- Home
- Entertainment
- Sandalwood
- ಮಗುನೇ ಬೇಡ ಎಂದ ನಿವೇದಿತಾ ಗೌಡ, ಡಿವೋರ್ಸ್‌ಗೆ ಕಾರಣವಾದ ರಶ್ಮಿಕಾ ಮಂದಣ್ಣ; ಜನವರಿ 2023ರ ಕಥೆ ಇದು!
ಮಗುನೇ ಬೇಡ ಎಂದ ನಿವೇದಿತಾ ಗೌಡ, ಡಿವೋರ್ಸ್‌ಗೆ ಕಾರಣವಾದ ರಶ್ಮಿಕಾ ಮಂದಣ್ಣ; ಜನವರಿ 2023ರ ಕಥೆ ಇದು!
ಜನವರಿ 2023ರಲ್ಲಿ ಏನೆಲ್ಲಾ ಆಯ್ತು? ಬಿಗ್ ಬಾಸ್ ಫಿನಾಲೆ, ಮೆಗಾ ಸ್ಟಾರ್ ಪುತ್ರಿ ಡಿವೋರ್ಸ್.....ಸಂಪೂರ್ಣ ಮಾಹಿತಿ ಇದರಲಿದೆ.........

ಬಿಗ್ ಬಾಸ್ ಸೀಸನ್ 9ರ ಫಿನಾಲೆ ಜನವರಿ 2023ರ ಆರಂಭದಲ್ಲಿ ಅದ್ಧೂರಿಯಾಗಿ ನಡೆಯಿತ್ತು. ಬಿಗ್ ಬಾಸ್ ಓಟಿಟಿ ಸೀಸನ್ 1 ಟ್ರೋಫಿ ಹಿಡಿದ ರೂಪೇಶ್ ಶೆಟ್ಟಿನೇ ಸೀಸನ್ 9ರ ಟ್ರೋಫಿ ಹಿಡಿದರು. ಎರಡನೇ ಸ್ಥಾನವನ್ನು ರಾಕೇಶ್ ಅಡಿಗ ಪಡೆದರು.
ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ ಕೊನಿಡೆಲಾ 2011ರಲ್ಲಿ ಸಿರಿಶ್‌ರನ್ನು ಪ್ರೀತಿಸಿ ಮದುವೆ ಮಾಡಿಕೊಂಡರು. ಇವರಿಬ್ಬರಿಗೆ ಮುದ್ದಾದ ಹೆಣ್ಣು ಮಗಳಿದ್ದಳು ಆದರೂ ಮನಸ್ಥಪಗಳಿಂದ ಡಿವೋರ್ಸ್ ಪಡೆದರು. ಮತ್ತೆ 2016ರಲ್ಲಿ ನಟ ಕಲ್ಯಾಣ್ ದೇವ್‌ರನ್ನು ಮದುವೆ ಮಾಡಿಕೊಂಡರು. ಇವರಿಬ್ಬರಿಗೂ ಹೆಣ್ಣು ಮಗುವಿಗೆ. ಜನವರಿ ತಿಂಗಳಿನಲ್ಲಿ ಡಿವೋರ್ಸ್ ವಿಚಾರ ಕೇಳಿ ಬಂದಿದ್ದು, ಹೌದು ಎಂದು ಕಲ್ಯಾಣ ಖಚಿತ ಪಡಿಸಿದ್ದಾರೆ.
ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್ ಸಿಕ್ಕಾಪಟ್ಟೆ ವರ್ಕೌಟ್ ಮತ್ತು ಡಯಟ್ ಮಾಡಿ ಜನವರಿ ತಿಂಗಳಿನಲ್ಲಿ 30 ಕೆಜಿ ತೂಕ ಕಡಿಮೆ ಆಗಿರುವುದಾಗಿ ರಿವೀಲ್ ಮಾಡಿದ್ದರು. ಅಷ್ಟೇ ಅಲ್ಲ ನನ್ನ ಗೋಲ್ ಇರುವುದು 50 ಕೆಜಿ ಎಂದು ಹೇಳಿದ್ದರು.
ನ್ಯಾಷನ್ ಕ್ರಶ್ ರಶ್ಮಿಕಾ ಮಂದಣ್ಣ ಮೇಲೆ ದೊಡ್ಡ ಆರೋಪ ಕೇಳಿ ಬಂದಿತ್ತು. ತಮಿಳು ನಟ ವಿಜಯ್ ದಳಪತಿ ಮತ್ತು ಸಂಗೀತಾ ದಾಂಪತ್ಯದಲ್ಲಿ ಬಿರುಕು ಬರಲು ರಶ್ಮಿಕಾ ಮಂದಣ್ಣ ಕಾರಣ ಎಂದು. ವಾರಿಸು ಸಿನಿಮಾದಲ್ಲಿ ವಿಜಯ್‌ಗೆ ರಶ್ಮಿಕಾ ಜೋಡಿಯಾಗಿದ್ದರು. ರಶ್ಮಿಕಾ ಐರನ್ ಲೆಗ್ ಹುಡುಗಿ ಅದಿಕ್ಕೆ ಹೀಗೆ ಆಗುತ್ತಿದೆ ಎಂದು ದೊಡ್ಡ ಸುದ್ದಿಯಾಗಿತ್ತು.
