Cleaning Hacks for Housewives: ದಿನದಲ್ಲಿ ಅತಿ ಹೆಚ್ಚು ಕೆಲಸ ಮಾಡೋರು ಗೃಹಿಣಿಯರು. ಒಂದಾದ್ಮೇಲೆ ಒಂದು ಕೆಲಸ ಅವರಿಗಿರುತ್ತದೆ. ಅದದೇ ಕೆಲಸ ಮಾಡಿ ಸಾಕಾಯ್ತು, ಹೊಸತು ಮಾಡೋಕೆ ಟೈಂ ಸಿಗ್ತಿಲ್ಲ ಎನ್ನುವ ಮಹಿಳೆಯರು ಕೆಲ ಟ್ರಿಕ್ಸ್ ಬಳಸಿಕೊಂಡು ಸಮಯ ಉಳಿಸಬಹುದು.
ಇಡೀ ದಿನ ಕೆಲಸ ಮಾಡಿದ್ರೂ ಕೆಲಸ ಮುಗಿಯೋದಿಲ್ಲ ಅನ್ನೋದು ಗೃಹಿಣಿ (Housewife) ಯರ ನೋವು. ದಿನವಿಡೀ ನೀವು ಮನೆ (Home) ಯಲ್ಲಿ ಏನು ಮಾಡುತ್ತೀರಿ ಎಂದು ಕೆಲವರು ಗೃಹಿಣಿಯರನ್ನು ಪ್ರಶ್ನಿಸುವುದಿದೆ. ಒಂದಾದ್ಮೇಲೆ ಒಂದು ಕೆಲಸವಿರುತ್ತದೆ. ಅಡುಗೆ, ಮನೆ ಸ್ವಚ್ಛತೆ, ಮಕ್ಕಳು ಹೀಗೆ ಅನೇಕ ಕೆಲಸಗಳನ್ನು ಮಾಡುವ ಮಹಿಳೆ ವಿಶ್ರಾಂತಿ (Relax) ಪಡೆಯುವುದೇ ಅಪರೂಪ. ಕೆಲವರು ಮನೆ ಕೆಲಸ ಮುಗಿಸಿ, ವೃತ್ತಿಯನ್ನೂ ಸಂಭಾಳಿಸ್ತಾರೆ. ಇನ್ನು ಕೆಲವರಿಗೆ ಮನೆ ಕೆಲಸವೇ ಮುಗಿಯೋದಿಲ್ಲ. ನಾವೂ ಹೇಗೆ ಈ ಎಲ್ಲ ಕೆಲಸ ಫಟಾಫಟ್ ಮುಗಿಸೋದು ಎಂಬ ಪ್ರಶ್ನೆ ಕೆಲ ಗೃಹಿಣಿಯರನ್ನು ಕಾಡುತ್ತದೆ. ನಾವಿಂದು ಹೇಗೆ ಮನೆ ಕೆಲಸವನ್ನು ಸುಲಭವಾಗಿ ಮಾಡಿ ಮುಗಿಸಬಹುದು ಎಂಬುದನ್ನು ಹೇಳ್ತೇವೆ.
ಸಮಯಪ್ರಜ್ಞೆ : ಯಾವುದೇ ಕೆಲಸಕ್ಕೆ ಸಮಯ ಪಾಲನೆ ಬಹಳ ಮುಖ್ಯ. ಮನೆಯಲ್ಲೇ ಇರ್ತೇವಲ್ಲ, ಆರಾಮವಾಗಿ ಕೆಲಸ ಮಾಡಿದ್ರೆ ಆಯ್ತು ಎನ್ನುವವರಿದ್ದಾರೆ. ಅದು ತಪ್ಪು. ದಿನವಿಡೀ ಅದೇ ಕೆಲಸ ಮಾಡ್ಬೇಕೆಂದೇನೂ ಇಲ್ಲ. ಪ್ರತಿ ಕೆಲಸಕ್ಕೂ ಸಮಯ ನಿಗದಿ ಮಾಡಿಕೊಳ್ಳಿ. ನಂತ್ರ ಅದರಂತೆ ನಡೆದುಕೊಳ್ಳಿ. ಆಗ ನಿಮ್ಮ ಕೆಲಸ ಬೇಗ ಮುಗಿಯುತ್ತದೆ.
