ಅಂದು ದೆಹಲಿಯ ಶ್ರೀಮಂತ ಮಹಿಳೆ, ಇಂದು ಬೀದಿಬದಿಯ ಅಜ್ಜಿ: ಇದು ಆಶಾ ದೇವಿ ಕತೆ

ಹಿಂದೊಮ್ಮೆ ದೆಹಲಿಯ ಅತಿ ಶ್ರೀಮಂತ ಮಹಿಳೆಯಾಗಿದ್ದ ಅನಾಮಿಕಾ ಅರ್ಥಾತ್ ಆಶಾ ದೇವಿ ಸಾರಸ್ವತ್ ಇಂದು ಬೀದಿಯಲ್ಲಿ ಜೀವನ ನಡೆಸುತ್ತಾರೆ. ಅಂದು ಅದ್ದೂರಿ ಜೀವನ ಹೊಂದಿದ್ದರೂ ಇಂದು ಏನೂ ಇಲ್ಲ. ಅಷ್ಟಕ್ಕೂ ಹಣವೂ ಇವಳಿಗೆ ಬೇಕಾಗಿಲ್ಲ.  
 

This woman in Delhi was richest lady once

ದೆಹಲಿಯ ಬೀದಿಯಲ್ಲಿ ವಾಸಿಸುವ ಈ ಅಜ್ಜಿಯ ಕತೆ ಸಿನಿಮಾ ಕತೆಗಿಂತ ಕಡಿಮೆ ಇಲ್ಲ. ಅರಬ್ ಪತಿ, ಕೋಟಿಗಟ್ಟಲೆ ಹಣ, ಮೂರ್ನಾಲ್ಕು ಕಾರುಗಳ ಒಡತಿಯಾಗಿದ್ದವಳು ಇಂದು ಬೀದಿಯಲ್ಲಿ ಬದುಕುತ್ತಿದ್ದಾಳೆ. ಇವಳು ಅನಾಮಿಕಾ ಉರುಫ್ ಆಶಾ ದೇವಿ ಸಾರಸ್ವತ್. ಈ ಅಜ್ಜಿ ಸ್ಫುಟವಾಗಿ ಇಂಗ್ಲಿಷ್ ಮಾತನಾಡುವುದನ್ನು ಕೇಳಿದರೆ ಬೆರಗಾಗುತ್ತದೆ. ಹಲವು ದಶಕಗಳ ಹಿಂದೆಯೇ, ನಮ್ಮ ದೇಶದಲ್ಲಿ ಮಹಿಳಾ ಶಿಕ್ಷಣ ಪ್ರವರ್ಧಮಾನಕ್ಕೆ ಬಂದಿರದ ಸಮಯದಲ್ಲೇ ಅಲಹಾಬಾದ್ ವಿಶ್ವವಿದ್ಯಾಲಯದಿಂದ ಬಿಕಾಂ ಪದವಿ ಪಡೆದಿದ್ದವಳು ಅನಾಮಿಕಾ ಆಶಾ ದೇವಿ. ಅಜ್ಜಿಯ ಹೆಗ್ಗಳಿಕೆ ಇಲ್ಲಿಗೇ ಮುಗಿಯುವುದಿಲ್ಲ. ಒಂದೊಮ್ಮೆ ದೇಶದ ರಾಜಧಾನಿ ದೆಹಲಿಯ ಅತಿ ಸಿರಿವಂತ ಮಹಿಳೆ ಎನ್ನುವ ಖ್ಯಾತಿಯೂ ಈಕೆಯ ಪಾಲಿಗಿತ್ತು. ಈಕೆಯ ಕುಟುಂಬ ಬೆಳ್ಳಿಯ ವ್ಯಾಪಾರ ಮಾಡುತ್ತಿತ್ತು. ಅಷ್ಟೇ ಅಲ್ಲ, ಈಕೆಯ ಪತಿ ಭಾರತದ ಅತಿದೊಡ್ಡ ಸ್ಮಗ್ಲರ್ ಆಗಿದ್ದ! ಬದುಕಿನಲ್ಲಿ ಬದಲಾವಣೆ ಶಾಶ್ವತ ಎನ್ನಲಾಗುತ್ತದೆ. ಈಕೆಯ ಜೀವನವಂತೂ ಊಹಿಸದ ವಿಪರೀತ ಬದಲಾವಣೆಯನ್ನು ಕಂಡಿದೆ. ಒಂದು ಕಾಲದಲ್ಲಿ ಸಿರಿವಂತರಾಗಿ ಬದುಕು ನಡೆಸಿದವರು ಮಗದೊಂದು ಸಮಯಕ್ಕೆ ನಿರ್ಗತಿಕರಾಗಿ ಬಿಡುವ ಸ್ಥಿತಿಯನ್ನು ನಾವೇ ಎಷ್ಟೋ ಬಾರಿ ನೋಡುತ್ತೇವೆ. ಅನಾಮಿಕಾ ಜೀವನ ಕೂಡ ಹೀಗೆಯೇ. ಅಂದು ರಾಣಿಯಂತೆ ಮೆರೆದವಳು ಇಂದು ಬೀದಿಯಲ್ಲಿ ಬದುಕುತ್ತಿದ್ದಾಳೆ.

