Bhagavat Purana: ಲೈಂಗಿಕ ಸುಖ ಮಹಿಳೆಗೇ ಹೆಚ್ಚು, ಮುಟ್ಟಿಗೆ ಬದಲು ಇಂದ್ರ ನೀಡಿದ ವರವಿದು!
ಪುರುಷರಿಗೂ ಮುಟ್ಟಿನ ಸಮಸ್ಯೆ ಕಾಡುತ್ತೆ ಎಂಬ ವಿಷ್ಯ ನಿಮಗೆ ಗೊತ್ತಾಗಿದೆ. ಇಂದು ಈ ಮುಟ್ಟಿನ ನೋವು ಮಹಿಳೆಯರನ್ನು ಕಾಡೋದು ಏಕೆ ಎಂಬ ಪ್ರಶ್ನೆಗೆ ಉತ್ತರ ನೀಡ್ತೇವೆ. ಮಹಿಳೆಯರ ಈ ಯಾತನೆ ಪಾಪದ ಫಲ. ಇಂದ್ರ ಮಾಡಿದ ಪಾಪದ ಸ್ವಲ್ಪ ಭಾಗವನ್ನು ತೆಗೆದುಕೊಂಡ ಮಹಿಳೆ ಮುಟ್ಟಿನ ಸಂಕಷ್ಟ ಅನುಭವಿಸ್ತಿದ್ದಾಳೆ.
ಮಹಿಳೆ (Woman) ಯರ ವೀಕ್ನೆಸ್ (Weakness) ಅಂದ್ರೆ ಮುಟ್ಟು ಎನ್ಬಹುದು. ಪಿರಿಯಡ್ಸ್ (Periods) ಟೈಂನಲ್ಲಿ ಆಗುವ ನೋವು ಹಾಗೂ ಕಿರಿಕಿರಿಯಿಂದ ಪ್ರತಿ ತಿಂಗಳು ತೊಂದರೆ ಅನುಭವಿಸುವ ಮಹಿಳೆಯರು ನಮಗ್ಯಾಕೆ ಈ ಶಿಕ್ಷೆ ಎಂದು ಪ್ರಶ್ನೆ ಮಾಡ್ತಿರುತ್ತಾರೆ. ಹುಡುಗಿಯರಿಗೇ ದೇವರು (God) ಯಾಕೆ ಮುಟ್ಟಿನ ಸಮಸ್ಯೆ ಇಟ್ಟಿದ್ದಾನೆ ಎಂದು ಕೇಳ್ತಿರುತ್ತಾರೆ. ಇದ್ರ ಹಿಂದಿನ ಕಾರಣವೇನು ? ಮುಟ್ಟು ಏಕೆ ಆಗುತ್ತೆ ? ಹೀಗೆ ಅನೇಕ ಪ್ರಶ್ನೆಗಳು ಮಹಿಳೆಯರ ಮನದಲ್ಲಿರುತ್ತದೆ. ಧಾರ್ಮಿಕ ಗ್ರಂಥಗಳಲ್ಲಿ ಅನೇಕ ವಿಷ್ಯಗಳನ್ನು ಹೇಳಲಾಗಿದೆ. ಅದ್ರಲ್ಲಿ ಮಹಿಳೆಯರ ಮುಟ್ಟಿನ ಬಗ್ಗೆಯೂ ಉಲ್ಲೇಖವಿದೆ. ಧಾರ್ಮಿಕ ನಂಬಿ (Religious Belief) ಕೆಗಳ ಪ್ರಕಾರ, ಇಂದ್ರ ದೇವ ನೀಡಿದ ಶಾಪವೇ ಇದರ ಹಿಂದಿನ ಕಾರಣ ಎಂದು ಪರಿಗಣಿಸಲಾಗಿದೆ. ಇಂದ್ರ (Indra) ನು ಸ್ತ್ರೀಯರಿಗೆ ಶಾಪ ಕೊಟ್ಟದ್ದು ಏಕೆ ಎಂದು ಇಂದು ನಾವು ನಿಮಗೆ ಹೇಳ್ತೆವೆ.
