Asianet Suvarna News Asianet Suvarna News

44 ಮಕ್ಕಳನ್ನು ಹೆತ್ತ ತಾಯಿಗೆ ವಿಚಿತ್ರ ಕಾಯಿಲೆ, ಮಕ್ಕಳನ್ನು ಹೆರದಿದ್ರೆ ಜೀವಕ್ಕೇ ಅಪಾಯ !

ಪ್ರಪಂಚದಲ್ಲಿ ಎಂಥೆಂಥಾ ವಿಚಿತ್ರ ಕಾಯಿಲೆ (Disease)ಗಳು ಇರ್ತವೆ ನೋಡಿ. ಆಕೆ 44 ಮಕ್ಕಳನ್ನು ಹೊಂದಿರುವ ಮಹಾತಾಯಿ (Mother). ಆದ್ರೆ ಈಗ ವೈದ್ಯರು (Doctor) ಹೇಳ್ತಿರೋ ವಿಚಾರ ಆಕೆಯನ್ನು ಬೆಚ್ಚಿಬೀಳಿಸಿದೆ. ಅಷ್ಟಕ್ಕೂ ವೈದ್ಯರು ಹೇಳಿರೋದೇನು ?

Ugandan Mother With 44 Children Has Ultra Rare Health Condition Vin
Author
Bengaluru, First Published Jul 1, 2022, 12:29 PM IST

ಅತಿ ಹೆಚ್ಚು ಮಕ್ಕಳನ್ನು ಹೆರುವ ವಿಶ್ವ ದಾಖಲೆ (World Record)ಯನ್ನು ಹೊಂದಿರುವ ತಾಯಿಯೊಬ್ಬರು ಅಪರೂಪದ ಕಾಯಿಲೆಯನ್ನು ಹೊಂದಿದ್ದಾರೆ. 44 ಮಕ್ಕಳನ್ನು ಹೊಂದಿರುವ ಉಗಾಂಡಾದ ತಾಯಿಯು ಅಪರೂಪದ ಆರೋಗ್ಯ ಸ್ಥಿತಿಯನ್ನು ಹೊಂದಿದ್ದಾರೆ. ಅತಿ ಹೆಚ್ಚು ಮಕ್ಕಳನ್ನು ಹೆರುವ ವಿಶ್ವ ದಾಖಲೆಯನ್ನು ಈ ಮಹಿಳೆ (Woman) ಹೊಂದಿದ್ದು, ಸದ್ಯ ಈ ಮಹಿಳೆ ಹೆರಿಗೆಯನ್ನು ನಿಲ್ಲಿಸಿದರೆ ಅವರು ತೀವ್ರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಮೇರಿಮ್ ನಬಟಾಂಜಿ ಅವರು 40 ವರ್ಷ ವಯಸ್ಸಿನೊಳಗೆ 44 ಮಕ್ಕಳಿಗೆ ಜನ್ಮ ನೀಡಿದ್ದರು. ಯಾವುದೇ ರೀತಿಯ ಕುಟುಂಬ ಯೋಜನೆ ವಿಧಾನಗಳು ಮಹಿಳೆಯ ಮೇಲೆ ಕೆಲಸ ಮಾಡುವುದಿಲ್ಲ ಎಂದು ವೈದ್ಯರು (Doctor) ತಿಳಿಸಿದ್ದರು. 

ಮೇರಿಮ್ ಕೇವಲ 12 ವರ್ಷದವಳಿದ್ದಾಗ ಆಕೆಯ ಪೋಷಕರು ಅವಳನ್ನು ಮಾರಾಟ ಮಾಡಿದ ನಂತರ ವಿವಾಹವಾದರು ಮತ್ತು ಶೀಘ್ರದಲ್ಲೇ ಅವಳು ಗರ್ಭಿಣಿಯಾದರು. ಕೇವಲ 13 ನೇ ವಯಸ್ಸಿನಲ್ಲಿ ತನ್ನ ಮೊದಲ ಮಗುವಿಗೆ ಜನ್ಮ ನೀಡಿದರು. ಮಹಿಳೆಯ ಆರು ಮಕ್ಕಳು ಸತ್ತ ನಂತರ ಆಕೆಯ ಪತಿ ಅವಳನ್ನು ತೊರೆದು ಕುಟುಂಬದ ಎಲ್ಲಾ ಹಣವನ್ನು ತೆಗೆದುಕೊಂಡು ಓಡಿಹೋದನು, ಮೇರಿಮ್ ತನ್ನ 44  ಮಕ್ಕಳಿಗೆ ಜನ್ಮ ನೀಡಿದ್ದು, ಎಲ್ಲರನ್ನೂ ಜೋಪಾನವಾಗಿ ನೋಡಿಕೊಳ್ಳುತ್ತಿದ್ದಾಳೆ. 

