Asianet Suvarna News Asianet Suvarna News

ಈ ದೇವಾಲಯಕ್ಕೆ ಹೋಗ್ಬೇಕಂದ್ರೆ ಪುರುಷರು ಮಹಿಳೆಯರಂತೆ ವೇಷ ಧರಿಸ್ಲೇಬೇಕು!

ಶಬರಿಮಲೆ ಸೇರಿದಂತೆ ಕೆಲ ದೇವಾಲಯಗಳಲ್ಲಿ ಮಹಿಳೆಯರಿಗೆ ಪ್ರವೇಶ ಇಲ್ಲದಿರುವುದು ತಿಳಿದೇ ಇದೆ. ಆದರೆ, ಈ ದೇವಾಲಯಕ್ಕೆ ಪುರುಷರಿಗೆ ಪ್ರವೇಶವಿಲ್ಲ.. ಹಾಗೊಂದು ವೇಳೆ ಅವರು ಒಳಗೆ ಹೋಗ್ಲೇಬೇಕಂದ್ರೆ ಮಹಿಳೆಯ ವೇಷ ಧರಿಸಬೇಕು. ಅಷ್ಟೇ ಅಲ್ಲ, 16 ರೀತಿಯ ಅಲಂಕಾರ ಮಾಡಿಕೊಂಡು ಸುಂದರವಾಗಿ ಸಜ್ಜಾಗಲೇಬೇಕು!

Kottankulangara Devi Temple In Kerala where male devotees need to dress like females skr
Author
First Published Jan 10, 2023, 12:53 PM IST

ಶಬರಿಮಲೆ ದೇವಸ್ಥಾನದಲ್ಲಿ ಕೆಲ ವಯೋಮಾನದ ಮಹಿಳೆಯರಿಗೆ ಪ್ರವೇಶವಿಲ್ಲ. ಅಂತೆಯೇ ದೇಶದಲ್ಲಿ ಅನೇಕ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರಿಗೆ ದೇವಸ್ಥಾನ ಪ್ರವೇಶ ನಿಷೇಧಿಸಲಾಗಿದೆ. ಇವುಗಳಲ್ಲಿ ಹಿಂದೂ ಧರ್ಮ ಮಾತ್ರವಲ್ಲ, ಇತರ ಧರ್ಮಗಳ ಧಾರ್ಮಿಕ ಸ್ಥಳಗಳೂ ಸೇರಿವೆ. ಆದರೆ ಪುರುಷರ ಪ್ರವೇಶವನ್ನೂ ನಿಷೇಧಿಸಿರುವ ದೇವಾಲಯಗಳಿವೆ ಎಂದು ನಿಮಗೆ ತಿಳಿದಿದೆಯೇ?

ಹೌದು, ಅಚ್ಚರಿಯಾದ್ರೂ ಇದು ನಿಜ! ಕೇರಳದ ಕೊಲ್ಲಂ ಜಿಲ್ಲೆಯಲ್ಲಿರುವ 'ಕೊಟ್ಟಂಕುಳಂಗರ ದೇವಿ' ದೇವಸ್ಥಾನಕ್ಕೆ ಪುರುಷರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ದೇವಾಲಯಕ್ಕೆ ಮಹಿಳೆಯರು ಮತ್ತು ನಪುಂಸಕರಿಗೆ ಮಾತ್ರ ಪ್ರವೇಶ. ಹಾಗೊಂದು ವೇಳೆ ಪುರುಷರು ಇಲ್ಲಿ ಬರಬೇಕೆಂದರೆ ಅವರು ಸುಂದರ ಸ್ತ್ರೀ ವೇಷ ಧರಿಸಿಕೊಳ್ಳಲೇಬೇಕು! ಅದರಲ್ಲೂ ಕೇವಲ ಸ್ತ್ರೀ ಬಟ್ಟೆ ಧರಿಸಿದರೆ ಸಾಲದು, ಅವರಂತೆ ಎಲ್ಲ ರೀತಿಯ ಮೇಕಪ್ ಹಾಕಿಕೊಂಡು ಸಿಂಗಾರ ಮಾಡಿಕೊಳ್ಳಬೇಕು!

