Asianet Suvarna News Asianet Suvarna News

Childhood Obesity: ಮಕ್ಕಳ ಬೊಜ್ಜಿಗೆ ಪೋಷಕರು ಕಾರಣವೇ? ಹೇಗೆ?

ಕ್ಯಾಲರಿ ಕರಗಿಸುವ ವ್ಯಾಯಾಮ ಇಲ್ಲದಿರುವುದು, ಜಂಕ್ ಆಹಾರ, ಹೆಚ್ಚು ಕ್ಯಾಲರಿ ಭರಿತ ಆಹಾರ ಮುಂತಾದ ಹಲವಾರು ಕಾರಣಗಳಿಂದ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತಿದೆ. ಬೊಜ್ಜು ಇರುವ ಮಕ್ಕಳಲ್ಲಿ ಟೈಪ್ 2 ಮಧುಮೇಹ, ಹೃದಯ ತೊಂದರೆ, ಅಸ್ತಮಾ, ನಿದ್ರೆಗೆ ಸಂಬಂಧಿಸಿದ ಸಮಸ್ಯೆ, ಮೂಳೆ ಮತ್ತು ಮಂಡಿ ನೋವು ಮುಂತಾದವು ಕಂಡುಬರುತ್ತವೆ. ಬಾಲ್ಯದಲ್ಲೇ ಮಕ್ಕಳ ಆರೋಗ್ಯ ಹಾಳಾಗದಂತೆ ನೋಡಿಕೊಳ್ಳುವುದು ಪಾಲಕರ ಜವಾಬ್ದಾರಿ.
 

Preventing childhood obesity is responsibility of parents
Author
Bangalore, First Published Jun 6, 2022, 10:57 AM IST

ಮಕ್ಕಳಲ್ಲಿ ಬೊಜ್ಜಿನ (Obesity) ಸಮಸ್ಯೆ ಇತ್ತೀಚೆಗೆ ತೀವ್ರವಾಗಿ ಹೆಚ್ಚುತ್ತಿದೆ. ಆದರೆ, ಇದಕ್ಕಾಗಿ ಮಕ್ಕಳನ್ನು ಬ್ಲೇಮ್ (Blame) ಮಾಡುವಂತಿಲ್ಲ! ಏಕೆಂದರೆ, ಇದರಲ್ಲಿ ಪಾಲಕರ (Parents) ಪಾತ್ರ ಅಧಿಕವಾಗಿರುತ್ತದೆ. ಸ್ಕ್ರೀನ್ (Screen) ವೀಕ್ಷಣೆಯಿಂದ ಹಿಡಿದು ಆಹಾರದ ಪದ್ಧತಿಯವರೆಗೆ ಪಾಲಕರೇ ಅವರ ಮಾರ್ಗದರ್ಶಕರಾಗಿರುತ್ತಾರೆ. ಹೀಗಾಗಿ, ಚಿಕ್ಕ ಮಕ್ಕಳಿರುವಾಗಿನಿಂದ ಹಿಡಿದು ಕಾಲೇಜಿನವರೆಗೆ ಅವರ ಆಹಾರ-ವಿಹಾರದ ಬಗ್ಗೆ ಕಾಳಜಿ ವಹಿಸಬೇಕಾದ ಅಗತ್ಯ ಇಂದು ಹೆಚ್ಚಾಗಿದೆ. 

'ಮೊಬೈಲ್ (Mobile) ಹಿಡಿದರೆ ಬಿಡೋದಿಲ್ಲ’ ಎನ್ನುವ ದೂರುಗಳ ನಡುವೆಯೂ ಮಕ್ಕಳ ಬಗ್ಗೆ ಗಮನಹರಿಸಲೇಬೇಕಾದ ಅನಿವಾರ್ಯತೆ ಇಂದಿದೆ. ಅವರ ಜೀವನಪದ್ಧತಿ (Lifestyle) ರೂಪಿಸಲು ಬಾಲ್ಯದಿಂದಲೇ ಕಾಳಜಿ ವಹಿಸಬೇಕಾಗುತ್ತದೆ. ಡಿಜಿಟಲ್ ಸಲಕರಣೆಗಳು (Digital Gadgets) ಅವರ ಬಾಲ್ಯವನ್ನು ಕಸಿದಿವೆ. ಮಾನಸಿಕ ಆರೋಗ್ಯದಿಂದ ಹಿಡಿದು ದೈಹಿಕ ಬೊಜ್ಜಿನವರೆಗೆ ಹಲವಾರು ಸಮಸ್ಯೆಗಳು ಅವರನ್ನು ಕಾಡುತ್ತಿವೆ. ಮಕ್ಕಳಲ್ಲಿ ಬೊಜ್ಜು ಕಾಡದಿರಲು ಹಲವಾರು ರೀತಿಯಲ್ಲಿ ಎಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ. 