ಭಗ್ವತ್ ಪುರಾಣದ ಪ್ರಕಾರ, ದೇವತೆಗಳ ಗುರು ದೇವರಾಜ್ ಇಂದ್ರನು ಕೋಪಗೊಂಡಾಗ ಇದರ ಲಾಭ ಪಡೆದ ರಾಕ್ಷಸರು ಸ್ವರ್ಗದ ಮೇಲೆ ದಾಳಿ ಮಾಡುತ್ತಾರೆ. ಈ ವೇಳೆ ಇಂದ್ರನು ತನ್ನ ಸ್ಥಾನವನ್ನು ಬಿಟ್ಟು ಓಡಿ ಹೋಗುತ್ತಾನೆ. ನಂತರ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಇಂದ್ರನು ಬ್ರಹ್ಮ (Brahma) ನ ಸಹಾಯ ಪಡೆಯುತ್ತಾನೆ. ಈ ವೇಳೆ ಬ್ರಹ್ಮನು ಒಬ್ಬ ಮಹರ್ಷಿ ಸೇವೆ ಮಾಡಿದ್ರೆ ನಿನ್ನ ಸ್ಥಾನವನ್ನು ವಾಪಸ್ ಪಡೆಯಬಹುದೆಂದು ಸಲಹೆ ನೀಡ್ತಾನೆ.
ರಾಶಿ ಆಧಾರದಲ್ಲಿ ದಾಂಪತ್ಯದಲ್ಲಿ ಕಡಿಮೆಯಿಂದ ಹೆಚ್ಚು ಮೋಸ ಮಾಡುವವರು ಇವರೇ ನೋಡಿ..
ಬ್ರಹ್ಮನ (Bramha) ಸಲಹೆ ಮೇರೆಗೆ ಇಂದ್ರನು ಮಹರ್ಷಿಯೊಬ್ಬರ ಸೇವೆ ಮಾಡಲು ಶುರು ಮಾಡ್ತಾನೆ. ಆದ್ರೆ ಮಹರ್ಷಿ ತಾಯಿ (Mother ) ಅಸುರಳಾಗಿರ್ತಾಳೆ. ಆದರೆ ಇಂದ್ರದೇವನಿಗೆ ಇದರ ಅರಿವಿರುವುದಿಲ್ಲ. ಇಂದ್ರ ನೀಡಿದ ಎಲ್ಲ ಹವನ ಸಾಮಗ್ರಿಗಳನ್ನು ಮಹರ್ಷಿ ಅಸುರರಿಗೆ ನೀಡ್ತಿರುತ್ತಾನೆ. ಇದನ್ನು ತಿಳಿದ ಇಂದ್ರದೇವನು ಕೋಪಗೊಂಡು ಆ ಮಹರ್ಷಿಯನ್ನು ಹತ್ಯೆ ಮಾಡ್ತಾನೆ. ಇದರಿಂದ ಬ್ರಹ್ಮಹತ್ಯಾ ದೋಷ ಇಂದ್ರನಿಗೆ ಬರುತ್ತದೆ. ಇಂದ್ರ ದೇವನು ಒಂದು ಲಕ್ಷ ವರ್ಷಗಳ ಕಾಲ ವಿಷ್ಣುವಿಗಾಗಿ ತಪಸ್ಸು ಮಾಡುತ್ತಾನೆ. ನಂತ್ರ ಪ್ರತ್ಯಕ್ಷವಾಗುವ ಮಹಾ ವಿಷ್ಣು (Vishnu),ಈ ಪಾಪದಿಂದ ಮುಕ್ತಿ ಹೊಂದಲು ಇಂದ್ರನಿಗೆ ಉಪಾಯವನ್ನು ಸೂಚಿಸುತ್ತಾನೆ. ಈ ಪಾಪದ ಸ್ವಲ್ಪ ಭಾಗವನ್ನು ಮರ, ಭೂಮಿ, ನೀರು ಮತ್ತು ಮಹಿಳೆಗೆ ನೀಡುವಂತೆ ಭಗವಂತ ಇಂದ್ರನಿಗೆ ಹೇಳ್ತಾನೆ. ಹಾಗೆಯೇ ಅದಕ್ಕೆ ಬದಲಾಗಿ ಒಂದು ವರ ನೀಡುವಂತೆ ವಿಷ್ಣು ಇಂದ್ರನಿಗೆ ಹೇಳ್ತಾನೆ. ಇದಕ್ಕಾಗಿ ಇಂದ್ರ ನಾಲ್ವರನ್ನೂ ಒಪ್ಪಿಸುತ್ತಾನೆ. ಇಂದ್ರನು ಬ್ರಹ್ಮನನ್ನು ಕೊಂದ ಪಾಪದ ನಾಲ್ಕನೇ ಒಂದು ಭಾಗವನ್ನು ಮರಕ್ಕೆ ನೀಡುತ್ತಾನೆ. ಹಾಗೆಯೇ ಸಾಯುವ ಮೊದಲು ಮತ್ತೆ ಚಿಗುರಬಹುದಾದದ ವರವನ್ನು ಮರಕ್ಕೆ ನೀಡ್ತಾನೆ.
