Asianet Suvarna News Asianet Suvarna News

Ambulance Home : ಇದು ಮನೆಯಲ್ಲ, ಆಂಬ್ಯುಲೆನ್ಸ್..! ಅದ್ಭುತ ಕಲೆ ಮೂಲಕ ಲಕ್ಷಾಂತರ ರೂ. ಗಳಿಸ್ತಿದ್ದಾರೆ ಈಕೆ

ರವಿ ಕಾಣದ್ದನ್ನು ಕವಿ ಕಂಡ ಎನ್ನುವ ಮಾತಿದೆ. ಕಲಾವಿದರು ಪ್ರತಿಯೊಂದು ವಸ್ತುವನ್ನು ತಮ್ಮದೆ ದೃಷ್ಟಿಕೋನದಲ್ಲಿ ನೋಡುತ್ತಾರೆ. ಕಲೆ ಜೊತೆ ಸ್ವಲ್ಪ ಬುದ್ಧಿವಂತಿಕೆ ಬೆರೆಸಿ,ಪ್ರೀತಿಯಿಂದ ಕೆಲಸ ಮಾಡಿದರೆ ಮಣ್ಣು ಕೂಡ ಹೊನ್ನಾಗುತ್ತದೆ. ಇದಕ್ಕೆ ಈ ಮಹಿಳೆ ಉತ್ತಮ ನಿದರ್ಶನ.

This is not a house it is an ambulance
Author
Bangalore, First Published Dec 7, 2021, 5:22 PM IST
  • Facebook
  • Twitter
  • Whatsapp

ಪ್ರತಿಯೊಬ್ಬ ವ್ಯಕ್ತಿಯಲ್ಲೂ ಕಲೆ ಅಡಗಿರುತ್ತದೆ.ಅದನ್ನು ಗುರುತಿಸಿ ಅದಕ್ಕೆ ಪ್ರೋತ್ಸಾಹ ನೀಡಿ ಬೆಳೆಸಿದಾಗ ಅದಕ್ಕೊಂದು ಅರ್ಥ ಸಿಗುತ್ತದೆ. ಕೆಲವರಿಗೆ ತಾವು ಯಾವ ಕ್ಷೇತ್ರದಲ್ಲಿ ಪರಿಣಿತರು ಎಂಬುದು ಗೊತ್ತೇ ಇರುವುದಿಲ್ಲ. ಮತ್ತೆ ಕೆಲವರು ಇರುವ ಕೌಶಲ್ಯಕ್ಕೆ (skill) ನೀರೆರೆದು,ಅದನ್ನು ವ್ಯಾಪಾರವಾಗಿ ಬಳಸಿಕೊಳ್ಳುತ್ತಾರೆ. ಯುಕೆ (UK) ಬ್ರಿಸ್ಟಲ್ (Bristol)ಮಹಿಳೆಯೂ ತನ್ನ ಪ್ರತಿಭೆಯನ್ನು ದುಡಿಮೆಯಾಗಿ ಪರಿವರ್ತಿಸಿಕೊಂಡು ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ. ಅವರು ಮಾಡುತ್ತಿರುವ ಕೆಲಸ ಆಕರ್ಷಕ ಹಾಗೂ ಅನನ್ಯ (Unique)ವಾಗಿದೆ.

ಸಾಮಾನ್ಯವಾಗಿ ಆಂಬ್ಯುಲೆನ್ಸ್ (ambulance) ಎಂಬ ಹೆಸರು ಕೇಳಿದ ತಕ್ಷಣ ನಮಗೆ ಭಯವಾಗುತ್ತದೆ. ಆಂಬ್ಯುಲೆನ್ಸ್ ರೋಗಿಗಳನ್ನು ಕೊಂಡೊಯ್ಯಲು ಮಾತ್ರ ಸೀಮಿತ ಎಂದುಕೊಂಡಿದ್ದೇವೆ ನಾವು. ಸಮಂತಾ (Samantha) ಬಾಂಡ್,ಆಂಬ್ಯುಲೆನ್ಸನ್ನು ಭಿನ್ನವಾಗಿ ನೋಡಿದ್ದಾರೆ. ಆಂಬ್ಯುಲೆನ್ಸ್ ಗೆ ಹೊಸ ರೂಪ ನೀಡಿದ್ದಾರೆ. ಹಳೆಯ ಆಂಬ್ಯುಲೆನ್ಸ್ ಗಳನ್ನು ನವೀಕರಿಸುತ್ತಾರೆ. ಅವುಗಳನ್ನು ಸುಂದರವಾದ ಹಾಲಿಡೇ ಹೋಮ್ಸ್ ಆನ್ ವೀಲ್ಸ್ (Holiday Homes)ಆಗಿ ಪರಿವರ್ತಿಸುತ್ತಾರೆ. 

