ಬ್ಲೇಡಿನಿಂದ ಕಟ್ ಆಗುತ್ತೆ ಯೋನಿ.. ಚಿತ್ರಹಿಂಸೆ ಅನುಭವಿಸ್ತಾಳೆ ಮಹಿಳೆ
ವಿಶ್ವದಾದ್ಯಂತ ಅನೇಕ ಪದ್ಧತಿಗಳು ಚಿತ್ರವಿಚಿತ್ರವಾಗಿದೆ. ಸಂಪ್ರದಾಯದ ಹೆಸರಿನಲ್ಲಿ ಕೆಲವೊಂದು ಪದ್ಧತಿಗಳು ಮಹಿಳೆಯ ಮೇಲೆ ಶೋಷಣೆ ನಡೆಸುತ್ತವೆ. ಉಗಾಂಡದಲ್ಲಿರುವ ಪದ್ಧತಿಯೊಂದು ಎಲ್ಲರನ್ನೂ ಬೆಚ್ಚಿ ಬೀಳಿಸುತ್ತದೆ. ಅಲ್ಲಿನ ಮಹಿಳೆಯರು ಆ ಪದ್ಧತಿಯಿಂದ ಜೀವನ ಪರ್ಯಂತ ಕಷ್ಟ ಅನುಭವಿಸುತ್ತಾರೆ.
ಸ್ತ್ರೀಯಾಗಿ ಹುಟ್ಟಿದ ಮೇಲೆ ಒಂದಿಷ್ಟು ಕಷ್ಟಗಳನ್ನು ಎದುರಿಸಲೇಬೇಕು ಎಂಬುದು ಅಲಿಖಿತ ನಿಯಮ. ಆದ್ರೆ ಆಫ್ರಿಕಾದಂತ ದೇಶಗಳಲ್ಲಿ ಮಹಿಳೆಯಾದವಳು ಚಿತ್ರಹಿಂಸೆ ಅನುಭವಿಸುತ್ತಾಳೆ. ಸಂಪ್ರದಾಯದ ಹೆಸರಿನಲ್ಲಿ ಇಲ್ಲಿನ ಮಹಿಳೆಯರ ಮೇಲೆ ನಿರಂತರ ಶೋಷಣೆ ನಡೆಯುತ್ತದೆ. ಉಗಾಂಡಾ, ಇಥಿಯೋಪಿಯಾ, ಸೊಮಾಲಿಯಾ ಮುಂತಾದ ದೇಶದ ಮಹಿಳೆಯರ ಜೀವನ ತುಂಬಾ ಕಷ್ಟದಿಂದ ಕೂಡಿರುತ್ತದೆ. ಇಲ್ಲಿ ಸ್ತ್ರೀಯರ ಜನನಾಂಗವನ್ನು ಊನಗೊಳಿಸಲಾಗುತ್ತದೆ. ನಾವಿಂದು ಉಗಾಂಡದಲ್ಲಿ ಸ್ತ್ರೀ ಜನನಾಂಗ ಊನಗೊಳಿಸುವ ಬಗ್ಗೆ ಒಂದಿಷ್ಟು ಭಯಾನಕ ವಿಷ್ಯವನ್ನು ನಿಮಗೆ ತಿಳಿಸ್ತೇವೆ.
ಉಗಾಂಡಾ (Uganda) ದಲ್ಲಿದೆ ಕಠಿಣ ಪದ್ಧತಿ : 2010ರಲ್ಲಿ ಉಗಾಂಡದಲ್ಲಿ ಸ್ತ್ರೀ ಜನನಾಂಗ ಊನಗೊಳಿಸುವುದನ್ನು ಕಾನೂನು (Law) ಬಾಹಿರಗೊಳಿಸಲಾಗಿದೆ. ಆದ್ರೂ ಇಲ್ಲಿ ಪದ್ಧತಿ ನಿಂತಿಲ್ಲ. ಈಗ್ಲೂ ಸ್ತ್ರೀಯರಿಗೆ ಈ ನೋವು (pain) ತಪ್ಪಿಲ್ಲ. ಬಾಲ್ಯದಲ್ಲಿ, ಹದಿಯರೆಯದಲ್ಲಿ ಮಾತ್ರವಲ್ಲ ವಯಸ್ಕ ಮಹಿಳೆಯರ ಜನನಾಂಗವನ್ನು ಕತ್ತರಿಸಲಾಗುತ್ತದೆ.
