Asianet Suvarna News Asianet Suvarna News

ನಿತೀಶ್ ಕುಮಾರ್ ಸೆಕ್ಸ್‌ ಹೇಳಿಕೆಗೆ ಅಮೆರಿಕ ಗಾಯಕಿ ಮೇರಿ ಮಿಲ್ಬೆನ್ ವಾಗ್ದಾಳಿ: ಮಹಿಳೆ ಪರ ನಿಲುವಿಗೆ ಮೋದಿಗೆ ಶ್ಲಾಘನೆ

ಆಫ್ರಿಕಾ - ಅಮೆರಿಕ ಗಾಯಕಿ ಮೇರಿ ಮಿಲ್ಬೆನ್ ಬಿಹಾರ ಸಿಎಂ ನಿತೀಶ್‌ ಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದ್ದು, ಮಹಿಳೆಯರ ಪರ ಮೋದಿ ನಿಲುವಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

us singer mary millben slams nitish kumar s remarks lauds pm modi ash
Author
First Published Nov 9, 2023, 2:01 PM IST

ನವದೆಹಲಿ (ನವೆಂಬರ್ 9, 2023): ಜನಸಂಖ್ಯಾ ನಿಯಂತ್ರಣದಲ್ಲಿ ಶಿಕ್ಷಣ ಮತ್ತು ಮಹಿಳೆಯರ ಪಾತ್ರವನ್ನು ವಿವರಿಸಲು ಬಿಹಾರ ವಿಧಾನಸಭೆಯಲ್ಲಿ ಅಲ್ಲಿನ ಸಿಎಂ ನಿತೀಶ್ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ಹಲವರು ಅಕ್ರೋಶ ವ್ಯಕ್ತಪಡಿಸಿದ್ದು, ಅಮೆರಿಕದಲ್ಲೂ ಗಾಯಕಿಯೊಬ್ಬರು ಬಿಹಾರ ಸಿಎಂ ಹೇಳಿಕೆಗೆ ವಾಗ್ದಾಳಿ ನಡೆಸಿದ್ದಾರೆ ಹಾಗೂ ಅವರು ಸಿಎಂ ಹುದ್ದೆಗೆ ರಾಜೀನಾಮೆ ನೀಡಬೇಕೆಂದೂ ಆಗ್ರಹಿಸಿದರು.

ಆಫ್ರಿಕಾ - ಅಮೆರಿಕ ಗಾಯಕಿ ಮೇರಿ ಮಿಲ್ಬೆನ್ ಬಿಹಾರ ಸಿಎಂ ನಿತೀಶ್‌ ಕುಮಾರ್‌ ವಿರುದ್ಧ ಗುರುವಾರ ತೀವ್ರ ವಾಗ್ದಾಳಿ ನಡೆಸಿದರು ಮತ್ತು "ಧೈರ್ಯಶಾಲಿ" ಮಹಿಳೆಯರು ಮುಂದಿನ ಹೆಜ್ಜೆ ಇಟ್ಟು ಮುಖ್ಯಮಂತ್ರಿ ಹುದ್ದೆಗೆ ಉಮೇದುವಾರಿಕೆ ಘೋಷಿಸಲು ಕರೆ ನೀಡಿದರು. ಅಲ್ಲದೆ, ಪ್ರಧಾನಿ ಮೋದಿ ಮಹಿಳೆಯರ ಬಗ್ಗೆ ವ್ಯಕ್ತಪಡಿಸಿರುವ ನಿಲುವನ್ನು ಸಹ ಶ್ಲಾಘಿಸಿದ್ದು, ಅವರು ಭಾರತಕ್ಕೆ ಮತ್ತು ಭಾರತೀಯ ನಾಗರಿಕರ ಪ್ರಗತಿಗೆ ಅತ್ಯುತ್ತಮ ನಾಯಕ ಎಂದೂ ಬಣ್ಣಿಸಿದರು.

ಇದನ್ನು ಓದಿ: ನಿತೀಶ್‌ ಕುಮಾರ್‌ ಸೆಕ್ಸ್‌ ಹೇಳಿಕೆಗೆ ಮೋದಿ ತರಾಟೆ: ಇನ್ನೆಷ್ಟು ಕೆಳಗಿಳಿಯುತ್ತೀರಿ ಎಂದು ಕಿಡಿ

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವಿಡಿಯೋ ಸಂದೇಶ ಪೋಸ್ಟ್ ಮಾಡಿದ ಗಾಯಕಿ ಮೇರಿ ಮಿಲ್ಬೆನ್‌, “ಬಿಹಾರದಲ್ಲಿ ಸರ್ಕಾರ ಮುನ್ನಡೆಸಲು ಮಹಿಳೆಗೆ ಅಧಿಕಾರ ನೀಡುವಂತೆ” ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಕೇಳಿಕೊಂಡರು. ಈ ಹಿಂದೆಯೂ ಗಾಯಕಿ ಮೋದಿಯನ್ನು ಬಹಿರಂಗವಾಗಿ ಬೆಂಬಲಿಸಿದ್ದರು.