ಜನವರಿ 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಹಲವು ವರ್ಷಗಳಿಂದ ಸೀಕ್ರೆಟ್ ಆಗಿ ಪ್ರೀತಿಸುತ್ತಿದ್ದ ಈ ಜೋಡಿ ಲವ್ ಮಾಡ್ತಿದ್ದಾರೆ ಅನ್ನೋದನ್ನು ಕೇಳಿ ಅಭಿಮಾನಿಗಳು ಶಾಕ್ ಆಗಿಬಿಟ್ಟರು.
ಬಾಲಿವುಡ್ ಕಾಂಟ್ರವರ್ಸಿ ಕ್ರಿಯೇಟ್ ರಾಖಿ ಸಾವಂತ್ ಮತ್ತು ಮೈಸೂರು ಹುಡುಗ ಆದಿಲ್ ಖಾನ್ ಪ್ರೀತಿಸುತ್ತಿದ್ದರು. ಸೈಲೆಂಟ್ ಆಗಿ ಮದುವೆ ಕೂಡ ಮಾಡಿಕೊಂಡಿದ್ದರಂತೆ. ಎಲ್ಲಿ ಏನು ಎಡವಟ್ಟು ಆಯ್ತು ಗೊತ್ತಿಲ್ಲ ಎಲ್ಲವೂ ಸರ್ವನಾಶ ಆಗಿ ಡಿವೋರ್ಸ್‌ಗೆ ಬಂದು ನಿಂತಿತ್ತು.
ಕನ್ನಡ ಚಿತ್ರರಂಗದಲ್ಲಿ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ನಟ ಲಕ್ಷ್ಮಣ್ ಜನವರಿ 23ರಂದು ಅಗಲಿದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.ಲಕ್ಷ್ಮಣ್ ಮೂಲತಃ ಬೆಂಗಳೂರಿನವರಾಗಿದ್ದು. ಲಕ್ಷ್ಮಣ್ ಜೊತೆ ಹುಟ್ಟಿದ್ದವರು ಐವರು ಸಹೋದರಿಯರು ಮತ್ತು ಇಬ್ಬರು ಸಹೋದರರು.
ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಯಾವುದೇ ಸ್ಪೆಷಲ್ ವಿಡಿಯೋ ಅಪ್ಲೋಡ್ ಮಾಡಿದ್ದರೂ ಗುಡ್ ನ್ಯೂಸ್ ಎಂದು ನೆಟ್ಟಿಗರು ಪ್ರಶ್ನಿಸುತ್ತಾರೆ. ಜನವರಿಯಲ್ಲಿ ಅಪ್ಲೋಡ್ ಮಾಡುತ್ತಿದ್ದ ವಿಡಿಯೋಗಳು ಗೊಂದಲ ಸೃಷ್ಟಿಸಿತ್ತು. ಹೀಗಾಗಿ ನಾನು ಮಗು ಮಾಡಿಕೊಳ್ಳಲು ರೆಡಿಯಾಗಿ ನಾನೇ ಇನ್ನು ಮಗು ಎಂದು ನಿವಿ ಹೇಳಿದ್ದರು.
ಕನ್ನಡ ಚಿತ್ರರಂಗ ಹೆಸರಾಂತ ನಟ ಮಂದೀಪ್ ರಾಯ್ ಜನವರಿ 29ರಂದು ರಾತ್ರಿ 1.30ಕ್ಕೆ ರಿಂದ 2 ಗಂಟೆಯ ಮಧ್ಯೆ ಹೃದಯಘಾತದಿಂದ ಇಹಲೋಕ ತ್ಯಜಿಸಿದ್ದರು. 72 ವರ್ಷದ ಮಂದೀಪ್ ನ್ನಡ ಚಿತ್ರರಂಗಕ್ಕೆ ಕಾಲಿಟ್ಟು 44 ವರ್ಷ ಕಳೆದಿದ್ದು 1000ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಮೂಲತಃ ಮುಂಬೈನವರಾಗಿರುವ ಮಂದೀಪ್ ರಾಯ್ ಬಾಲ್ಯದಿಂದಲೂ ನಾಟಕದಲ್ಲಿ ತೊಡಗಿಸಿಕೊಂಡಿರುವ ಕಾರಣ ಅಭಿನಯವನ್ನು ವೃತ್ತಿ ಜೀವನವಾಗಿ ಆಯ್ಕೆ ಮಾಡಿಕೊಳ್ಳಲು ಸುಲಭವಾಯಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.