Bengaluru Crime News: ಪ್ರಿಯಕರನನ್ನು ಪ್ರಿಯತಮೆ ಕಿಡ್ನಾಪ್‌ ಮಾಡಿ ಹಲ್ಲೆ ಮಾಡಿರುವ ಘಟನೆ ಹನುಂತನಗರದಲ್ಲಿ ನಡೆದಿದೆ

ಬೆಂಗಳೂರು (ಆ. 27): ಪ್ರಿಯಕರನನ್ನು ಪ್ರಿಯತಮೆ ಕಿಡ್ನಾಪ್‌ ಮಾಡಿ ಹಲ್ಲೆ ಮಾಡಿರುವ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಿನ ಹನುಂತನಗರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವತಿಯರು ಸೇರಿ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಿಯಕರನನ್ನು ಕಿಡ್ನಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಡ್ನಾಪ್ ಆಗಿದ್ದ ಮಹದೇವಪ್ರಸಾದ್‌ನ ಪ್ರೇಯಸಿ ಕ್ಲಾರಾ , ಆಕೆಯ ಗೆಳತಿ ಹೇಮಾವತಿ, ಈಕೆಯ ಗಂಡ ಸಂತೋಷ್ , ಸಂತೋಷ್‌ನ ಬಾಸ್ ಕಿರಣ@ ಸ್ಮಶಾಣ ಕಿರಣ, ಮನು , ಲೋಕೇಶ್ ,ಮಧು ಹಾಗು ಅಶ್ವತ್ ನಾರಾಯಣ ಎಂಬುವವರನ್ನ ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲಾರು ಮಹದೇವಪ್ರಸಾದ್ ನನ್ನ ಕಿಡ್ನ್ಯಾಪ್ ಮಾಡಿ ಸ್ಮಶಾನಕ್ಕೆ ಕರೆದೊಯ್ದು ಗಂಭೀರ ಹಲ್ಲೆ ನಡೆಸಿದ್ದಾರೆ.

ಮೊದಲು ಮಹದೇವ ಪ್ರಸಾದ್ ತನ್ನ ಮೇಲೆ ಹಲ್ಲೆಯಾಗಿದೆ ಎಂದು ನೇರವಾಗಿ ಕಮೀಷನರ್ ಕಚೇರಿಗೆ ಹೋಗಿದ್ದ. ಅಲ್ಲಿಂದ ಸಿಸಿಬಿಗೆ ಕಳಿಸಿದ್ರು. ಚಾಮರಾಜಪೇಟೆಯಲ್ಲಿ ನಡೆದ ಘಟನೆ ಎಂದು ಚಾಮರಾಜಪೇಟೆಗೆ ಹೋದ ಬಳಿಕ ನಂತರ ಕಿಡ್ನ್ಯಾಪ್ ಆಗಿದ್ದು ಶ್ರೀ ನಗರದಲ್ಲಿ ಎಂಬ ಕಾರಣಕ್ಕೆ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಯ್ತು. ತನಿಖೆ ನಡೆಸಿದಾಗ ಅಸಲಿ ಸಂಗತಿ ಹೊರಬಿದ್ದಿದೆ. 

ಮೊಬೈಲ್ ರಿಪೇರಿಗೆ ಹೋಗಿ ಹಳ್ಳಕ್ಕೆ ಬಿದ್ದ ಜೋಡಿ:  ಕಳೆದ ಮೂರು ವರ್ಷಗಳ ಹಿಂದೆ ಮೊಬೈಲ್ ರಿಪೇರಿ ಮಾಡಿಸಲು ಹೋದಾಗ ಮಹದೇವಪ್ರಸಾದ್‌ಗೆ ಕ್ಲಾರಾ ಎಂಬಾಕೆ ಪರಿಚಯವಾಗಿದ್ದಳು. ನಂತರ ಅವರಿಬ್ಬರು ಲಿವಿಂಗ್ ರಿಲೇಷನ್ ಶಿಪ್‌ನಲ್ಲಿದ್ದರು. ಅದಾಗಲೆ ಮದ್ವೆಯಾಗಿದ್ದ ಕ್ಲಾರಾ ,ಮಹದೇವಪ್ರಸಾದ್‌ಗಾಗಿ ವಿಚ್ಚೇದನ ಪಡೆದುಕೊಳ್ಳಲು ಮುಂದಾಗಿದ್ದಳು. 

