ಸಾಧನೆ ಮಾಡೋದ್ರಲ್ಲಿ ಮಹಿಳೆಯರು ಯಾವತ್ತೂ ಹಿಂದೆ ಬೀಳೋದಿಲ್ಲ. ಹಲವು ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಾರೆ. 2023ರಲ್ಲಿ ಮಹಿಳೆಯರ ಸಾಧನೆಗಳು, ಮಹಿಳೆಯರ ಜೀವನದಲ್ಲಾದ ಕೆಲವು ಅಚ್ಚರಿಯ ಘಟನೆಗಳ ಕುರಿತಾದ ಮಾಹಿತಿ ಇಲ್ಲಿದೆ. 

ಸಾಧನೆ ಮಾಡೋದ್ರಲ್ಲಿ ಮಹಿಳೆಯರು ಯಾವತ್ತೂ ಹಿಂದೆ ಬೀಳೋದಿಲ್ಲ. ಹಲವು ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಾರೆ. 2023ರಲ್ಲಿ ಮಹಿಳೆಯರ ಸಾಧನೆಗಳು, ಮಹಿಳೆಯರ ಜೀವನದಲ್ಲಾದ ಕೆಲವು ಅಚ್ಚರಿಯ ಘಟನೆಗಳ ಕುರಿತಾದ ಮಾಹಿತಿ ಇಲ್ಲಿದೆ. 

ಜಪಾನ್ ವಾಯು ಪಡೆ ಸಮರಾಭ್ಯಾಸಕ್ಕೆ ಭಾರತೀಯ ಮಹಿಳಾ ಪೈಲಟ್​
ವಿದೇಶದಲ್ಲಿ ನಡೆಯುವ ಸಮರಾಭ್ಯಾಸದಲ್ಲಿ ಮೊದಲ ಬಾರಿಗೆ ಭಾರತದ ಮಹಿಳಾ ಫೈಟರ್‌ ಭಾಗವಹಿಸಿದ್ದರು. ದೇಶದ ಮೊದಲ ಯುದ್ಧ ವಿಮಾನ ಫೈಟರ್‌ ಫೈಲಟ್‌ ಎಂಬ ಖ್ಯಾತಿಯ ಅವನಿ ಚತುರ್ವೇದಿ ಜಪಾನ್‌ ನಲ್ಲಿ ನಡೆಯಲಿರುವ “ವೀರ್‌ ಗಾರ್ಡಿಯನ್‌ 2023′ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿದ್ದರು. ಜ. 16ರಿಂದ 26ರ ವರೆಗೆ ಈ ಏರಿಯಲ್‌ ವಾರ್‌ಗೇಮ್‌ ನಡೆದಿತ್ತು. ಸ್ಕ್ವಾಡ್ರನ್‌ ಲೀಡರ್‌ ಆಗಿರುವ ಅವನಿ ಸುಖೋಯ್‌ 30ಎಂಕೆಐನ ಪೈಲಟ್‌ ಸಹ ಆಗಿದ್ದಾರೆ.

2023ರಲ್ಲಿ ವರ್ಷದಲ್ಲಿ ಆಹಾರ, ಆರೋಗ್ಯ ಕ್ಷೇತ್ರದಲ್ಲಿ ಏನೆಲ್ಲಾ ಆಯ್ತು, ಇಲ್ಲಿದೆ ಸುದ್ದಿಗಳ ಹಿನ್ನೋಟ