ಇಂದ್ರನ ಪಾಪದ ಸ್ವಲ್ಪ ಭಾಗವನ್ನು ನೀರು ತೆಗೆದುಕೊಳ್ಳುತ್ತದೆ. ಇದಕ್ಕೆ ಬದಲಾಗಿ ನೀರಿಗೆ ಶುದ್ಧೀಕರಿಸುವ ವರವನ್ನು ಇಂದ್ರ ನೀಡ್ತಾನೆ. ಪೃಥ್ವಿ ಕೂಡ ಪಾಪದ ಸ್ವಲ್ಪ ಭಾಗವನ್ನು ತೆಗೆದುಕೊಳ್ಳಲು ಒಪ್ಪುತ್ತದೆ. ಅದಕ್ಕೆ ಬದಲಾಗಿ ಇಂದ್ರ ತನ್ನ ಗಾಯಗಳೆಲ್ಲ ತಾನಾಗಿಯೇ ವಾಸಿಯಾಗಿಸಿಕೊಳ್ಳುವ ವರದಾನವನ್ನು ಪೃಥ್ವಿಗೆ ನೀಡ್ತಾನೆ.
ತಿಂಗಳಿಗೊಮ್ಮೆ ಗಂಡಸರೂ ಮುಟ್ಟಾಗ್ತಾರೆ, ವಿಜ್ಞಾನದಿಂದ ಬಯಲಾಯ್ತು ಶಾಕಿಂಗ್ ಸತ್ಯ
ನಂತ್ರ ಇಂದ್ರ ಮಹಿಳೆ ಬಳಿ ಹೋಗ್ತಾನೆ. ಮಹಿಳೆಗೆ ಪಾಪದ ಸ್ವಲ್ಪ ಭಾಗ ನೀಡ್ತಾನೆ. ಅದೇ ಈ ಮುಟ್ಟು ಎನ್ನಲಾಗಿದೆ. ಆದ್ರೆ ಇದರ ಬದಲಾಗಿ ಇಂದ್ರನು ಮಹಿಳೆಗೆ ವರ ನೀಡ್ತಾನೆ. ಇಂದ್ರನ ವರದಿಂದಾಗಿ ಪುರುಷರಿಗೆ ಹೋಲಿಸಿದರೆ ಮಹಿಳೆ ದುಪ್ಪಟ್ಟು ಲೈಂಗಿಕ ಸುಖದ ಆನಂದವನ್ನು ಅನುಭವಿಸಲು ಸಾಧ್ಯವಾಗ್ತಿದೆ ಎನ್ನಲಾಗುತ್ತದೆ. ಆದ್ರೆ ಇಂದ್ರನಿಂದ ಪಡೆದ ಪಾಪದ ಭಾಗ ಮಹಿಳೆಯರಿಗೆ ಶಾಪವಾಗಿ ಪರಿಣಮಿಸಿದೆ. ಅಂದಿನಿಂದ ಮಹಿಳೆಯರು ಋತುಸ್ರಾವದ ರೂಪದಲ್ಲಿ ಬ್ರಹ್ಮನನ್ನು ಕೊಂದ ಪಾಪವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ನಂಬಲಾಗಿದೆ.