ಈ ನಡುವೆ ಇವರಿಬ್ಬರಿಗೂ ಪರಸ್ಪರ ಅನುಮಾನ ಶುರುವಾಗಿತ್ತು. ಬೇರೆಯವರ ಜೊತೆ ದೈಹಿಕ ಸಂಬಂಧ ಇದೆ ಎಂದು ಪರಸ್ಪರ ಆರೋಪ ಮಾಡಿ ದೂರವಾಗಿದ್ದರು. ಈ ವಿಚಾರವನ್ನ ಕ್ಲಾರಾ ತನ್ನ ಸ್ನೇಹಿತೆ ಹೇಮಾವತಿಗೆ ಹೇಳಿ ಅಳಲು ತೋಡಿಕೊಂಡಿದ್ದಳು.

ಪತ್ನಿ ಸಾವಿನಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ಪತಿ!

ಆತನಿಗೆ ಬುದ್ದಿ ಕಲಿಸಬೇಕೆಂದು ಹೇಮಾವತಿ ಆಕೆಯ ಗಂಡ ಸಂತೋಷ್‌ಗೆ ಹೇಳಿದ್ದಳು. ಸಂತೋಷ್ ಈ ವಿಚಾರವನ್ನ ತಾನು ಕೆಲಸ ಮಾಡುವ ಬಾಸ್ ಕಿರಣ್@ಸ್ಮಶಾಣ ಕಿರಣ್‌ಗೆ ಹೇಳಿದಾಗ ಆತ ಕರ್ಸು ಸ್ವಲ್ಪ ವಿಚಾರಿಸೋಣ ಎಂದಿದ್ದ . 

ಹೀಗೆ ಮಹದೇವಪ್ರಸಾದ್‌ಗೆ ಪಾಠ ಕಲಿಸಲು ಪ್ಲಾನ್ ಸಿದ್ಧವಾಗಿತ್ತು‌. ಪ್ಲಾನಿಂಗ್ ಪ್ರಕಾರ ಕ್ಲಾರಾ ನಿನ್ನನ್ನ ನೋಡ್ಬೇಕು ಬಾ ಎಂದು ತನ್ನ ಮನೆ ಬಳಿ ಕರೆಸಿಕೊಂಡಿದ್ದಳು .ಆಟೋದಲ್ಲಿ ಬಂದಿದ್ದ ಮಹದೇವಪ್ರಸಾದ್ ಆಕೆ ಅಳುತ್ತಿರುವುದನ್ನ ನೋಡಿ ಸಂತೈಸುತ್ತಿದ್ದ. ಈ ವೇಳೆ ಇಟಿಯೋಸ್ ಕಾರಿನಲ್ಲಿ ಬಂದಿದ್ದ ಆರೋಪಿಗಳು, ಮಹದೇವಪ್ರಸಾದ್ ನನ್ನ ಕಿಡ್ನ್ಯಾಪ್ ಮಾಡಿ ಮೊದಲು ಜಿಂಕೆ ಪಾರ್ಕ್ ಬಳಿ ಇರುವ ಸ್ಮಶಾಣಕ್ಕೆ ಕರೆ ತಂದಿದ್ದಾರೆ.

ಪತಿ ಮರಣದ ದಿನವೇ ಪತ್ನಿ- ಮಗುವನ್ನು ತಿರಸ್ಕರಿಸಿದ ಕುಟುಂಬ; ಸಖಿ ಸೆಂಟರ್‌ಗೆ ದಾಖಲು 

ಅಲ್ಲಿ ಕ್ಲಾರಾ ಸೇರಿದಂತೆ ಹಲವರು, ಚಟ್ಟಕ್ಕೆ ಕಟ್ಟುವ ಬಿದಿರಿನ ಕೋಲಿನಲ್ಲಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ನಂತರ ಚಾಮರಾಜಪೇಟೆಯ ಗೋಡಾನ್ ಒಂದರಲ್ಲಿ ಒಂದಿಡಿ ದಿನ ಕೂಡಿ ಹಾಕಿ ಚಿತ್ರಹಿಂಸೆ ನೀಡಿ ಮಾರನೆ ದಿನ ಮನೆಗೆ ತಂದು ಬಿಟ್ಟಿದ್ದಾರೆ.

ಇನ್ನು ಈ ಸಂಬಂಧ ಕ್ಲಾರಾ ಹಾಗು ಮಹದೇವಪ್ರಸಾದ್ ಇಬ್ಬರಿಂದಲೂ ಹೇಳಿಕೆ ಪಡೆದಿದ್ದು ,ಹಲ್ಲೆ ,ಕಿಡ್ನ್ಯಾಪ್ ಕಾರಣಕ್ಕೆ ಕ್ಲಾರಾ ಸೇರಿ ಎಂಟು ಜನರನ್ನ ಬಂಧಿಸಿದ್ದಾರೆ. ಈ ಸಂಬಂಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,ತನಿಖೆ ಮುಂದುವರೆದಿದೆ