ಅನಾಮಿಕಾ (Anamika) ಬದುಕು (Life) ಒಂದು ಹಂತದವರೆಗೆ ಅದ್ದೂರಿಯಾಗಿಯೇ ಇತ್ತು. ಸುಂದರವಾದ ಯೌವನ, ಉತ್ತಮ ಓದು (Education), ಸಿಕ್ಕಾಪಟ್ಟೆ ದುಡಿಯುವ ಪತಿ (Husband), ಮೂವರು ಮಕ್ಕಳು (Kids), ಮನೆಯಲ್ಲಿ 9 ಕಾರುಗಳು, ಡ್ರೈವರ್ ಗಳು, ಮನೆಯ ಎಲ್ಲ ಕೆಲಸಕ್ಕೂ ಆಳುಕಾಳುಗಳು. ಬೆಳ್ಳಿಯ (Silver) ಬಟ್ಟಲಲ್ಲೇ ಊಟ ಮಾಡಲಾಗುತ್ತಿತ್ತು. ಶ್ರೀಮಂತಿಕೆಗೆ (Rich) ತಕ್ಕಂತೆ ಅನಾಮಿಕಾ ದೇವಿಯದ್ದೂ ಲಕ್ಸುರಿ ಜೀವನವಾಗಿತ್ತು. ಅಶೋಕಾ ಹೋಟೆಲ್ ನಲ್ಲಿ ತಿಂಡಿ ತಿಂದು ಮಸಾಲೆ ಟೀ ಕುಡಿಯಲು ಒಬೆರಾಯ್ ಹೋಟೆಲ್ ಗೆ ಹೋಗುತ್ತಿದ್ದಳು. ಹೇರ್ ಸ್ಟೈಲ್ (Hairstyle) ಇಂದಿರಾ ಗಾಂಧಿಯನ್ನು ಹೋಲುತ್ತಿದ್ದುದರಿಂದ ಈಕೆಯನ್ನು ಸಹ ಎಷ್ಟೋ ಜನ ಹಾಗೆಯೇ ಕರೆಯುತ್ತಿದ್ದರು. ಬದುಕು ಹೀಗೆ ಸಾಗಿರುವಾಗ ಅನಾಮಿಕಾ ದೇವಿಯ ಕುಟುಂಬದಲ್ಲಿ ಮಹತ್ತರ ತಿರುವು ಬಂತು. ಸ್ಮಗ್ಲರ್ (Smuggler) ಕುಟುಂಬವಾಗಿದ್ದರಿಂದ ಈಕೆಯ ಅತ್ತೆಯನ್ನು ಪ್ರಕರಣವೊಂದಕ್ಕೆ ಸಂಬಂಧಿಸಿ ಜೈಲಿಗೆ ಹಾಕಲಾಯಿತು. ಅಲ್ಲಿಂದ ಬಂದ ಬಳಿಕ ಈಕೆಯ ಅತ್ತೆ ಮನೆಯಿಂದ ಸೊಸೆಯನ್ನು ಹೊರಹಾಕಿದಳು. 

ಸಾಧನೆಗೆ ವಯಸ್ಸಿನ ಹಂಗಿಲ್ಲ..87ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ವೃದ್ಧೆ!

“ಮದುವೆ ಜೆಮ್ಸ್ ಫೋರ್ಡ್ ಕ್ಲಬ್ ನಲ್ಲಿ ಆಗಿತ್ತು. ವೈಭವದ ಮದುವೆಗೆ ಮೊರಾರ್ಜಿ ದೇಸಾಯಿ ಬಂದಿದ್ದರು’ ಎಂದು ನೆನಪಿಸಿಕೊಳ್ಳುತ್ತಾಳೆ.

