Asianet Suvarna News Asianet Suvarna News

ಈಕೆ ಬಿಕಿನಿ ಧರಿಸಿ ಹೊಲದಲ್ಲಿ ಕೆಲಸ ಮಾಡ್ತಾಳೆ!

ಸಾಮಾಜಿಕ ಜಾಲತಾಣದಲ್ಲಿ ಏನಾದರೊಂದು ವಿಷಯ ವೈರಲ್ ಆಗುತ್ತಲೇ ಇರುತ್ತವೆ. ಇದೀಗ, ರೈತ ಮಹಿಳೆ ಎಂದು ತನ್ನನ್ನು ತಾನು ಕರೆದುಕೊಂಡಿರುವ ಮಹಿಳೆಯೊಬ್ಬಳು ಬಿಕಿನಿ ಧರಿಸುವ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಈಕೆ ತನ್ನನ್ನು “ಬಿಕಿನಿ ಫಾರ್ಮರ್’ ಎಂದು ಹೇಳಿಕೊಂಡಿದ್ದಾಳೆ. 
 

This woman farmer do work in bikini in farm
Author
First Published Feb 2, 2023, 5:55 PM IST

ಮಹಿಳೆಯರ ಡ್ರೆಸ್ ಯಾವತ್ತೂ ಚರ್ಚೆಯಾಗುವ ವಿಚಾರ. ಆಕೆ ಎಂತಹ ಡ್ರೆಸ್ ಧರಿಸಬೇಕೆಂದು ಸಲಹೆ ನೀಡುವಲ್ಲಿ ಸಾಕಷ್ಟು ಜನ ಮುಂದಿರುತ್ತಾರೆ. ಹುಡುಗಿಯರು ಯದ್ವಾತದ್ವಾ ಡ್ರೆಸ್ ಧರಿಸಿ ಮುಜುಗರಕ್ಕೆ ಒಳಗಾಗುವ ಪರಿಸ್ಥಿತಿ ಬಾರದಿರಲಿ ಎಂದು ಈಗಂತೂ ಬಹಳಷ್ಟು ಕಾಲೇಜುಗಳಲ್ಲೂ ಯೂನಿಫಾರಂ ನಿಗದಿ ಮಾಡಿಬಿಟ್ಟಿದ್ದಾರೆ. ಆದರೂ ಬಹಳಷ್ಟು  ಕಾಲೇಜುಗಳಲ್ಲಿ ಡ್ರೆಸ್ ನಿಯಮಾವಳಿ ಜಾರಿಯಲ್ಲಿಲ್ಲ. ಅಷ್ಟಕ್ಕೂ ಹುಡುಗಿಯರ ಬಟ್ಟೆಯ ವಿಚಾರ ನಿರ್ದಿಷ್ಟವಾಗಿ ಅವರಿಗೆ ಮಾತ್ರ ಸಂಬಂಧಿಸಿದ್ದು, ಇದರಲ್ಲಿ ಸಮಾಜದ ಹೇರಿಕೆ ಸಲ್ಲದು. ಆದರೂ, ನಮ್ಮ ಸಮಾಜದಲ್ಲಿ ಎಲ್ಲ ರೀತಿಯ ಉಡುಗೆಗಳಿಗೂ ಮಾನ್ಯತೆ ಇಲ್ಲ ಎನ್ನುವುದು ಸತ್ಯ. ಹೋಗಲಿ ಬಿಡಿ, ಅದು ಬೇರೆ ವಿಚಾರ. ಸಾಮಾಜಿಕ ಜಾಲತಾಣದಲ್ಲೂ ಆಗಾಗ ಮಹಿಳೆಯರ ಬಟ್ಟೆಯ ವಿಚಾರ ಸಾಕಷ್ಟು ಚರ್ಚೆಯಾಗುತ್ತದೆ, ಅದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗುತ್ತವೆ. ಇದೀಗ, ಬಿಂದಾಸ್ ರೈತ ಮಹಿಳೆಯೊಬ್ಬಳು ನೆಟ್ಟಿಗರ ಗಮನ ಸೆಳೆದಿದ್ದಾಳೆ. ಏಕೆಂದರೆ, ಈಕೆ ಭಾರೀ ಬಿಂದಾಸ್. ರೈತ ಮಹಿಳೆ ಎಂದರೆ, ಸಾಮಾನ್ಯವಾಗಿ ಮೈ ತುಂಬ ಬಟ್ಟೆ ಧರಿಸಿ ಹೊಲಕ್ಕೆ ಹೋಗುವ ದೃಶ್ಯ ಕಣ್ಣೆದುರು ಬರಬಹುದು. ಆದರೆ, ಈಕೆ ಹಾಗಲ್ಲ, ಬಿಕಿನಿ ಧರಿಸಿ ಹೊಲಕ್ಕೆ ಹೋಗುತ್ತಾಳೆ. ಈಕೆ ಬಿಕಿನಿ ಧರಿಸಿ ರೈತಾಪಿ ಕೆಲಸ ಮಾಡುತ್ತಿರುವ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗಿದ್ದಾಳೆ. 

