ಮೆಟ್ರೋದಲ್ಲಿ ಜಡೆಜಗಳ; ಚಪ್ಪಲಿ, ವಾಟರ್ ಬಾಟಲ್‌ನಲ್ಲಿ ಹೊಡೆದಾಡಿಕೊಂಡ ರೌಡಿ ಬೇಬೀಸ್!
ದೆಹಲಿ ಮೆಟ್ರೋ ಇತ್ತೀಚಿಗೆ ವಿಚಿತ್ರ ಕಾರಣಗಳಿಗಾಗಿಯೇ ಸುದ್ದಿಯಾಗುತ್ತಿದೆ. ಕೆಲದಿನಗಳ ಹಿಂದೆ ಹುಡುಗರು ಸ್ಕರ್ಟ್ ಧರಿಸಿ ಮೆಟ್ರೋ ಹತ್ತಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಅದಕ್ಕೂ ಮೊದಲು ಮೆಟ್ರೋದಲ್ಲಿ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿಕೊಳ್ಳೋ ದೃಶ್ಯ ಸೆರೆಯಾಗಿತ್ತು. ಸದ್ಯ ಯುವತಿಯರು ಮೆಟ್ರೋದ ಒಳಗಡೆ ಕಿತ್ತಾಡಿಕೊಂಡಿರೋ ವಿಡಿಯೋ ವೈರಲ್ ಆಗಿದೆ.
ನವದೆಹಲಿ: ದೆಹಲಿ ಮೆಟ್ರೋ ಇತ್ತೀಚಿಗೆ ಹಲವು ನೆಗೆಟಿವ್ ವಿಚಾರಗಳಿಂದಲೇ ಸುದ್ದಿಯಾಗುತ್ತಿದೆ. ಅರೆಬರೆ ಬಟ್ಟೆ ತೊಟ್ಟುಕೊಂಡು ಮೆಟ್ರೋ ಏರಿದ್ದ ರಿದಂ ಚನ್ನಾ ಎನ್ನುವ ಹುಡುಗಿಯ ವೇಷಕ್ಕೆ ಟ್ವಿಟರ್‌ನಲ್ಲಿ ಪರ-ವಿರೋಧದ ಕಾಮೆಂಟ್‌ಗಳು ಬಂದಿದ್ದವು. ಅದಕ್ಕೂ ಮುನ್ನ, ಇಬ್ಬರು ಪ್ರಯಾಣಿಕರ ನಡುವೆ ಯಾವುದೇ ಕಾರಣಕ್ಕೆ ನಡೆದ ಜಗಳ ವಿಪರೀತಕ್ಕೆ ಹೋಗಿದ್ದರಿಂದ ಮಹಿಳೆಯೊಬ್ಬಳು ಪೆಪ್ಪರ್ ಸ್ಪ್ರೇ ಹಾಕಿದ್ದ ಘಟನೆ ಕೂಡ ನಡೆದಿತ್ತು. ಸದ್ಯ ಇಬ್ಬರು ಯುವತಿಯರು ಮೆಟ್ರೋದೊಳಗಡೆ ಪರಸ್ಪರ ಹೊಡೆದಾಡಿಕೊಂಡು ನಿಂದಿಸುವ ಕ್ಲಿಪ್ ವೈರಲ್ ಆದ ನಂತರ ದೆಹಲಿ ಮೆಟ್ರೋ ಮತ್ತೆ ಸುದ್ದಿಯಲ್ಲಿದೆ.
ದೆಹಲಿ ಮೆಟ್ರೋ ಅಧಿಕಾರಿಗಳು (Metro officers) ಪದೇ ಪದೇ ಎಚ್ಚರಿಕೆ ನೀಡಿದ್ದರೂ, ಮೆಟ್ರೋದಲ್ಲಿ ಅನಗತ್ಯ ಘಟನೆಗಳ ಹೆಚ್ಚಳವಾಗುತ್ತಲೇ ಇದೆ. ಇದು ಮೆಟ್ರೋದಲ್ಲಿ ಸಂಚರಿಸುವ ಪ್ರಯಾಣಿಕರಿಗೆ (Passengers) ಆತಂಕದ ವಿಷಯವಾಗಿದೆ. ಈ ಬಾರಿ ಇಬ್ಬರು ಯುವತಿಯರು ಮೆಟ್ರೋದೊಳಗೆ ಕ್ಷುಲ್ಲಕ ಕಾರಣಕ್ಕೆ ಕಿತ್ತಾಡಿಕೊಂಡಿದ್ದು, ವಿಡಿಯೋ ವೀಡಿಯೊ ಸಾಮಾಜಿಕ ಮಾಧ್ಯಮ (Social media) ವೇದಿಕೆಗಳಲ್ಲಿ ವೈರಲ್ ಆಗಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಮೆಟ್ರೋದಲ್ಲಿ ಸ್ಕರ್ಟ್ ಧರಿಸಿ ಬಂದು ಎಲ್ಲರೂ ಕತ್ತು ಕೊಂಕಿಸಿ ನೋಡುವಂತೆ ಮಾಡಿದ ಹುಡುಗರು
ಬಾಟಲ್ ನೀರು ಮುಖಕ್ಕೆ ಎರಚಿ ಯುವತಿಯರ ಕಿತ್ತಾಟ
ಇಬ್ಬರು ಯುವತಿಯರು ಜೋರು ಜೋರಾಗಿ ಮಾತನಾಡಿಕೊಳ್ಳುವುದರೊಂದಿಗೆ ವಿಡಿಯೋ ಆರಂಭವಾಗುತ್ತದೆ. ಇಬ್ಬರೂ ಪರಸ್ಪರ ಕೆಟ್ಟ ಪದಗಳಿಂದ ಬೈಯ್ದುಕೊಳ್ಳುತ್ತಾರೆ. ಏರು ಧ್ವನಿಯಲ್ಲಿ ನಿಂದಿಸುತ್ತಾರೆ. ಈ ಸಂದರ್ಭದಲ್ಲಿ ಉಳಿದ ಮಹಿಳೆಯರು (Woman) ಜಗಳವನ್ನು ನಿಲ್ಲಿಸುವಂತೆ ಕೇಳಿಕೊಳ್ಳುತ್ತಾರೆ. ಆದರೆ ಇಬ್ಬರೂ ತಮ್ಮ ವಾಕ್ಸಮರವನ್ನು ಮುಂದುವರಿಸುತ್ತಾರೆ. ಒಬ್ಬಳು ಯುವತಿ ಕಾಲಿನಿಂದ ಚಪ್ಪಲಿ ತೆಗೆದು ಹೊಡೆಯಲು ಯತ್ನಿಸುತ್ತಾಳೆ. ಮತ್ತೊಬ್ಬಳು ವಾಟರ್ ಬಾಟಲ್‌ನ ಮುಚ್ಚಳ ತೆಗೆದು ಮತ್ತೊಬ್ಬಳ ಮುಖಕ್ಕೆ ನೀರನ್ನು ಎರಚುತ್ತಾಳೆ. ಆದರೆ ಅದೃಷ್ಟವಶಾತ್ ನೀರಿನ ಬಾಟಲಿಯಿಂದ ಅವಳಿಗೆ ಹೊಡೆಯಲಿಲ್ಲ.
