Asianet Suvarna News Asianet Suvarna News

International womens day 2023: ಸ್ಪೆಷಲ್​​ ಆಗಿ ವಿಶ್​ ಮಾಡಿದ ಗೂಗಲ್ ಡೂಡಲ್

ಗೂಗಲ್ ಪ್ರತಿಯೊಂದು ವಿಶೇಷ ದಿನದ ಸಂದರ್ಭದಲ್ಲೂ ಸ್ಪೆಷಲ್ ಡೂಡಲ್ ತಯಾರಿಸಿ ಶುಭಾಶಯಗಳನ್ನು ಕೋರುತ್ತದೆ. ಹಾಗೆಯೇ ಸದ್ಯ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 2023 ಅಂಗವಾಗಿ ಗೂಗಲ್ ವಿಶೇಷ ಡೂಡಲ್ ರಚಿಸುವ ಮೂಲಕ ಮಹಿಳೆಯರಿಗೆ ಗೌರವ ಸಲ್ಲಿಸಿದೆ. 

Google Doodle celebrates women who support each other on International Womens Day Vin
Author
First Published Mar 8, 2023, 10:37 AM IST

ಸೃಷ್ಟಿಯೇ ಹೆಣ್ಣು. ಅದಲ್ಲದೆ ಹೆಣ್ಣಿಗೆ ಹಲವು ರೂಪಗಳು. ತಾಯಿ, ಸ್ನೇಹಿತೆ, ಪತ್ನಿ, ಸಹೋದ್ಯೋಗಿ, ಮಗಳು ಆಕೆ ಎಲ್ಲವೂ ಹೌದು. ಎಲ್ಲರ ಜೀವನದಲ್ಲೂ ಹೆಣ್ಣಿಗೆ ಮಹತ್ತರ ಪಾತ್ರವಿದೆ. ಅದಕ್ಕಾಗಿ ಆಕೆಗಾಗಿ ಒಂದು ದಿನವನ್ನು ಮೀಸಲಿಡಲಾಗಿದೆ. ಅದುವೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಪ್ರತೀ ವರ್ಷ ಮಾರ್ಚ್ 8ರಂದು  ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (International Womens Day)ಯನ್ನು ಆಚರಿಸಲಾಗುತ್ತದೆ. ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯದ ಮೇಲೆ ಬೆಳಕು ಚೆಲ್ಲಲಾಗುತ್ತದೆ. ಬಡ, ದುರ್ಬಲ ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಿ ಸುಂದರ ಬದುಕನ್ನು ರೂಪಿಸಲು ನೆರವು ನೀಡಲಾಗುತ್ತದೆ. ಹಲವು ಸಂಸ್ಥೆಗಳು ಮಹಿಳಾ ದಿನಾಚರಣೆಯನ್ನು ಖುಷಿಯಿಂದ ಸೆಲಬ್ರೇಟ್ ಮಾಡುತ್ತವೆ. ಅದೇ ರೀತಿ ಗೂಗಲ್‌ ಮಹಿಳಾ ದಿನಾಚರಣೆಗೆ ಸ್ಪೆಷಲ್ ಡೂಡಲ್‌ ಸಿದ್ಧಪಡಿಸುವ ಮೂಲಕ ಎಲ್ಲಾ ಮಹಿಳೆಯರಿಗೆ ವಿಮೆನ್ಸ್‌ ಡೇ ಶುಭಾಶಯ ಕೋರಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನ 2023ನ್ನು ಇಕ್ವಿಟಿ ಎಂಬ ವಿಷಯದೊಂದಿಗೆ ಆಚರಿಸಲಾಗುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೂ ಸಮಾನ ಅವಕಾಶಗಳನ್ನು ಕೊಡುವ ಬಗ್ಗೆ ಥೀಮ್‌ ಇಟ್ಟುಕೊಳ್ಳಲಾಗಿದೆ. ಗೂಗಲ್ ಅಳವಡಿಸಿರುವ ಡೂಡಲ್‌ನಲ್ಲಿ ಒಬ್ಬ ಮಹಿಳಾ ರಾಜಕಾರಣಿ, ವೈದ್ಯರು, ಪ್ರತಿಭಟನಾ ಪ್ರದರ್ಶನದಲ್ಲಿ ಮಹಿಳೆಯರು ಮತ್ತು ತಮ್ಮ ಶಿಶುಗಳಿಗೆ ಆಹಾರವನ್ನು ನೀಡುವ ತಾಯಂದಿರು ಫೋಟೋಗಳು ಸೇರಿವೆ. ಗೂಗಲ್ ಡೂಡಲ್‌ನ ಹಿಂದಿನ ಪ್ರಮುಖ ಥೀಮ್ ಎಂದರೆ ಎಲ್ಲಾ ಮಹಿಳೆಯರು ಇತರ ಮಹಿಳೆಯರನ್ನೂ ಬೆಂಬಲಿಸಬೇಕು ಎಂಬುದಾಗಿದೆ. 