ಬಿಕಿನಿ ಫಾರ್ಮರ್ (Bikini Farmer) 
ಈ ಮಹಿಳೆ ತನ್ನನ್ನು ತಾನು “ಬಿಕಿನಿ ಫಾರ್ಮರ್’ ಎಂದೇ ಕರೆದುಕೊಳ್ಳುತ್ತಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ (Social Media) ಬಿಕಿನಿ ಫಾರ್ಮರ್ ಬಗ್ಗೆ ಈಗ ಸಖತ್ ಹಾಟ್ ಚರ್ಚೆಯಾಗುತ್ತಿದೆ. ಈ ಮಹಿಳೆ ತಾನು ಹೊಲದಲ್ಲಿ (Farm) ಕೆಲಸ ಮಾಡುತ್ತಿರುವ, ಸಾಕುಪ್ರಾಣಿಗಳೊಂದಿಗೆ (Domestic Animals) ಇರುವ ಹಲವಾರು ಫೋಟೊಗಳನ್ನು (Photo) ಇತ್ತೀಚೆಗೆ ಅಪ್ ಲೋಡ್ ಮಾಡಿದ್ದಾಳೆ. ಬಹಳಷ್ಟು ಚಿತ್ರಗಳಲ್ಲಿ ಈಕೆ ಬಿಕಿನಿಯನ್ನೇ ಧರಿಸಿರುವುದನ್ನು ನೆಟ್ಟಿಗರು ಗುರುತಿಸಿದ್ದಾರೆ. ಬಳಿಕ, ಸಿಕ್ಕಾಪಟ್ಟೆ ಕಾಲೆಳೆದಿದ್ದಾರೆ. ಟಿಕ್ ಟಾಕ್ ನಲ್ಲಿ “ಫ್ಯಾನ್ಸಿ ಫಾರ್ಮರ್’ ಹೆಸರಿನಲ್ಲಿ ಈಕೆ ತಾನು ಬಿಕಿನಿ ಧರಿಸಿದ ಭಾವಚಿತ್ರಗಳು, ವಿಡಿಯೋಗಳನ್ನೂ (Video) ಹಂಚಿಕೊಂಡಿದ್ದಾರೆ. ಜನ ಮಾಡಿದ ಟೀಕೆಗಳಿಗೆ (Criticism) ಬಿಕಿನಿ ರೈತ ಮಹಿಳೆ ತಲೆಕೆಡಿಸಿಕೊಂಡಿಲ್ಲ. ಬದಲಿಗೆ ಖಡಕ್ ಉತ್ತರವನ್ನೇ ನೀಡಿದ್ದಾಳೆ. 

