Asianet Suvarna News Asianet Suvarna News

ಒಬ್ಬನಿಗಾಗಿ ಇಬ್ಬರು ಹುಡುಗಿಯರ ಬೀದಿ ಜಗಳ, ರಂಪಾಟ ನೋಡಿ ಕಾಲ್ಕಿತ್ತ ಬಾಯ್‌ಫ್ರೆಂಡ್!

ಬಸ್‌ಸ್ಟಾಂಡ್‌ನಲ್ಲೇ ಇಬ್ಬರು ಹುಡುಗಿಯರು ಬೀದಿ ಜಗಳ ಆರಂಭಿಸಿ, ನೂಕಾಟ, ತಳ್ಳಾಟ ನಡೆದಿದೆ. ಕಾರಣ ಇಷ್ಟೆ ಒಬ್ಬ ಬಾಯ್‌ಫ್ರೆಂಡ್‌ಗಾಗಿ ಜಗಳ. ಈ ಜಗಳ ನೋಡಿದ ಬಾಯ್‌ಫ್ರೆಂಡ್ ಸದ್ದಿಲ್ಲದೆ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಇದೀಗ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

Two Girls fights themselves in market for a boyfriend boy abscond after clash ckm
Author
Bengaluru, First Published Aug 27, 2022, 5:21 PM IST

ಔರಂಗಬಾದ್(ಆ.27):  ಇಬ್ಬರು ಹುಡುಗಿಯರು ಬಸ್‌ ನಿಲ್ದಾಣದ ಪಕ್ಕದ ಮಾರ್ಕೆಟ್‌ನಲ್ಲಿ ಜಗಳ ಆರಂಭಿಸಿದ್ದಾರೆ. ಬೀದಿಯಲ್ಲಿ ತಳ್ಳಾಡಿದ್ದಾರೆ.  ಕೂಗಾಟ, ಚೀರಾಟಕ್ಕೆ ಇಡೀ ಜನ ಸೇರಿದೆ. ಕೆಲವರು ಜಗಳ ಬಿಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಕೇಳಬೇಕಲ್ಲ. ನೆರೆದ ಜನಕ್ಕೆ ಇವರ ಜಗಳಕ್ಕೆ ಕಾರಣವೇನು ಅನ್ನೋದು ತಿಳಿಯಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಕಾರಣ ಜಗಳ ನಡುವೆ ಈ ಹುಡುಗಿಯರು ಅವನು ನನ್ನ ಹುಡುಗ, ಇತ್ತ ಅವನು ನನ್ನವನು. ಅವನೊಂದಿಗೆ ನೀನು ಯಾಕೆ ಸುತ್ತಾಡುತ್ತಿಯಾ, ನಾವು ಕೆಲ ವರ್ಷಗಳಿಂದ ಜೊತೆಯಾಗಿದ್ದೇವೆ ಎಂಬ ಕೂಗಾಟಗಳು ಕೇಳಿಬರುತ್ತಿತ್ತು. ಹೀಗಾಗಿ ಇದು ಒಬ್ಬ ಬಾಯ್‌ಫ್ರೆಂಡ್‌ಗಾಗಿ ನಡೆಯುತ್ತಿರುವ ಜಗಳ ಅನ್ನೋದು ಖಚಿತಗೊಂಡಿದೆ. ಈ ಹುಡುಗಿಯರು ಯಾವ ಹುಡುಗನಿಗಾಗಿ ಕಿತ್ತಾಡುತ್ತಿದ್ದರೋ, ಅದೇ ಹುಡುಗ ಅಲ್ಲೆ ನಿಂತು ಇವರ ಜಗಳ ನೋಡುತ್ತಿದ್ದ. ಆದರೆ ಜಟಾಪಟಿ ತಾರಕಕ್ಕೇರುತ್ತಿದ್ದಂತೆ ಬಾಯ್‌ಫ್ರೆಂಡ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಇತ್ತ ನೆರೆದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರು ಹುಡುಗಿಯನ್ನು ವಶಕ್ಕೆ ಪಡೆದ ಘಟನೆ ಮಹಾರಾಷ್ಟ್ರದ ಔರಂಗಬಾದ್ ಮಾರ್ಕೆಟ್‌ನಲ್ಲಿ ನಡೆದಿದೆ.