ಇಬ್ಬರು ಮಹಿಳೆಯರ ನಡುವಿನ ಜಗಳಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ದೆಹಲಿ ಮೆಟ್ರೋದೊಳಗಿನ ಜನರ ವರ್ತನೆಯ ಕುರಿತು ವೀಡಿಯೊ ಮತ್ತೊಮ್ಮೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ವೀಡಿಯೋವನ್ನು ಹಂಚಿಕೊಂಡಿರುವ ಟ್ವಿಟರ್ ಬಳಕೆದಾರರು,'ಪೋರ್ನ್ ನಂತರ, ದೆಹಲಿ ಮೆಟ್ರೋ ಜಗಳ ನಡೆಯುವ ಅತ್ಯುತ್ತಮ ಸ್ಥಳವಾಗಿದೆ' ಎಂದು ಬರೆದಿದ್ದಾರೆ. ಆನ್‌ಲೈನ್‌ನಲ್ಲಿ ಹಂಚಿಕೊಂಡಾಗಿನಿಂದ, ವೀಡಿಯೊ 1219 ಲೈಕ್ಸ್‌ಗಳು ಮತ್ತು ಹಲವಾರು ಕಾಮೆಂಟ್‌ಗಳನ್ನು ಗಳಿಸಿದೆ.
ದೆಹಲಿ ಮೆಟ್ರೋದಲ್ಲಿ ವ್ಯಕ್ತಿಯ ಹಸ್ತಮೈಥುನ, ಕಿಡಿಕಿಡಿಯಾದ ಮಹಿಳಾ ಆಯೋಗ!
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ನೋಡಿ ಕೆಲವರು, 'ಹುಡುಗಿಯರು ಜಡೆಜಗಳ ಎಲ್ಲಿ ಹೋದರೂ ಇದ್ದಿದ್ದೇ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು 'ಯುವತಿ ಬಾಟಲಿಯನ್ನು ಗುರಿಯತ್ತ ನಿರೀಕ್ಷಿತವಾಗಿ ಹೊಡೆಯದಿದ್ದಕ್ಕಾಗಿ ಬೇಸರವಾಗಿದೆ. ಬದಲಿಗೆ ನೀರು ವ್ಯರ್ಥವಾಯಿತು' ಎಂದು ವ್ಯಂಗವಾಗಿ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು 'ನಾನು ಎಲ್ಲಾ OTT ಪ್ಲಾಟ್‌ಫಾರ್ಮ್‌ಗಳನ್ನು ಅನ್‌ಸಬ್‌ಸ್ಕ್ರೈಬ್ ಮಾಡಿದ್ದೇನೆ, ಈಗ ನಾನು ದೆಹಲಿ ಮೆಟ್ರೋಗೆ ಮಾತ್ರ ಆದ್ಯತೆ ನೀಡುತ್ತೇನೆ' ಎಂದಿದ್ದಾರೆ.
ದಿಲ್ಲಿ ಮೆಟ್ರೋದಲ್ಲಿ ಬಿಕಿನ ಫೋಟೋ ವೈರಲ್ ನಂತರ ಕೆಂಪು ಸೀರೆ, ಆಭರಣ ಧರಿಸಿ ನಾರಿ ಡಾನ್ಸ್
ಅದೇನೆ ಇರ್ಲಿ, ಹೆಣ್ಮಕ್ಕಳು ಎಲ್ಲಿ ಹೋದ್ರೂ ಜಗಳ ಗ್ಯಾರಂಟಿ ಅನ್ನೋದು ಮೆಟ್ರೋದಲ್ಲಿ ನಡೆದಿರುವ ಈ ಜಗಳ ಸಾಬೀತುಪಡಿಸಿದೆ. ಮೆಟ್ರೋ ಪ್ರಯಾಣಿಕರು ಮಾತ್ರ ಈ ಮೆಟ್ರೋದಲ್ಲಿ ಕಿರಿಕ್‌ಗಳು ಯಾವಾಗ ಮುಗಿಯುತ್ತಪ್ಪಾ ಅಂತ ತಲೆಕೆಡಿಸಿಕೊಂಡಿದ್ದಾರೆ..