ದೇವಾಲಯದ ಇತಿಹಾಸ
ಸ್ಥಳೀಯ ದಂತಕಥೆಗಳ ಪ್ರಕಾರ, ಇಲ್ಲಿ ವನದುರ್ಗಾ ದೇವಿಯ ವಿಗ್ರಹವು ಬಹಳ ಹಿಂದೆಯೇ ಇಲ್ಲಿ ಪ್ರಕಟವಾಗಿತ್ತು. ಆ ಕಾಲದಲ್ಲಿ ಕುರುಬರು ಪ್ರಾಣಿಗಳನ್ನು ಮೇಯಿಸುತ್ತಿದ್ದ ಕಾಡು ಇದಾಗಿತ್ತು. ಅವರು ಈ ವಿಗ್ರಹವನ್ನು ಮೊದಲು ನೋಡಿದರು ಮತ್ತು ಕೆಲವು ಅಜ್ಞಾತ ಪ್ರೇರಣೆಯಿಂದಾಗಿ, ದೇವಿಗೆ ಹೂವುಗಳನ್ನು ಅರ್ಪಿಸಿದರು ಮತ್ತು ಸ್ತ್ರೀಯರ ಉಡುಪುಗಳನ್ನು ಧರಿಸಿ ಪೂಜಿಸಿದರು. ನಂತರ ಈ ಸ್ಥಳವನ್ನು ದೇವಾಲಯವಾಗಿ ಪರಿವರ್ತಿಸಲಾಯಿತು. ಅಂದಿನಿಂದ ಈ ದೇವಾಲಯದಲ್ಲಿ ಪುರುಷರಿಗೆ ಪೂಜೆ ಮಾಡಲು ಅವಕಾಶವಿಲ್ಲ. 

ವಿರುಷ್ಕಾ, ಝುಕರ್‌ಬರ್ಗ್, ಸ್ಟೀವ್ ಜಾಬ್ಸ್.. ವಿಶ್ವದ ದಿಗ್ಗಜರೆಲ್ಲ ಗುರು ಎನ್ನುವ ಬಾಬಾ ನೀಮ್ ಕರೋಲಿ ಯಾರು?

ಗರ್ಭಗುಡಿಯ ಮೇಲೆ ಛಾವಣಿ ಇಲ್ಲ
ಈ ದೇವಾಲಯವು ಅನೇಕ ಕಾರಣಗಳಿಗಾಗಿ ಸ್ವತಃ ವಿಶಿಷ್ಟವಾಗಿದೆ. ಇಲ್ಲಿ ದೇವಿಯೇ ಉದ್ಭವವಾಗಿ ಕಾಣಿಸಿಕೊಂಡಳು. ಆಕೆಯ ಗರ್ಭಗುಡಿಯ ಮೇಲೆ ಸೂರು ಕೂಡ ಇಲ್ಲ. ದೇವಾಲಯದ ಮೇಲೆ ಮೇಲ್ಛಾವಣಿ ನಿರ್ಮಿಸಿದರೆ ಅಶುಭ ಎಂದು ನಂಬಲಾಗಿದೆ, ಅದಕ್ಕಾಗಿಯೇ ದೇವಾಲಯದ ಛಾವಣಿಯನ್ನು ಮಾಡಲಾಗಿಲ್ಲ.

ಈ ಒಂದು ಷರತ್ತಿನ ಮೇಲೆ ಪುರುಷರು ಪೂಜೆಗೆ ಅನುಮತಿ ಪಡೆಯುತ್ತಾರೆ..
ಯಾವುದೇ ವಯಸ್ಸಿನ ಪುರುಷರು ದೇವಾಲಯವನ್ನು ಪ್ರವೇಶಿಸಬಹುದು ಮತ್ತು ಪೂಜೆ ಮಾಡಬಹುದು. ಆದರೆ ಇದಕ್ಕಾಗಿ ಅವರು ಒಂದು ಷರತ್ತನ್ನು ಒಪ್ಪಿಕೊಳ್ಳಬೇಕು. ಈ ಷರತ್ತಿನ ಪ್ರಕಾರ, ಪುರುಷರು ಮಹಿಳೆಯರ ಉಡುಪುಗಳನ್ನು ಧರಿಸಬೇಕು ಮತ್ತು ಅವರಂತೆ ಷೋಡಶ ಅಲಂಕಾರ ಅಂದರೆ 16 ರೀತಿಯ ಮೇಕಪ್‌ಗಳನ್ನು ಮಾಡಿಕೊಂಡು ಮಹಿಳೆಯ ರೂಪವನ್ನು ಪಡೆಯಬೇಕು. ಇದಾದ ನಂತರವೇ ಅವರು ದೇವಸ್ಥಾನಕ್ಕೆ ಹೋಗಬಹುದು. ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ಸ್ತ್ರೀಯರ ಉಡುಪುಗಳನ್ನು ಧರಿಸುವುದು ಅವಶ್ಯಕ.