ಐಫೆಲ್‌ ಟವರ್‌ನ್ನು ಮದ್ವೆಯಾಗಿದ್ದ ಮಹಿಳೆಗೆ ಈಗ ಬೇಲಿಯಂದ್ರೆ ಸಿಕ್ಕಾಪಟ್ಟೆ ಪ್ರೀತಿಯಂತೆ !

44  ಮಕ್ಕಳನ್ನು ಹೆತ್ತ ತಾಯಿಗೆ ಅಪರೂಪದ ಕಾಯಿಲೆ 
ವಿಶ್ವಬ್ಯಾಂಕ್ ಪ್ರಕಾರ, ಪ್ರತಿ ಮಹಿಳೆಗೆ ಸರಾಸರಿ 5.6 ಮಕ್ಕಳಿರುವ ಉಗಾಂಡಾದಲ್ಲಿ ಫಲವತ್ತತೆಯ ದರಗಳು ತುಂಬಾ ಹೆಚ್ಚಿವೆ. ಇದು ವಿಶ್ವದ ಸರಾಸರಿ 2.4 ಮಕ್ಕಳಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ಅತಿ ಹೆಚ್ಚು ಮಕ್ಕಳನ್ನು ಹೆತ್ತಿರುವ ಮೇರಿಮ್‌, ತನ್ನ ತಾಯ್ನಾಡಿನಲ್ಲಿ 'ಮಾಮಾ ಉಗಾಂಡಾ' ಎಂದು ಕರೆಯಲ್ಪಟ್ಟಳು. ಆಕೆ ಇತರ ಮಹಿಳೆಯರಿಗಿಂತ ಭಿನ್ನ ಎಂದು ಹಲವರು ಅರಿತುಕೊಂಡರು. ಆಕೆಗೆ ಅಸಹಜವಾಗಿ ದೊಡ್ಡ ಅಂಡಾಶಯಗಳಿವೆ ಎಂದು ವೈದ್ಯರು ಹೇಳಿದರು. ಶಾಕಿಂಗ್ ವಿಚಾರವೆಂದರೆ ಇದು ಹೈಪರ್ಓವ್ಯುಲೇಷನ್ ಎಂಬ ಸ್ಥಿತಿಗೆ ಕಾರಣವಾಗಿದೆ.