ಅಲ್ಲದೆ, ನಿತೀಶ್ ಕುಮಾರ್ ರಾಜೀನಾಮೆಗೆ ಕರೆ ನೀಡಿದ ಮಿಲ್ಬೆನ್, ಇಂದು ಭಾರತವು ನಿರ್ಣಾಯಕ ಕ್ಷಣ ಎದುರಿಸುತ್ತಿದೆ. ಬಿಹಾರದಲ್ಲಿ ಮಹಿಳೆಯರ ಮೌಲ್ಯಕ್ಕೆ ಸವಾಲಾಗುತ್ತಿದೆ. ಮತ್ತು ಈ ಸವಾಲಿಗೆ ಒಂದೇ ಒಂದು ಉತ್ತರವಿದೆ ಎಂದು ನಾನು ನಂಬುತ್ತೇನೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಜೀ ಅವರ ಕಾಮೆಂಟ್‌ಗಳ ನಂತರ, ಬಿಹಾರದ ಮುಖ್ಯಮಂತ್ರಿಯಾಗಿ ಸ್ಪರ್ಧಿಸಲು ಧೈರ್ಯಶಾಲಿ ಮಹಿಳೆ ಹೆಜ್ಜೆ ಹಾಕಬೇಕು ಮತ್ತು ತನ್ನ ಉಮೇದುವಾರಿಕೆಯನ್ನು ಘೋಷಿಸಬೇಕು ಎಂದು ನಾನು ನಂಬುತ್ತೇನೆ. ನಾನು ಭಾರತದ ಪ್ರಜೆಯಾಗಿದ್ದರೆ, ಬಿಹಾರಕ್ಕೆ ತೆರಳಿ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿಸುತ್ತಿದ್ದೆ ಎಂದು ವಿಡಿಯೋ ಸಂದೇಶದಲ್ಲಿ ಹೇಳಿಕೊಂಡಿದ್ದಾರೆ.

ಹಾಗೂ, ಪವಿತ್ರ ಗ್ರಂಥಗಳಲ್ಲಿ, ರಾಣಿ ಎಸ್ತರ್ ತನ್ನ ಸೋದರಸಂಬಂಧಿ ಮೊರ್ದೆಕೈ ತನ್ನ ಯಹೂದಿ ಜನರನ್ನು ರಕ್ಷಿಸಲು ಸಹಾಯ ಮಾಡಲು ಧೈರ್ಯದಿಂದ ತನ್ನ ಪತಿ ರಾಜನನ್ನು ಸಂಪರ್ಕಿಸಲು ಸಲಹೆ ನೀಡಿದ್ದಳು. ಹಾಗೆ, ನಿತೀಶ್ ಕುಮಾರ್ ರಾಜೀನಾಮೆ ನೀಡುವ ಮತ್ತು ಬಿಹಾರದಲ್ಲಿ ಎಸ್ತರ್ ಹುಟ್ಟುವ ಸಮಯ ಬಂದಿದೆ ಎಂದು ನಾನು ನಂಬುತ್ತೇನೆ ಎಂದೂ ಮೇರಿ ಮಿಲ್ಬೆನ್‌ ಹೇಳಿದ್ದಾರೆ.

News Hour: ವಿಧಾನಸಭೆಯಲ್ಲೇ ಮಹಿಳೆಯರ ಬಗ್ಗೆ ಸಿಎಂ ಅಶ್ಲೀಲ ಮಾತು, ಪ್ರಧಾನಿಯಿಂದಲೂ ಟೀಕೆ!

ಭಾರತದ ಬಿಹಾರದ ಜನರು, ನೀವು ಮಹಿಳೆಯಲ್ಲಿ ಮತ ಚಲಾಯಿಸಲು, ಬದಲಾವಣೆಗೆ ಮತ ಚಲಾಯಿಸುವ ಸಮಯ ಬಂದಿದೆ. ನಮಸ್ತೆ ಎಂದು ಆಫ್ರಿಕನ್ - ಅಮೆರಿಕನ್ ಗಾಯಕಿ ಮನವಿ ಮಾಡಿಕೊಂಡಿದ್ದಾರೆ. ಮೋದಿಯವರ ಅಮೇರಿಕಾ ಪ್ರವಾಸದ ಸಮಯದಲ್ಲಿ ಮಿಲ್ಬೆನ್ ಪ್ರಧಾನ ಮಂತ್ರಿಯ ಪಾದಗಳನ್ನು ಸ್ಪರ್ಶಿಸಿ ಭಾರತದಲ್ಲಿ ಗಮನ ಸೆಳೆದಿದ್ದರು. ಮತ್ತು ರಾಷ್ಟ್ರಗೀತೆ "ಜನ ಗಣ ಮನ" ಹಾಡಿದ್ದರು. 

Follow Us:
Download App:
  • android
  • ios