Education Is Power: 104ನೇ ವಯಸ್ಸಿಗೆ 100 ರಲ್ಲಿ 84 ಅಂಕ ಗಳಿಸಿ ನಗು ಚೆಲ್ಲಿದ ಕುಟ್ಟಿಯಮ್ಮ!

* ಇಳಿ ವಯಸ್ಸಿನಲ್ಲಿ ಕೇರಳದ ಕುಟ್ಟಿಯಮ್ಮನ ಅದಸಾಧಾರಣ ಸಾಧನೆ

* 100 ರಲ್ಲಿ 89 ಅಂಕ ಗಳಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ 104 ವರ್ಷದ ಕುಟ್ಟಿಯಮ್ಮ

* ಕುಟ್ಟಿಯಮ್ಮನ ಸಾಧನೆಗೆ ಭಾರೀ ಮೆಚ್ಚುಗೆ

Kerala 104 year old Kuttiyamma scored 89 out Of 100 in Kerala State Literacy Mission test pod

ಕೊಟ್ಟಾಯಂ(ಡಿ.06): ವಯಸ್ಸೆಂಬುವುದು ಎಣಿಕೆಗಷ್ಟೇ ಉತ್ಸಾಹವಿದ್ದರೆ ಏನು ಬೇಕಾದರೂ ಸಾಧಿಸಬಹುದು, ಯಾವುದೇ ಅಡೆ ತಡೆಗಳಿದ್ದರೂ ನಿಮ್ಮನ್ನು ಗುರಿ ತಲುಪುವುದರಿಂದ ತಡೆಯಲಾರವು. ಇದಕ್ಕೆ ಸೂಕ್ತ ಉದಾಹರಣೆ ಎಂಬಂತಿದೆ ಕೇರಳದ 104ನೇ ವಯಸ್ಸಿನ ಕುಟ್ಟಿಯಮ್ಮನ ಸಾಧನೆ. ಹೌದು ಕೇರಳದ ಈ ವೃದ್ಧೆ  ಕೇರಳ ರಾಜ್ಯ ಸಾಕ್ಷರತಾ ಮಿಷನ್ ಪರೀಕ್ಷೆಯಲ್ಲಿ ನೂರರಲ್ಲಿ 89 ಅಂಕವನ್ನು ಪಡೆದು ತನ್ನಿಂದ ಸಾಧ್ಯವಿಉಲ್ಲ ಎಂದು ಹತಾಶರಾಗುವವರೆಲ್ಲರಿಗೂ, ಮನಸ್ಸಿದದರೆ ಎಲ್ಲವೂ ಸಾಧ್ಯ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ.

ತನ್ನ 104ನೇ ವಯಸ್ಸಿನಲ್ಲಿ ಕೇರಳ ರಾಜ್ಯ ಸಾಕ್ಷರತಾ ಮಿಷನ್ ಪರೀಕ್ಷೆ ಬರೆದ ಕುಟ್ಟಿಯಮ್ಮ ಉತ್ತಮ ಅಂಕದೊಂದಿಗೆ ಕುತೇರ್ಗಡೆ ಹೊಂದಿರುವ ಬಗ್ಗೆ ರಾಜ್ಯ ಶಿಕ್ಷಣ ಸಚಿವ ವಸುದೇವನ್‌ ಶಿವಕುಟ್ಟಿ ಸಾಮಾಜಿಕ ಜಾಲತಾಣದಲ್ಲಿ ಮಾಃಇತಿ ಹಂಚಿಕೊಂಡಿದ್ದಾರೆ. "ಜ್ಞಾನದ ಲೋಕಕ್ಕೆ ಪ್ರವೇಶ ಪಡೆಯಲು ವಯಸ್ಸು ಯಾವುದೇ ಅಡೆತಡೆಯಾಗುವುದಿಲ್ಲ" ಎಂದು ಕೇರಳ ಶಿಕ್ಷಣ ಸಚಿವರು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೇ 'ಕೊಟ್ಟಾಯಂನ 104 ವರ್ಷದ ಕುಟ್ಟಿಯಮ್ಮ ಕೇರಳ ರಾಜ್ಯ ಸಾಕ್ಷರತಾ ಮಿಷನ್ ಪರೀಕ್ಷೆಯಲ್ಲಿ 100 ರಲ್ಲಿ 89 ಅಂಕವನ್ನು ಪಡೆದಿದ್ದಾರೆ. ಜ್ಞಾನದ ಲೋಕಕ್ಕೆ ಪ್ರವೇಶ ಪಡೆಯಲು ವಯಸ್ಸು ಯಾವುದೇ ಅಡೆತಡೆಯಾಗುವುದಿಲ್ಲ. ಅತ್ಯಂತ ಗೌರವ ಮತ್ತು ಪ್ರೀತಿಯಿಂದ, ಕುಟ್ಟಿಯಮ್ಮ ಮತ್ತು ಇತರ ಎಲ್ಲಾ ಹೊಸ ಕಲಿಕೆದಾರರಿಗೆ ನಾನು ಶುಭ ಹಾರೈಸುತ್ತೇನೆ' ಎಂದು ಕೇರಳ ಶಿಕ್ಷಣ ಸಚಿವ ವಸುದೇವನ್‌ ಶಿವಕುಟ್ಟಿ ಟ್ವೀಟ್‌ ಮಾಡಿದ್ದಾರೆ.

