ಕುಡಿದ ಮತ್ತಿನಲ್ಲಿ ಮೂವರು ಮಹಿಳೆಯರು  ಪೊಲೀಸ್ ಮೇಲೆ ಹಲ್ಲೆ ಮಾಡಿ ಗಲಾಟೆ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ. ಗುಂಡಿನ ಮತ್ತಿನಲ್ಲಿ ಮಹಿಳೆಯರು ಪೊಲೀಸ್ ಸಿಬ್ಬಂದಿ ಜೊತೆ ಉದ್ಧಟತನ ತೋರಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ಮುಂಬೈ: ಕುಡಿದ ಮತ್ತಿನಲ್ಲಿ ಮೂವರು ಮಹಿಳೆಯರು ಪೊಲೀಸ್ ಮೇಲೆ ಹಲ್ಲೆ ಮಾಡಿ ಗಲಾಟೆ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ. ಗುಂಡಿನ ಮತ್ತಿನಲ್ಲಿ ಮಹಿಳೆಯರು ಪೊಲೀಸ್ ಸಿಬ್ಬಂದಿ ಜೊತೆ ಉದ್ಧಟತನ ತೋರಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂಬೈನ ವಿರಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 

ವಿರಾರ್‌ನ ಫಸ್ಟ್ ಪುಡ್ ಆಹಾರ ಮಳಿಗೆಯೊಂದರ ಬಳಿ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ಮಹಿಳೆಯರು ಅವ್ಯಾಚ್ಯ ಶಬ್ಧಗಳಿಂದ ನಿಂದಿಸುತ್ತಾ ಗಲಾಟೆ ಮಾಡಲು ಶುರು ಮಾಡಿದ್ದಾರೆ. ಈ ವಿಚಾರದ ಬಗ್ಗೆ ಯಾರೋ ಅರ್ನಾಲ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ಕುಡಿದ ಅಮಲಿನಲ್ಲಿದ್ದ ಮಹಿಳೆಯೊಬ್ಬಳು ಪೊಲೀಸರ ಕಾಲರ್ ಹಿಡಿದು ಎಳೆದಾಡಿದ್ದಾಳೆ. ಇದರಿಂದ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಮಹಿಳೆಯ ಕೈನಿಂದ ಪೊಲೀಸ್ ಸಿಬ್ಬಂದಿಯನ್ನು ಬಿಡಿಸಲು ಇತರ ಪೊಲೀಸರು ಹಾಗೂ ಜನ ಹರಸಾಹಸ ಪಟ್ಟಿದ್ದಾರೆ. ಅಲ್ಲದೇ ಮತ್ತೊಬ್ಬಳು ಮಹಿಳೆ ಪೊಲೀಸ್ ಕಾನ್ಸ್ಟೇಬಲ್‌ನ ಕೈಗೆ ಕಚ್ಚಿದ್ದಾಳೆ. ಬರೀ ಅಷ್ಟೇ ಅಲ್ಲ ಕಬ್ಬಿಣದ ಬಕೆಟ್‌ನಿಂದ ಆತನಿಗೆ ಹೊಡೆದಿದ್ದಾಳೆ ಎಂದು ಕೂಡ ವರದಿ ಆಗಿದೆ. 

ಕುಡುಕಿಯಾಗಲು ಅಪ್ಪ-ಅಮ್ಮನೇ ಕಾರಣ ಎಂದಿದ್ದ ನಟಿ ಶ್ರುತಿ ಹಾಸನ್​ ಡ್ರಗ್ಸ್​ ಕುರಿತು ಹೇಳಿದ್ದೇನು?

ಕಬ್ಬಿಣದ ಬಕೆಟ್‌ನಿಂದ ಹಲ್ಲೆ ಮಾಡಿದ್ದರಿಂದ ಪೊಲೀಸ್ ಕಾನ್ಸ್ಟೇಬಲ್‌ಗೆ ಗಂಭೀರ ಗಾಯವಾಗಿದೆ. ಈ ಮೂವರು ಕುಡುಕಿಯರ ಗಲಾಟೆಯ ನಡುವೆ ಮಹಿಳಾ ಭದ್ರತಾ ಸಿಬ್ಬಂದಿಯ ಸಹಾಯದೊಂದಿಗೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಹೀಗೆ ಸಾರ್ವಜನಿಕ ಸ್ಥಳದಲ್ಲಿ ಹೀಗೆ ಅಸಭ್ಯವಾಗಿ ವರ್ತಿಸಿದ್ದ ಕುಡುಕಿಯರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯರನ್ನು ಕಾವ್ಯ ಪ್ರಧಾನ್, ಪೂನಾಂ, ಅಶ್ವಿನಿ ಪಟೇಲ್ ಎಂದು ಗುರುತಿಸಲಾಗಿದೆ. 