ಇದನ್ನೂ ಓದಿ: BHAGAVAT PURANA: ಲೈಂಗಿಕ ಸುಖ ಮಹಿಳೆಗೇ ಹೆಚ್ಚು, ಮುಟ್ಟಿಗೆ ಬದಲು ಇಂದ್ರ ನೀಡಿದ ವರವಿದು!
ಆದ್ಯತೆ ಪ್ರಕಾರ ಕೆಲಸ ಮಾಡಿ : ಇದು ತುಂಬಾ ಸರಳವಾದ ವಿಷಯವಾಗಿದೆ. ಆದರೆ ಪ್ರಾಯೋಗಿಕವಾಗಿ ಕೆಲವೇ ಜನರು ಅದನ್ನು ಜಾರಿಗೆ ತರ್ತಾರೆ. ಮೊದಲು ಯಾವುದಕ್ಕೆ ಆದ್ಯತೆ ನೀಡ್ಬೇಕು ಎಂಬುದನ್ನು ಅರಿಯಬೇಕು. ಮನೆಯಿಂದ ಬೇಗ ಕೆಲಸಕ್ಕೆ ಹೋಗುವವರಿದ್ದರೆ ಮನೆ ಸ್ವಚ್ಛತೆಗಿಂತ ಅವರಿಗೆ ಉಪಹಾರ ಸಿದ್ಧಪಡಿಸುವುದು ಮುಖ್ಯವಾಗುತ್ತದೆ. ಹಾಗಾಗಿ ಮೊದಲು ಉಪಹಾರ ಸಿದ್ಧಪಡಿಸಿ. ಬಟ್ಟೆ ಒಗೆದು ಹೊರಗೆ ಹೋಗಬೇಕಾದರೆ ಎಲ್ಲಾ ಬಟ್ಟೆಗಳನ್ನು ಒಗೆಯುವ ಬದಲು ಆ ದಿನ ಅಗತ್ಯ ಬಟ್ಟೆಗಳನ್ನು ಮಾತ್ರ ಒಗೆಯಿರಿ. ಹೀಗೆ ಆದ್ಯತೆಗೆ ತಕ್ಕಂತೆ ಕೆಲಸ ಮಾಡಿದ್ರೆ ಕೆಲಸ ಬೇಗ ಮುಗಿಯುತ್ತದೆ.
ಮನಸ್ಸಿನಲ್ಲೇ ಟೈಂ ಟೇಬಲ್ ಮಾಡಿಕೊಳ್ಳಿ : ಮನಸ್ಸಿನಲ್ಲಿ ನೀಲನಕ್ಷೆಯನ್ನು ಹೊಂದಿದ್ದರೆ ಕೆಲಸ ಸುಲಭವಾಗುತ್ತದೆ. ಯಾವ ಕೆಲಸವಾದ್ಮೇಲೆ ಯಾವ ಕೆಲಸ ಮಾಡ್ಬೇಕು ಎಂಬುದನ್ನು ಮನಸ್ಸಿನಲ್ಲಿಯೇ ಹೊಂದಿಸಿಕೊಳ್ಳಿ. ಇಡೀ ದಿನದ ಕಾರ್ಯಕ್ರಮವನ್ನು ಬೆಳಿಗ್ಗೆಯೇ ಫಿಕ್ಸ್ ಮಾಡಿ.
ಮೊದಲೇ ಸಿದ್ಧತೆ : ಮಕ್ಕಳು ಚಿಕ್ಕವರಾಗಿದ್ದರೆ, ತಕ್ಷಣ ಕೆಲಸ ಮಾಡುವುದು ಕಷ್ಟ. ಮಕ್ಕಳ ಡ್ರೆಸ್, ಬ್ಯಾಗ್ ಇತ್ಯಾದಿಗಳನ್ನು ರಾತ್ರಿಯೇ ಸಿದ್ಧಪಡಿಸಿ. ನೀವು ಬೆಳಿಗ್ಗೆ ವಿಶೇಷ ಉಪಹಾರ ತಯಾರಿಸುತ್ತಿದ್ದರೆ, ರಾತ್ರಿಯೇ ಅದಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳಿ. ಆಗ ಬೆಳಿಗ್ಗೆ ತೊಂದರೆಯಾಗುವುದಿಲ್ಲ.
