ಕುಡುಕಿಯಾಗಲು ಅಪ್ಪ-ಅಮ್ಮನೇ ಕಾರಣ ಎಂದಿದ್ದ ನಟಿ ಶ್ರುತಿ ಹಾಸನ್ ಡ್ರಗ್ಸ್ ಕುರಿತು ಹೇಳಿದ್ದೇನು?
ತಾವು ಮದ್ಯ ವ್ಯಸನಿಯಾಗಲು ಅಪ್ಪ-ಅಮ್ಮನೇ ಕಾರಣ ಎಂದು ಹೇಳಿಕೊಂಡಿದ್ದ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಡ್ರಗ್ಸ್ ಕುರಿತು ಹೇಳಿದ್ದೇನು?
2018ರಲ್ಲಿ ಭಾರಿ ಸದ್ದು ಮಾಡಿದ್ದ ಮೀ ಟೂ ಅಭಿಯಾನದ ಬಳಿಕ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಸಾಕಷ್ಟು ಸದ್ದು ಮಾಡಿದರು. ಹಲವರ ಕೆಂಗಣ್ಣಿಗೆ ಗುರಿಯಾಗಿದರೆ, ವಿಭಿನ್ನ ಕ್ಷೇತ್ರಗಳ ಮಹಿಳೆಯರು ತಮ್ಮ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯದ ಕುರಿತು ಮುಕ್ತವಾಗಿ ಮಾತನಾಡಲು ಕಾರಣವೂ ಆಯಿತು. ಇದಾದ ಬಳಿಕ ಶ್ರುತಿ ಅವರ ಮೇಲೆ, ಅವರ ವ್ಯಕ್ತಿತ್ವದ ಮೇಲೆ ಹಲವರು ಪ್ರಶ್ನೆ ಮಾಡಿದ್ದರು, ಗೂಬೆ ಕುಳ್ಳರಿಸಿದ್ದೂ ನಡೆಯಿತು. ಈ ನಡುವೆಯೇ ಕೆಲ ತಿಂಗಳ ಹಿಂದೆ ನಟಿ ಸ್ಫೋಟಕ ಹೇಳಿಕೆ ನೀಡಿದ್ದರು. ಅದೇನೆಂದರೆ, ತಾನು ಚಿಕ್ಕ ವಯಸ್ಸಿನಲ್ಲಿಯೇ ಹೇಗೆ ಮದ್ಯವ್ಯಸನಿಯಾದೆ ಎಂಬ ಬಗ್ಗೆ ಹೇಳಿದ್ದರು.
ಅಂದಹಾಗೆ ಇವರ ಅಪ್ಪ ಕಮಲ ಹಾಸನ್ ಮತ್ತು ಅಮ್ಮ ನಟಿ ಸಾರಿಕಾ. ಇವರಿಬ್ಬರೂ ಪ್ರೀತಿಸಿ ಮದುವೆಯಾದವರು. ಆದರೆ 2004ರಲ್ಲಿ ಇವರ ವಿಚ್ಛೇದನವಾಗಿತ್ತು. 1986ರಲ್ಲಿ ಹುಟ್ಟಿರೋ ಶ್ರುತಿ ಹಾಸನ್ ಅವರಿಗೆ ಅಪ್ಪ-ಅಮ್ಮ ಬೇರೆಯಾದಾಗ ಇನ್ನೂ 18 ವರ್ಷ ವಯಸ್ಸು. ಬಾಲ್ಯಾವಸ್ಥೆಯಿಂದ ಯೌವನಕ್ಕೆ ಕಾಲಿಡುವ ಸಮಯದಲ್ಲಿ ಅಪ್ಪ-ಅಮ್ಮನ ಈ ರೀತಿಯ ಅಗಲಿಕೆಯಿಂದ ತಾವು ಹೇಗೆ ಕುಗ್ಗಿ ಹೋಗಿದ್ದೆ. ಈ ಘಟನೆಗಳಿಂದ ನಾನು ಮದ್ಯವ್ಯಸನಿಯಾಗಿದ್ದೆ. ಖಿನ್ನತೆಗೆ ಜಾರಿ ಹುಚ್ಚಿಯೂ ಆಗಿದ್ದೆ ಎಂದು ನಟಿ ಸಂದರ್ಶನದಲ್ಲಿ ಹೇಳಿದ್ದಾರೆ. ನನ್ನ ಮಾನಸಿಕ ಆರೋಗ್ಯ ಹದಗೆಟ್ಟಿತ್ತು ಎನ್ನುವ ಸುದ್ದಿ ಆಗ ಹಬ್ಬಿತ್ತು. ಅದು ನಿಜವೂ ಆಗಿತ್ತು. ಆದರೆ ಇದಕ್ಕೆ ಕಾರಣ ಮಾತ್ರ ಹೆಚ್ಚಿನವರಿಗೆ ತಿಳಿದಿಲ್ಲ. ಇದಕ್ಕೆ ಮುಖ್ಯ ಕಾರಣ ಅಪ್ಪ-ಅಮ್ಮನ ಡಿವೋರ್ಸ್ ವಿಚಾರವೇ ಆಗಿತ್ತು. ಇದು ನನ್ನ ಮನಸ್ಸಿಗೆ ತುಂಬಾ ಘಾಸಿ ಉಂಟು ಮಾಡಿತ್ತು ಎಂದು ಶ್ರುತಿ ಹೇಳಿಕೊಂಡಿದ್ದರು.