ಅಘೋರಿ ಸಾಧುಗಳೊಂದಿಗೆ...
ಏಕಾಏಕಿ ಲಕ್ಸುರಿ ಜೀವನದಿಂದ ದೂರವಾದ ಅನಾಮಿಕಾ ದೇವಿಗೆ ಆತ್ಮಹತ್ಯೆ (Suicide) ಮಾಡಿಕೊಳ್ಳುವ ಮನಸ್ಸಾಯಿತು. ಆದರೆ, ಸಾಧ್ಯವಾಗಲಿಲ್ಲ. ಹೀಗೆ ಅಲ್ಲಿ ಇಲ್ಲಿ ಜೀವನ ಸವೆಸುವುದನ್ನು ಕಲಿತಳು. ಒಮ್ಮೆ, ಅಘೋರಿ (Aghori) ಸಾಧುಗಳೊಂದಿಗೆ ಹೃಷಿಕೇಶದಲ್ಲಿ ಸ್ವಲ್ಪ ಸಮಯ ನೆಲೆಸಿ ದೆಹಲಿಗೆ ಮರಳಿದಳು. ವೈಶ್ಯೆಯಾಗಲು ಜಿಬಿ ರಸ್ತೆಗೆ ಸಾಗಿದಳು. ಆದರೆ, ಅದಕ್ಕೂ ಮನಸ್ಸು ಒಡಂಬಡಲಿಲ್ಲ. 

ನ್ಯೂಯಾರ್ಕ್ ನಲ್ಲಿ ಮಕ್ಕಳು
ಈ ಅಜ್ಜಿಯ ಮಕ್ಕಳು ಈಗ ನ್ಯೂಯಾರ್ಕ್ ನಲ್ಲಿ (New York) ನೆಲೆಸಿದ್ದಾರೆ. ಯಾರೊಂದಿಗೂ ಹೋಗಿರಲು ಮನಸ್ಸು ಒಪ್ಪದು, ದೆಹಲಿಯ ಬೀದಿಯಲ್ಲಿ ಪುಸ್ತಕ (Books) ಮಾರಾಟ (Sale) ಮಾಡುತ್ತಾರೆ. ಏನನ್ನೂ ಉಳಿತಾಯ ಮಾಡುವುದಿಲ್ಲ. ಕೆಲವೊಮ್ಮೆ ಉಚಿತವಾಗಿಯೂ ನೀಡಿ ಕಳುಹಿಸುತ್ತಾಳೆ. “ಹಣದಿಂದ ಏನು ಮಾಡಲು ಸಾಧ್ಯ? ನನಗೇಕೆ ಹಣ?’ ಎಂದು ಪ್ರಶ್ನಿಸುತ್ತಾಳೆ. 

ಭಿಕ್ಷೆ ಬೇಡಿ 'ಅನ್ನಪೂರ್ಣೆ'ಯಾದ ವೃದ್ಧೆ: ದೇಗುಲಗಳಿಗೆ 9 ಲಕ್ಷ ರೂ. ದೇಣಿಗೆ

ಮೋದಿ ಬಗ್ಗೆ ಭವಿಷ್ಯ 
ಪ್ರಧಾನಿ ನರೇಂದ್ರ ಮೋದಿ ತಾಯಿ (Mother) ಹಾಗೂ ತಮ್ಮ ಮುಖಚಹರೆ ಒಂದೇ ರೀತಿಯಿದೆ. ಮೋದಿ ನನ್ನನ್ನು ನೋಡಿದರೆ ಒಂದು ಕ್ಷಣ ನಿಲ್ಲುತ್ತಾರೆ, ನನ್ನ ಗುರುತಿಸುತ್ತಾರೆ ಎನ್ನುತ್ತಾಳೆ ಅಜ್ಜಿ. ಗುಜರಾತ್ ಸಿಎಂ ಆಗಿದ್ದಾಗ ಮೋದಿಯವರನ್ನು ಮೊದಲ ಬಾರಿ ಕಂಡಾಗ “ನೀವು ಮುಂದೆ ಪ್ರಧಾನಿ (Prime Minister) ಆಗುತ್ತೀರಿ’ ಎಂದು ಹೇಳಿದ್ದೆ ಎಂದು ಸ್ಮರಿಸಿಕೊಳ್ಳುತ್ತಾಳೆ. 
 

Latest Videos
Follow Us:
Download App:
  • android
  • ios