ಸೀರೆ ಡಿಸ್ಕೌಂಟ್ ಸೇಲ್‌ನಲ್ಲಿ ಜಡೆ ಜಗಳ: ಸೀರೆಗಾಗಿ ನಾರಿಯರ ಜಟಾಪಟಿ
ಹೆಣ್ಮಕ್ಕಳು ರಸ್ತೆಯಲ್ಲಿ ಹೋಗ್ತಿದ್ದಾಗ ಸೀರೆಯಂಗಡಿ ಸಿಕ್ರೆ ಸಾಕು ಅಲ್ಲೇ ನಿಂತುಬಿಡುತ್ತಾರೆ. ಇನ್ನು ಡಿಸ್ಕೌಂಟ್ ಇದೆ ಅಂದ್ರೆ ಕೇಳ್ಬೇಕಾ. ಎದ್ದೂ ಬಿದ್ದೂ ಖರೀದಿಸ್ತಾರೆ. ಹಾಗೆಯೇ ಡಿಸ್ಕೌಂಟ್ ಸೇಲ್ ನಡೀತಿದ್ದ ಅಂಗಡಿಯಲ್ಲಿ ಮಹಿಳೆಯರು ಸೀರೆಗಾಗಿ ಕಿತ್ತಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನೀರೆಗೆ ಸೀರೆಯೆಂದ್ರೆ ಎಷ್ಟು ಇಷ್ಟಾಂತ ಸಾಮಾನ್ಯವಾಗಿ ಎಲ್ರಿಗೂ ಗೊತ್ತೇ ಇದೆ. ಹೆಣ್ಮಕ್ಕಳು ಸೀರೆ ಸೆಲೆಕ್ಷನ್‌ಗೆ ನಿಂತರೆ ಹೊತ್ತು ಹೋಗಿದ್ದೇ ಗೊತ್ತಾಗುವುದಿಲ್ಲ. ಬೆಲೆ ಎಷ್ಟಿದ್ದರೂ ಪರವಾಗಿಲ್ಲ ತಮ್ಮ ನೆಚ್ಚಿನ ಸೀರೆಯನ್ನು ಖರೀದಿಸ್ತಾರೆ. ಮತ್ತೊಬ್ಬರ ಬಳಿಯಿರೋ ಡಿಸೈನ್‌ನ ಸೀರೆ ನಮ್ಮಲ್ಲಿ ಇಲ್ಲಾಂದ್ರೆ ಎಲ್ಲಾ ಕಡೆ ಹುಡುಕಾಡಿನಾದ್ರೂ ಸರಿ ಅದನ್ನು ಖರೀದಿಸೋ ವರೆಗೂ ಸುಮ್ಮನಿರಲ್ಲ. ಇನ್ನು ಹಬ್ಬದ ಸ್ಪೆಷಲ್ ಆಫರ್, ಡಿಸ್ಕೌಂಟ್ ಸೇಲ್ ಅಂತೆಲ್ಲಾ ಹಾಕಿದ್ರೆ ಎದ್ದೂ ಬಿದ್ದೂ ಖರೀದಿಸ್ತಾರೆ. ಹಾಗೆಯೇ ಡಿಸ್ಕೌಂಟ್ ಸೇಲ್ ನಡೀತಿದ್ದ ಅಂಗಡಿಯಲ್ಲಿ ಮಹಿಳೆಯರು ಸೀರೆಗಾಗಿ ಕಿತ್ತಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಾರಿ ಪ್ರಿಯ ನೀರೆಯರು ಸೀರೆಗಳು ಕಡಿಮೆ ದರದಲ್ಲಿ ಸಿಗುತ್ತೆ ಅಂದ್ರೆ ಸುಮ್ನೆ ಬಿಡ್ತಾರಾ. ನಾ ಮುಂದು ತಾ ಮುಂದು ಅಂತಾ ಮುಗಿ ಬೀಳ್ತಾರೆ. ಹೀಗೆ ನಡೆದ ಡಿಸ್ಕೌಂಟ್ ಸೇಲ್‌ನಲ್ಲಿ ಇಬ್ಬರು ಮಹಿಳೆಯರು ಜಡೆ ಹಿಡಿದು ಕಿತ್ತಾಡಿಕೊಂಡಿರುವ ಘಟನೆ ಮಲ್ಲೇಶ್ವರಂನ KSIC ಡಿಸ್ಕೌಂಟ್ ಸೇಲ್‌ನಲ್ಲಿ ನಡೆದಿದೆ. ಮಹಿಳೆಯರು ಕಿತ್ತಾಡಿಕೊಂಡಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಭಲೇ ನಾರಿ..ಯುಕೆ ಮ್ಯಾರಥಾನ್‌ನಲ್ಲಿ ಸೀರೆಯುಟ್ಟು ಒಡಿದ ಒಡಿಯಾ ಮಹಿಳೆ!