ಗ್ರಾಹಕರನ್ನು ಸೆಳೆಯುತ್ತೆ ಆಂಬ್ಯುಲೆನ್ಸ್ ಮನೆ : ಸಮಂತಾ ವ್ಯಾಪಾರ ಇಂದು ಯುರೋಪಿನಾದ್ಯಂತ (Europe) ಪ್ರಸಿದ್ಧಿ ಪಡೆದಿದೆ. ಸಮಂತಾ ಕಲೆಗೆ ಬೆಲೆ ಸಿಕ್ಕಿದೆ. ಲಕ್ಷಾಂತರ ರೂಪಾಯಿ ನೀಡಿ ಇದರ ಆನಂದ ಪಡೆಯುತ್ತಾರೆ. ವೇಲ್ಸ್, ಸ್ಪೇನ್, ಪೋರ್ಚುಗಲ್ ಮತ್ತು ಫ್ರಾನ್ಸ್ ನಿಂದ ಗ್ರಾಹಕರು ಬರುತ್ತಾರೆ. ಮುದ್ದಾದ ಪುಟ್ಟ ಮಿನಿ ಹೋಮ್ ಓಡಿಸಿ ಆನಂದ ಪಡೆಯುತ್ತಾರೆ.

 ಹವ್ಯಾಸ ಪೂರ್ಣ ವೃತ್ತಿಯಾಯ್ತು (choice made profession ):
ಸಮಂತಾ ಹಳೆಯ ಆಂಬ್ಯುಲೆನ್ಸ್ ಗಳನ್ನು ಕ್ಯಾಂಪರ್ವಾನ್‌ಗಳನ್ನಾಗಿ ಮಾಡುತ್ತಾರೆ. ಈ ಕೆಲಸವನ್ನು ತನ್ನ ಪೂರ್ಣ ಸಮಯದ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಹಳೆಯ ಮತ್ತು ಅನುಪಯುಕ್ತ ಆಂಬ್ಯುಲೆನ್ಸ್ ಗಳಿಗೆ ಚೆಂದದ ಮನೆ ರೂಪ ನೀಡುತ್ತಾರೆ. ಇದಕ್ಕೆ ಸಮಂತಾ ಮೂರ್ನಾಲ್ಕು ತಿಂಗಳು ತೆಗೆದುಕೊಳ್ಳುತ್ತಾರೆ.  

 ಸಮಂತಾ ಬಳಿಯಿದೆ 8 ಆಂಬ್ಯುಲೆನ್ಸ್ (Starting with 8 ambulances) :
ಸಮಂತಾ 8 ಆಂಬ್ಯುಲೆನ್ಸ್ ಖರೀದಿ ಮಾಡಿದ್ದಾರೆ.ಈ ಆಂಬ್ಯುಲೆನ್ಸ್ ನವೀಕರಿಸಲು ಹೆಚ್ಚಾಗಿ ಹಳೆಯ ವಸ್ತುಗಳನ್ನು ಬಳಸುತ್ತಾರೆ. ನಂತರ ಅವರೇ  ಪೇಂಟಿಂಗ್  ಮಾಡುತ್ತಾರೆ. ಹಾಗಾಗಿ ಪ್ರತಿ ಕ್ಯಾಂಪರ್ವಾನ್ ವಿಭಿನ್ನವಾಗಿ ಕಾಣುತ್ತದೆ. ಇಲ್ಲಿಯವರೆಗೆ 3 ಆಂಬ್ಯುಲೆನ್ಸ್ ಸಿದ್ಧವಾಗಿದೆ. ಮತ್ತೆ ಐದು ಆಂಬ್ಯುಲೆನ್ಸ್ ಕೆಲಸ ನಡೆಯುತ್ತಿದೆ.

