ಮಹಿಳಾ ದಿನಾಚರಣೆ ದಿನ ಆಕೆಯ ಬಗ್ಗೆ ಸಾಕಷ್ಟು ಮಾತನಾಡುವ ಜನರು ಆಕೆಯ ಶಕ್ತಿ ಅರಿಯೋದ್ರಲ್ಲಿ ವಿಫಲರಾಗಿದ್ದಾರೆ. ದೇಹ ಒಂದಾದ್ರೂ ನೂರಾರು ಕೆಲಸ ಮಾಡಬಲ್ಲ ಮಹಿಳೆಗೆ ಸರಿಯಾದ ಗುರುತು, ಸರಿಯಾದ ಜವಾಬ್ದಾರಿ, ಸೂಕ್ತ ಗೌರವ ಸಿಗ್ತಿಲ್ಲ. ಅಲ್ಪಸ್ವಲ್ಪ ಅವಕಾಶ ಸಿಕ್ಕಿದ್ರೂ ಅದ್ರಲ್ಲಿ ನಾನಾ ಹಿಂಸೆ ಅನುಭವಿಸ್ತಿದ್ದಾಳೆ ಮಹಿಳೆ.
ಇಂದು ವಿಶ್ವ ಮಹಿಳಾ ದಿನಾಚರಣೆ. ಈ ಶುಭ ಸಂದರ್ಭದಲ್ಲಿ ಮಹಿಳೆಯರು ತಮ್ಮ ದಿನವನ್ನು ಸಂಭ್ರಮಿಸ್ತಿದ್ರೆ ಪುರುಷರು ಅವರಿಗೆ ಗೌರವ ಸಲ್ಲಿಸುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಮಹಿಳೆ ಎಂದಾಗ ಹಿಂದಿನಿಂದಲೇ ಕೆಲ ಹೊಗಳಿಕೆ ಪದಗಳನ್ನು ಬಳಕೆ ಮಾಡಲಾಗುತ್ತದೆ. ತಾಳ್ಮೆ, ಕ್ಷಮೆ, ದಯೆ, ಕರುಣೆ ಎಲ್ಲವನ್ನೂ ಮಹಿಳೆಗೆ ಹೋಲಿಸಲಾಗುತ್ತದೆ. ಆದ್ರೆ ಮಹಿಳೆ ಬರೀ ಇಷ್ಟೇ ಅಲ್ಲ. ಆಕೆ ಧೈರ್ಯವಂತೆ. ಮನಸ್ಸು ಮಾಡಿದ್ರೆ ಏನನ್ನು ಬೇಕಾದ್ರೂ ಸಾಧಿಸಿ ತೋರಿಸಬಲ್ಲಳು. ರಾಜಮಹಾರಾಜ ಕಾಲದಲ್ಲಿ ಯುದ್ಧದಲ್ಲಿ ಹೋರಾಡಿ ಜಯಗಳಿಸಿದ ಅನೇಕ ಮಹಿಳೆಯರು ನಮ್ಮಲ್ಲಿದ್ದಾರೆ. ಆದ್ರೆ ನಂತ್ರದ ದಿನಗಳಲ್ಲಿ ಮಹಿಳೆರನ್ನು ಕೆಲ ಕ್ಷೇತ್ರಗಳಿಂದ ದೂರವಿಡಲಾಗಿತ್ತು. ಈಗ ಮತ್ತೆ ಆ ಕ್ಷೇತ್ರಗಳಲ್ಲಿ ಮಹಿಳೆ ತನ್ನ ಹಸ್ತವೂರಿದ್ದಾಳೆ.