ಪಿರಿಯಡ್ಸ್ ಆರಂಭವಾದ ಮೇಲೆ ಹುಡುಗಿಯರ ಹೈಟ್ ಹೆಚ್ಚಾಗೋಲ್ವಾ?
ಉಗಾಂಡಾದ ಸಬಿನಿ (Sabini) ಬುಡಕಟ್ಟಿನಲ್ಲಿ ವಿವಾಹದ ಮೊದಲು ಸ್ತ್ರೀ ಸುನ್ನತಿಯನ್ನು ಅತ್ಯಗತ್ಯ ಆಚರಣೆ ಎಂದು ಪರಿಗಣಿಸಲಾಗುತ್ತದೆ. ವಿವಾಹಕ್ಕಿಂತ ಮೊದಲೇ ಎಲ್ಲರೂ ಈ ಆಚರಣೆಗೆ ಒಳಪಡಬೇಕು. ಯುನಿಸೆಫ್‌ನ ವಿಸ್ತೃತ ಅಧ್ಯಯನದ ಪ್ರಕಾರ, ಉಗಾಂಡಾದ ಎಲ್ಲ ಯುವತಿಯರಿಗೆ ಸುನ್ನತಿ ಮಾಡಲಾಗುತ್ತದೆ. ಆದ್ರೆ ವಿವಿಧ ಸಮುದಾಯಗಳಲ್ಲಿ ಸುನ್ನತಿಯ ವಯಸ್ಸು ವಿಭಿನ್ನವಾಗಿರುತ್ತದೆ. ಉಗಾಂಡಾದ ಪೊಕೊಟ್ ಸಮುದಾಯದಲ್ಲಿ ಸುನ್ನತಿ ವಯಸ್ಸು 14 ರಿಂದ 15 ವರ್ಷ. ಸಬಿನಿ ಬುಡಕಟ್ಟಿನಲ್ಲಿ 17-19 ವರ್ಷ ವಯಸ್ಸಿನ ನಡುವೆ ಸುನ್ನತಿ ನಡೆಯುತ್ತದೆ. ಕೆಲವು ಸಂದರ್ಭಗಳಲ್ಲಿ 25-26 ವರ್ಷ ವಯಸ್ಸಿನ ಮಹಿಳೆಯರು ಸುನ್ನತಿಯನ್ನು ಎದುರಿಸಬೇಕಾಗುತ್ತದೆ.
ನೋವಿನಿಂದ ಕಿರುಚಿದ್ರೆ ಆಕೆ ದುರ್ಬಲೆ : ಸಬಿನಿ ಜನಾಂಗದಲ್ಲಿ ಸುನ್ನತಿಯನ್ನು ಮಾಡುವ ವಿಧಾನ ಕೂಡ ಭಿನ್ನವಾಗಿದೆ. ಮಹಿಳೆಯರು ಸಾರ್ವಜನಿಕವಾಗಿ ಸುನ್ನತಿ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಎಲ್ಲರ ಎದುರೇ ಈ ಕೆಲಸ ನಡೆಯುತ್ತದೆ. ಈ ಸಂದರ್ಭದಲ್ಲಿ ಮಹಿಳೆಯಾದವಳು ನೋವನ್ನು ಸಹಿಸಿಕೊಳ್ಳಬೇಕು. ಒಂದ್ವೇಳೆ ನೋವನ್ನು ತಾಳಲಾರದೆ ಆಕೆ ಕೂಗಿದ್ರೆ ಆಕೆ ದುರ್ಬಲಳೆಂದು ಪರಿಗಣಿಸಲಾಗುತ್ತದೆ.
ಬರೀ ಪಾದದ ಫೋಟೋ ಹಾಕಿ ಈಕೆ ಗಳಿಸೋದೆಷ್ಟು ಗೊತ್ತಾ?