ಇದನ್ನೂ ಓದಿ: ಮುಟ್ಟಾದ ಮಹಿಳೆಯರೇಕೆ ಮೂಲೆಯಲ್ಲಿ ಕೂರಬೇಕು?
ತಕ್ಷಣ ಕೆಲಸ ಮುಗಿಸಿ : ಕೆಲಸ ಮುಂದೂಡುವ ಪ್ರವೃತ್ತಿ ಬೇಡ. ನಾಳೆ ಮಾಡಿದ್ರೆ ಆಯ್ತು ಎಂದು ಕೆಲಸವನ್ನು ಮುಂದೆ ತಳ್ಳಬೇಡಿ. ಹಾಗೆ ಮಾಡಿದ್ರೆ ನಾಳೆ ಬರೋದೇ ಇಲ್ಲ. ನೆನಪಾದ ತಕ್ಷಣ ಆ ಕೆಲಸ ಮಾಡಿ ಮುಗಿಸಿ.
ಒಂದು ಬಾರಿ, ಎರಡು ಕೆಲಸಗಳು : ಒಂದೇ ಬಾರಿಗೆ ಎರಡು ಕೆಲಸಗಳನ್ನು ಮಾಡಲು ಪ್ರಯತ್ನಿಸಿ. ಒಮ್ಮೆ ಒಗ್ಗಿಕೊಂಡರೆ ಸಮಯದ ಕೊರತೆ ಅನ್ನಿಸುವುದಿಲ್ಲ.
ಕುಟುಂಬ ಸದಸ್ಯರ ಸಹಾಯ ಪಡೆಯಿರಿ : ಒಬ್ಬಂಟಿಯಾಗಿ ಕೆಲಸ ಮಾಡುವ ಬದಲು ಕುಟುಂಬ ಸದಸ್ಯರ ಸಹಾಯ ತೆಗೆದುಕೊಂಡರೆ ನಿಮ್ಮ ಕೆಲಸ ತ್ವರಿತವಾಗಿ ಮತ್ತು ಸುಲಭವಾಗಿ ಮುಗಿಯುತ್ತದೆ. ಅವರನ್ನು ಕೆಲಸದ್ಲಿ ತೊಡಗಿಸುವ ಕಲೆ ನಮಗೆ ತಿಳಿದಿರಬೇಕು. ಮಕ್ಕಳು ಹಾಗೂ ಪತಿಗೆ ಸಣ್ಣಪುಟ್ಟ ಕೆಲಸ ನೀಡ್ಬೇಕು. ಪತಿಗೆ ಎಲ್ಲ ಕೆಲಸ ಮಾಡಿದ್ರೆ ಅವರು ಹೆಚ್ಚು ಪ್ರೀತಿ ಮಾಡ್ತಾರೆ ಎಂಬ ನಂಬಿಕೆ ಸುಳ್ಳು. ಇಬ್ಬರೂ ಸೇರಿ ಕೆಲಸ ಮಾಡಿದ್ರೆ ಪ್ರೀತಿ ಹೆಚ್ಚಾಗುತ್ತದೆ ಎಂಬುದು ನೆನಪಿರಲಿ. ಮಕ್ಕಳಿಗೆ ಅವರ ವಯಸ್ಸಿಗೆ ಅನುಗುಣವಾಗಿ ಜವಾಬ್ದಾರಿಗಳನ್ನು ನಿಯೋಜಿಸಿ. ಸ್ವಲ್ಪ ದಿನಗಳ ನಂತರ ಅವರು ಬೇಸರಗೊಳ್ಳದಂತೆ ಜವಾಬ್ದಾರಿಯನ್ನು ಕೆಲಸವಾಗಿ ಬದಲಾಯಿಸಿ.
