ಐಫೆಲ್ ಟವರ್‌ನ್ನು ಮದ್ವೆಯಾಗಿದ್ದ ಮಹಿಳೆಗೆ ಈಗ ಬೇಲಿಯಂದ್ರೆ ಸಿಕ್ಕಾಪಟ್ಟೆ ಪ್ರೀತಿಯಂತೆ !
ಸಮಾಜ (Society)ದಲ್ಲಿ ಹಿಂದಿನಿಂದಲೂ ಗಂಡು-ಹೆಣ್ಣು (Men-women) ಮದುವೆಯಾಗೋದು ರೂಢಿಯಲ್ಲಿದೆ. ಆದ್ರೆ ಇತ್ತೀಚಿಗೆ ಜನ್ರು ರೋಬೋಟ್ (Robot), ಕನಸಿನಲ್ಲಿ ಬರುವ ಹುಡುಗಿ, ಗೊಂಬೆ, ವಿಮಾನದ ಜೊತೆ ಹೀಗೆ ಚಿತ್ರ-ವಿಚಿತ್ರವಾಗಿ ಮದ್ವೆಯಾಗ್ತಾರೆ. ಇಲ್ಲಾಗಿದ್ದು ಇದೇ. ಇಲ್ಲೊಬ್ಬಾಕೆ ಎಲ್ಲಾ ಬಿಟ್ಟು ಬೇಲಿಯನ್ನೇ ಪ್ರೀತಿಸುತ್ತಿದ್ದಾಳೆ. ಅರೆ ಇದೆಂಥಾ ವಿಚಿತ್ರ ಅನ್ಬೇಡಿ. ಫುಲ್ ಸ್ಟೋರಿ ಓದಿ.
ಕಾಲ ಬದಲಾಗುತ್ತಿದೆ. ಜೊತೆಗೆ ಸಂಬಂಧದ (Relationship) ಕುರಿತಾಗಿರುವ ಜನರ ಮನೋಭಾವ ಸಹ ವಿಚಿತ್ರವಾಗಿ ಪರಿವರ್ತನೆಗೊಳ್ಳುತ್ತಿದೆ. ಹಿಂದೆಲ್ಲಾ ಒಬ್ಬ ಗಂಡು(Men), ಒಬ್ಬ ಹೆಣ್ಣು (Woman) ಮದುವೆಯಾಗುತ್ತಿದ್ದರು. ಪುರುಷ ಹಾಗೂ ಮಹಿಳೆ ಪರಸ್ಪರ ಮದುವೆಯಾಗಿ ಲೈಂಗಿಕ ಕ್ರಿಯೆ (Sex)ಯಲ್ಲಿ ತೊಡಗಿಕೊಂಡು ಮಕ್ಕಳನ್ನು ಪಡೆದು ಕುಟುಂಬವನ್ನು ಬೆಳೆಸಬಹುದಾಗಿದೆ. ಇದು ಸಮಾಜದಿಂದಲೇ ಅಂಗೀಕೃತಗೊಂಡಿರುವ ಸಂಬಂಧ. ಆದರೆ ಈಗ ಕಾಲ ಬದಲಾಗಿದೆ. ಹೆಣ್ಣು ಗಂಡು ಮದುವೆಯಾಗುವುದು ಹಾಗಿರಲಿ, ಹೆಣ್ಣು ಹೆಣ್ಣನ್ನೇ ಮದುವೆಯಾಗುವುದು, ಗಂಡು ಗಂಡನ್ನೇ ಮದುವೆಯಾಗುವುದು ಅಚ್ಚರಿಯ ವಿಷಯವಾಗಿ ಉಳಿದಿಲ್ಲ. ಇದೆಲ್ಲವನ್ನೂ ಬಿಟ್ಟು ರೋಬೋಟ್, ಕಂಪ್ಯೂಟರೈಸ್ಡ್ ವರ್ಷನ್ ವ್ಯಕ್ತಿ, ಹೋಲೋಗ್ರಾಮ್ (ವ್ಯಕ್ತಿಯ ಕಾಲ್ಪನಿಕ ರೂಪ), ಬೊಂಬೆ, ವಿಮಾನವನ್ನೂ ಮದುವೆಯಾದವರೂ ಇದ್ದಾರೆ. ಹಾಗೆಯೇ ಅಮೇರಿಕನ್ ಮಹಿಳೆಯೊಬ್ಬರು ಬೇಲಿಯ (Fence) ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದಾರೆ.
ಬೇಲಿಯೆಂದರೆ ಮಹಿಳೆಗೆ ಪ್ರೀತಿ, ಲೈಂಗಿಕ ಆಕರ್ಷಣೆಯಂತೆ !