ಹೇಗೆ ನಡೆಯುತ್ತೆ ಸುನ್ನತಿ : ಮಹಿಳೆಯರ ಜನನಾಂಗ ಊನಗೊಳಿಸುವಿಕೆ ಪುರುಷರಿಗಿಂತ ಭಿನ್ನವಾಗಿರುತ್ತದೆ. ಮಹಿಳೆ ಸುನ್ನತಿ ಆರೋಗ್ಯಕರವೂ ಅಲ್ಲ ಮತ್ತು ಸುರಕ್ಷಿತವೂ ಅಲ್ಲ. ಉಗಾಂಡಾ ಮತ್ತು ಪೂರ್ವ ಆಫ್ರಿಕಾದಲ್ಲಿ ಅನುಸರಿಸುವ ಪದ್ಧತಿಯ ಪ್ರಕಾರ, ಚಂದ್ರನಾಡಿಯನ್ನು ಬ್ಲೇಡ್‌ನಿಂದ ಕತ್ತರಿಸಲಾಗುತ್ತದೆ. ಬಾಹ್ಯ ಜನನಾಂಗದ ಭಾಗವನ್ನು ಕತ್ತರಿಸಲು ತೀಕ್ಷ್ಣವಾದ ಬ್ಲೇಡ್ ಅಥವಾ ಕಬ್ಬಿಣದ ಚಾಕುವನ್ನು ಬಳಸಲಾಗುತ್ತದೆ. ಇದು ಅಸುರಕ್ಷಿತವಾಗಿ ನಡೆಯುತ್ತದೆ. 15 ವರ್ಷದಿಂದ 49 ವರ್ಷ ವಯಸ್ಸಿನ ಮಹಿಳೆಯರು ಇದಕ್ಕೆ ಒಳಗಾಗೋದು ಅನಿವಾರ್ಯ.
ಸುನ್ನತಿಯಿಂದ ಕಾಡುತ್ತೆ ಈ ಎಲ್ಲ ಸಮಸ್ಯೆ : ಸುನ್ನತಿಯಿಂದ ಮಹಿಳೆಯರು ಸ್ತ್ರೀರೋಗ ಸಮಸ್ಯೆಗೆ ಒಳಗಾಗ್ತಾರೆ. ಅಸುರಕ್ಷಿತ ರೀತಿಯಲ್ಲಿ ಯೋನಿಯನ್ನು ಕತ್ತರಿಸುವ ಕಾರಣ ಜನನಾಂಗದಲ್ಲಿ ಸೋಂಕು ಕಾಡುತ್ತದೆ. ಯೋನಿಯ ಭಾಗವನ್ನು ಎರಡು ಕಡಿತದಲ್ಲಿ ತೆಗೆದು ಹಾಕಲಾಗುತ್ತದೆ. ಸುನ್ನತಿಯಿಂದ ಜನನಾಂಗ ಊನವಾಗುತ್ತದೆ. ಇದ್ರಿಂದ ಗರ್ಭಾವಸ್ಥೆ, ಹೆರಿಗೆ ಸಮಯದಲ್ಲಿ ಸಮಸ್ಯೆ ಕಾಡುತ್ತದೆ. ರಕ್ತಸ್ರಾವ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ.
ಸುನ್ನತಿಯನ್ನು ಮಾಡೋದ್ರಿಂದ ಲೈಂಗಿಕ ಆನಂದವನ್ನು ನಿಗ್ರಹಿಸಬಹುದು ಎಂಬುದು ಇಲ್ಲಿನವರ ನಂಬಿಕೆಯಾಗಿದೆ. ಆದ್ರೆ ಇದ್ರಿಂದ ಅವರು ಸಾಕಷ್ಟು ನೋವನ್ನು ಅನುಭವಿಸುತ್ತಾರೆ. ಜೀವನ ಪರ್ಯಂತ ಸಮಸ್ಯೆ ಅವರನ್ನು ಕಾಡುತ್ತದೆ.
ಡಬ್ಲ್ಯೂಹೆಚ್ ಒ (WHO) ಮತ್ತು ಯುನಿಸ್ಕೋ (UNICEF) , ಸುನ್ನತಿ ಮಹಿಳೆಯರ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಪರಿಗಣಿಸಿದೆ. ಮಹಿಳೆಯರಿಗೆ ಸರಿಯಾಗಿ ಶಿಕ್ಷಣ ಸಿಕ್ಕಲ್ಲಿ ಅವರು ಅದ್ರ ವಿರುದ್ಧ ಹೋರಾಟ ನಡೆಸಬಹುದು ಎನ್ನುತ್ತಾರೆ ತಜ್ಞರು.