Womens Day 2023 Wishes: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು

ಮಹಿಳೆಯರು ಪರಸ್ಪರ ಸಹಕಾರ ನೀಡಬೇಕು ಎಂಬುದು ಡೂಡಲ್ ಥೀಮ್‌
ವಿಶೇಷ ಡೂಡಲ್‌ನಲ್ಲಿನ ಪ್ರತಿ GOOGLE ಅಕ್ಷರದೊಳಗಿನ ವಿಗ್ನೆಟ್‌ಗಳು ಪ್ರಪಂಚದಾದ್ಯಂತದ ಮಹಿಳೆಯರು ಪರಸ್ಪರ ಪ್ರಗತಿಗೆ ಮತ್ತು ಪರಸ್ಪರರ ಜೀವನದ ಗುಣಮಟ್ಟವನ್ನು ಸುಧಾರಿಸಲು ಪರಸ್ಪರ ಬೆಂಬಲಿಸುವ ಹಲವು ಕ್ಷೇತ್ರಗಳಲ್ಲಿ ಕೆಲವನ್ನು ಹೈಲೈಟ್ ಮಾಡಿದೆ. ಈ ವರ್ಷ ನಮ್ಮ ಥೀಮ್ ಮಹಿಳೆಯರನ್ನು ಬೆಂಬಲಿಸುವುದು, ಆದ್ದರಿಂದ ನನ್ನ ಜೀವನದಲ್ಲಿ ಇತರೆ ಮಹಿಳೆಯರು ನನ್ನನ್ನು ಬೆಂಬಲಿಸಿದ ಎಲ್ಲಾ ವಿಧಾನಗಳನ್ನು ಪ್ರತಿಬಿಂಬಿಸಿದ್ದೇನೆ ಎಂದು ಡೂಡಲ್ ಕಲಾವಿದ ಅಲಿಸ್ಸಾಂ ವಿನಾನ್ಸ್ ಹೇಳಿದ್ದಾರೆ.

ವಿಶೇಷವೆಂದರೆ ಈ ಗೂಗಲ್ ಡೂಡಲ್ ಅನ್ನು ಕ್ಲಿಕ್ ಮಾಡಿದ ಮೇಲೆ ಗೂಗಲ್ ಬಳಕೆದಾರರನ್ನು ಆ ಹೊಸ ಪುಟಕ್ಕೆ ಕರೆದೊಯ್ಯುತ್ತದೆ, ಅಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಸಂಬಂಧಿಸಿದ ಎಲ್ಲಾ ರೀತಿಯ ಮಾಹಿತಿ ಲಭ್ಯವಿದೆ. ಇವುಗಳಲ್ಲಿ ಮಹಿಳಾ ದಿನಾಚರಣೆಗೆ ಸಂಬಂಧಿಸಿದ ಫೋಟೋಗಳು, ಸುದ್ದಿಗಳು, ವೀಡಿಯೊಗಳು ಮತ್ತು ಇತರ ವಿಷಯಗಳನ್ನು ಒಳಗೊಂಡಿರುತ್ತದೆ. ಈ ಬಾರಿ ಹೊಸ ಪುಟಕ್ಕೆ ಹೋಗುತ್ತಿದ್ದಂತೆಯೇ ಮಹಿಳೆಯರು ಕೈಗಳಲ್ಲಿ ಬಾವುಟವನ್ನು ಹಿಡಿದು ಸಾಗುವ ದೃಶ್ಯವನ್ನು ನೋಡಬಹುದಾಗಿದೆ.