ಮನೆ (House) ಯಲ್ಲಿ ಸೌಟ್ ಹಿಡಿಯುತ್ತಿದ್ದ ಮಹಿಳೆ ಎಂದೋ ಸಶಸ್ತ್ರ ಹಿಡಿದಾಗಿದೆ. ಈಗ ಆಕೆ ಸಶಸ್ತ್ರ ಪಡೆಗಳಲ್ಲಿ ಮುಂಚೂಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಳೆ. ಒಂದು ವರ್ಷದಿಂದ ಉಕ್ರೇನ್ (Ukraine) ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧದಲ್ಲಿ ಪ್ರಮುಖ ಜವಾಬ್ದಾರಿ (Responsibility) ಗಳನ್ನು ಮಹಿಳೆ ತೆಗೆದುಕೊಂಡಿದ್ದಾಳೆ. ಆದ್ರೆ ಇದು ಸಿಕ್ಕಿದ್ದು ಕೆಲ ವರ್ಷಗಳ ಹಿಂದೆ. ಪುರುಷರಿಗೆ ಲಭ್ಯವಿರುವ ಎಲ್ಲಾ ಮಿಲಿಟರಿ (Military) ಪಾತ್ರಗಳನ್ನು ಕಳೆದ ವರ್ಷವಷ್ಟೇ ಮಹಿಳೆಯರಿಗೆ ತೆರೆಯಲಾಗಿದೆ. 2018 ಸಶಸ್ತ್ರ ಪಡೆಗಳಲ್ಲಿ ಪುರುಷರಿಗೆ ಸಮಾನವಾದ ಕಾನೂನು ಸ್ಥಾನಮಾನವನ್ನು ಮಹಿಳೆಯರಿಗೆ ನೀಡಲಾಯಿತು. ನಂತ್ರ ಉಕ್ರೇನ್‌ನಲ್ಲಿ 450 ವಿವಿಧ ಹುದ್ದೆಗಳ ಜವಾಬ್ದಾರಿಯನ್ನು ಮಹಿಳೆಯರಿಗೆ ನೀಡಲಾಯ್ತು. ಮಹಿಳೆಯರು ಮತ್ತು ಹುಡುಗಿಯರು ಮಿಲಿಟರಿ ಸೇರಿದಂತೆ ಯುದ್ಧದಲ್ಲಿಯೂ ಅಪಾಯಗಳನ್ನು ಎದುರಿಸುತ್ತಾರೆಯಾದ್ರೂ ಲೈಂಗಿಕ ಹಿಂಸೆ, ಮಾನವ ಕಳ್ಳಸಾಗಣೆ ಮತ್ತು ತಾಯಿಯ ಮರಣದಂತಹ ಅನೇಕ ಲಿಂಗ ಆಧಾರಿತ ಸಮಸ್ಯೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ.
International womens day 2023: ಸ್ಪೆಷಲ್ ಆಗಿ ವಿಶ್ ಮಾಡಿದ ಗೂಗಲ್ ಡೂಡಲ್
ಮಹಿಳೆಯರು ಕೇವಲ ಬಲಿಪಶುಗಳಲ್ಲ : ಲಿಂಗ ಸಮಸ್ಯೆಗಳ ಕುರಿತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ವಿಶೇಷ ಸಲಹೆಗಾರರು ಯುದ್ಧವಲ್ಲದ ಸಂಘರ್ಷಗಳಲ್ಲಿ ಶೇಕಡಾ 70 ರಷ್ಟು ಮಹಿಳೆಯರ ಸಾವುನೋವಾಗ್ತಿದೆ ಎಂದು ಅಂದಾಜಿಸಿದ್ದಾರೆ. ವಿಶ್ವಸಂಸ್ಥೆಯು 2000ನೇ ಇಸವಿಯಲ್ಲಿ ಮಹಿಳೆಯರ ಶಾಂತಿ ಮತ್ತು ಭದ್ರತೆಯ ಕುರಿತಾದ ಐತಿಹಾಸಿಕ ಭದ್ರತಾ ಮಂಡಳಿಯ ನಿರ್ಣಯ 1325 ಅನ್ನು ಅಂಗೀಕರಿಸಿತು. ಶಾಂತಿಪಾಲನಾ ಪ್ರಕ್ರಿಯೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಅಗತ್ಯವನ್ನು ಮತ್ತು ಜಾಗತಿಕ ಶಾಂತಿ ಮತ್ತು ಸ್ಥಿರತೆಯಲ್ಲಿ ಅವರ ಪಾತ್ರದ ಪ್ರಾಮುಖ್ಯತೆಯನ್ನು ಗುರುತಿಸಿತು. ಮಹಿಳೆಯರು ಕೇವಲ ಬಲಿಪಶುಗಳಲ್ಲ. ಅವರು ಶಾಂತಿಪಾಲನೆಯಲ್ಲಿ ಸಕ್ರಿಯವಾಗಿ ಭಾಗವಹಿಸುವವರು, ಸಂವಾದಕರು ಮತ್ತು ಶಾಂತಿಪಾಲಕರು ಎಂದು ಅದು ಗುರುತಿಸಿದೆ. ಆದ್ರೆ ನಿರ್ಣಯ ತೆಗೆದುಕೊಂಡು ಒಂದು ದಶಕವಾದ್ರೂ ಅದಕ್ಕೆ ನಿರೀಕ್ಷಿತ ಫಲ ಸಿಕ್ಕಿಲ್ಲ.