ಒಬ್ಬ ಹುಡುಗ ಇಬ್ಬರು ಹುಡುಗಿಯರ ಜೊತೆ ಸುತ್ತಾಡಿದ್ದಾನೆ. ಬೆಳಗ್ಗೆ ಒಬ್ಬಳ ಜೊತೆ ಮಾರ್ಕೆಟ್ ಸೇರಿದಂತೆ ಹಲವೆಡೆ ಸುತ್ತಾಡಿದ ಬಾಯ್‌ಫ್ರೆಂಡ್, ಆಕೆಯನ್ನು ಮನೆಗೆ ಸೇರಿಸಿ ಬಳಿಕ ಮತ್ತೊಬ್ಬಳ ಜೊತೆ ಸುತ್ತಾಡಿದ್ದಾನೆ. ಈ ಸುದ್ದಿ ಮೊದಲ ಹುಡಿಗಿಯ ಕಿವಿಗೆ ಬಿದ್ದಿದೆ. ನೇರವಾಗಿ ಮಾರ್ಕೆಟ್‌ಗೆ ಆಗಮಿಸಿದ್ದಾಳೆ.. ತನ್ನ ಹುಡುಗನನ್ನು ಬುಟ್ಟಿಗೆ ಹಾಕಿಕೊಳ್ಳಲು ಈಕೆ ಯತ್ನಿಸುತ್ತಿದ್ದಾಳೆ ಎಂದು ಮೊದಲ ಹುಡುಗಿ ನೇರವಾಗಿ ಈಕೆಯ ಬಳಿ ಬಂದಿದ್ದಾಳೆ. ಇದನ್ನು ಗಮನಿಸಿದ ಬಾಯ್‌ಫ್ರೆಂಡ್ ಮೆಲ್ಲನೆ ಸ್ಥಳದಿಂದ ಜಾರಿಕೊಂಡಿದ್ದಾನೆ. 

ಬೆಂಗಳೂರು: ಪ್ರಿಯತಮೆಯಿಂದ ಪ್ರಿಯಕರನ ಕಿಡ್ನಾಪ್ ಮಾಡಿ ಹಲ್ಲೆ: 8 ಜನರ ಬಂಧನ

ಇತ್ತ ನನ್ನ ಹುಡುಗ, ಅವ ನನ್ನವ ಅನ್ನೋ ಆರೋಪ ಪ್ರತ್ಯೋರೋಪಗಳು ಆರಂಭಗೊಂಡಿತು. ಮಾರ್ಕೆಟ್‌ನಲ್ಲಿ ಆರಂಭಗೊಂಡ ಜಗಳ, ಬಸ್ ನಿಲ್ದಾಣದ ವರೆಗೂ ಬಂದಿತು. ಮಾರ್ಕೆಟ್ ಹಾಗೂ ಬಸ್ ನಿಲ್ದಾಣದಲ್ಲಿದ್ದ ಜನ ಸೇರಿದರು. ಬಿಡಿಸುವ ಪ್ರಯತ್ನಗಳೂ ನಡೆದವು. ಆದರೆ ಇವರ ಜಗಳ ತಾರಕಕ್ಕೇರಿತ್ತು. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಮಹಿಳಾ ಪೊಲೀಸರು ಆಗಮಿಸಿ ಇಬ್ಬರು ಹುಡುಗಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ವಿಚಾರಣೆ ನಡೆಸಿ ಇಬ್ಬರಿಗೂ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ. ಆದರೆ ತನ್ನ ಮುಂದೆ ಇಬ್ಬರು ಹುಡುಗಿಯರು ಜಗಳವಾಡುತ್ತಿದ್ದಾಗ ಕೆಲ ಹೊತ್ತು ದೂರದಿಂದಲೇ ಮೋಡಿ ನಾಪತ್ತೆಯಾಗಿರುವ ಬಾಯ್‌ಫ್ರೆಂಡ್ ಇನ್ನೂ ಈ ಹುಡುಗಿಯರ ಕೈಗೆ ಸಿಕ್ಕಿಲ್ಲ.

ನನ್ನ soulmate ಸತ್ತುಹೋಗಿರಬಹುದು; ಮದುವೆ ಬಗ್ಗೆ ಮೌನ ಮುರಿದ ರಮ್ಯಾ

ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಇದೊಂದು ಸಣ್ಣ ಕಾರಣಕ್ಕೆ ನಡೆದ ಜಗಳವಾಗಿದೆ. ಹುಡುಗಿಯರನ್ನು ಕರೆಸಿ ಎಚ್ಚರಿಕೆ ನೀಡಿದ್ದೇವೆ. ಇವಿಬ್ಬರು ಒಂದೇ ಹುಡುಗನನ್ನು ಪ್ರೀತಿಸುತ್ತಿದ್ದಾರೆ. ಇದೀಗ ಇವರು ಪ್ರೀತಿಸುವ ಹುಡುಗನಿಗೆ ಬಲಾವ್ ನೀಡಲಾಗಿದೆ. ಪೊಲೀಸ್ ಠಾಣೆಗೆ ಕರೆಯಸಿ ಆತನ ವಿಚಾರಣೆ ನಡೆಸಲಿದ್ದೇವೆ. ಬಳಿಕ ಶಾಂತಿಯುತವಾಗಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 

Follow Us:
Download App:
  • android
  • ios