ಮಲ್ಲೇಶ್ವರಂ 8ನೇ ಮುಖ್ಯರಸ್ತೆಯ KSIC ಮೈಸೂರು ಸಿಲ್ಕ್ ಸ್ಯಾರಿಸ್‌ನಲ್ಲಿ ಶೇಕಡಾ 35ರಷ್ಟು ಡಿಸ್ಕೌಂಟ್ ಸೇಲ್‌ನಲ್ಲಿ ಸೀರೆಗಳನ್ನು ಮಾರಾಟ ಮಾಡಲಾಗ್ತಿತ್ತು. ಇದನ್ನು ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಅಂಗಡಿಯಲ್ಲಿ ಸೇರಿದ್ದರು. ಕೇವಲ 5 ದಿನಗಳಿಗೆ ಮಾತ್ರ ಈ ರಿಯಾಯಿತಿ ಮಾರಾಟ ನಡೆಸಲಾಗುತ್ತದೆ. ಸೀರೆಗಳು ಖಾಲಿಯಾಗುವವರೆಗೂ ಮಾತ್ರವೇ ಈ ಡಿಸ್ಕೌಂಟ್ ಸೇಲ್ ಹಾಕಲಾಗಿದೆ ಎಂದು ತಿಳಿಸಿದ್ದ ಕಾರಣ ಸೀರೆ ಖರೀದಿಗೆ ಮಹಿಳೆಯರು ಮುಗಿಬಿದ್ದರು. ಕಡಿಮೆ ಬೆಲೆಗೆ ಸೀರೆ ಸಿಗೋ ಖುಷಿಯಲ್ಲಿ ಮಹಿಳೆಯರು ಸೀರೆಯನ್ನು ಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇರಿದ್ದರು. ಅಂಗಡಿಯ ಹೊರಗೂ ಮಹಿಳೆಯರು ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಕಂಡು ಬಂದಿತ್ತು.
ದಿಲ್ಲಿ ಮೆಟ್ರೋದಲ್ಲಿ ಬಿಕಿನ ಫೋಟೋ ವೈರಲ್ ನಂತರ ಕೆಂಪು ಸೀರೆ, ಆಭರಣ ಧರಿಸಿ ನಾರಿ ಡಾನ್ಸ್
ಡಿಸ್ಕೌಂಟ್ ಸೇಲ್‌ಗೆ ಆಗಮಿಸಿದ್ದ ಮಹಿಳೆಯರು ಗುಂಪು ಗುಂಪಾಗಿ ಸೀರೆಗಳನ್ನು ಆರಿಸುತ್ತಿದ್ದರು. ಈ ನಡುವೆ ಸೀರೆಗಳ ಆಯ್ಕೆ ಮಾಡುವ ಸಂದರ್ಭದಲ್ಲಿ ಇಬ್ಬರು ಮಹಿಳೆಯರ ಮಧ್ಯೆ ವಾಗ್ವಾದ ನಡೆದಿದೆ. ವಾಗ್ವಾದ ಜಗಳಕ್ಕೆ ತಿರುಗಿ ಇಬ್ಬರು ಮಹಿಳೆಯರು ಡಿಸ್ಕೌಂಟ್ ಸೇಲ್‌ನಲ್ಲಿ ಜಡೆ ಹಿಡಿದು ಎಳೆದಾಡಿಕೊಂಡಿದ್ದಾರೆ. ನಾರಿಯರ ಈ ಮಾರಾಮಾರಿ ಬಿಡಿಸಲು ಅಲ್ಲಿದ್ದ ಸಿಬ್ಬಂದಿಗಳು, ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ. ಕೊನೆಗೆ ಇಬ್ಬರು ಮಹಿಳೆಯರನ್ನು ಜಗಳ ಮಾಡದಂತೆ ಬಿಡಿಸಿ ಕಳುಹಿಸಲಾಗಿದೆ.