ನನ್ನ soulmate ಸತ್ತುಹೋಗಿರಬಹುದು; ಮದುವೆ ಬಗ್ಗೆ ಮೌನ ಮುರಿದ ರಮ್ಯಾ

39 ಆದರೂ ಮದ್ವೆ ಆಗಿಲ್ಲ ರಮ್ಯಾ. ವಿಡಿಯೋ ಮೂಲಕ ಉತ್ತರ ಕೊಟ್ಟ ರಮ್ಯಾ...ಅಭಿಮಾನಿಗಳು ಫುಲ್ ಶಾಕ್....

Actress Ramya says why she is not married and her soulmate died vcs

ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಬೇಕು ಅನ್ನೋದು ಅಭಿಮಾನಿಗಳ ಆಸೆ. ನಾಯಕಿ ಆಗಿಲ್ಲ ಅಂದ್ರೂ ಪರ್ವಾಗಿಲ್ಲ ಸೆಲೆಬ್ರಿಟಿ ಗೆಸ್ಟ್‌ ಆಗಿ ಕಾಣಿಸಿಕೊಳ್ಳಿ ಎಂದು ಡಿಮ್ಯಾಂಡ್ ಮಾಡುತ್ತಾರೆ. ಸಿನಿಮಾ ಸೋಷಿಯಲ್ ಮೀಡಿಯಾದಿಂದ ರಮ್ಯಾ ದೂರ ಉಳಿಯುತ್ತಿದ್ದಂತೆ ಮದುವೆ ಅಗಿದ್ದಾರೆ, ಬಾಯ್‌ಫ್ರೆಂಡ್‌ ಇದ್ದಾರೆ ಅಂತೆಲ್ಲಾ ಗಾಸಿಪ್ ಶುರು ಮಾಡಿದ್ದರು. ಆದರೆ ರಮ್ಯಾ ಸಿಂಗಲ್ ಆಗಿರುವುದಾಗಿ ಎಷ್ಟು ಸಲ ಹೇಳಿದ್ದರೂ ಯಾರೂ ನಂಬುತ್ತಿರಲಿಲ್ಲ ಹೀಗಾಗಿ ಇಂಗ್ಲಿಷ್‌ ಸಾಂಗ್‌ ಮೂಲಕ ನೆಟ್ಟಿಗರಿಗೆ ಉತ್ತರ ಕೊಟ್ಟಿದ್ದಾರೆ. 

ಖ್ಯಾತ ಗಾಯಕ Iamnotshane ಬರೆದಿರುವ 'My be my soulmate died. I dont know. My be i dont have a soul. What if I saw you on the train last night and I just walked on by What if I never let you in And now you're with somebody who did All of this miscommunication, indecisiveness, be patient' ಹಾಡನ್ನು ರಮ್ಯಾ ಹಾಡಿದ್ದಾರೆ.  ಅಲ್ಲದೆ 'ಯಾಕೆ ನೀನು ಇನ್ನೂ ಮದ್ವೆ ಆಗಿಲ್ಲ? ಬಹುಷ ನನ್ನ ಸೋಲ್‌ಮೆಟ್‌ ಸತ್ತಿರಬೇಕು' ಎಂದು ಬರೆದುಕೊಂಡಿದ್ದಾರೆ. 

Actress Ramya says why she is not married and her soulmate died vcs

ಕಾವ್ಯಾ ಗೌಡ, ಶರ್ಮಿಳಾ ಮಾಂಡ್ರೆ, ಕೃಷಿ ತಾಪಂಡ, ವೈನಿಧಿ ಜಗದೀಶ್,ನಮ್ರತಾ ಗೌಡ, ಗೌರಿ ಶ್ರುತಿ, ಸ್ಫೂರ್ತಿ ವಿಶ್ವಾಸ್, ಕಾವ್ಯಾ ಶೆಟ್ಟಿ, ಅನೀಶ್, ಭುವನ್ ಪೊಣ್ಣನ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ರಮ್ಯಾ ರೀಲ್ಸ್‌ಗೆ ಕಾಮೆಂಟ್ ಮಾಡಿದ್ದಾರೆ.

Ramya ಜೊತೆ ಮದುವೆ ಆಗಲಿದ್ದಾರಾ Rakshit Shetty? 