ಮಕ್ಕಳನ್ನು ಹೆರದಿದ್ರೆ ಜೀವಕ್ಕೇ ಅಪಾಯ !
ಉಗಾಂಡಾದ ರಾಜಧಾನಿ ಕಂಪಾಲಾದ ಮುಲಾಗೊ ಆಸ್ಪತ್ರೆಯ ಸ್ತ್ರೀರೋಗತಜ್ಞ ಡಾ ಚಾರ್ಲ್ಸ್ ಕಿಗ್ಗುಂಡು ಡೈಲಿ ಮಾನಿಟರ್‌ಗೆ ಹೇಳಿದಂತೆ, ಮರಿಯೆಮ್‌ನ ತೀವ್ರ ಫಲವತ್ತತೆಗೆ ಕಾರಣ ಅನುವಂಶಿಕವಾಗಿದೆ. ಇಲ್ಲಿ ಜನನ ನಿಯಂತ್ರಣವು ಕೆಲಸ ಮಾಡುವುದಿಲ್ಲ. ಮಹಿಳೆ ಮಕ್ಕಳನ್ನು ಹೊಂದುವುದು ನಿಲ್ಲಿಸಿದರೆ ತೀವ್ರ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಮಹಿಳೆಯ ಪ್ರಕರಣವು ಹೈಪರ್-ಅಂಡೋತ್ಪತ್ತಿಗೆ ಆನುವಂಶಿಕ ಪ್ರವೃತ್ತಿಯಾಗಿದೆ. ಅಂಡಾಶಯ ಒಂದು ಚಕ್ರದಲ್ಲಿ ಅನೇಕ ಮೊಟ್ಟೆಗಳನ್ನು ಬಿಡುಗಡೆ ಮಾಡುತ್ತದೆ. ಇದು ಬಹು ಜನನಗಳನ್ನು ಹೊಂದುವ ಸಾಧ್ಯತೆಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಅವರು ಹೇಳಿದರು. ಹೈಪರ್‌ಓವ್ಯುಲೇಷನ್‌ಗೆ ಚಿಕಿತ್ಸೆಗಳು ಅಸ್ತಿತ್ವದಲ್ಲಿವೆ, ಆದರೆ ಉಗಾಂಡಾದ ಗ್ರಾಮೀಣ ಪ್ರದೇಶಗಳಲ್ಲಿ ಅವನ್ನು ಮಾಡುವುದು ಕಷ್ಟ ಎಂದು ತಿಳಿಸಲಾಗಿದೆ.

ಗಂಡ ಬಾಡಿಗೆಗಿದ್ದಾನೆ ಎಂದು ಜಾಹೀರಾತು ನೀಡಿದ ಹೆಂಡ್ತಿ!

ಮಹಿಳೆಯ 43 ನೇ ವಯಸ್ಸಿನಲ್ಲಿ ಮಕ್ಕಳನ್ನು ಹೊಂದುವುದನ್ನು ನಿಲ್ಲಿಸಲು ಹೇಳಲಾಯಿತು. ಆದರೆ ಅದು ಸಾಧ್ಯವಾಗಲ್ಲಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಯಾವುದೇ ಕುಟುಂಬ ಯೋಜನಾ ವಿಧಾನವು ಅವಳಿಗೆ ಕೆಲಸ ಮಾಡುವುದಿಲ್ಲ ಮತ್ತು ಜನ್ಮ ನೀಡುವುದು ತನ್ನ ದೇಹವನ್ನು ಸರಾಗಗೊಳಿಸುವ ಏಕೈಕ ಮಾರ್ಗವೆಂದರೆ ಮಕ್ಕಳನ್ನು ಉತ್ಪಾದಿಸುವುದು ಎಂದು ಹೇಳಲಾಯಿತು.

ಮೇಯೊ ಕ್ಲಿನಿಕ್ ಪ್ರಕಾರ, ಪ್ರಪಂಚದಾದ್ಯಂತ ಕಚೇರಿಗಳನ್ನು ಹೊಂದಿರುವ US ಖಾಸಗಿ ಆರೋಗ್ಯ ಕಂಪನಿ ಹೇಳುವಂತೆ. ತೀವ್ರವಾದ ಅಂಡಾಶಯದ ಹೈಪರ್‌ಸ್ಟೈಮ್ಯುಲೇಶನ್ ಸಿಂಡ್ರೋಮ್ ಅಸಾಮಾನ್ಯವಾಗಿದೆ, ಜೊತೆಗೆ ಇದು ಜೀವಕ್ಕೆ ಅಪಾಯಕಾರಿಯಾಗಿದೆ. ಮಾತ್ರವಲ್ಲ ಮಕ್ಕಳನ್ನು ಹೆರದಿದ್ದರೆ  ತೊಡಕುಗಳು ಹೊಟ್ಟೆ ಅಥವಾ ಎದೆಯಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ಮೂತ್ರಪಿಂಡ ವೈಫಲ್ಯ, ಅಂಡಾಶಯವನ್ನು ತಿರುಗಿಸುವುದು ಅಥವಾ ಉಸಿರಾಟದ ತೊಂದರೆಗಳನ್ನು ಕಾಣಿಸಿಕೊಳ್ಳಬಹುದು ಎಂದು ತಿಳಿದುಬಂದಿದೆ.

Follow Us:
Download App:
  • android
  • ios