ಇತ್ತೀಚಿನ ವರ್ಷಗಳಲ್ಲಿ ನಿರ್ಜೀವ ವಸ್ತುಗಳತ್ತ ಜನರು ಪ್ರಣಯ ಅಥವಾ ಲೈಂಗಿಕವಾಗಿ ಸೆಳೆಯಲ್ಪಟ್ಟಿರುವ ಕುರಿತು ಹಲವಾರು ವರದಿಗಳಿವೆ. ಅಮೇರಿಕನ್ ಮಹಿಳೆಯೊಬ್ಬರು 2007ರಲ್ಲಿ ನಿರ್ಜೀವ ವಸ್ತುಗಳತ್ತ ಆಕರ್ಷಿತರಾಗುವ ತಮ್ಮ ಸ್ವಭಾವದ ಬಗ್ಗೆ ಬಹಿರಂಗವಾಗಿ ತಿಳಿಸಿದ್ದರು. ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆದ ಬದ್ಧತೆಯ ಸಮಾರಂಭದಲ್ಲಿ ಅವರು ಐಫೆಲ್ ಟವರ್ ಅನ್ನು 'ಮದುವೆ' ಮಾಡಿಕೊಂಡಿದ್ದರು. ಸದ್ಯ 50 ವರ್ಷ ವಯಸ್ಸಿನ ಎರಿಕಾ ಲ್ಯಾಬ್ರೀ, ಐಫೆಲ್ ಟವರ್‌ನೊಂದಿಗಿನ ಸಂಬಂಧದಿಂದ ಬೇಸರಗೊಂಡಿದ್ದಾರೆ ಮತ್ತು ಈಗ ಬೇಲಿಯತ್ತ ಆಕರ್ಷಿತರಾಗಿದ್ದಾರೆ, ಮಹಿಳೆ ತನ್ನನ್ನು ತಾನು ವಸ್ತುನಿಷ್ಠ ಲೈಂಗಿಕತೆ ಎಂದು ನಿರೂಪಿಸಿಕೊಳ್ಳುತ್ತಾರೆ.
ಹುಡುಗರು ಯಾರೂ ಇಷ್ಟವಾಗ್ತಿಲ್ವಂತೆ ! ವಿಮಾನಾನೇ ಬಾಯ್‌ಫ್ರೆಂಡ್, ಅದನ್ನೇ ಮದ್ವೆಯಾಗ್ತೀನಿ ಅಂತಾಳೆ !
ಇತ್ತೀಚೆಗೆ ಈಗ ವೈರಲ್ ಆಗಿರುವ ಟಿಕ್‌ಟಾಕ್ ವೀಡಿಯೊದಲ್ಲಿ ಮಹಿಳೆ ಅಡ್ಡಲಾದ ಕೆಂಪು ಬೇಲಿಯನ್ನುನೋಡಿದರು ಮತ್ತು ಅದರ ಸುಂದರತೆಗೆ ಮನಸೋತಿರುವುದಾಗಿ ಹೇಳಿಕೊಂಡಿದ್ದಾರೆ. ಬೇಲಿಗಳು ತುಂಬಾ ಅಪಾಯಕಾರಿ ವಸ್ತುಗಳಾಗಿವೆ. ಏಕೆಂದರೆ ಅವುಗಳು ಸುಂದರವಾಗಿವೆ, ಮತ್ತು ತುಂಬಾ ಪರಿಪೂರ್ಣವಾಗಿವೆ ಎಂದು ಲ್ಯಾಬ್ರೀ ಹೇಳುತ್ತಾರೆ. ನಾನು ಖಂಡಿತವಾಗಿಯೂ ಈ ಬೇಲಿಗೆ ದೈಹಿಕವಾಗಿ ಆಕರ್ಷಿತನಾಗಿದ್ದೇನೆ ಮತ್ತು ನಾನು ಈ ಬೇಲಿಯನ್ನು ಚೆನ್ನಾಗಿ ತಿಳಿದುಕೊಳ್ಳಲು ಬಯಸುತ್ತೇನೆ" ಎಂದು ಅವರು ಸೇರಿಸಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ನಿರ್ಜೀವ ವಸ್ತುಗಳಿಗೆ ಜನರು ಪ್ರಣಯ ಅಥವಾ ಲೈಂಗಿಕವಾಗಿ ಸೆಳೆಯಲ್ಪಟ್ಟಿರುವ ಕುರಿತು ಹಲವಾರು ವರದಿಗಳಿವೆ. ಜರ್ಮನಿಯ ಮಹಿಳೆ ಸಾರಾ ರೋಡೋ ಅವರು ಬೋಯಿಂಗ್ 737 ಜೊತೆಗಿನ ಪ್ರಣಯದ ಬಗ್ಗೆ ಮಾತನಾಡಿದ್ದಾರೆ, ಅದನ್ನು ಅವರು ಡಿಕ್ಕಿ ಎಂದು ಪ್ರೀತಿಯಿಂದ ಕರೆಯುತ್ತಾರೆ. ತೀರಾ ಇತ್ತೀಚೆಗೆ, ಮೈ ಸ್ಟ್ರೇಂಜ್ ಅಡಿಕ್ಷನ್ ಎಂಬ ಸಾಕ್ಷ್ಯಚಿತ್ರದ ಹಳೆಯ ಚಲನಚಿತ್ರವು ಆನ್‌ಲೈನ್‌ನಲ್ಲಿ ಮತ್ತೆ ಕಾಣಿಸಿಕೊಂಡ ನಂತರ, ತನ್ನ ಕಾರಿನೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ವ್ಯಕ್ತಿಯ ಕಥೆಯು ವೈರಲ್ ಆಗಿದೆ.