104ನೇ ವಯಸ್ಸಿಗೆ 100 ರಲ್ಲಿ 84 ಅಂಕ ಗಳಿಸಿ ನಗು ಚೆಲ್ಲಿದ ಕುಟ್ಟಿಯಮ್ಮ!

ಶ್ರಮಕ್ಕೆ ತಕ್ಕ ಫಲ : ಮೊದಲು 2012 ರಲ್ಲಿ ಲಂಡನ್‌ನಲ್ಲಿ ಆಂಬ್ಯುಲೆನ್ಸ್ ಖರೀದಿಸಿದ್ದರಂತೆ. ಅದನ್ನು ಬದಲಾಯಿಸಿ ಮಾರಾಟ ಮಾಡಿದ್ದರಂತೆ.  ನನ್ನ ಕೆಲಸದ ಮೇಲೆ ನನಗೆ ನಂಬಿಕೆ ಇತ್ತು. ಆದರೆ ಇಷ್ಟು ಯಶಸ್ಸು ಸಿಗುತ್ತದೆ ಎಂದು ಭಾವಿಸಿರಲಿಲ್ಲವೆಂದು ಸಮಂತಾ ಹೇಳಿದ್ದಾರೆ. 

ಸಾಲ ತೀರಿಸಲು ದಾರಿಯಾಯ್ತು (Debt) :  ಕ್ಯಾಂಪರ್‌ವಾನ್ ಸಿದ್ಧಪಡಿಸಲು 6 ತಿಂಗಳು ತೆಗೆದುಕೊಳ್ತಾರೆ. ಕ್ಯಾಂಪರ್ ವಾನ್ ತಯಾರಿಸುವಾಗ ಸಮಂತಾ,ಪ್ರಪಂಚ ಮರೆಯುತ್ತಾರಂತೆ. ಇದೇ ಕೆಲಸದಲ್ಲಿ ಗಳಿಸಿದ ಹಣದಿಂದ  ಸಾಲ ತೀರಿಸಿದ್ದಾರೆ. ಈ ಕೆಲಸದಿಂದ ಸಮಂತಾ 30,000 ಪೌಂಡ್ ಅಂದರೆ ಸುಮಾರು 30 ಲಕ್ಷ ರೂಪಾಯಿ ಸಾಲ ತೀರಿಸಿದ್ದಾರಂತೆ.    

Women Special: 7 ಎಕರೆ ಜಮೀನಿನಲ್ಲಿ ಕೃಷಿ ಮಾಡಿ ಸೈ ಎನಿಸಿಕೊಂಡ ಶಿಕ್ಷಕಿ, ಭೇಷ್!

ಫೋಟೋಶೂಟ್ ಗೂ ಇದೆ ಅವಕಾಶ (Photo shoot opportunity) :
ಸಮಂತಾ ಅದ್ಭುತ ಸೃಜನಶೀಲತೆಯನ್ನು ಹೊಂದಿದ್ದಾರೆ. ಒಮ್ಮೆ ಆರ್ಡರ್ ಪಡೆದ ಮೇಲೆ ಸಮಂತಾ,ಸುಂದರ ಮನೆ ನಿರ್ಮಾಣವಾದ ಮೇಲೆ ಗ್ರಾಹಕರ ಮನೆಗೆ ಅದನ್ನು ತಲುಪಿಸುತ್ತಾರಂತೆ. ಸಮಂತಾ ಮನೆ ವೀಕ್ಷಿಸಲು ದೂರದೂರುಗಳಿಂದ ಜನರು ಇಲ್ಲಿಗೆ ಬರುತ್ತಾರೆ. ಸಮಂತಾ,ಪ್ರವಾಸಿಗರಿಗೆ ಫೋಟೋ ತೆಗೆಯಲು ಅವಕಾಶ ನೀಡಿದ್ದಾರೆ.

ಸಮಂತಾ ಅನೇಕ ಮಹಿಳೆಯರಿಗೆ (Women) ಮಾದರಿಯಾಗಿ ನಿಲ್ಲುತ್ತಾರೆ. ಮನೆ,ಮಕ್ಕಳು,ಕುಟುಂಬದ ಕೆಲಸದಲ್ಲಿ ಮಹಿಳೆಯರ ಕಲೆ ಮೂಲೆ ಗುಂಪಾಗುತ್ತಿದೆ. 

Follow Us:
Download App:
  • android
  • ios