಲಾಗುತ್ತದೆ. ಇದರಿಂದಾಗಿ ಹಿಟ್ಟು ಹೆಚ್ಚು ಒದ್ದೆಯಾಗುತ್ತದೆ ಮತ್ತು ಪಾತ್ರೆಗೆ ಅಂಟಿಕೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ  ಮಹಿಳೆಯರು ಅದಕ್ಕೆ ಸ್ವಲ್ಪ ಒಣ ಹಿಟ್ಟನ್ನು ಹಾಕುತ್ತಾರೆ. ಈ ಕಾರಣದಿಂದಾಗಿ ಹಿಟ್ಟು ಉಂಡೆಯಾಗುತ್ತದೆ. ಆಗ ಸುಂದರ ಚಪಾತಿ ತಯಾರಿಸಲು ಸಾಧ್ಯವಾಗುವುದಿಲ್ಲ.  ಹಿಟ್ಟಿನಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದರೆ, ನೀವು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಸೇರಿಸಿ ನಂತರ ಹಿಟ್ಟನ್ನು ಬೆರೆಸಿಕೊಳ್ಳಿ. ಹೀಗೆ ಮಾಡಿದ್ರೆ ನೀವು ತಯಾರಿಸಿದ ಚಪಾತಿ ಮೃದುವಾಗಿ ಉಬ್ಬುತ್ತದೆ.

Childhood Obesity: ಮಕ್ಕಳ ಬೊಜ್ಜಿಗೆ ಪೋಷಕರು ಕಾರಣವೇ? ಹೇಗೆ?

ಸಮಯದ ಬಗ್ಗೆಯೂ ವಿಶೇಷ ಕಾಳಜಿ ವಹಿಸಿ : ಆತುರದಲ್ಲಿ ಚಪಾತಿ ಹಿಟ್ಟನ್ನು ಕಲಸಬಾರದು. ಅದಕ್ಕೂ ಸಮಯ ನೀಡುವುದು ಬಹಳ ಮುಖ್ಯವಾಗುತ್ತದೆ. ನೀವು ಕನಿಷ್ಟ 10 ನಿಮಿಷಗಳ ಕಾಲ ಹಿಟ್ಟನ್ನು ಬೆರೆಸಬೇಕು. ಸರಿಯಾಗಿ ನಾದಬೇಕು. ಹಿಟ್ಟನ್ನು ಸರಿಯಾಗಿ ಮಿಕ್ಸ್ ಮಾಡಿ, ನಾದಿದ್ರೆ ಮಾತ್ರ ಚಪಾತಿಯನ್ನು ನಿಮಗೆ ಬೇಕಾದ ಆಕಾರದಲ್ಲಿ ತಯಾರಿಸಬಹುದು. ಹಾಗೆಯೇ ಚಪಾತಿ ಮೃದುವಾಗಿರುತ್ತದೆ. ಬಾಣಲೆ ಮೇಲೆ ಹಾಕಿದಾಗ ಉಬ್ಬುತ್ತದೆ.
 

Latest Videos
Follow Us:
Download App:
  • android
  • ios