ಕಾಲ್ಪನಿಕ ಹುಡುಗಿಯನ್ನು ಮದುವೆಯಾದ ವ್ಯಕ್ತಿ..! ಅರೆ ಇದು ಹೇಗೆ ಸಾಧ್ಯ ?
ಗೊಂಬೆಯನ್ನು ಮದ್ವೆಯಾದ ಬ್ರೆಜಿಲ್ ಮಹಿಳೆ
ಇತ್ತೀಚಿಗೆ ಬ್ರೆಜಿಲ್‌ನಲ್ಲೊಬ್ಬ ಮಹಿಳೆ ಡಾಲ್ ಅನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಮಾತ್ರವಲ್ಲ, ತಾನು ಡಾಲ್‌ನ್ನು ಮದ್ವೆಯಾಗಿ ಮಗುವನ್ನೂ ಪಡೆದುಕೊಂಡಿರುವುದಾಗಿ ಹೇಳಿದ್ದಾಳೆ. ಮೆರಿವೊನ್ ರೋಚಾ ಮೊರೇಸ್ ಅವರು ಡಾಲ್ ಮಾರ್ಸೆಲೊ ಅವರನ್ನು ಭೇಟಿಯಾದಾಗ ಮೊದಲ ನೋಟದಲ್ಲೇ ಪ್ರೀತಿ ಉಂಟಾಗಿತ್ತಂತೆ. ಮೆರಿವೊನ್ ಒಂಟಿಯಾಗಿದ್ದು ಬೇಸರ ಪಟ್ಟುಕೊಳ್ಳುತ್ತಿದ್ದ ಕಾರಣ ಆಕೆಯ ತಾಯಿ ಅವರಿಗೆ ಈ ಡಾಲ್ ಗಿಫ್ಟ್ ಕೊಟ್ಟಿದ್ರಂತೆ. ಆದ್ರೆ ಕ್ರಮೇಣ ಮೆರಿವೊನ್‌ಗೆ ಡಾಲ್ ಮೇಲೆ ಪ್ರೀತಿ ಉಂಟಾಗಿ ಅದನ್ನೇ ಮದ್ವೆಯಾಗಲು ನಿರ್ಧರಿಸಿದ್ರಂತೆ. ಮೆರಿವೊನ್ ಮತ್ತು ಮಾರ್ಸೆಲೊ ಅವರು ಭೇಟಿಯಾದ ದಿನದಿಂದಲೂ ಪ್ರಣಯ ಸಂಬಂಧವನ್ನು ಹೊಂದಿದ್ದಾರಂತೆ.
250 ಅತಿಥಿಗಳು ಭಾಗವಹಿಸಿದ್ದ ಸುಂದರ ಸಮಾರಂಭದಲ್ಲಿ ದಂಪತಿಗಳು ವಿವಾಹವಾದರು. ಇದು ನನಗೆ ಅದ್ಭುತವಾದ ದಿನ, ಬಹಳ ಮುಖ್ಯ, ತುಂಬಾ ಭಾವನಾತ್ಮಕವಾಗಿದೆ. ಅವನು ನನ್ನ ಜೀವನದಲ್ಲಿ ನಾನು ಯಾವಾಗಲೂ ಬಯಸಿದ ವ್ಯಕ್ತಿ. ಅವನೊಂದಿಗೆ ವೈವಾಹಿಕ ಜೀವನ ಅದ್ಭುತವಾಗಿದೆ. ಅವನು ನನ್ನೊಂದಿಗೆ ಜಗಳವಾಡುವುದಿಲ್ಲ, ವಾದ ಮಾಡುವುದಿಲ್ಲ ಮತ್ತು ನನ್ನ ಎಲ್ಲಾ ಭಾವನೆಯನ್ನು ಅರ್ಥಮಾಡಿಕೊಳ್ಳುತ್ತಾನೆ ಎಂದು ಮೆರಿವೊನ್ ಹೇಳುತ್ತಾರೆ.