ಮಾಧ್ಯಮಗಳ ಪ್ರಕಾರ ಕೊಟ್ಟಾಯಂನ ಅಯರ್‌ಕುನ್ನಮ್‌ ಪಂಚಾಯತ್‌ನಲ್ಲಿ ಆಯೋಜಿಸಲಾಗಿದ್ದ ಸಾಕ್ಷರತಾ ಪರೀಕ್ಷೆ ಯೋಜನೆಯ, ಸಾಕ್ಷರತಾ ಪರೀಕ್ಷೆಯಲ್ಲಿ 104 ವರ್ಷದ ಕುಟ್ಟಿಯಮ್ಮ ಕೂಡಾ ಹಾಜರಾಗಿದ್ದರು. ಕುಟ್ಟಿಯಮ್ಮ ತನ್ನ ಬಾಲ್ಯದಲ್ಲಿ ಯಾವುದೇ ಶಿಕ್ಷಣವನ್ನು ಪಡೆದಿರಲಿಲ್ಲ. ಜೀವನದಲ್ಲಿ ಒಂದು ಬಾರಿಯೂ ಕುಟ್ಟಿಯಮ್ಮ ಶಾಲೆಗೆ ಹೋದವರೇ ಅಲ್ಲ ಎಂದು ವರದಿಯು ತಿಳಿಸಿದೆ. ಹೀಗಿದ್ದರೂ ಸಾಕ್ಷರತಾ ಪ್ರೇರಕ ಕಾರ್ಯಕ್ರಮದ ಮೂಲಕ ಶಿಕ್ಷಣದಲ್ಲಿ ಆಸಕ್ತಿ ತೋರಿದ 104 ವರ್ಷದ ಕುಟ್ಟಿಯಮ್ಮ ಎಲ್ಲಾ ತರಗತಿಗೆ ಹಾಜರಾಗಿದ್ದಾರೆ. ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ತನ್ನ ಮನೆಯಲ್ಲೇ ಸಾಕ್ಷರತಾ ಪ್ರೇರಕ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದ ಕುಟ್ಟಿಯಮ್ಮ ಓದುವುದು, ಬರೆಯುವುದನ್ನು ಕಲಿತಿದ್ದಾರೆ. ಈ ತರಗತಿಗಳಿಗೆ ನಿರಂತರವಾಗಿ ಹಾಜರಾದ ಬಳಿಕ ಕುಟ್ಟಿಯಮ್ಮ ನಾಲ್ಕನೇ ತರಗತಿಯ ಪರೀಕ್ಷೆಯನ್ನು ಬರೆಯಲು ಅರ್ಹರಾಗಿದ್ದಾರೆ.

ಸದ್ಯ ಕುಟ್ಟಿಯಮ್ಮನ ಈ ಅಸಾಧಾರಣ ಸಾಧನೆಗೆ ನೆಟ್ಟಿಗರೂ ಭೇಷ್ ಎಂದಿದ್ದಾರೆ. ಅನೇಕರು ಕಮೆಂಟ್‌ ಮಾಡಿ ಅವರ ಈ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೇನಿದ್ದರೂಈ ಇಳಿ ವಯಸ್ಸಿನಲ್ಲಿ ಇಂತಹುದ್ದೊಂದು ಅಪರೂಪದ ಸಾಧನೆಗೈದ ಕುಟ್ಟಿಯಮ್ಮನಿಗೆ ನಮ್ಮದೊಂದು ಸಲಾಂ.

Latest Videos
Follow Us:
Download App:
  • android
  • ios