ಮೂರು ಪತ್ನಿಯರ ಮೇಲೆ ಕ್ರೌರ್ಯ ಮೆರೆದಿದ್ದು ತಪ್ಪಲ್ಲ: ಅಬ್ರಾರ್ ಹಖ್ ರೊಮ್ಯಾಂಟಿಕ್ ವ್ಯಕ್ತಿ ಎಂದ ಬಾಬಿ ಡಿಯೋಲ್!
ಇದೀಗ ಅವರು ಡ್ರಗ್ಸ್ ಕುರಿತು ಮಾತನಾಡಿದ್ದಾರೆ. ಹಲವರು ನಾನು ಡ್ರಗ್ಸ್ ಚಟಕ್ಕೆ ಅಂಟಿಕೊಂಡಿದ್ದೆ ಎನ್ನುತ್ತಾರೆ. ಹಿಂದೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಒಬ್ಬ ವ್ಯಕ್ತಿ ನೇರವಾಗಿ ನನಗೆ ನೀನು ಖಂಡಿತ ಗಾಂಜಾ ಸೇವನೆ ಮಾಡುತ್ತೀಯ ಅಲ್ಲವೆ ಎಂದು ಪ್ರಶ್ನೆ ಮಾಡಿದ್ದ. ಹೀಗೆ ಅನೇಕ ಮಂದಿ ಕೇಳುತ್ತಲೇ ಇರುತ್ತಾರೆ. ನಾನು ಮದ್ಯ ವ್ಯಸನಿಯಾಗಿದೆ ಎಂಬ ವಿಷಯ ತಿಳಿದಾಗಿನಿಂದಲೂ ಈ ಪ್ರಶ್ನೆ ಎದುರಾಗುತ್ತಿದೆ ಎಂದಿರುವ ಶ್ರುತಿ, ಖಂಡಿತವಾಗಿಯೂ ನಾನು ಗಾಂಜಾ ಸೇದುವುದಿಲ್ಲ. ಮದ್ಯ ಸಹ ಸೇವಿಸುವುದಿಲ್ಲ. ಯಾವುದೇ ರೀತಿಯ ಮಾದಕ ವಸ್ತುಗಳನ್ನು ಸಹ ಸೇವಿಸುವುದಿಲ್ಲ. ನಾನು ಮಾದಕ ವಸ್ತು ರಹಿತ ಬದುಕು ಬದುಕುತ್ತಿದ್ದೇನೆ. ಆ ಬಗ್ಗೆ ನನಗೆ ಬಹಳ ಸಂತೋಷವಿದೆ ಎಂದಿದ್ದಾರೆ.