ಮಹಿಳೆಯರ ಬಗ್ಗೆ ಚಿಂತನೆ ಬದಲಾಗಬೇಕು : ಮಹಿಳೆ ಭದ್ರತೆಗೆ ಎಷ್ಟೇ ಪ್ರಯತ್ನ ನಡೆಸಿದ್ರೂ ಹಿಂಸಾಚಾರ ಮುಂದುವರೆದಿದೆ. ಅವರ ಪಾಲ್ಗೊಳ್ಳುವಿಗೆ ವಿಷ್ಯದಲ್ಲಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಡೆತಡೆಗಳಿವೆ. ಅಫ್ಘಾನಿಸ್ತಾನದಂತಹ ದೇಶದಲ್ಲಿ ಮಹಿಳೆಯರು ಸಾಕಷ್ಟು ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡ್ಬೇಕಿದೆ. ಅಫ್ಘಾನಿಸ್ತಾನದ ಜನರು, ಮಹಿಳೆ ಮಕ್ಕಳನ್ನು ಹೆರಲು ಮತ್ತು ಅವರ ಮತ್ತು ಅವಳ ಪತಿಯನ್ನು ನೋಡಿಕೊಳ್ಳಲು ಮಾತ್ರ ಜನಿಸುತ್ತಾರೆ ಎಂದು ನಂಬುತ್ತಾರೆ. ಕೆಲ ಮಹಿಳೆಯರು ಇದ್ರ ವಿರುದ್ಧ ದ್ವನಿ ಎತ್ತಿದ್ದಿದೆ. ಆದ್ರೆ ಅಪಾಯವನ್ನು ಎದುರಿಸುತ್ತಿದ್ದಾರೆ. ಅಫ್ಘಾನ್ ಮಹಿಳೆಯರು ಕೆಲವು ಸ್ಥಳೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳ ಸಹಾಯದಿಂದ ಹಿಂಸೆಯನ್ನು ತಡೆಗಟ್ಟುವಲ್ಲಿ ಮತ್ತು ಶಾಂತಿಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಆದ್ರೆ ತಾಲಿಬಾನ್ ಆಡಳಿತ ಬಂದ್ಮೇಲೆ ಅವರ ಪಾಲ್ಗೊಳ್ಳುವಿಗೆ ಕಡಿಮೆಯಾಗಿದೆ.
ಮೌಂಟ್ ಎವರೆಸ್ಟ್ ಹತ್ತಿದ ಕರ್ನಾಟಕದ ಪ್ರಥಮ ಮಹಿಳೆ ಮೇಜರ್ ಸ್ಮಿತಾ ಲಕ್ಷ್ಮಣ್
ಸಾರ್ವಜನಿಕ ಜೀವನದಲ್ಲಿ ಮಹಿಳೆಯರ ಪೂರ್ಣ ಮತ್ತು ಸಮಾನ ಭಾಗವಹಿಸುವಿಕೆ ರಾಷ್ಟ್ರೀಯ ಆಧಾರದ ಮೇಲೆ ಬಲವಾದ ಪ್ರಜಾಪ್ರಭುತ್ವವನ್ನು ನಿರ್ಮಿಸಲು ನೆರವಾಗಲಿದೆ. ಆದರೆ ವಿಶ್ವಸಂಸ್ಥೆಯ ಪ್ರಕಾರ, ಸಂಘರ್ಷ ಪೀಡಿತ ದೇಶಗಳಲ್ಲಿ ಅಥವಾ ಸಂಘರ್ಷದಿಂದ ಹೊರಗಿರುವ ದೇಶಗಳಲ್ಲಿ ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯವು ಶೇಕಡಾ 21 ಕ್ಕಿಂತ ಕಡಿಮೆಯಿದೆ. ಮಹಿಳೆ ಯಾವ ಕೆಲಸವನ್ನಾದ್ರೂ ನಿಷ್ಠೆಯಿಂದ ನಿಭಾಯಿಸಬಲ್ಲಳು ಎಂಬುದನ್ನು ಈಗಾಗಲೇ ತೋರಿಸಿದ್ದಾಳೆ. ಆದ್ರೆ ಆಕೆಗೆ ಸಮಾನ ಹಕ್ಕು, ಜವಾಬ್ದಾರಿ ನೀಡಲಾಗ್ತಿಲ್ಲ. ಆಕೆ ಶಕ್ತಿಯನ್ನು ಗುರುತಿಸುವ ಕೆಲಸ ಸರಿಯಾಗಿ ಆಗ್ತಿಲ್ಲ.