•    ಆಹಾರಶೈಲಿ (Food)
ಅಧ್ಯಯನಗಳ ಪ್ರಕಾರ, ಪಾಲಕರೇ ಮಕ್ಕಳಲ್ಲಿ ಆರಂಭಿಕವಾಗಿ ಜಂಕ್ ಫುಡ್ ಬಗೆಗೆ ಒಲವು ಮೂಡಿಸುತ್ತಾರೆ. ಚಿಕ್ಕ ಮಕ್ಕಳಿಗೆ ಹೊರಗಿನ ತಿಂಡಿಗಳ ಬಗ್ಗೆ ಅರಿವಿರುವುದಿಲ್ಲ. ಪಾಲಕರು ಹೋಟೆಲ್ ಗಳಿಗೆ ಅವರನ್ನು ಕರೆದೊಯ್ಯುತ್ತಾರೆ. ಜಂಕ್ ಫುಡ್, ಚಾಕೋಲೇಟ್ ಗಳ ರುಚಿ ಹತ್ತಿಸುತ್ತಾರೆ. ಐದು ವರ್ಷದವರೆಗೆ ತಾವೇ ಬೇರೆ ಬೇರೆ ಆಹಾರದ ರುಚಿ ತೋರಿಸಿ, ಕೊನೆಗೆ ಅವರು ಅದೇ ಬೇಕೆಂದು ಹಠ ಮಾಡುವಾಗ ಒಳ್ಳೆಯ ಆಹಾರದ ಬಗ್ಗೆ ಮಾತನಾಡುತ್ತಾರೆ. ಆರಂಭಿಕ ತಪ್ಪು ಪಾಲಕರದ್ದೇ ಆಗಿರುತ್ತದೆ. ಪಾಲಕರು ಮಕ್ಕಳಿಗೆ  ಪೌಷ್ಟಿಕಾಂಶಭರಿತ, ಮನೆಯ ಆಹಾರ ನೀಡುವ ಜತೆಗೆ ಅವರ ಎದುರು ತಾವೂ ಅದನ್ನೇ ಸೇವಿಸಬೇಕು. 

ತೂಕ ಇಳಿಸಿಕೊಳ್ಳಲು ಜ್ಯೋತಿಷ್ಯದ ಈ ಕ್ರಮ ಅನುಸರಿಸಿ

•    ಆಟವಾಡುವ ಸಮಯ (Play Time)
ತಮ್ಮ ಎಷ್ಟೇ ಕೆಲಸಕಾರ್ಯಗಳ ನಡುವೆಯೂ ಪಾಲಕರು ಮಕ್ಕಳೊಂದಿಗೆ ಆಟವಾಡಬೇಕು. ಚಿಕ್ಕವರಿರುವಾಗ ಮನೆಯಲ್ಲೇ ಆಟವಾಡಬೇಕು. ಮನೆಯಲ್ಲೇ ಯಾವುದಾದರೊಂದು ಮೂಲೆ ಅಥವಾ ಕೋಣೆಯನ್ನು ಆಟವಾಡಲು ಮೀಸಲು ಮಾಡಿಕೊಳ್ಳಬೇಕು. ಅಲ್ಲಿ ಎಲ್ಲ ರೀತಿಯ ಆಟವನ್ನೂ ಆಡಬಹುದು. ಸಂಜೆಯ ಹೊತ್ತು ಪಾರ್ಕ್ ಗೆ ಕರೆದೊಯ್ದು ಆಡಿಸಬಹುದು. ಅವರು ಕಷ್ಟಪಡುತ್ತಾರೆ, ಕೊಳೆ ಮಾಡಿಕೊಳ್ಳುತ್ತಾರೆ ಎಂದು ಯೋಚಿಸಿದರೆ ಅವರಿಗೆ ಆಟದ ರುಚಿ ಹತ್ತುವುದಿಲ್ಲ. ಆಟವಾಡುವುದರಿಂದ ಮೂಳೆ, ಮಾಂಸಖಂಡಗಳು, ರೋಗನಿರೋಧಕ ಶಕ್ತಿ, ವ್ಯಕ್ತಿತ್ವ ಬೆಳವಣಿಗೆಯಾಗುತ್ತದೆ. ದೈಹಿಕವಾಗಿ ಚಟುವಟಿಕೆ ಹೊಂದಿರುವ ಮಕ್ಕಳ ಶ್ವಾಸಕೋಶ, ಹೃದಯ, ಮೂಳೆ, ಮಾಂಸಖಂಡಗಳು ಬಲಿಷ್ಠವಾಗಿರುತ್ತವೆ. 