ನೌಕಾದಳಕ್ಕೆ ಆಯ್ಕೆಯಾದ ಹರಿಹರದ ಗಟ್ಟಿಗಿತ್ತಿ ಯುವತಿ
ದಾವಣಗೆರೆ ಜಿಲ್ಲೆಯ ಹರಿಹರ ನಗರದಲ್ಲಿರುವ ಸಿಬಾರ ವೃತ್ತದ ನಿವಾಸಿ ಲತಾರವರ ಪುತ್ರಿ ಭೂಮಿಕ ಇಡೀ ರಾಜ್ಯ ತಿರುಗಿ ನೋಡುವಂತ ಸಾಧನೆ ಮಾಡಿದ್ದಾಳೆ. ಭೂಮಿಕ ಮನೆಯಲ್ಲಿ ಕಿತ್ತು ತಿನ್ನುವ ಬಡತನದಲ್ಲೇ ತಾಯಿಯ ಆಸರೆಯಲ್ಲೇ ಬದುಕಿ ಬೆಳೆದು ಶಿಕ್ಷಣ ಪಡೆದ ಯುವತಿ ಮುಂದೆ ಭಾರತೀಯ ನೌಕಾದಳಕ್ಕೆ ರಾಜ್ಯದಿಂದ ಆಯ್ಕೆಯಾದ ಏಕೈಕ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರಳಾದಳು.

ಬ್ರೆಜಿಲ್‌ನಲ್ಲಿ 7.3 ಕೆಜಿ ತೂಕದ ದೈತ್ಯ ಮಗುವಿಗೆ ಜನ್ಮ ನೀಡಿದ ಮಹಿಳೆ
ಸಾಮಾನ್ಯವಾಗಿ ನವಜಾತ ಶಿಶು 2.5 ಕೆಜಿಯಿಂದ 3.5 ಕೆಜಿ ಇರುತ್ತೆ. ದಷ್ಟಪುಷ್ಟವಾಗಿ ಬೆಳೆದಿದ್ರೆ 5 ಕೆಜಿ ಇರಬಹುದೇನೋ. ಆದ್ರೆ ಬ್ರೆಜಿಲ್​ನ ಮಹಾತಾಯಿಯೊಬ್ಬಳು 7.3 ಕೆ.ಜಿ ತೂಕದ, ಎರಡು ಅಡಿ ಉದ್ದದ ದೈತ್ಯ ಮಗುವೊಂದಕ್ಕೆ ಜನ್ಮ ನೀಡಿದರು. ಪಾರಿಂಟಿನ್ಸ್‌ನ ಪಾಡ್ರೆ ಕೊಲಂಬೊ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಮಗುವಿಗೆ ಜನ್ಮ ನೀಡಿದ್ದು, ಆ್ಯಂಗರ್‌ಸನ್ ಸ್ಯಾಂಟೋಸ್ ಎಂದು ಹೆಸರಿಡಲಾಗಿತ್ತು. ಬ್ರೆಜಿಲ್‌ನಲ್ಲಿ ಈವರೆಗೆ ಜನಿಸಿದ ಅತ್ಯಂತ ತೂಕದ ಮಗು ಎಂಬ ದಾಖಲೆ ಹೊಂದಿತ್ತು.ಆಂಗರ್ಸನ್ ಸ್ಯಾಂಟೋಸ್ ಅವರು ಅಮೆಜಾನಾಸ್ ರಾಜ್ಯದ ಪ್ಯಾರಿಂಟಿನ್ಸ್‌ನಲ್ಲಿರುವ ಹಾಸ್ಪಿಟಲ್ ಪಾಡ್ರೆ ಕೊಲಂಬೊದಲ್ಲಿ ಸಿಸೇರಿಯನ್ ಮೂಲಕ ಮಗು ಜನಿಸಿತು

ಮುಟ್ಟಿನ ರಜೆ ಹಾಗೂ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ 60 ದಿನ ಹೆರಿಗೆ ರಜೆ
ಕೇರಳದ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ಹಾಗೂ ಕಾಲೇಜು ವಿದ್ಯಾರ್ಥಿನಿಯರಿಗೆ ಹೆರಿಗೆ ರಜೆಯನ್ನು ಕೇರಳ ಸರ್ಕಾರ ಘೋಷಿಸಿತ್ತು. ಇಂದು ಕೇರಳ ಉನ್ನತ ಶಿಕ್ಷಣ ಸಚಿವೆ ಆರ್ ಬಿಂದು ಈ ಮಹತ್ವದ ಘೋಷಣೆ ಮಾಡಿದ್ದರು. ಇತ್ತೀಚೆಗೆ ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯವು (CUSAT) ತನ್ನ ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ ಘೋಷಿಸಿತ್ತು. ಇದರ ಬೆನ್ನಲ್ಲೇ ಕೇರಳ ಸರ್ಕಾರ ಮಹತ್ವದ ಸಭೆ ನಡೆಸಿದ ಇದೀಗ ಹೊಸ ಘೋಷಣೆ ಮಾಡಿದೆ. ಮುಟ್ಟಿನ ರಜೆ ಹಾಗೂ 18 ವರ್ಷ ತುಂಬಿದ ಕಾಲೇಜು ವಿದ್ಯಾರ್ಥಿನಿಯರಿಗೆ 60 ದಿನದ ಹೆರಿಗೆ ರಜೆಯನ್ನು ಘೋಷಿಸಿತು.