ದೇವಸ್ಥಾನದಲ್ಲಿದೆ ಮೇಕಪ್ ರೂಮ್
ದೇವಸ್ಥಾನದಲ್ಲಿ ಮೇಕಪ್ ರೂಂ ಕೂಡ ನಿರ್ಮಿಸಲಾಗಿದ್ದು, ಇದರಿಂದ ಪುರುಷರು ಮಹಿಳೆಯರಂತೆ ಸರಿಯಾಗಿ ಡ್ರೆಸ್ ಮಾಡಿಕೊಳ್ಳಬಹುದಾಗಿದೆ. ಪುರುಷರು ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಅವರು ತಮ್ಮ ಹೆಂಡತಿ, ಸಹೋದರಿ ಅಥವಾ ತಾಯಿಯ ಸಹಾಯವನ್ನು ಸಹ ತೆಗೆದುಕೊಳ್ಳಬಹುದು. ಅವರು ತಮ್ಮೊಂದಿಗೆ ಇತರ ಪುರುಷರ ಸಹಾಯವನ್ನು ಸಹ ತೆಗೆದುಕೊಳ್ಳಬಹುದು. ದೇವಸ್ಥಾನಕ್ಕೆ ಹೋಗಬೇಕಾದರೆ ಬರೀ ಹೆಂಗಸರ ಬಟ್ಟೆ ಹಾಕಿಕೊಂಡರೆ ಸಾಲದು, 16 ಅಲಂಕಾರಗಳನ್ನು ಸಂಪೂರ್ಣವಾಗಿ ಮಾಡಲೇಬೇಕು.

ಶಬರಿಮಲೆ ಯಾತ್ರಾರ್ಥಿಗಳು ರಾಜಕಾರಣಿಗಳು, ಸೆಲೆಬ್ರಿಟಿಗಳ ಪೋಸ್ಟರ್ ಕೊಂಡೊಯ್ಯಕೂಡದು; ಕೋರ್ಟ್ ಆದೇಶ

ಪ್ರತಿ ವರ್ಷ 2 ದಿನಗಳ ಉತ್ಸವ
ಈ ದೇವಾಲಯದಲ್ಲಿ ಪ್ರತಿ ವರ್ಷ ಮಾರ್ಚ್ 23 ಮತ್ತು 24ರಂದು ಚಾಮ್ಯವಿಳಕ್ಕು ಉತ್ಸವವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಹೆಣ್ಣಿನ ವೇಷ ಧರಿಸಿ ದೇವಿಯನ್ನು ಪೂಜಿಸುವುದರಿಂದ ಒಳ್ಳೆಯ ಉದ್ಯೋಗ ದೊರೆಯುತ್ತದೆ ಮತ್ತು ಸುಂದರ ಪತ್ನಿ ದೊರೆಯುತ್ತಾಳೆ ಎಂಬುದು ಸ್ಥಳೀಯ ನಂಬಿಕೆ. ಈ ಕಾರಣಕ್ಕಾಗಿಯೇ ಈ ಹಬ್ಬದಲ್ಲಿ ದೇಶ ವಿದೇಶಗಳಿಂದ ಸಾವಿರಾರು ಪುರುಷರು ಇಲ್ಲಿಗೆ ಬಂದು ಸ್ತ್ರೀಯರ ವೇಷ ಧರಿಸಿ ದೇವಿಯನ್ನು ಪೂಜಿಸುತ್ತಾರೆ.

Follow Us:
Download App:
  • android
  • ios