ರಕ್ಷಿತ್ ಶೆಟ್ಟಿ ಈಗ ಅವರ ಇತ್ತೀಚಿನ ಚಿತ್ರ ಚಾರ್ಲಿ 777 ಅನ್ನು ಪ್ರಚಾರ ಮಾಡುತ್ತಿದ್ದಾರೆ. ಇದರ ನಡುವೆ, ಸಾಮಾಜಿಕ ಮಾಧ್ಯಮ ವರದಿಗಳ ಪ್ರಕಾರ ರಮ್ಯಾ ಅಲಿಯಾಸ್ ದಿವ್ಯಾ ಸ್ಪಂದನಾ ಅವರನ್ನು  ಮದುವೆಯಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಬಹುಶಃ ಕೆಲವು ಯೂಟ್ಯೂಬ್ ಚಾನೆಲ್ ವದಂತಿಯನ್ನು ಹರಡಿದೆ.ರಕ್ಷಿತ್ ಶೆಟ್ಟಿ ಅವರ ಗೆಳೆಯ ಮತ್ತು ನಟ-ಚಲನಚಿತ್ರ ನಿರ್ಮಾಪಕ ರಿಷಬ್ ಶೆಟ್ಟಿ ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಚಾರ್ಲಿ 777 ಸುದ್ದಿಗೋಷ್ಟಿಯಲ್ಲಿ ರಕ್ಷಿತ್-ರಮ್ಯಾ ಮದುವೆಯ ಕಥೆಯ ಬಗ್ಗೆ ಅವರು ನಕ್ಕರು, ತಮ್ಮ ಸ್ನೇಹಿತ ಸ್ಯಾಂಡಲ್‌ವುಡ್‌ನ ಗೋಲ್ಡನ್ ಗರ್ಲ್ ಅನ್ನು ಮದುವೆಯಾಗುತ್ತಿಲ್ಲ ಎಂದು ಹೇಳಿದ್ದಾರೆ.

Divyaspandana ರಮ್ಯಾ ಮತ್ತೆ ಸಿನಿಮಾಗೆ ಬಂದಾಯ್ತಂತೆ, ನಿಜನಾ?

ವೈರಲ್ ಫೋಟೋದಲ್ಲಿರುವ ವ್ಯಕ್ತಿ ಯಾರು:

ರಮ್ಯಾ ಯುವಕನ ಜೊತೆ ಆಪ್ತವಾಗಿರುವ ಫೋಟೋವನ್ನು ಶೇರ್ ಮಾಡಿದ್ದರು. ಈ ಫೋಟೋ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ರಮ್ಯಾ ಜೊತೆ ಸೆಲ್ಫಿಗೆ ಪೋಸ್ ನೀಡಿದ ಯುವಕ ಯಾರೆಂದು ತಲೆಕೆಡಿಸಿಕೊಂಡಿದ್ದರು. ರಮ್ಯಾ ಜೊತೆ ಇರುವ ಯುವಕನ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಈ ಬಗ್ಗೆ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗಿರುವ ವ್ಯಕ್ತಿ ಯಾರೆಂದು ಬಹಿರಂಗ ಪಡಿಸುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಅಂದಹಾಗೆ ರಮ್ಯಾ ಜೊತೆ ಸೆಲ್ಫಿಗೆ ಪೋಸ್ ಕೊಟ್ಟಿದ್ದು ಮತ್ಯಾರು ಅಲ್ಲ ಸ್ಟೈಲಿಸ್ಟ್ ವಿಹಾನ್. ಈ ಬಗ್ಗೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಶೇರ್ ಮಾಡಿದ್ದಾರೆ. ಇವರು ವಿಹಾನ್. ನನ್ನ ಸ್ಟೈಲಿಸ್ಟ್. ಆದರೂ ನಾನು ಕುತೂಹಲವನ್ನು ತುಂಬಾ ಇಷ್ಟಪಡುತ್ತೇನೆ ಎಂದು ಬರೆದುಕೊಂಡಿದ್ದಾರೆ. ಸುವರ್ಣ ನ್ಯೂಸ್ ವಾಹಿನಿಯ ಪೋಸ್ಟರ್ ಶೇರ್ ಮಾಡಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ.

Latest Videos
Follow Us:
Download App:
  • android
  • ios