•    ಸಕ್ಕರೆಯುಕ್ತ ತಿಂಡಿಯಿಂದ ದೂರವಿಡಿ (Sugar is Poison)
ಸಕ್ಕರೆ ಆರೋಗ್ಯಕ್ಕೆ ಮಾರಕ. ಕೇವಲ ಮಧುಮೇಹಿಗಳಿಗೆ ಮಾತ್ರವಲ್ಲ, ಮಕ್ಕಳಿಗೂ ಅದು ಅಪಾಯಕಾರಿ. ಹೀಗಾಗಿ, ಸಿಹಿತಿಂಡಿ ಇಷ್ಟಪಡುವ ಮಕ್ಕಳಿಗೆ ಸಕ್ಕರೆಯುಕ್ತ ತಿಂಡಿ ನೀಡಬೇಡಿ. ಬದಲಿಗೆ, ಬೆಲ್ಲದಿಂದ ಮಾಡಿದ ತಿನಿಸುಗಳನ್ನು ನೀಡಿ. ಇದಕ್ಕಾಗಿ, ಸ್ವತಃ ಪಾಲಕರು ಸ್ವಲ್ಪ ಶ್ರಮವಹಿಸಬೇಕಾಗುತ್ತದೆ. ಬೆಳಗ್ಗಿನ ತಿಂಡಿಗೆ ಸ್ವಲ್ಪ ಬೆಲ್ಲ ಮತ್ತು ತುಪ್ಪ ನೀಡುವುದನ್ನು ಅಭ್ಯಾಸ ಮಾಡಿ. ಇದರಿಂದ ಅವರ ಬೆಳವಣಿಗೆ ಉತ್ತಮವಾಗುತ್ತದೆ. ಯಾವುದೇ ಕಾರಣಕ್ಕೂ ಚಾಕೋಲೇಟ್ ನೀಡಬೇಡಿ. ಯಾರಾದರೂ ಮನೆಗೆ ತರುವುದನ್ನೂ ನಿಷೇಧಿಸಿಬಿಡಿ. ಬೇರೆ ಬೇರೆ ಫ್ಲೇವರ್ ಪಾನೀಯ, ಹಾಲು ಸೇವಿಸುವುದನ್ನು ಅಭ್ಯಾಸ ಮಾಡಿಸಬೇಡಿ. ನೀರು, ಸಾಮಾನ್ಯ ಹಾಲು ಕುಡಿಯುವುದನ್ನು ಕಲಿಸಿ.

•    ಡಿಜಿಟಲ್ ಸ್ಕ್ರೀನ್ ಟೈಮ್ (Screen Time) ಕಡಿಮೆ ಮಾಡಿ 
ಮೊಬೈಲ್ ನೋಡುತ್ತ ಆಹಾರ ನೀಡುವ ಪಾಲಕರೂ ಇದ್ದಾರೆ. ಇದರಂತಹ ಅಪಾಯಕಾರಿ ಬೇರೊಂದಿಲ್ಲ. ಮೊದಮೊದಲು ಮಕ್ಕಳು ಆಹಾರ ಸೇವಿಸದೆ ಹಠ ಮಾಡುವಾಗ ಮೊಬೈಲ್ ನೀಡಿದರೆ ತಿನ್ನುತ್ತಾರೆ ಎಂದು ನೀಡಿದರೆ ಕೊನೆಗೆ ಅದೇ ಅಭ್ಯಾಸವಾಗುತ್ತದೆ. ಹಾಗೆಯೇ, ಅವರ ಸ್ಕ್ರೀನ್ ಸಮಯಕ್ಕೆ ನಿಗದಿತ ಸಮಯ ಮೀಸಲಿಡಿ.

ಹಠ ಬಿಡೋಲ್ಲವೆಂದರೆ ಗಂಡಸರಿಗೂ ಕಾಡುತ್ತೆ ಬೊಜ್ಟು

•    ಚೆನ್ನಾಗಿ ನಿದ್ರೆ ಮಾಡಲು ಬಿಡಿ (Sound Sleep)
ಮಕ್ಕಳು ಚೆನ್ನಾಗಿ ನಿದ್ರಿಸುವಂತಾಗಲು ಪಾಲಕರ ಜೀವನಶೈಲಿ ಸರಿಯಾಗಬೇಕು. ರಾತ್ರಿ ಎಂಟು ಗಂಟೆಯೊಳಗೆ ಊಟ ಹಾಕಿ ಅವರನ್ನು ಬೇಗ ಮಲಗಿಸಲು ಯತ್ನಿಸಿ. ಟೈಪ್ 2 ಮಧುಮೇಹ (Type 2 Diabetes) ನಿಯಂತ್ರಿಸಲು ಉತ್ತಮ ನಿದ್ರೆ ಅಗತ್ಯ. ಏಕಾಗ್ರತೆ ಹೆಚ್ಚಲು, ವರ್ತನೆ ಉತ್ತಮವಾಗಲು ಕೂಡ ನಿದ್ರೆ ಅಗತ್ಯ. ಮಧ್ಯರಾತ್ರಿಯವರೆಗೆ ಮನೆಯ ಲೈಟ್ ಉರಿಸುತ್ತ, ತಡರಾತ್ರಿ ಊಟ ಮಾಡುತ್ತ, ಮೊಬೈಲ್ ಹಿಡಿದುಕೊಳ್ಳುವ ಪಾಲಕರು ಈ ಕುರಿತು ಎಚ್ಚರಿಕೆ ವಹಿಸಬೇಕು. 

Preventing childhood obesity is responsibility of parents

 

Follow Us:
Download App:
  • android
  • ios