Asianet Suvarna News Asianet Suvarna News

2023ರಲ್ಲಿ ವರ್ಷದಲ್ಲಿ ಆಹಾರ, ಆರೋಗ್ಯ ಕ್ಷೇತ್ರದಲ್ಲಿ ಏನೆಲ್ಲಾ ಆಯ್ತು, ಇಲ್ಲಿದೆ ಸುದ್ದಿಗಳ ಹಿನ್ನೋಟ

ವರ್ಷದಿಂದ ವರ್ಷ ಬದಲಾಗುವ ಹಾಗೆಯೇ ಎಲ್ಲಾ ಕ್ಷೇತ್ರದಲ್ಲೂ ಹಲವು ಬದಲಾವಣೆಗಳು ಆಗುತ್ತಿರುತ್ತವೆ. ಈ ವರ್ಷಾಂತ್ಯದಲ್ಲಿ ಆರೋಗ್ಯ, ಜೀವನಶೈಲಿ, ಪ್ರಯಾಣ, ಶಿಕ್ಷಣ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ ಕೆಲ ಮಹತ್ವದ ವಿಚಾರಗಳ ಇಣುಕು ನೋಟ ಇಲ್ಲಿದೆ. 

looks back on Health, woman and food stories in 2023, some sneak peak of the year Vin
Author
First Published Dec 12, 2023, 4:58 PM IST

ವರ್ಷದಿಂದ ವರ್ಷ ಬದಲಾಗುವ ಹಾಗೆಯೇ ಎಲ್ಲಾ ಕ್ಷೇತ್ರದಲ್ಲೂ ಹಲವು ಬದಲಾವಣೆಗಳು ಆಗುತ್ತಿರುತ್ತವೆ. ಈ ವರ್ಷಾಂತ್ಯದಲ್ಲಿ ಆರೋಗ್ಯ, ಜೀವನಶೈಲಿ, ಪ್ರಯಾಣ, ಶಿಕ್ಷಣ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ ಕೆಲ ಮಹತ್ವದ ವಿಚಾರಗಳ ಇಣುಕು ನೋಟ ಇಲ್ಲಿದೆ. 

ಹೊಸ ಫ್ಲೇವರ್, ಪ್ಯಾಕ್‌ ಬಿಡುಗಡೆ ಮಾಡಿದ ಪಾರ್ಲೆಜಿ
80-90 ದಶಕಗಳಲ್ಲಿ ಹುಟ್ಟಿ - ಬೆಳದವರ ನೆಚ್ಚಿನ ಬಿಸ್ಕೆಟ್‌ಗಳಲ್ಲಿ ಒಂದು ಈ ಪಾರ್ಲೆ-ಜಿ. ಈ ಬಿಸ್ಕತ್ತುಗಳು ಬಾಲ್ಯದಿಂದಲೂ ಪ್ರತಿಯೊಬ್ಬ ಭಾರತೀಯರ ಮೆಚ್ಚಿನವುಗಳಾಗಿವೆ. ಈ ಬಿಸ್ಕೆಟ್‌ನ ಮೂಲ ರುಚಿ ಯಾವ ದೇಸಿ ಬಿಸ್ಕೆಟ್‌ಗೂ ಸರಿಸಾಟಿ ಇಲ್ಲ ಎಂಬ ಮಾತನ್ನು ಅನೇಕರು ಈಗಲೂ ಹೇಳುತ್ತಾರೆ. 2023ರ ಜನವರಿ ಆರಂಭದಲ್ಲಿ ಪಾರ್ಲೆ-ಜಿ ಕೆಲವು ಹೊಸ ರುಚಿ ಅಥವಾ ಫ್ಲೇವರ್ಸ್‌ಗಳನ್ನು ಬಿಡುಗಡೆ ಮಾಡಿತು. ಇದು ಎಂದಿನಂತೆ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ತೀವ್ರ ಚರ್ಚೆಗೊಳಗಾಯಿತು. 

ಐಕಿಯಾದಲ್ಲಿ ಸಿಪಿಆರ್ ನೀಡಿ ಹಾರ್ಟ್‌ಅಟ್ಯಾಕ್ ಆದ ವ್ಯಕ್ತಿಯ ಜೀವ ಉಳಿಸಿದ ಡಾಕ್ಟರ್‌
ಬೆಂಗಳೂರಿನ ನಾಗಸಂದ್ರದಲ್ಲಿರುವ ಐಕಿಯಾ ಶಾಪಿಂಗ್ ಮಾಲ್‌ಗೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ದಿಢೀರ್ ಹೃದಯಾಘಾತವಾಗಿದ್ದು, ಅಲ್ಲೇ ಇದ್ದ ವೈದ್ಯರೊಬ್ಬರು ಅವರಿಗೆ ಸಿಪಿಆರ್ ಮಾಡಿ ಜೀವ ಉಳಿಸಿದ್ದರು.  ಈ ವೈದ್ಯರು ಕೂಡ ಐಕಿಯಾಗೆ ಶಾಪಿಂಗ್ ಮಾಡುವ ಸಲುವಾಗಿ ಬಂದಿದ್ದಾಗ ಈ ಘಟನೆ ನಡೆದಿತ್ತು. ಮಧ್ಯಪ್ರದೇಶ ಮೂಲದ ವೈದ್ಯರು 10 ನಿಮಿಷಗಳಿಗೂ ಹೆಚ್ಚು ಕಾಲ ವ್ಯಕ್ತಿಗೆ ಸಿಪಿಆರ್ ಮಾಡಿ ಜೀವ ಉಳಿಸಿದ್ದರು. ವೈದ್ಯರ ತಕ್ಷಣದ ಜೀವ ಉಳಿಸುವ ಕಾರ್ಯಕ್ಕೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಸಹ ಆಗಿತ್ತು. 