ಮಗುನೇ ಬೇಡ ಎಂದ ನಿವೇದಿತಾ ಗೌಡ, ಡಿವೋರ್ಸ್‌ಗೆ ಕಾರಣವಾದ ರಶ್ಮಿಕಾ ಮಂದಣ್ಣ; ಜನವರಿ 2023ರ ಕಥೆ ಇದು!

ವಿಶ್ವದ ಅತ್ಯಂತ ಹಿರಿಯ ಮಹಿಳೆ ಲುಸಿಲ್ ರಾಂಡನ್, 118ನೇ ವಯಸ್ಸಿನಲ್ಲಿ ನಿಧನ
ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ, ಫ್ರೆಂಚ್ ಸನ್ಯಾಸಿನಿ ಲುಸಿಲ್ ರಾಂಡನ್ ಅವರು ತಮ್ಮ 118ನೇ ವಯಸ್ಸಿನಲ್ಲಿ ನಿಧನರಾದರು. ಸೇಂಟ್ ಕ್ಯಾಥರೀನ್ ಲೇಬರ್ ನರ್ಸಿಂಗ್ ಹೋಮ್‌ನ ವಕ್ತಾರ ಡೇವಿಡ್ ತವೆಲ್ಲಾ ಈ ಬಗ್ಗೆ ಮಾಹಿತಿ ನೀಡಿದ್ದರು. ಸಿಸ್ಟರ್ ಆಂಡ್ರೆ ಎಂದು ಕರೆಯಲ್ಪಡುತ್ತಿದ್ದ ರಾಂಡನ್ ಅವರು, ಫೆಬ್ರವರಿ 11,1904ರಂದು ಜನಿಸಿದರು. ದಕ್ಷಿಣ ಫ್ರಾನ್ಸ್‌ನಲ್ಲಿ ಮೊದಲ ಮಹಾಯುದ್ಧ ಆರಂಭಕ್ಕೂ ಒಂದು ದಶಕಕ್ಕೂ ಮುನ್ನ ಅವರು ಹುಟ್ಟಿದ್ದರು.

ಸೀರೆ ಉಟ್ಕೊಂಡೇ ಜಿಮ್‌ನಲ್ಲಿ ವರ್ಕೌಟ್‌ ಮಾಡಿದ ಮಹಿಳೆ
ಮಹಿಳೆಯೊಬ್ಬರು ಸೀರೆ ಉಟ್ಟುಕೊಂಡು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಫಿಟ್‌ನೆಸ್ ಫ್ರೀಕ್ ಆಗಿರುವ ರೀನಾ ಸಿಂಗ್, ಸೀರೆ ಉಟ್ಟುಕೊಂಡು ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ವಿಡಿಯೋ ಪೋಸ್ಟ್‌ ಮಾಡಿದ್ದರು. ಈ ವಿಡಿಯೋವನ್ನು ಈವರೆಗೆ 33 ಮಿಲಿಯನ್‌ಗೂ ಹೆಚ್ಚು ಜನರು ವೀಕ್ಷಿಸಿದ್ದು, ಇದಕ್ಕೆ 9 ಲಕ್ಷ 82 ಸಾವಿರದ 306 ಲೈಕ್ಸ್‌ ಸಹ ಸಿಕ್ಕಿತ್ತು.