ಶಾರ್ಟ್ ಡ್ರೆಸ್ ಧರಿಸಲು ದೀಪಿಕಾ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ಒಂದು ಫೋಟೊದಲ್ಲಿ ಈಕೆ ಕಪ್ಪು (Black) ಬಿಕಿನಿ ಧರಿಸಿ ಕುದುರೆಯೊಂದಿಗೆ (Horse) ನಿಂತಿದ್ದಾಳೆ. ಈ ಫೋಟೊಕ್ಕಂತೂ ಕಾಮೆಂಟ್ ಗಳ ಸುರಿಮಳೆಯಾಗಿದೆ. ಈಕೆಯ ಹಲವು ವಿಡಿಯೋಗಳು ಈಗ ಸಾಕಷ್ಟು ವೈರಲ್ (Viral) ಆಗಿವೆ. ಇನ್ ಸ್ಟಾಗ್ರಾಮ್ ನಲ್ಲೂ ಫೋಟೊ ಶೇರ್ ಮಾಡಿದ್ದಾಳೆ. ಇದಕ್ಕೆ ಸಾಕಷ್ಟು ಮಂದಿ ತಲೆಕೆಡಿಸಿಕೊಂಡು ಬಗೆಬಗೆಯ ಪ್ರಶ್ನೆಗಳನ್ನೂ ಕೇಳಿದ್ದಾರೆ. ಒಬ್ಬಾತ, “ನೀವು ಇಡೀ ದಿನ ಬಿಕಿನಿ ಧರಿಸಿ ನಿಜಕ್ಕೂ ಹೊಲದಲ್ಲಿ ಕೆಲಸ ಮಾಡುತ್ತೀರಾ?’ ಎಂದು ಕೇಳಿದರೆ, ಇನ್ನೊಬ್ಬಾತ “ಇಷ್ಟೊಂದು ಹಾಟ್ (Hot) ಆಗಿರುವ ಡ್ರೆಸ್ (Dress) ಯಾಕೆ ಧರಿಸುತ್ತೀರಿ?’ ಎಂದು ಕೇಳಿದ್ದಾನೆ. ಇದಕ್ಕೆ ಈಕೆ “ಇಡೀ ದಿನ ಬಿಸಿಲಲ್ಲಿ (Sunlight) ಬಿಕಿನಿ ಧರಿಸಿ ಹೊಲದಲ್ಲಿ ಹುಲ್ಲಿನ ಕೆಲಸ ಮಾಡಿದರೆ ಟ್ಯಾನ್ (Tan) ಆಗುವುದಿಲ್ಲ’ ಎಂದು ತಿರುಗೇಟು ನೀಡಿದ್ದಾಳೆ. 

ಈ ದೇವಾಲಯಕ್ಕೆ ಹೋಗ್ಬೇಕಂದ್ರೆ ಪುರುಷರು ಮಹಿಳೆಯರಂತೆ ವೇಷ ಧರಿಸ್ಲೇಬೇಕು!

ಬಟ್ಟೆ ಆಯ್ಕೆ ಮಹಿಳೆಯದ್ದು
ಕೆಲವರು, “ನೀವು ವಾಸಿಸುವ ಪ್ರದೇಶದಲ್ಲಿ ತುಂಬ ಮಂದಿ ಯುವಜನತೆ (Teenagers) ಇದ್ದಾರೆ. ಅವರ ಮೇಲೆ ಪ್ರಭಾವವಾಗುತ್ತದೆ. ಸ್ಥಳದಲ್ಲಿ ಹೇಗಿರಬೇಕು ಎನ್ನುವುದನ್ನು ಕಲಿತುಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ. ಆದರೆ, ಈಕೆ ವಾಸಿಸುವ ಪ್ರದೇಶ ಮಾತ್ರ ಯಾವುದೆಂದು ತಿಳಿದುಬಂದಿಲ್ಲ. ಇದಕ್ಕೆ ಪ್ರತಿಯಾಗಿ ಬಿಕಿನಿ ಮಹಿಳೆ, “ಹುಡುಗಿಯರು ಅವರಿಗೆ ಹೇಗೆ ಬೇಕೋ ಹಾಗೆ ಡ್ರೆಸ್ (Clothe) ಧರಿಸುವ ಸ್ವಾತಂತ್ರ್ಯ (Freedom) ಹೊಂದಿರಬೇಕು. ಇತರರು ಹೇಗೆ ನೋಡುತ್ತಾರೋ, ಅಂದುಕೊಳ್ಳುತ್ತಾರೋ ಎನ್ನುವ ಭಯ (Fear) ಅವರಲ್ಲಿ ಇರಬಾರದು’ ಎಂದು ಹೇಳಿದ್ದಾಳೆ. ಇನ್ನೊಂದು ವಿಡಿಯೋದಲ್ಲಿ ಈಕೆ ತಾನು ಮನೆಯಿಂದ ಹೊರಹೋಗುವಾಗ ಮಾತ್ರ ಬ್ರಾ (Bra)  ಧರಿಸುತ್ತೇನೆ, ಮನೆಯಲ್ಲಿರುವಾಗ ಬ್ರಾ ಧರಿಸುವುದಿಲ್ಲ’ ಎಂದು ಹೇಳಿಕೊಂಡಿದ್ದಾಳೆ, ಇದಕ್ಕೆ ಹಲವು ಮೆಚ್ಚುಗೆ ಸೂಸಿದ್ದರೆ, ಹಲವರು ಟೀಕೆ ಮಾಡಿದ್ದಾರೆ. 
 

Follow Us:
Download App:
  • android
  • ios