ಇದೇ ವೇಳೆ ಕುಡಿತದ ಕುರಿತೂ ಅವರು ಮಾತನಾಡಿದ್ದಾರೆ. ಸುಮಾರು 8 ವರ್ಷಗಳಿಂದ ಕುಡಿತದ ಚಟಕ್ಕೆ ಅಂಟಿಕೊಂಡಿದ್ದೆ. ಆ ಬಗ್ಗೆ ಖುದ್ದು ಹಲವಾರು ವೇದಿಕೆಗಳಲ್ಲಿ ಹೇಳಿದ್ದೇನೆ. ಅದಕ್ಕೆ ಕಾರಣವನ್ನೂ ಬಹಿರಂಗಗೊಳಿಸಿದ್ದೇನೆ. ಆದರೆ ಈಗ ಶಾಂತಳಾಗಿದ್ದೇನೆ. ಮದ್ಯವನ್ನು ಸಂಪೂರ್ಣವಾಗಿ ತ್ಯಜಿಸಿದ್ದೇನೆ ಎಂದಿದ್ದಾರೆ. ಪಾರ್ಟಿಗಳಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುತ್ತೇನೆ. ನಾನು ಪಾರ್ಟಿ ಮಾಡೋದನ್ನು ಯಾವುದೇ ಕಾರಣಕ್ಕೂ ವಿರೋಧಿಸೋದಿಲ್ಲ. ಆದರೆ ಅಲ್ಲಿಗೆ ಹೋದರೂ ಮದ್ಯ ಸೇವಿಸೋದಿಲ್ಲ. ಆದರೆ ಕುಡುಕರಲ್ಲದವರು ಪಾರ್ಟಿಗಳಲ್ಲಿ ಸಹಿಸಿಕೊಳ್ಳುವುದು ಕಷ್ಟ ಎಂದೂ ಹೇಳಿದ್ದಾರೆ. ಮದ್ಯಪಾನ ತ್ಯಜಿಸಿದ ಬಳಿಕ ತಮಗೆ ಯಾವುದೇ ರೀತಿಯ ಹ್ಯಾಂಗ್ ಓವರ್ ಇಲ್ಲ ಎಂದಿದ್ದಾರೆ.
ಇದಾಗಲೇ ನಟಿ ಮದ್ಯಪಾನಕ್ಕೆ ಚಿಕಿತ್ಸೆ ಕೂಡ ಪಡೆದುಕೊಂಡಿದ್ದು, ಆ ಬಗ್ಗೆಯೂ ಸಂದರ್ಶನದಲ್ಲಿ ಹೇಳಿದ್ದರು. ಅಪ್ಪ-ಅಮ್ಮನ ವಿಚ್ಛೇದನದಿಂದ ತುಂಬಾ ಕುಗ್ಗಿದ್ದ ನಾನು 2017ರಲ್ಲಿ ಚಿಕಿತ್ಸೆಗಾಗಿ ಲಂಡನ್ಗೆ ಹೋದೆ. ಆದರೆ ಅದಾಗಲೇ ಮದ್ಯ ವ್ಯಸನಿಯೂ ಆಗಿಬಿಟ್ಟಿದ್ದೆ. ಇದರಿಂದ ಹೊರ ಬರುವ ಪಣ ತೊಟ್ಟೆ. ಅದು ತುಂಬಾ ಕಷ್ಟವಾಗಿತ್ತು. ಆದರೆ ಮನಸ್ಸನ್ನು ಗಟ್ಟಿ ಮಾಡಿಕೊಂಡಿದ್ದೆ. ನಾನು ಆಲ್ಕೋಹಾಲ್ ಬಿಟ್ಟುಬಿಡಲು ನನಗೆ ನನ್ನ ಮನಸ್ಥಿತಿಯೇ ಹೆಚ್ಚು ಸಹಾಯ ಮಾಡಿದೆ ಎಂದಿದ್ದರು. ಇದೇ ವೇಳೆ, ನನ್ನಂಥ ಸನ್ನಿವೇಶದಲ್ಲಿ ಇರುವ ಪ್ರತಿಯೊಬ್ಬರೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡುತ್ತಾರೆ ನಟಿ. ಮಾನಸಿಕ ತಜ್ಞರ ಬಳಿ ಹೋಗಿ ಸಲಹೆ ಪಡೆಯುವುದರಲ್ಲಿ ಯಾವುದೇ ತಪ್ಪು ಇಲ್ಲ ಎನ್ನುವ , ಇಲ್ಲದಿದ್ದರೆ ನಿಮ್ಮ ಬದುಕನ್ನೇ ಮುಗಿಸುವ ಹಂತಕ್ಕೂ ಬರಬಹುದು ಎನ್ನುವ ಎಚ್ಚರಿಕೆ ನೀಡುತ್ತಾರೆ.
ಐಶ್ವರ್ಯ ರೈಯನ್ನು ಅಭಿಷೇಕ್ ಬಚ್ಚನ್ ಮದ್ವೆಯಾಗಿದ್ದೇಕೆ? ಕಾಫಿ ವಿತ್ ಕರಣ್ನಲ್ಲಿ ನಟ ಹೇಳಿದ್ದೇನು?