ವಾಯುಪಡೆ ಯುದ್ಧ ಘಟಕಕ್ಕೆ ಮೊದಲ ಬಾರಿ ಮಹಿಳಾ ಅಧಿಕಾರಿ ನೇತೃತ್ವ; ಪಶ್ಚಿಮ ವಿಭಾಗ ಕ್ಯಾಪ್ಟನ್‌ ಹುದ್ದೆಗೆ ಶಾಲಿಜಾ ಧಾಮಿ ನೇಮಕ

1909 ಫೆಬ್ರುವರಿ 28ರಂದು ಮೊದಲ ವರ್ಷದ ರಾಷ್ಟ್ರೀಯ ಮಹಿಳಾ ದಿನವನ್ನು ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಆಚರಿಸಲಾಯಿತು. ಮಾರ್ಚ್ 8ರಂದು 1977ರಲ್ಲಿ ವಿಶ್ವಸಂಸ್ಥೆಯಿಂದ ಅಧಿಕೃತವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅಳವಡಿಸಿಕೊಂಡಿತು. 1908ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಗಾರ್ಮೆಂಟ್‌ ಕಾರ್ಮಿಕರ ಮುಷ್ಕರದ ಗೌರವಾರ್ಥವಾಗಿ ಸೋಷಿಯಲಿಸ್ಟ್‌ ಪಾರ್ಟಿ ಆಫ್‌ ಅಮೇರಿಕ ಈ ದಿನವನ್ನು ಮಹಿಳೆಯರಿಗೆ ಸರ್ಮಪಿಸಿತ್ತು, ಅಲ್ಲದೆ ಆಗ ತಮ್ಮ ಕೆಲಸದ ಕಠಿಣ ಪರಿಸ್ಥಿತಿಗಳ ವಿರುದ್ಧ ಮಹಿಳೆಯರು ಪ್ರತಿಭಟಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿನ ಮಹಿಳೆಯರ ಸಾಧನೆಗಳನ್ನು ಗುರುತಿಸಲು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ ಮತ್ತು ಮಹಿಳೆಯರನ್ನು ಅನಾನುಕೂಲಕ್ಕೆ ತಳ್ಳುವ ಲಿಂಗ ಅಸಮಾನತೆಯ ವಿರುದ್ಧ ಧ್ವನಿ ಎತ್ತಲಾಗುತ್ತದೆ.

ಮಹಿಳಾ ದಿನಾಚರಣೆಯು ನಮ್ಮ ಸಮಾಜಕ್ಕೆ ಮಹಿಳೆಯರ ಕೊಡುಗೆಯನ್ನು ಮತ್ತು ಅವರ ಸಾಂಸ್ಕೃತಿಕ, ರಾಜಕೀಯ ಮತ್ತು ಸಾಮಾಜಿಕ ಆರ್ಥಿಕ ಸಾಧನೆಗಳನ್ನು ಆಚರಿಸುತ್ತದೆ. ಲಿಂಗ ಸಮಾನತೆ, ಸಮಾನ ವೇತನ, ಮಹಿಳೆಯರ ಮೇಲಿನ ತಾರತಮ್ಯವನ್ನು ಎತ್ತಿ ತೋರಿಸುತ್ತದೆ. 

Follow Us:
Download App:
  • android
  • ios