Sports Flashback 2023: ರೊನಾಲ್ಡೋನಿಂದ ಜೋಕೋವರೆಗೆ ಜನವರಿಯಲ್ಲಿ ಸದ್ದು ಮಾಡಿದ ಸ್ಪೋರ್ಟ್ಸ್ ಸುದ್ದಿಗಳಿವು..!

ಸೀರೆ ಉಟ್ಕೊಂಡೇ ಜಿಮ್‌ನಲ್ಲಿ ವರ್ಕೌಟ್‌ ಮಾಡಿದ ಮಹಿಳೆಯ ವಿಡಿಯೋ ವೈರಲ್
ಮಹಿಳೆಯೊಬ್ಬರು ಸೀರೆ ಉಟ್ಟುಕೊಂಡು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಫಿಟ್‌ನೆಸ್ ಫ್ರೀಕ್ ಆಗಿರುವ ರೀನಾ ಸಿಂಗ್, ಸೀರೆ ಉಟ್ಟುಕೊಂಡು ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ವಿಡಿಯೋ ಪೋಸ್ಟ್‌ ಮಾಡಿದ್ದರು. ಈ ವಿಡಿಯೋವನ್ನು ಈವರೆಗೆ 33 ಮಿಲಿಯನ್‌ಗೂ ಹೆಚ್ಚು ಜನರು ವೀಕ್ಷಿಸಿದ್ದು, ಇದಕ್ಕೆ 9 ಲಕ್ಷ 82 ಸಾವಿರದ 306 ಲೈಕ್ಸ್‌ ಸಹ ಸಿಕ್ಕಿತ್ತು. 

ಜಪಾನ್ ವಾಯು ಪಡೆ ಸಮರಾಭ್ಯಾಸಕ್ಕೆ ಭಾರತೀಯ ಮಹಿಳಾ ಪೈಲಟ್​
ವಿದೇಶದಲ್ಲಿ ನಡೆಯುವ ಸಮರಾಭ್ಯಾಸದಲ್ಲಿ ಮೊದಲ ಬಾರಿಗೆ ಭಾರತದ ಮಹಿಳಾ ಫೈಟರ್‌ ಭಾಗವಹಿಸಿದ್ದರು. ದೇಶದ ಮೊದಲ ಯುದ್ಧ ವಿಮಾನ ಫೈಟರ್‌ ಫೈಲಟ್‌ ಎಂಬ ಖ್ಯಾತಿಯ ಅವನಿ ಚತುರ್ವೇದಿ ಜಪಾನ್‌ ನಲ್ಲಿ ನಡೆಯಲಿರುವ “ವೀರ್‌ ಗಾರ್ಡಿಯನ್‌ 2023′ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿದ್ದರು. ಜ. 16ರಿಂದ 26ರ ವರೆಗೆ ಈ ಏರಿಯಲ್‌ ವಾರ್‌ಗೇಮ್‌ ನಡೆದಿತ್ತು. ಸ್ಕ್ವಾಡ್ರನ್‌ ಲೀಡರ್‌ ಆಗಿರುವ ಅವನಿ ಸುಖೋಯ್‌ 30ಎಂಕೆಐನ ಪೈಲಟ್‌ ಸಹ ಆಗಿದ್ದಾರೆ.

IMDb 2023 ರ ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳಲ್ಲಿ ಶಾರುಖ್ ಖಾನ್ ಪಾರುಪತ್ಯ!

ಕಾಸರಗೋಡಿನಲ್ಲಿ ಚಿಕನ್ ಬಿರಿಯಾನಿ ತಿಂದು ಯುವತಿ ಸಾವು
ಫುಡ್​ ಪಾಯಿಸನ್​ನಿಂದ ಕೇರಳದ ಕಾಸರಗೋಡಿನಲ್ಲಿ ಯುವತಿಯೊಬ್ಬಳು ಮೃತಪಟ್ಟಿದ್ದಳು. ಮೃತ ಯುವತಿಯನ್ನು ಕಾಸರಗೋಡಿನ ಥಲಕ್ಲೇ ಮೂಲದ ಅಂಜುಶ್ರೀ ಪಾರ್ವತಿ ಎಂದು ಗುರುತಿಸಲಾಗಿತ್ತು. ಉದುಮದಲ್ಲಿರುವ ಹೋಟೆಲ್​ ಒಂದರಲ್ಲಿ ಆನ್​ಲೈನ್​ ಮೂಲಕ ಚಿಕನ್​ ಆಹಾರ ತರಿಸಿ ಅಂಜುಶ್ರೀ ಸೇವಿಸಿದ್ದಳು. ಇದಾದ ಬಳಿಕ ಆಕೆಯ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು. ಪರಿಸ್ಥಿತಿ ಗಂಭೀರವಾದ ಬೆನ್ನಲ್ಲೇ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಯುವತಿ ಮೃತಪಟ್ಟಿದ್ದಳು. 

Latest Videos
Follow Us:
Download App:
  • android
  • ios