ಆದರೆ ಈ ಗಲಾಟೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ವಿರಾರ್‌ನ ವಸೈ ಬಳಿ ಇರುವ ಫಂಕಾ ಫಾಸ್ಟ್ ಬಾರ್‌ನಲ್ಲಿ ಘಟನೆ ನಡೆದಿದ್ದು, ಕಾವ್ಯ ಪ್ರಧಾನ್ ಎಂಬ ಮಹಿಳೆ ಮಹಿಳಾ ಪೊಲೀಸ್ ಕಾನ್ಸಟೇಬಲ್ ಉತ್ಕರ್ಷ ವಂಜರಿ ಕೈಗೆ ಕಚ್ಚಿದ್ದಾಳೆ. ಅಷ್ಟೇ ಅಲ್ಲದೇ ಆಕೆಯ ಸಮವಸ್ತ್ರವನ್ನು ಹರಿದು ಹಾಕಿದ್ದಾರೆ. ಹಾಗೆಯೇ ಮತ್ತೊಬ್ಬ ಕಾನ್ಸ್‌ಟೇಬಲ್ ಮೊರೆ ಎಂಬುವವರ ಮೇಲೆಯೂ ಹಲ್ಲೆ ಮಾಡಿದ್ದಾಳೆ. ಬಕೆಟ್‌ನಿಂದ ಅವರ ತಲೆಗೆ ಹೊಡೆದು ಕೈಗೆ ಕಚ್ಚಿದ್ದಾಳೆ. ಹಾಗೆಯೇ ಮತ್ತೊಬ್ಬ ಮಹಿಳೆ ಆಶ್ವಿನಿ ಪಟೇಲ್ ಮಹಿಳಾ ಕಾನ್ಸಟೇಬಲ್ ಅವರ ಕೂದಲನ್ನು ಹಿಡಿದೆಳೆದಿದೆ. ಬಳಿಕ ಲೇಡಿ ಬೌನ್ಸರ್‌ ಟೀ ಶರ್ಟನ್ನು ಹರಿದಿದ್ದಾಳೆ. ಹಾಗೆಯೇ ಮತ್ತೊರ್ವ ಯುವತಿ ಪೂನಾಂ ಕೂಡ ಈ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾಳೆ. ಮಹಿಳಾ ಶಕ್ತಿಯ ಬಗ್ಗೆ ಹೇಳುವುದಾದರೆ ಏಕೆ ಮುಂಬೈ ದೇಶದ ಇತರ ಮೆಟ್ರೋ ಸಿಟಿಗಳಾದ ಬೆಂಗಳೂರು ದೆಹಲಿಯಿಂದ ಹಿಂದೆ ಬೀಳುತ್ತಿದೆ ಎಂಬುದಕ್ಕೆ ಇದೊಂದು ನಿದರ್ಶನ ಎಂದು ಬರೆದು ಕುಡುಕ ಮಹಿಳೆಯರ ಜಟಾಪಟಿಯ ವೀಡಿಯೋವನ್ನು @NCMIndiaa ಎಂಬ ಟ್ವಿಟ್ಟರ್ ಪೇಜ್‌ನಿಂದ ಪೋಸ್ಟ್ ಮಾಡಲಾಗಿದೆ. ಒಂದು ಲಕ್ಷಕ್ಕೂ ಅಧಿಕ ಜನ ಈ ವೀಡಿಯೋ ವೀಕ್ಷಿಸಿದ್ದಾರೆ. 

ವಿಮಾನ ಟೇಕಾಫ್ ಆಗುವ ಮೊದಲೇ ಕುಚೇಷ್ಟೆ: ಪೊಲೀಸರ ಕೈಗೂ ಕಚ್ಚಿದ 25ರ ಹರೆಯದ ಕುಡುಕಿ

Scroll to load tweet…